Recipe: 'ಡರ್ಟಿ ಡರ್ಟಿ ರೈಸ್' ಹೆಸರು ಕೇಳಿದ್ದೀರಾ...ಈ ಹೆಸರು ಏಕೆ ಬಂತು..ಇದನ್ನು ತಯಾರಿಸೋದು ಹೇಗೆ..?
Jul 28, 2022 10:32 PM IST
ಡರ್ಟಿ ಡರ್ಟಿ ರೈಸ್ (freepik.com)
- ಹೌದು, ಇಂತಹ ಒಂದು ರೆಸಿಪಿ ಕೂಡಾ ಇದೆ ಎಂದರೆ ಯಾರೂ ನಂಬುವುದಿಲ್ಲ. ಡರ್ಟಿ ರೈಸನ್ನು 'ಕಾಜುನ್ ರೈಸ್' ಅಥವಾ 'ರೈಸ್ ಡ್ರೆಸಿಂಗ್' ಎಂದೂ ಕರೆಯುತ್ತಾರೆ. ಅಮೆರಿಕದ ಲೂಸಿಯಾನ ಮತ್ತು ಮೆಕ್ಸಿಕೋದಂತಹ ಪ್ರದೇಶಗಳಲ್ಲಿ ಈ ಡರ್ಟಿ ರೈಸನ್ನು ಹೆಚ್ಚಾಗಿ ಸೇವಿಸಲಾಗುತ್ತದೆ.
ದಕ್ಷಿಣ ಭಾರತೀಯರು ಸಾಮಾನ್ಯವಾಗಿ ಊಟಕ್ಕೆ ಅನ್ನವನ್ನೇ ಹೆಚ್ಚಾಗಿ ತಿನ್ನುತ್ತೇವೆ. ಸಾಮಾನ್ಯ ಅನ್ನ ಸಾಂಬಾರ್ ಜೊತೆ ಕೆಲವೊಮ್ಮೆ ನಾವು ಅಕ್ಕಿಯಿಂದಲೇ ಮಾಡಿದ ಬಿರಿಯಾನಿ, ಪುಲಾವ್, ಲೆಮನ್ ರೈಸ್, ಖಿಚಡಿ, ಫ್ರೈಡ್ ರೈಸ್ ಮುಂತಾದ ರೈಸ್ ಐಟಮ್ಗಳನ್ನು ತಿನ್ನುತ್ತೇವೆ. ಆದರೆ ನೀವು ಎಂದಾದರೂ 'ಡರ್ಟಿ ರೈಸ್' ತಿಂದಿದ್ದೀರಾ? ಇಲ್ಲಿ ಡರ್ಟಿ ಎಂದರೆ ಕೊಳೆತ ಅಕ್ಕಿ ಅಥವಾ ಕಲುಷಿತ ಅಕ್ಕಿ ಎಂದು ಅರ್ಥವಲ್ಲ. ಈ ರೆಸಿಪಿಯ ಹೆಸರೇ 'ಡರ್ಟಿ, ಡರ್ಟಿ ರೈಸ್'.
ಹೌದು, ಇಂತಹ ಒಂದು ರೆಸಿಪಿ ಕೂಡಾ ಇದೆ ಎಂದರೆ ಯಾರೂ ನಂಬುವುದಿಲ್ಲ. ಡರ್ಟಿ ರೈಸನ್ನು 'ಕಾಜುನ್ ರೈಸ್' ಅಥವಾ 'ರೈಸ್ ಡ್ರೆಸಿಂಗ್' ಎಂದೂ ಕರೆಯುತ್ತಾರೆ. ಅಮೆರಿಕದ ಲೂಸಿಯಾನ ಮತ್ತು ಮೆಕ್ಸಿಕೋದಂತಹ ಪ್ರದೇಶಗಳಲ್ಲಿ ಈ ಡರ್ಟಿ ರೈಸನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಹೆಸರು ಟರ್ಟಿ ರೈಸ್ ಆಗಿದ್ದರೂ, ಇದರ ರುಚಿ ಬಹಳ ಡಿಫರೆಂಟ್. ಇದನ್ನು ಮಾಡೋದು ಹೇಗೆ ನೋಡೋಣ ಬನ್ನಿ.
ಬೇಕಾಗುವ ಪದಾರ್ಥಗಳು
ಬಾಸ್ಮತಿ ಅಕ್ಕಿ - 1 ಕಪ್
ಬೆಣ್ಣೆ - 1 ಚಮಚ
ಈರುಳ್ಳಿ - 1
ಗೋಡಂಬಿ - 1⁄4 ಕಪ್
ಫ್ರೋಜನ್ ಬಟಾಣಿ - 1 ಕಪ್
ಚೆಕ್ಕೆ - 1 ಇಂಚು
ಕರಿಮೆಣಸಿನ ಪುಡಿ - 1 ಟೀ ಸ್ಪೂನ್
ಏಲಕ್ಕಿ - 3
ಬಿರಿಯಾನಿ ಎಲೆ - 1
1 1/2 ಕಪ್ ಚಿಕನ್ ಬೇಯಿಸಿದ ನೀರು
ತಯಾರಿಸುವ ವಿಧಾನ
ಮೊದಲು ಬಾಸ್ಮತಿ ಅಕ್ಕಿಯನ್ನು ತೊಳೆದು ಪಕ್ಕಕ್ಕೆ ಇರಿಸಿ.
ಒಂದು ಪಾತ್ರೆಯಲ್ಲಿ ಮಧ್ಯಮ ಉರಿಯಲ್ಲಿ ಬೆಣ್ಣೆ ಬಿಸಿ ಮಾಡಿಕೊಂಡು ಸಣ್ಣಗೆ ಕತ್ತರಿಸಿದ ಈರುಳ್ಳಿ ಸೇರಿಸಿ ಉರಿಯಿರಿ.
ನಂತರ, ಗೋಡಂಬಿ, ದಾಲ್ಚಿನ್ನಿ, ಮೆಣಸು, ಏಲಕ್ಕಿ ಮತ್ತು ಬಿರಿಯಾನಿ ಎಲೆಗಳನ್ನು ಹುರಿದುಕೊಳ್ಳಿ. ನಂತರ ಬಟಾಣಿ ಸೇರಿಸಿ ಹುರಿಯಿರಿ.
ಈಗ ತೊಳೆದ ಬಾಸ್ಮತಿ ಅಕ್ಕಿಯನ್ನು ಸೇರಿಸಿ ಅದಕ್ಕೆ ಚಿಕನ್ ಬೇಯಿಸಿಕೊಂಡ ನೀರು ಸೇರಿಸಿ
ಅನ್ನ ತಯಾರಾದ ನಂತರ ಕರಿಮೆಣಸಿನ ಪುಡಿ
ಬೇಯಿಸಿದ ಅನ್ನದಿಂದ ಮೆಣಸು ಸೇರಿಸಿ ಮಿಕ್ಸ ಮಾಡಿ, ಬೇಕಿದ್ದರೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ
ಈ ಡಿಶ್ಗೆ ಡರ್ಟಿ ರೈಸ್ ಎಂಬ ಹೆಸರು ಹೇಗೆ ಬಂತು..?
ಈ ರೆಸಿಪಿ ನೋಡಲು, ಹಾಗೂ ತಿನ್ನಲು ಬಹಳ ಚೆನ್ನಾಗಿದೆ, ಆದರೂ ಇದಕ್ಕೆ ಡರ್ಟಿ ರೈಸ್ ಎಂಬ ಹೆಸರು ಹೇಗೆ ಬಂತು ಎಂದು ನಿಮಗೆ ಪ್ರಶ್ನೆ ಕಾಡಬಹುದು. ಸಾಮಾನ್ಯವಾಗಿ ನಾವು ಅಕ್ಕಿಯಿಂದ ಬೇರೆ ಡಿಶ್ಗಳನ್ನು ವಿಭಿನ್ನವಾಗಿ ತಯಾರಿಸುತ್ತೇವೆ. ಆದರೆ ಈ ರೈಸ್ ರೆಸಿಪಿ ಮಾಡುವಾಗ ಮೃದುವಾದ ಹಂದಿ ಮಾಂಸ ಅಥವಾ ಲಿವರನ್ನು ಸಣ್ಣದಾಗಿ ಕತ್ತರಿಸಿ ಬೆಣ್ಣೆಯಲ್ಲಿ ಹುರಿದು ನಂತರ ಅಕ್ಕಿಗೆ ಸೇರಿಸಲಾಗುತ್ತದೆ. ಕೆಲವೆಡೆ ನೀರಿನ ಬದಲು ಚಿಕನ್ ಸ್ಟಾಕ್ ಸೇರಿಸುತ್ತಾರೆ. ಇವರೆಡನ್ನೂ ಬೇಯಿಸಿದಾಗ ಕಂದು ಬಣ್ಣ ಬರುತ್ತದೆ. ಈ ಬಣ್ಣ ಕೆಲವರಿಗೆ ಇಷ್ಟವಾಗದೆ ಇರಬಹುದು. ಅಂದಿನಿಂದ ಇದಕ್ಕೆ ಡರ್ಟಿ ಡರ್ಟಿ ರೈಸ್ ಎಂದು ಕರೆಯಲಾಗುತ್ತದೆ.
ವಿಭಾಗ