logo
ಕನ್ನಡ ಸುದ್ದಿ  /  ಜೀವನಶೈಲಿ  /  ಏನಿದು 50:30:20 ನಿಯಮ; ಮಧ್ಯಮ ವರ್ಗದ ಜನರಿಗೆ ಯಾಕೆ ಈ ಹಣಕಾಸಿನ ಅನುಪಾತ ನಿರ್ಣಾಯಕವಾಗುತ್ತೆ?

ಏನಿದು 50:30:20 ನಿಯಮ; ಮಧ್ಯಮ ವರ್ಗದ ಜನರಿಗೆ ಯಾಕೆ ಈ ಹಣಕಾಸಿನ ಅನುಪಾತ ನಿರ್ಣಾಯಕವಾಗುತ್ತೆ?

Raghavendra M Y HT Kannada

Sep 18, 2024 05:34 PM IST

google News

ಮಧ್ಯಮ ವರ್ಗದವರಿಗೆ ಹಣಕಾಸಿನ ವಿಚಾರದಲ್ಲಿ 50:30:20 ನಿಯಮ ಹೇಗೆ ಅನ್ವಯವಾಗುತ್ತೆ ಅನ್ನೋದನ್ನು ತಿಳಿಯಿರಿ.

    • ಜೀವನದಲ್ಲಿ ಹಣಕಾಸು ನಿರ್ವಹಣೆ ಮುಖ್ಯವಾಗಿರುತ್ತೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ನಿಯಂತ್ರಣ ತಪ್ಪುತ್ತೆ. 50:30:20 ನಿಯಮವನ್ನು ಅಳವಡಿಸಿಕೊಂಡರೆ ಮಧ್ಯಮ ವರ್ಗದ ಜನರು ಸ್ಥಿರತೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತೆ. ಅಷ್ಟಕ್ಕೂ ಏನಿದು 50:30:20 ನಿಯಮ ಅನ್ನೋದನ್ನೇ ಇಲ್ಲಿ ನೀಡಲಾಗಿದೆ.  
ಮಧ್ಯಮ ವರ್ಗದವರಿಗೆ ಹಣಕಾಸಿನ ವಿಚಾರದಲ್ಲಿ 50:30:20 ನಿಯಮ ಹೇಗೆ ಅನ್ವಯವಾಗುತ್ತೆ ಅನ್ನೋದನ್ನು ತಿಳಿಯಿರಿ.
ಮಧ್ಯಮ ವರ್ಗದವರಿಗೆ ಹಣಕಾಸಿನ ವಿಚಾರದಲ್ಲಿ 50:30:20 ನಿಯಮ ಹೇಗೆ ಅನ್ವಯವಾಗುತ್ತೆ ಅನ್ನೋದನ್ನು ತಿಳಿಯಿರಿ.

ಪ್ರತಿಯೊಬ್ಬರ ಜೀವನದಲ್ಲೂ ಹಣಕಾಸು ನಿರ್ವಹಣೆ ಅವರ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸ್ವಲ್ಪ ಲಯ ತಪ್ಪಿದರೂ ಸಾಲದ ಹೊರೆ ಹೆಚ್ಚಾಗುತ್ತದೆ. ಹೀಗಾಗಿ ಖರ್ಚು-ವೆಚ್ಚಗಳನ್ನು ಸರಿಯಾಗಿ ವರ್ಹಿಸಬೇಕಾಗುತ್ತದೆ. ಅದರಲ್ಲೂ ಮಧ್ಯಮ ವರ್ಗದವರಿಗೆ 50:30:20ರ ಅನುಪಾದ ನಿಯಮ ಹೇಗೆ ವರ್ಕೌಟ್ ಆಗುತ್ತೆ, ಏನಿದು 50:30:20 ನಿಯಮ ಎಂಬುದನ್ನು ಇಲ್ಲಿ ತಿಳಿಯೋಣ.

ನಿಮ್ಮ ಆದಾಯದ ಅರ್ಧದಷ್ಟು ಅಂದರೆ ಶೇ 50 ರಷ್ಟು ಹಣವನ್ನು ಅಗತ್ಯಗಳನ್ನು ಪೂರೈಸಿಕೊಳ್ಳಲು ಉಪಯೋಗಿಸಬೇಕು. ಮನೆ ಖರ್ಚು, ದಿನಸಿ, ಸಾರಿಗೆ ಇತ್ಯಾದಿಗಳಿಗೆ ಈ ಮೊತ್ತವನ್ನು ಖರ್ಚು ಮಾಡಿ. ನಿಮ್ಮ ಆದಾಯದ ಶೇ 30 ರಷ್ಟು ಹಣವನ್ನು ನಿಮ್ಮ ಬದುಕಿನ ಗುಣಮಟ್ಟ ಹೆಚ್ಚಿಸುವುದಕ್ಕೆ ಬಳಸಿ. ಉದಾಹರಣೆಗೆ ಹೊರಗೆ ಊಟ ಮಾಡುವುದು, ಮನರಂಜನೆ, ಪ್ರವಾಸ ಮತ್ತು ಹವ್ಯಾಸಗಳು. ನಿಮ್ಮ ಆದಾಯದ ಶೇ 20 ರಷ್ಟು ಮೊತ್ತವನ್ನು ಸಾಲ ಮರುಪಾವತಿ ಮತ್ತು ಉಳಿತಾಯಕ್ಕೆ ಬಳಸಬೇಕು. ಉಳಿತಾಯವನ್ನು ಕಡ್ಡಾಯವಾಗಿ ನಿರ್ವಹಿಸಲೇಬೇಕಾದ ಜವಾಬ್ದಾರಿಯಾಗಿ ನೋಡಬೇಕು.

ತುರ್ತು ಪರಿಸ್ಥಿತಿ (ಎಮರ್ಜೆನ್ಸಿ) ಎದುರಿಸಲು ನೆರವಾಗುವಷ್ಟು ಒಂದೊಳ್ಳೆ ಮೊತ್ತದ ತುರ್ತುನಿಧಿ, ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ತೀರಿಸುವುದು, ಮತ್ತು ಭವಿಷ್ಯದಲ್ಲಿ ಎದುರಾಗಬಹುದಾದ ಖರ್ಚಿನ ಬಾಬ್ತು ನಿರ್ವಹಿಸಲು ಸೂಕ್ತ ಯೋಜನೆ ರೂಪಿಸಿಕೊಳ್ಳಬೇಕು.

ನಿಮ್ಮ ಹಣಕಾಸು ಯೋಜನೆಯನ್ನು ಈ ರೀತಿ ಸರಳವಾಗಿ ಮತ್ತು ಸಮರ್ಪಕವಾಗಿ ರೂಪಿಸಿಕೊಂಡರೆ ಉಳಿತಾಯ, ಸಾಲ ಮರುಪಾವತಿ ಮತ್ತು ಒಟ್ಟಾರೆ ಬದುಕು ಸುಸೂತ್ರವಾಗಿ ಸಾಗುತ್ತದೆ. ಇದನ್ನೇ 50:30:20 ಸೂತ್ರ ಎಂದು ಕರೆಯುತ್ತಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ