ಚಾಣಕ್ಯ ನೀತಿ: ಆರೋಗ್ಯ ಸಮಸ್ಯೆ, ಹಣಕಾಸಿನ ಕೊರತೆ ಎಂದಿಗೂ ನಿಮ್ಮನ್ನ ಕಾಡಬಾರದು ಅಂದ್ರೆ ಬೆಳಗಿನ ದಿನಚರಿ ಹೀಗಿರಬೇಕು
Nov 05, 2024 09:37 AM IST
ಚಾಣಕ್ಯ ನೀತಿ
- ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಜೀವನದ ಬಗ್ಗೆ ಹಲವು ಅಂಶಗಳನ್ನು ವಿವರಿಸಿದ್ದಾರೆ. ಇವರ ನೀತಿ ಪಾಠಗಳು ಇಂದಿಗೂ ಬದುಕಿಗೆ ದಾರಿಯಾಗಿದೆ. ಇಂದಿನ ಚಾಣಕ್ಯ ನೀತಿಯಲ್ಲಿ ನಾವು ದಿನವನ್ನು ಹೇಗೆ ಆರಂಭಿಸಬೇಕು ಎಂಬುದನ್ನು ನೋಡೋಣ. ನಿಮ್ಮ ದಿನಚರಿ ಹೀಗೆ ಆರಂಭವಾದರೆ ಆರೋಗ್ಯ ಚೆನ್ನಾಗಿರುವ ಜೊತೆಗೆ ಮನೆಯಲ್ಲಿ ಸದಾ ಸಂತೋಷ, ನೆಮ್ಮದಿ ನೆಲೆಸಿರುತ್ತದೆ.
ಭಾರತದ ಇತಿಹಾಸದಲ್ಲಿ ಹಲವು ಬುದ್ಧಿವಂತರನ್ನು ನಾವು ಕಾಣಬಹುದು. ಅವರಲ್ಲಿ ಆಚಾರ್ಯ ಚಾಣಕ್ಯ ಕೂಡ ಒಬ್ಬರು. ಜೀವನದ ಕುರಿತು ಚಾಣಕ್ಯರಿಗೆ ತಿಳಿದಿಲ್ಲದ ಅಂಶಗಳಿಲ್ಲ. ರಣರಂಗದಿಂದ ಹಿಡಿದು ಗೃಹಸ್ಥ ಜೀವನದ ಸೂಕ್ಷ್ಮಗಳವರೆಗೆ ಎಲ್ಲವನ್ನೂ ಅವರು ತಿಳಿದಿದ್ದರು. ಅವರು ತಮ್ಮ ಜ್ಞಾನವನ್ನು ನೀತಿಗಳ ರೂಪದಲ್ಲಿ ಹಂಚಿಕೊಂಡರು. ಇವರ ನೀತಿಶಾಸ್ತ್ರದಲ್ಲಿನ ಪಾಠಗಳು ಇಂದಿಗೂ ಪ್ರಸ್ತುತ. ಯಾವುದೇ ವ್ಯಕ್ತಿಯು ಜೀವನದ ಪ್ರತಿಯೊಂದು ಅಂಶಗಳಲ್ಲಿ ಆಚಾರ್ಯರ ತಂತ್ರಗಳ ಜ್ಞಾನವನ್ನು ಪಡೆದುಕೊಳ್ಳುವ ಮೂಲಕ ತನ್ನ ಜೀವನವನ್ನು ಸರಳ ಮತ್ತು ಸುಂದರವಾಗಿಸಿಕೊಳ್ಳಬಹುದು.
ಯಾವುದೇ ವ್ಯಕ್ತಿ ಚಾಣಕ್ಯರ ಬೋಧನೆಗಳನ್ನು ಅನುಸರಿಸಿದಾಗ, ಅವನು ಯಶಸ್ವಿ ಮತ್ತು ಸಂತೋಷದ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಅಂತೆಯೇ ಚಾಣಕ್ಯರ ಸಲಹೆಗಳನ್ನು ನಿರಾಕರಿಸಿದರೆ ಬೇಸರ, ಸೋಲು ಖಚಿತ. ಅಂತಹ ವ್ಯಕ್ತಿಗಳು ಬದುಕಿನಲ್ಲಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ವ್ಯಕ್ತಿಯೊಬ್ಬ ಬೆಳಿಗ್ಗೆ ಎದ್ದ ತಕ್ಷಣ ಮಾಡಬೇಕಾದ ಮೊದಲ ಕೆಲಸವೇನು, ಬೆಳಿಗ್ಗೆ ಎದ್ದಾಗ ಯಾವ ಕೆಲಸ ಮಾಡಿದರೆ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ, ಆರೋಗ್ಯ ಹಾಗೂ ಹಣಕಾಸಿನ ಕೊರತೆ ಕಾಡುವುದಿಲ್ಲ ಎಂಬುದನ್ನು ಹೇಳಿದ್ದಾರೆ. ಚಾಣಕ್ಯರು ಹೇಳಿದ ಆ ಸಲಹೆಗಳು ಯಾವುವು ನೋಡಿ.
ಸೂರ್ಯೋದಯಕ್ಕೆ ಮುನ್ನ ಏಳುವುದು
ಬೆಳಗ್ಗೆ ಬೇಗ ಎದ್ದು ರಾತ್ರಿ ಬೇಗ ಮಲಗುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಚಾಣಕ್ಯ ನೀತಿಯ ಪ್ರಕಾರ, ಬೆಳಿಗ್ಗೆ ಸೂರ್ಯೋದಯಕ್ಕೆ ಮುಂಚಿತವಾಗಿ ಹಾಸಿಗೆಯಿಂದ ಎದ್ದೇಳಬೇಕು. ಉತ್ತಮ ಆರೋಗ್ಯ ಹಾಗೂ ಧಾರ್ಮಿಕ ದೃಷ್ಟಿಕೋನದಿಂದ ಇದು ಅತ್ಯಗತ್ಯ. ಬೆಳಿಗ್ಗೆ ಬೇಗ ಎದ್ದ ತಕ್ಷಣ ಸ್ನಾನ ಮಾಡಿ ದೇವರ ಧ್ಯಾನ ಮಾಡಿ. ಹೀಗೆ ಮಾಡುವುದರಿಂದ ದೇಹ ಮತ್ತು ಮನಸ್ಸು ಎರಡಕ್ಕೂ ಶಾಂತಿ ಸಿಗುತ್ತದೆ. ಅಂದರೆ, ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.
ಯೋಗ ಮತ್ತು ವ್ಯಾಯಾಮ ಮಾಡುವುದು
ಚಾಣಕ್ಯ ನೀತಿ ಪ್ರಕಾರ, ಬೆಳಿಗ್ಗೆ ಎದ್ದ ನಂತರ ಯೋಗ ಮತ್ತು ವ್ಯಾಯಾಮಕ್ಕೆ ಸ್ವಲ್ಪ ಸಮಯ ಕೊಡುವುದು ಉತ್ತಮ ಆರೋಗ್ಯಕ್ಕೆ ಅವಶ್ಯವಾಗಿದೆ. ಯೋಗ, ಧ್ಯಾನ ಮತ್ತು ವ್ಯಾಯಾಮವು ದೇಹವನ್ನು ಆರೋಗ್ಯಕರವಾಗಿ, ಸದೃಢವಾಗಿ ಮತ್ತು ಕ್ರಿಯಾಶೀಲವಾಗಿರಿಸುತ್ತದೆ. ಹಾಗಾಗಿ ದೇಹವು ರೋಗಮುಕ್ತವಾಗುತ್ತದೆ. ಯೋಗ, ಧ್ಯಾನ ಮತ್ತು ವ್ಯಾಯಾಮ ಕೂಡ ಮಾನಸಿಕ ಬೆಳವಣಿಗೆಗೆ ಅವಶ್ಯಕವಾಗಿದೆ.
ಧ್ಯಾನ ಮಾಡಿ
ಚಾಣಕ್ಯರ ನೀತಿಯ ಪ್ರಕಾರ, ಬೆಳಿಗ್ಗೆ ಎದ್ದು, ಸ್ನಾನ ಮಾಡಿದ ನಂತರ, ಸೂರ್ಯ ದೇವರಿಗೆ ನೀರನ್ನು ಅರ್ಪಿಸಬೇಕು. ಧಾರ್ಮಿಕವಾಗಿ, ಸೂರ್ಯ ದೇವರಿಗೆ ನೀರನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಬೆಳಿಗ್ಗೆ ಸೂರ್ಯ ದೇವರಿಗೆ ನೀರನ್ನು ಅರ್ಪಿಸುವುದರಿಂದ ಜೀವನದಲ್ಲಿ ಪ್ರಗತಿಯ ಹಾದಿಯು ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಆಚಾರ್ಯರ ಪ್ರಕಾರ, ನೀರನ್ನು ಅರ್ಪಿಸಿದ ನಂತರ ಸ್ವಲ್ಪ ಸಮಯ ಧ್ಯಾನ ಮಾಡಿ ಮತ್ತು ನಿಮ್ಮ ಇಷ್ಟ ದೇವರನ್ನು ಆರಾಧಿಸಿ. ಮಾಲೆಯೊಂದಿಗೆ ಭಗವಂತನ ಹೆಸರನ್ನು ಜಪಿಸಿ. ಇದರ ನಂತರ, ಹಣೆಯ ಮತ್ತು ಗಂಟಲಿನ ಮೇಲೆ ಶ್ರೀಗಂಧವನ್ನು ಲೇಪಿಸುವ ಮೂಲಕ ದಿನವನ್ನು ಪ್ರಾರಂಭಿಸಿ. ಈ ರೀತಿ ಸಕಾರಾತ್ಮಕ ರೀತಿಯಲ್ಲಿ ದಿನ ಪ್ರಾರಂಭಿಸಿದಾಗ, ನೀವು ಖಂಡಿತವಾಗಿಯೂ ಜೀವನದಲ್ಲಿ ಮುನ್ನಡೆಯುತ್ತೀರಿ.
ಇತ್ತೀಚಿನದ ದಿನಗಳಲ್ಲಿ ಆರೋಗ್ಯವೇ ಪ್ರಮುಖ ಸಮಸ್ಯೆಯಾಗಿರುವ ಕಾರಣ ಆರೋಗ್ಯ ಸರಿಯಿದ್ದರೆ ನೆಮ್ಮದಿ, ಹಣ, ಸಂತೋಷ ಎಲ್ಲವೂ ತಾನಾಗಿಯೇ ಇದನ್ನು ಹಿಂಬಾಲಿಸಿ ಬರುತ್ತದೆ.
ವಿಭಾಗ