Chicken Recipe: ಪಾರ್ಟಿಗಳಲ್ಲಿ ಕೂಡಾ ತಯಾರಿಸಬಹುದಾದ ಚಿಕನ್ ಫಿಂಗರ್ಸ್...ನೀವೇಕೆ ಟ್ರೈ ಮಾಡಬಾರ್ದು..?
Jul 27, 2022 09:50 PM IST
ಚಿಕನ್ ಫಿಂಗರ್ ರೆಸಿಪಿ (Unsplash)
- ಮೃದುವಾದ ಚಿಕನ್ ತುಂಡುಗಳನ್ನು ಉಪ್ಪು, ಮೆಣಸು ಮತ್ತು ಮಸಾಲೆಗಳೊಂದಿಗೆ ಬೆರೆಸಿ ಎಣ್ಣೆಯಲ್ಲಿ ಫ್ರೈ ಮಾಡಲಾಗುತ್ತದೆ. ಹೊರಗೆ ಗರಿಗರಿಯಾಗಿದ್ದರೆ ಒಳಭಾಗದಲ್ಲಿ ಜ್ಯೂಸಿ ಹಾಗೂ ಮೃದುವಾಗಿರುತ್ತದೆ. ಪ್ರತಿ ವರ್ಷ ಜುಲೈ 27 ರಂದು ಅಮೇರಿಕಾ ಮತ್ತು ಕೆಲವು ಅರಬ್ ದೇಶಗಳಲ್ಲಿ ಚಿಕನ್ ಫಿಂಗರ್ ಡೇ ಎಂದು ಆಚರಿಸಲಾಗುತ್ತದೆ.
ಮಾಂಸಾಹಾರಿಗಳಿಗೆ ವಿವಿಧ ಆಯ್ಕೆಗಳಿದ್ದರೂ, ಹೆಚ್ಚಿನವರು ಚಿಕನ್ ತಿನ್ನಲು ಬಯಸುತ್ತಾರೆ. ಚಿಕನ್‌ನಿಂದ ಹಲವು ವಿಧವಾದ ಡಿಶ್ ಮಾಡಬಹುದು. ಸ್ಟಾರ್ಟರ್‌ಗಳ ವಿಷಯಕ್ಕೆ ಬರುವುದಾದರೆ ಚಿಕನ್ ಸ್ಟಾರ್ಟರ್‌ಗಳು ತುಂಬಾ ರುಚಿಯಾಗಿರುತ್ತವೆ. ಯಾವುದೇ ಪಾರ್ಟಿಯಲ್ಲಿ ಕೂಡಾ ಇದನ್ನು ತಯಾರಿಸಬಹುದು. ಈಗ ಮಳೆಗಾಲ, ನೀವು ಯಾವುದಾದರೂ ಟೇಸ್ಟಿ ನಾನ್ ವೆಜ್ ತಿಂಡಿ ಮಾಡಬೇಕು ಎಂದುಕೊಂಡಿದ್ದರೆ ನಿಮಗಾಗಿ ಚಿಕನ್ ಫಿಂಗರ್ ರೆಸಿಪಿ ಇಲ್ಲಿದೆ.
ಮೃದುವಾದ ಚಿಕನ್ ತುಂಡುಗಳನ್ನು ಉಪ್ಪು, ಮೆಣಸು ಮತ್ತು ಮಸಾಲೆಗಳೊಂದಿಗೆ ಬೆರೆಸಿ ಎಣ್ಣೆಯಲ್ಲಿ ಫ್ರೈ ಮಾಡಲಾಗುತ್ತದೆ. ಹೊರಗೆ ಗರಿಗರಿಯಾಗಿದ್ದರೆ ಒಳಭಾಗದಲ್ಲಿ ಜ್ಯೂಸಿ ಹಾಗೂ ಮೃದುವಾಗಿರುತ್ತದೆ. ಪ್ರತಿ ವರ್ಷ ಜುಲೈ 27 ರಂದು ಅಮೇರಿಕಾ ಮತ್ತು ಕೆಲವು ಅರಬ್ ದೇಶಗಳಲ್ಲಿ ಚಿಕನ್ ಫಿಂಗರ್ ಡೇ ಎಂದು ಆಚರಿಸಲಾಗುತ್ತದೆ. ಚಿಕನ್ ಫಿಂಗರ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಮತ್ತು ತಯಾರಿ ವಿಧಾನ ಹೇಗೆ ನೋಡೋಣ.
ಬೇಕಾಗುವ ಸಾಮಗ್ರಿಗಳು
ಚಿಕನ್ ಬ್ರೆಸ್ಟ್ - 6
ಮೊಟ್ಟೆ - 1
ಮಜ್ಜಿಗೆ - 1 ಕಪ್
ಬೆಳ್ಳುಳ್ಳಿ ಪುಡಿ - 1 ಟೀ ಸ್ಪೂನ್
ಬೆಳ್ಳುಳ್ಳಿ ಪೇಸ್ಟ್ - 1 ಟೀ ಸ್ಪೂನ್
ಮೈದಾ ಹಿಟ್ಟು - 1 ಕಪ್
ಬ್ರೆಡ್ ಕ್ರಮ್ಸ್ - 1 ಕಪ್
ಸೋಯಾ ಸಾಸ್ - 1/2 ಟೀ ಸ್ಪೂನ್
ಮೆಣಸಿನ ಪುಡಿ - 1/2 ಟೀ ಸ್ಪೂನ್
ಚಿಲ್ಲಿ ಫ್ಲೇಕ್ಸ್ - 1/2 ಟೀ ಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ಬೇಕಿಂಗ್ ಪೌಡರ್ - 1 ಟೀ ಸ್ಪೂನ್
ಎಣ್ಣೆ - ಕರಿಯಲು
ತಯಾರಿಸುವ ವಿಧಾನ
ಚಿಕನನ್ನು ಸಣ್ಣದಾಗಿ ಉದ್ದ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ
ಒಂದು ಬೌಲ್ನಲ್ಲಿ ಅದರಲ್ಲಿ ಚಿಕನ್ ಸ್ಟ್ರಿಪ್ಸ್ ಸೇರಿಸಿ, ಅದಕ್ಕೆ ಮೊಟ್ಟೆ, ಮಜ್ಜಿಗೆ, ಬೆಳ್ಳುಳ್ಳಿ ಪುಡಿ, ಉಪ್ಪು, ಚಿಲ್ಲಿ ಫ್ಲೇಕ್ಸ್, ಸೋಯಾ ಸಾಸ್, 1 ಚಮಚ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ಅಗತ್ಯವಿದ್ದರೆ ಈ ಮಿಶ್ರಣಕ್ಕೆ ಅರ್ಧ ಕಪ್ ನೀರು ಸೇರಿಸಿ. 20 ನಿಮಿಷಗಳ ಕಾಲ ರೆಫ್ರಿಜರೇಟರ್ನಲ್ಲಿಡಿ.
ಒಂದು ಪ್ಲೇಟ್ನಲ್ಲಿ ಮೈದಾ, ಬೆಳ್ಳುಳ್ಳಿ ಪುಡಿ, ಬ್ರೆಡ್ ತುಂಡುಗಳನ್ನು ಬೆರೆಸಿ ಪಕ್ಕಕ್ಕೆ ಇರಿಸಿ.
ರೆಫ್ರಿಜರೇಟರ್ನಿಂದ ತೆಗೆದ ಚಿಕನ್ ಚಿಕನ್ ತುಂಡುಗಳನ್ನು ಮೈದಾ ಮಿಶ್ರಣದಲ್ಲಿ ಅದ್ದಿ ಬಿಸಿ ಎಣ್ಣೆಗೆ ಬಿಡಿ
ಚಿಕನ್ ತುಂಡುಗಳನ್ನು ಎರಡೂ ಕಡೆ ಕಂದು ಬಣ್ಣ ಬರುವರೆಗೂ ಫ್ರೈ ಮಾಡಿ
ಕ್ರಿಸ್ಪಿ, ಜ್ಯೂಸಿ ಚಿಕನ್ ಫಿಂಗರನ್ನು ಟೊಮ್ಯಾಟೋ ಸಾಸ್ ಜೊತೆ ಸವಿಯಿರಿ.
ವಿಭಾಗ