logo
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ಕುಟುಂಬದೊಂದಿಗೆ ಅರ್ಥಪೂರ್ಣವಾಗಿ ಕಳೆಯಲು ಇಲ್ಲಿದೆ ಟಿಪ್ಸ್: ಚುಮು ಚುಮು ಚಳಿಯಲ್ಲಿ ಸದಸ್ಯರೊಂದಿಗೆ ಮಜಾ ಮಾಡಿ

ಚಳಿಗಾಲದಲ್ಲಿ ಕುಟುಂಬದೊಂದಿಗೆ ಅರ್ಥಪೂರ್ಣವಾಗಿ ಕಳೆಯಲು ಇಲ್ಲಿದೆ ಟಿಪ್ಸ್: ಚುಮು ಚುಮು ಚಳಿಯಲ್ಲಿ ಸದಸ್ಯರೊಂದಿಗೆ ಮಜಾ ಮಾಡಿ

Priyanka Gowda HT Kannada

Dec 03, 2024 08:00 AM IST

google News

ಚಳಿಗಾಲದಲ್ಲಿ ಕುಟುಂಬದೊಂದಿಗೆ ಅರ್ಥಪೂರ್ಣವಾಗಿ ಕಳೆಯಲು ಇಲ್ಲಿದೆ ಟಿಪ್ಸ್: ಚುಮು ಚುಮು ಚಳಿಯಲ್ಲಿ ಸದಸ್ಯರೊಂದಿಗೆ ಮಜಾ ಮಾಡಿ

  • ಚಳಿಗಾಲದಲ್ಲಿ ಕುಟುಂಬ ಸೇರಿ ಒಟ್ಟಾಗಿ ಆನಂದಿಸಬಹುದು. ಜೀವಮಾನವಿಡೀ ಉಳಿಯುವಂತಹ ನೆನಪುಗಳಿಗಾಗಿ ಚಳಿಗಾಲವು ಅತ್ಯುತ್ತಮ ಸಮಯವಾಗಿದೆ. ಪ್ರೀತಿಪಾತ್ರರ ಜತೆ ಶಾಶ್ವತವಾದ ನೆನಪುಗಳನ್ನು ರಚಿಸಲು ಇದು ಸೂಕ್ತ ಸಮಯ. ಈ ಚಳಿಗಾಲದಲ್ಲಿ ಕುಟುಂಬದೊಂದಿಗೆ ಅರ್ಥಪೂರ್ಣವಾಗಿ ಕಳೆಯಲು ಇಲ್ಲಿದೆ ಟಿಪ್ಸ್.

ಚಳಿಗಾಲದಲ್ಲಿ ಕುಟುಂಬದೊಂದಿಗೆ ಅರ್ಥಪೂರ್ಣವಾಗಿ ಕಳೆಯಲು ಇಲ್ಲಿದೆ ಟಿಪ್ಸ್: ಚುಮು ಚುಮು ಚಳಿಯಲ್ಲಿ ಸದಸ್ಯರೊಂದಿಗೆ ಮಜಾ ಮಾಡಿ
ಚಳಿಗಾಲದಲ್ಲಿ ಕುಟುಂಬದೊಂದಿಗೆ ಅರ್ಥಪೂರ್ಣವಾಗಿ ಕಳೆಯಲು ಇಲ್ಲಿದೆ ಟಿಪ್ಸ್: ಚುಮು ಚುಮು ಚಳಿಯಲ್ಲಿ ಸದಸ್ಯರೊಂದಿಗೆ ಮಜಾ ಮಾಡಿ (Pexel)

ಚುಮು ಚುಮು ಚಳಿಯಲ್ಲಿ ಕೆಲವರಿಗೆ ಮನೆಯಲ್ಲೇ ಬೆಚ್ಚಗೆ ಮಲಗಿ ಬಿಡೋಣ ಎಂದೆನಿಸಬಹುದು. ಆದರೆ, ಚಳಿಗಾಲದಲ್ಲಿ ಕುಟುಂಬ ಸೇರಿ ಒಟ್ಟಾಗಿ ಆನಂದಿಸಬಹುದು. ತಾಪಮಾನ ಕಡಿಮೆಯಾದಾಗ ಮತ್ತು ಹಿಮ ಬೀಳಲು ಪ್ರಾರಂಭಿಸಿದಾಗ, ಪ್ರೀತಿಪಾತ್ರರ ಜತೆ ಶಾಶ್ವತವಾದ ನೆನಪುಗಳನ್ನು ರಚಿಸಲು ಇದು ಸೂಕ್ತ ಸಮಯ. ನೀವು ಹೊರಾಂಗಣ ಸಾಹಸಗಳು ಅಥವಾ ಒಳಾಂಗಣ ಚಟುವಟಿಕೆಗಳನ್ನು ಹುಡುಕುತ್ತಿರಲಿ, ಎಲ್ಲರಿಗೂ ಮನರಂಜನೆಯನ್ನು ನೀಡುವ ಸಾಕಷ್ಟು ಕೆಲಸಗಳಿವೆ. ಜೀವಮಾನವಿಡೀ ಉಳಿಯುವಂತಹ ನೆನಪುಗಳಿಗಾಗಿ ಚಳಿಗಾಲವು ಅತ್ಯುತ್ತಮ ಸಮಯವಾಗಿದೆ. ಈ ಚಳಿಗಾಲದಲ್ಲಿ ಕುಟುಂಬದೊಂದಿಗೆ ಅರ್ಥಪೂರ್ಣವಾಗಿ ಕಳೆಯಲು ಇಲ್ಲಿದೆ ಟಿಪ್ಸ್.

ಚಳಿಗಾಲದಲ್ಲಿ ಕುಟುಂಬದೊಂದಿಗೆ ಈ ರೀತಿ ಮೋಜಿನಲ್ಲಿ ಪಾಲ್ಗೊಳ್ಳಿ

ಪಾದಯಾತ್ರೆ ಅಥವಾ ಪ್ರಕೃತಿ ತಪ್ಪಲಿನತ್ತ ನಡಿಗೆ: ಪಾದಯಾತ್ರೆ ಅಥವಾ ಪ್ರಕೃತಿ ತಪ್ಪಲಿನತ್ತ ನಡಿಗೆ ಕೈಗೊಳ್ಳುವುದರಿಂದ ಚಳಿಗಾಲದ ಭೂದೃಶ್ಯದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಹಕ್ಕಿಗಳ ಚಿಲಿಪಿಲಿ ಕಲರವ, ಮರಗಳ ಸೊಬಗು, ತಾಜಾ ಗಾಳಿಯನ್ನು ಆನಂದಿಸಬಹುದು. ಈ ವೇಳೆ ಬೆಚ್ಚಗಿನ ಉಡುಗೆ ಹಾಗೂ ತಿಂಡಿಗಳು ಮತ್ತು ಬಿಸಿ ಬಿಸಿ ಪಾನಿಯಗಳನ್ನು ಒಯ್ಯುವುದನ್ನು ಮರೆಯದಿರಿ. ಹಾಗಂತ ತ್ಯಾಜ್ಯವನ್ನು ಅಲ್ಲೇ ಬಿಸಾಕಿ ಬರಬೇಡಿ. ಇದರಿಂದ ಪ್ರಕೃತಿ ಸೌಂದರ್ಯ ಹಾಳಾಗುತ್ತದೆ.

ಬೆಂಕಿ ಹಾಕಿ ಸುತ್ತ ಕುಳಿತುಕೊಳ್ಳುವುದು: ರಾತ್ರಿ ವೇಳೆ ಹೊರಾಂಗಣದಲ್ಲಿ 4-5 ಕಟ್ಟಿಗೆ ತೆಗೆದುಕೊಂಡು ಬಂದು ಸ್ವಲ್ಪ ಬೆಂಕಿ ಹಾಕಿ ಅದರ ಸುತ್ತಲೂ ಕುಳಿತುಕೊಳ್ಳಬೇಕು. ಇದು ಚಳಿಗೆ ಬೆಚ್ಚಗೆ ಇರಿಸಲು ಕೂಡ ಸೂಕ್ತವಾಗಿದೆ. ಅಲ್ಲದೆ, ಹಾಡುಗಳನ್ನು ಹಾಡುತ್ತಾ ನೃತ್ಯ ಮಾಡಬಹುದು.

ಚಲನಚಿತ್ರ ವೀಕ್ಷಣೆ: ಬಿಸಿ ಬಿಸಿ ಪಾನೀಯ ಕುಡಿಯುತ್ತಾ, ಬೆಚ್ಚಗಿನ ಕಂಬಳಿ ಹೊದ್ದುಕೊಂಡು ರಾತ್ರಿ ಚಲನಚಿತ್ರ ವೀಕ್ಷಣೆ ಮಾಡುವುದು ಪ್ರತಿ ಕುಟುಂಬಕ್ಕೂ ಪರಿಪೂರ್ಣ ಚಳಿಗಾಲದ ಚಟುವಟಿಕೆಯಾಗಿದೆ. ರಾತ್ರಿ ವೇಳೆ ಚಲನಚಿತ್ರ ವೀಕ್ಷಣೆ ಮಾಡುವ ಮೂಲಕ ಪರಸ್ಪರ ಸ್ನೇಹಮಯವಾಗಿರಲು, ಖುಷಿಯಿಂದ ಕಾಲಕಳೆಯಲು ಸಾಧ್ಯ. ಚಳಿಗಾಲಕ್ಕೆ ಸಂಬಂಧಿಸಿದ ಚಲನಚಿತ್ರ ವೀಕ್ಷಿಸುವುದು ಉತ್ತಮ.

ಆಟ ಆಡುವುದು: ರಾತ್ರಿ ವೇಳೆ ಊಟ ಮಾಡಿ, ಸ್ವೆಟರ್ ಹೊದ್ದುಕೊಂಡು ಕ್ಯಾರಮ್ ಇತ್ಯಾದಿ ಆಟಗಳನ್ನು ಆಡಬಹುದು. ಕುಟುಂಬವು ಒಟ್ಟಿಗೆ ಸಮಯ ಕಳೆಯಲು ಈ ಆಟಗಳು ಒಂದು ಮೋಜಿನ ಮಾರ್ಗವಾಗಿದೆ. ಕೇವಲ ಆಡುವುದಲ್ಲ, ಪಂದ್ಯಾವಳಿಯನ್ನು ಆಯೋಜಿಸುವುದರಿಂದ ಆಟವು ಸ್ಪರ್ಧೆಯಾಗಿ ಬದಲಾಗುತ್ತದೆ. ಖಂಡಿತಾ ಇಂತಹ ಆಟವನ್ನು ಆನಂದಿಸುವುದರಲ್ಲಿ ಸಂಶಯವಿಲ್ಲ.

ಒಟ್ಟಿಗೆ ಅಡುಗೆ ಮಾಡುವುದು: ಒಂದು ಕುಟುಂಬವಾಗಿ ಒಟ್ಟಿಗೆ ಅಡುಗೆ ಮೂಲಕ ಅಡುಗೆ ಮನೆಯಲ್ಲಿ ಸ್ವಲ್ಪ ಗುಣಮಟ್ಟದ ಸಮಯವನ್ನು ಕಳೆಯಿರಿ. ಚಳಿಗಾಲಕ್ಕೆ ಸಂಬಂಧಪಟ್ಟಂತಹ ಖಾದ್ಯಗಳನ್ನು ತಯಾರಿಸಬಹುದು. ಪರಸ್ಪರ ಒಬ್ಬರಿಗೊಬ್ಬರು ಹಂಚುತ್ತಾ ಅಡುಗೆ ಕೆಲಸ ಮಾಡಿದರೆ ಖಾದ್ಯವು ಬೇಗನೆ ತಯಾರಾಗುತ್ತದೆ. ಹೀಗಾಗಿ ಸಮಯ ಕಳೆಯಲು ಒಂದೊಳ್ಳೆ ಸಮಯ.

ಕಥೆ ಹೇಳುವುದು ಅಥವಾ ಕಥೆ ಕೇಳುವುದು: ಒಂದು ಕುಟುಂಬವಾಗಿ ಒಟ್ಟಾಗಿ ಕಥೆಗಳನ್ನು ಕೇಳುವ ಅಥವಾ ಹೇಳುವ ಮೂಲಕ ಆನಂದಿಸಬಹುದು. ಮಕ್ಕಳಂತೂ ಕಥೆ ಕೇಳುವಿಕೆಯನ್ನು ತುಂಬಾ ಇಷ್ಟಪಡುತ್ತಾರೆ. ಕುಟುಂಬ ಸದಸ್ಯರು ತಮ್ಮ ನೆಚ್ಚಿನ ಕಥೆಗಳನ್ನು ಹೇಳಲು ಸರದಿಯನ್ನು ತೆಗೆದುಕೊಳ್ಳುವ ಮೂಲಕ ಕಥೆ ಹೇಳುವ ರಾತ್ರಿಯನ್ನು ಹೊಂದಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ