logo
ಕನ್ನಡ ಸುದ್ದಿ  /  ಜೀವನಶೈಲಿ  /  Demat Account: ಡಿಮ್ಯಾಟ್‌ ಖಾತೆ ಎಂದರೇನು, ಅಕೌಂಟ್‌ ತೆರೆಯುವುದು ಹೇಗೆ, ದಾಖಲೆಗಳು ಏನು ಬೇಕು, ಶುಲ್ಕ ಎಷ್ಟು, ಇಲ್ಲಿದೆ ಸಂಪೂರ್ಣ ವಿವರ

Demat Account: ಡಿಮ್ಯಾಟ್‌ ಖಾತೆ ಎಂದರೇನು, ಅಕೌಂಟ್‌ ತೆರೆಯುವುದು ಹೇಗೆ, ದಾಖಲೆಗಳು ಏನು ಬೇಕು, ಶುಲ್ಕ ಎಷ್ಟು, ಇಲ್ಲಿದೆ ಸಂಪೂರ್ಣ ವಿವರ

Praveen Chandra B HT Kannada

Aug 06, 2023 05:00 PM IST

google News

Demat Account: ಡಿಮ್ಯಾಟ್‌ ಖಾತೆ ಎಂದರೇನು, ಅಕೌಂಟ್‌ ತೆರೆಯುವುದು ಹೇಗೆ, ದಾಖಲೆಗಳು ಏನು ಬೇಕು, ಶುಲ್ಕ ಎಷ್ಟು

    • How To Open Demat Account: ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಬಯಸುವ ಆರಂಭಿಕರಿಗೆ ಇಲ್ಲಿ ಡಿಮ್ಯಾಟ್‌ ಖಾತೆ ಎಂದರೇನು, ಡಿಮ್ಯಾಟ್‌ ಖಾತೆ ಆನ್‌ಲೈನ್‌ನಲ್ಲಿ ತೆರೆಯುವುದು ಹೇಗೆ, ಡಿಮ್ಯಾಟ್‌ ಖಾತೆಗೆ ಏನೆಲ್ಲ ದಾಖಲೆಗಳು ಬೇಕು, ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬ ಮಾಹಿತಿ ನೀಡಲಾಗಿದೆ.
Demat Account: ಡಿಮ್ಯಾಟ್‌ ಖಾತೆ ಎಂದರೇನು, ಅಕೌಂಟ್‌ ತೆರೆಯುವುದು ಹೇಗೆ, ದಾಖಲೆಗಳು ಏನು ಬೇಕು, ಶುಲ್ಕ ಎಷ್ಟು
Demat Account: ಡಿಮ್ಯಾಟ್‌ ಖಾತೆ ಎಂದರೇನು, ಅಕೌಂಟ್‌ ತೆರೆಯುವುದು ಹೇಗೆ, ದಾಖಲೆಗಳು ಏನು ಬೇಕು, ಶುಲ್ಕ ಎಷ್ಟು

ಈಗ ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಾರುಕಟ್ಟೆ ಜ್ಞಾನ ಕಡಿಮೆ ಇರುವವರು ಕೂಡ ಷೇರುಪೇಟೆಗೆ ಪ್ರವೇಶಿಸುತ್ತಿದ್ದಾರೆ. ಈ ರೀತಿ ಷೇರುಪೇಟೆ ಹೂಡಿಕೆ ಮಾಡಲು ಡಿಮ್ಯಾಟ್‌ ಖಾತೆ ತೆರೆಯಬೇಕಿರುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡಿಮ್ಯಾಟ್‌ ಖಾತೆ ತೆರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜುಲೈ ತಿಂಗಳಲ್ಲಿ 30 ಲಕ್ಷ ಜನರು ಡಿಮ್ಯಾಟ್‌ ಖಾತೆ ತೆರೆದಿದ್ದು, ಇದು ಕಳೆದ ಹದಿನೆಂಟು ತಿಂಗಳಲ್ಲಿಯೇ ಅತ್ಯಧಿಕವಾಗಿದೆ. ಪ್ರತಿತಿಂಗಳು ಇಷ್ಟೊಂದು ಜನರು ಡಿಮ್ಯಾಟ್‌ ಖಾತೆ ತೆರೆಯುತ್ತಿದ್ದು, ಇವರಲ್ಲಿ ಎಲ್ಲರೂ ಕೈತುಂಬಾ ಹಣ ಗಳಿಸುತ್ತಾರೆ ಎಂದಲ್ಲ. ಸಾಕಷ್ಟು ಜನರು ನಷ್ಟ ಅನುಭವಿಸುತ್ತಾರೆ. ಇನ್ನು ಕೆಲವರು ಸುಮ್ಮನೆ ಷೇರುಪೇಟೆ ಕಲಿಯೋಣ ಎಂದು ಕೆಲವು ಸಾವಿರ ರೂಪಾಯಿ ಹಣ ಹಾಕಿ ಹಣ ಹೆಚ್ಚಾಗುವುದನ್ನು, ಕಡಿಮೆಯಾಗುವುದನ್ನು ನೋಡುತ್ತಿರುತ್ತಾರೆ. ನಿಮಗೂ ಷೇರುಪೇಟೆಯಲ್ಲಿ ಹೂಡಿಕೆ ಮಾಡಬೇಕು ಎಂಬ ಬಯಕೆ ಇರಬಹುದು. ಇಂತಹ ಸಂದರ್ಭದಲ್ಲಿ ಡಿಮ್ಯಾಟ್‌ ಅಕೌಂಟ್‌ ಬೇಕು ಎಂದು ತಿಳಿಸಿರಬಹುದು. ಏನಿದು ಡಿಮ್ಯಾಟ್‌ ಅಕೌಂಟ್‌ ಎಂದು ತಿಳಿಯೋಣ.

ಪರಿವಿಡಿ

  • ಡಿಮ್ಯಾಟ್‌ ಅಕೌಂಟ್‌ ಎಂದರೇನು?
  • ಡಿಮ್ಯಾಟ್‌ ಖಾತೆ ಹೇಗೆ ಕೆಲಸ ಮಾಡುತ್ತದೆ?
  • ಆನ್‌ಲೈನ್‌ ಮೂಲಕ ಡಿಮ್ಯಾಟ್‌ ಖಾತೆ ತೆರೆಯಬಹುದೇ?
  • ಡಿಮ್ಯಾಟ್‌ ಖಾತೆ ತೆರೆಯಲು ಯಾವ ದಾಖಲೆ ಬೇಕು?
  • ಡಿಮ್ಯಾಟ್‌ ಖಾತೆ ಶುಲ್ಕ ತೆರೆಯಲು ಶುಲ್ಕಗಳು

ಡಿಮ್ಯಾಟ್‌ ಅಕೌಂಟ್‌ ಎಂದರೇನು?

ಷೇರುಪೇಟೆಯಲ್ಲಿ ಹಣ ಹೂಡಿಕೆ ಮಾಡಲು ಇರುವ ಒಂದು ಖಾತೆ ಇದಾಗಿದೆ. ಡಿಮ್ಯಾಟ್‌ ಖಾತೆಯ ನೆರವಿನಿಂದ ಹೂಡಿಕೆದಾರರು ಷೇರುಗಳನ್ನು ಹೊಂದಬಹುದು. ಷೇರು ಮತ್ತು ಸೆಕ್ಯುರಿಟೀಸ್‌ಗಳನ್ನು ಆರಂಭಿಕ ಷೇರು ವಿತರಣೆ, ಬಾಂಡ್‌ಗಳು, ಸರಕಾರದ ಸೆಕ್ಯುರಿಟೀಸ್‌, ಮ್ಯೂಚುಯಲ್‌ ಫಂಡ್‌ ಯೂನಿಟ್‌ಗಳನ್ನು, ಎಕ್ಸ್‌ಚೇಂಜ್‌ ಟ್ರೇಡ್‌ ಫಂಡ್‌ಗಳನ್ನು ಎಲೆಕ್ಟ್ರಾನಿಕ್‌ ಮಾದರಿಯಲ್ಲಿ ಹೊಂದಬಹುದು. ಡಿಮ್ಯಾಟ್‌ ಖಾತೆಗೆ ಡಿಮೆಟಿರಿಯಲೈಸ್ಡ್‌ ಅಕೌಂಟ್‌ ಎಂಬ ಹೆಸರೂ ಇದೆ. ಡಿಮ್ಯಾಟ್‌ ಅಕೌಂಟ್‌ನಲ್ಲಿ ಷೇರುಗಳ ನಿರ್ವಹಣೆಯನ್ನೂ ಮಾಡಬಹುದು.

ಡಿಮ್ಯಾಟ್‌ ಖಾತೆ ಹೇಗೆ ಕೆಲಸ ಮಾಡುತ್ತದೆ?

ಡಿಪಾಸಿಟರಿ ಪಾರ್ಟಿಸಿಪೆಂಟ್ (ಡಿಪಿ) ನೆರವಿನಿಂದ ಡಿಮ್ಯಾಟ್ ಖಾತೆಯನ್ನು ತೆರೆಯಬಹುದು. ಈ ಡಿಪಿಯು ನಿಮ್ಮ ಮತ್ತು ಸೆಂಟ್ರಲ್ ಡಿಪಾಸಿಟರಿ ಸರ್ವೀಸಸ್ (ಇಂಡಿಯಾ) ಲಿಮಿಟೆಡ್ (ಸಿಡಿಎಸ್‌ಎಲ್‌) ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ನೀವು ಅಗತ್ಯ ದಾಖಲೆಗಳನ್ನು ಭರ್ತಿ ಮಾಡಬೇಕು. ಡಿಪಿಯೊಂದಿಗೆ ಡಿಮ್ಯಾಟ್ ಖಾತೆಯನ್ನು ತೆರೆಯಬೇಕು. ಖಾತೆಯನ್ನು ತೆರೆದ ಬಳಿಕ ನೀವು ನಿಮ್ಮ ಭೌತಿಕ ಷೇರು ಪ್ರಮಾಣಪತ್ರದಿಂದ ನಿಮ್ಮ ಡಿಮ್ಯಾಟ್ ಖಾತೆಗೆ ಷೇರುಗಳನ್ನು ವರ್ಗಾಯಿಸಬಹುದು. ಷೇರುಗಳನ್ನು ನಂತರ ವಿದ್ಯುನ್ಮಾನವಾಗಿ ಡಿಮ್ಯಾಟ್ ಖಾತೆಯಲ್ಲಿ ಡಿಮೆಟಿರಿಯಲೈಸ್ಡ್ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಇದರ ನೆರವಿನಿಂದ ನೀವು ಷೇರುಗಳು, ಮ್ಯೂಚುವಲ್ ಫಂಡ್‌ಗಳು ಮತ್ತು ಇತರೆ ಸೆಕ್ಯುರಿಟೀಸ್‌ಗಳನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು. ವಹಿವಾಟು ಪೂರ್ತಿಯಾದ ಬಳಿಕ ಷೇರುಗಳನ್ನು ನಿಮ್ಮ ಡಿಮ್ಯಾಟ್‌ ಖಾತೆಗೆ ಕ್ರೆಡಿಟ್‌ ಅಥವಾ ಡೆಬಿಟ್‌ ಮಾಡಲಾಗುತ್ತದೆ.

ಆನ್‌ಲೈನ್‌ ಮೂಲಕ ಡಿಮ್ಯಾಟ್‌ ಖಾತೆ ತೆರೆಯಬಹುದೇ?

  1. ಮೊದಲಿಗೆ ನೀವು ಡಿಮ್ಯಾಟ್‌ ಖಾತೆಗೆ ಡಿಪಿ ಹುಡುಕಬೇಕು. ನಿಮ್ಮ ಬ್ಯಾಂಕ್‌, ಷೇರು ಬ್ರೋಕರ್‌ ಅಥವಾ ಹಣಕಾಸು ಸಂಸ್ಥೆಯು ಇದನ್ನು ಒದಗಿಸುತ್ತದೆ.
  2. ಡಿಪಿ ಆಯ್ಕೆ ಮಾಡಿದ ಬಳಿಕ ಅರ್ಜಿ ಭರ್ತಿ ಮಾಡಬೇಕು. ಸಂಬಂಧಪಟ್ಟ ದಾಖಲೆಪತ್ರಗಳ ಜತೆಗೆ ಸಬ್‌ಮಿಟ್‌ ಮಾಡಬೇಕು. ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸನ್ಸ್‌, ಮತದಾರರ ಗುರುತಿನ ಪತ್ರ, ಯುಟಿಲಿಟಿ ಬಿಲ್‌ ಇತ್ಯಾದಿಗಳಲ್ಲಿ ಯಾವುದಾದರೂ ದಾಖಲೆ ನೀಡಬಹುದು.
  3. ಬಳಿಕ ಬ್ಯಾಂಕ್‌ ವಿವರ, ಪಾನ್‌ ಕಾರ್ಡ್‌ ಮತ್ತು ಕ್ಯಾನ್ಸಲ್‌ ಮಾಡಲಾದ ಚೆಕ್‌ ಇತ್ಯಾದಿ ದಾಖಲೆ ಸಲ್ಲಿಸಬೇಕು.
  4. ದಾಖಲೆ ದೃಢೀಕರಣಗೊಂಡ ಬಳಿಕ ನಿಮ್ಮ ಖಾತೆ ಅಂಗೀಕಾರಗೊಳ್ಳುತ್ತದೆ. ನಿಮ್ಮ ಡಿಮ್ಯಾಟ್‌ ಖಾತೆಗೆ ಡಿಪಿ ಆಕ್ಟಿವೇಟ್‌ ಆಗುತ್ತದೆ.
  5. ಆನ್‌ಲೈನ್‌ ವಿಧಾನ ಬೇಡ ಎಂದಾದರೆ ಬ್ಯಾಂಕ್‌ಗಳಿಗೆ ಹೋಗಿ ಡಿಮ್ಯಾಟ್‌ ಖಾತೆ ತೆರೆಯಬಹುದು.

ಯಾವೆಲ್ಲ ದಾಖಲೆಗಳು ಬೇಕು

  1. ಗುರುತಿನ ದಾಖಲೆ: ಆಧಾರ್‌, ಪಾನ್‌ ಇತ್ಯಾದಿ
  2. ವಿಳಾಸ ದಾಖಲೆ: ಆಧಾರ್‌, ಡಿಎಲ್‌, ಮತದಾರರ ಗುರುತಿನ ಚೀಟಿ ಇತ್ಯಾದಿ
  3. ರದ್ದುಗೊಳಿಸಿದ ಬ್ಯಾಂಕ್‌ ಚೆಕ್‌
  4. ಫೋಟೊಗ್ರಾಫ್‌: ಎರಡು ಫೋಟೊ ಬೇಕು
  5. ಸಹಿ ದಾಖಲೆ: ಪಾನ್‌ ಕಾರ್ಡ್‌, ಬ್ಯಾಂಕ್‌ ಖಾತೆ ಸ್ಟೇಟ್‌ಮೆಂಟ್‌ ಇತ್ಯಾದಿ
  6. ಪ್ಯಾನ್‌ ಕಾರ್ಡ್‌: ಡಿಮ್ಯಾಟ್‌ ಖಾತೆ ತೆರೆಯಲು ಪ್ಯಾನ್‌ ಕಾರ್ಡ್‌ ಕಡ್ಡಾಯ

ಡಿಮ್ಯಾಟ್‌ ಖಾತೆ ಶುಲ್ಕ

ವಿವಿಧ ಬ್ಯಾಂಕ್‌ಗಳು ಅಥವಾ ಬ್ರೋಕರ್‌ಗಳು ಒಂದು ಬಾರಿ ಡಿಮ್ಯಾಟ್‌ ಖಾತೆಗೆ ಶುಲ್ಕ ತೆಗೆದುಕೊಳ್ಳುತ್ತಾರೆ. 200-500 ರೂ ನಡುವೆ ಇರುತ್ತದೆ. ನಿಮ್ಮ ಸೆಕ್ಯುರೀಟಿಸ್‌ಗಳನ್ನು ಭದ್ರವಾಗಿಟ್ಟುಕೊಳ್ಳಲು ಕಸ್ಟೊಡಿಯನ್‌ ಶುಲ್ಕ ಇರುತ್ತದೆ. ಇದು ಸುಮಾರು 500-1000 ರೂ.ವರೆಗೆ ಇರುತ್ತದೆ. ವಾರ್ಷಿಕ ನಿರ್ವಹಣಾ ಶುಲ್ಕ ಸುಮಾರು 200-500 ರೂ. ಇರುತ್ತದೆ. ಟ್ರಾನ್ಸಕ್ಷನ್‌ ಚಾರ್ಜ್‌ ಸುಮಾರು 25-50 ರೂಪಾಆಯಿ ಇರುತ್ತದೆ. ಡೆಪೊಸಿಟರಿ ಚಾರ್ಜ್‌ 10-20 ರೂ. ಇರುತ್ತದೆ. ಬ್ರೋಕರೇಜ್‌ ಚಾರ್ಜ್‌ ವಹಿವಾಟು ಮೌಲ್ಯದ ಶೇಕಡ 0.25- 0.50ರಷ್ಟು ಇರುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ