Chanakya Niti: ಈ 4 ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ ಜೀವನದಲ್ಲಿ ಯಶಸ್ಸು ಸಾಧ್ಯವಾಗುತ್ತೆ -ಚಾಣಕ್ಯ ನೀತಿ
Nov 18, 2024 11:26 AM IST
ಜೀವನಲ್ಲಿ ಯಶಸ್ಸು ಸಾಧಿಸಲು ಏನು ಮಾಡಬೇಕೆಂಬುದನ್ನು ಚಾಣಕ್ಯ ತನ್ನ ನೀತಿಗಳನ್ನು ತಿಳಿಸಿದ್ದಾರೆ.
- ಜೀವನಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಚಾಣಕ್ಯ ತನ್ನ ನೀತಿಯಲ್ಲಿ ಉಲ್ಲೇಖಿಸಿದ್ದಾನೆ. ಇವರ ಪ್ರತಿಯೊಂದು ಸೂತ್ರವು ಜೀವನವನ್ನು ನಡೆಸಲು ಬಹಳ ಮುಖ್ಯ. ಜೀವನದಲ್ಲಿ ಸಂತೋಷ, ನೆಮ್ಮದಿಯಾಗಿ ಇರಲು ಏನು ಮಾಡಬೇಕು, ಯಶಸ್ಸಿನ ರಹಸ್ಯವನ್ನು ಆಚಾರ್ಯ ಚಾಣಕ್ಯರು ವಿವರಿಸಿದ್ದಾರೆ.
ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾದ ಅಂತಹ ಅನೇಕ ವಿಷಯಗಳಿವೆ, ಅವು ಜೀವನವನ್ನು ನಡೆಸಲು ಬಹಳ ಮುಖ್ಯ. ಈ ವಿಷಯಗಳ ಬಗ್ಗೆ ಜಾಗೃತಿ ವಹಿಸುವ ವ್ಯಕ್ತಿಯು ಜೀವನದಲ್ಲಿ ಎಂದಿಗೂ ಅಸಮಾಧಾನಗೊಳ್ಳುವುದಿಲ್ಲ. ಆಚಾರ್ಯ ಚಾಣಕ್ಯನ ನೀತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಅನೇಕ ಜನರು ಯಶಸ್ಸನ್ನು ಸಾಧಿಸುತ್ತಾರೆ. ಆಚಾರ್ಯ ಚಾಣಕ್ಯನು ಜೀವನದಲ್ಲಿ ಯಶಸ್ಸನ್ನು ಸಾಧಿಸುವ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾನೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನವು ಯಶಸ್ವಿಯಾಗಬೇಕೆಂದು ಬಯಸುತ್ತಾನೆ, ಆದರೆ ಕೆಲವು ಅಭ್ಯಾಸಗಳಿಂದಾಗಿ, ವೈಫಲ್ಯ ಸಂಭವಿಸುತ್ತದೆ. ಆ ವೈಫಲ್ಯಕ್ಕೆ ಕಾರಣಗಳೇನು ಎಂಬುದನ್ನು ತಿಳಿಯೋಣ. ಆಚಾರ್ಯ ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು ಜೀವನದಲ್ಲಿ ಯಶಸ್ವಿಯಾಗಲು ಯಾವುದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಪ್ರಮುಖವಾಗಿ 4 ಅಂಶಗಳನ್ನು ಚಾಣಕ್ಯರು ತಮ್ಮ ನೀತಿಯನ್ನು ತಿಳಿಸಿದ್ದಾರೆ.
ಆಚಾರ್ಯ ಚಾಣಕ್ಯನ ನೀತಿಗಳ ಪ್ರಕಾರ, ಒಬ್ಬ ವ್ಯಕ್ತಿಯು ಶಾಂತಿಯ ವಾತಾವರಣವನ್ನು ಕಾಪಾಡಿಕೊಳ್ಳಬೇಕು. ಶಾಂತವಾಗಿರುವ ವ್ಯಕ್ತಿಯು ಜೀವನದಲ್ಲಿ ಯಶಸ್ವಿಯಾಗುತ್ತಾನೆ. ಶಾಂತಿಯನ್ನು ಕಾಪಾಡಿಕೊಳ್ಳದೆ, ಸದಾ ಗದ್ದಲ ಗಲಾಟೆಗಳಲ್ಲಿ ತೊಡಗುವ ವ್ಯಕ್ತಿಯು ಜೀವನದಲ್ಲಿ ವೈಫಲ್ಯಕ್ಕೆ ಗುರಿಯಾಗುತ್ತಾನೆ.
ಆಚಾರ್ಯ ಚಾಣಕ್ಯನ ನೀತಿಗಳ ಪ್ರಕಾರ, ದೈನಂದಿನ ಪೂಜೆಯು ಜೀವನದಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ. ಸಕಾರಾತ್ಮಕತೆ ಇರುವಲ್ಲಿ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ. ಪೂಜಿಸುವ ಮೂಲಕ, ನೀವು ಎಲ್ಲಾ ರೀತಿಯ ತೊಂದರೆಗಳನ್ನು ತಪ್ಪಿಸಬಹುದು.
ಆಚಾರ್ಯ ಚಾಣಕ್ಯನ ನೀತಿಗಳ ಪ್ರಕಾರ, ತನಗಿಂತ ಹಿರಿಯರನ್ನು ಗೌರವಿಸದ ವ್ಯಕ್ತಿಯು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ವ್ಯಕ್ತಿ ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ. ಒಬ್ಬನು ಯಾವಾಗಲೂ ತನ್ನ ಹಿರಿಯರನ್ನು ಗೌರವಿಸಬೇಕು ಮತ್ತು ಕಿರಿಯರನ್ನು ಪ್ರೀತಿಸಬೇಕು.
ಆಚಾರ್ಯ ಚಾಣಕ್ಯನ ನೀತಿಗಳ ಪ್ರಕಾರ, ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸದ ವ್ಯಕ್ತಿಯು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿದರೆ ಆ ವ್ಯಕ್ತಿಯ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ. ಜೊತೆಗೆ ಹೆಚ್ಚಿನ ಆಶೀರ್ವಾದವನ್ನು ನೀಡುತ್ತಾಳೆ.
ಆಚಾರ್ಯ ಚಾಣಕ್ಯನನ್ನು ಮಹಾನ್ ದಾರ್ಶನಿಕ, ರಾಜಕಾರಣಿ ಮತ್ತು ವಿದ್ವಾಂಸ ಎಂದು ಪರಿಗಣಿಸಲಾಗಿದೆ. ಚಾಣಕ್ಯನು ತನ್ನ ನೀತಿ ಶಾಸ್ತ್ರ ಗ್ರಂಥದಲ್ಲಿ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ಅಂಶಗಳನ್ನು ವಿವರಿಸಿದ್ದಾನೆ. ಹಲವರು ಇಂದಿಗೂ ಚಾಣಕ್ಯರ ನೀತಿಗಳನ್ನು ಅನುಸರಿಸುತ್ತಾರೆ. ಈ ನೀತಿಗಳ ಸಹಾಯದಿಂದ ಯಶಸ್ಸು ಕೂಡ ಪಡೆದಿದ್ದಾರೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.