logo
ಕನ್ನಡ ಸುದ್ದಿ  /  ಜೀವನಶೈಲಿ  /  Dry Fruits Laddu Recipe: ಮಕ್ಕಳು ಡ್ರೈ ಫ್ರೂಡ್ಸ್‌ ಬೇಡ ಅಂತಿದ್ದಾರಾ...ಅದ್ರಿಂದ್ಲೇ ಲಡ್ಡು ತಯಾರಿಸಿ ಕೊಡಿ...ರೆಸಿಪಿ

Dry Fruits Laddu Recipe: ಮಕ್ಕಳು ಡ್ರೈ ಫ್ರೂಡ್ಸ್‌ ಬೇಡ ಅಂತಿದ್ದಾರಾ...ಅದ್ರಿಂದ್ಲೇ ಲಡ್ಡು ತಯಾರಿಸಿ ಕೊಡಿ...ರೆಸಿಪಿ

HT Kannada Desk HT Kannada

Sep 25, 2022 09:39 PM IST

google News

ಡ್ರೈ ಫ್ರೂಟ್‌ ಲಡ್ಡು ರೆಸಿಪಿ

    • ಮಕ್ಕಳ ಬೆಳವಣಿಗೆಗೆ ಕೂಡಾ ಡ್ರೈ ಫ್ರೂಟ್ಸ್‌ ಬಹಳ ಒಳ್ಳೆಯದು. ಮಕ್ಕಳು ಕೂಡಾ ಡ್ರೈ ಪ್ರೂಟ್ಸನ್ನು ಹಾಗೇ ತಿನ್ನಲು ಇಷ್ಟ ಪಡುವುದಿಲ್ಲ. ಅದರ ಬದಲಿಗೆ ಅದರಿಂದ ಲಡ್ಡು ತಯಾರಿಸಿ ಕೊಟ್ಟರೆ ಖಂಡಿತ ತಿನ್ನುತ್ತಾರೆ.
ಡ್ರೈ ಫ್ರೂಟ್‌ ಲಡ್ಡು ರೆಸಿಪಿ
ಡ್ರೈ ಫ್ರೂಟ್‌ ಲಡ್ಡು ರೆಸಿಪಿ (PC: Freepik)

ಡ್ರೈ ಫ್ರೂಟ್‌ಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು, ಇದು ಎಲ್ಲರಿಗೂ ತಿಳಿದ ವಿಚಾರ. ಆದರೆ ಕೆಲವರು ಡ್ರೈ ಫ್ರೂಟ್ಸನ್ನು ಹಾಗೇ ತಿನ್ನಲು ಇಷ್ಟಪಡುವುದಿಲ್ಲ. ಅದನ್ನು ಪುಡಿ ಮಾಡಿ ಹಾಲು ಅಥವಾ ಇನ್ನಿತರ ಆಹಾರಗಳೊಂದಿಗೆ ಸೇವಿಸಿದರೆ, ಇನ್ನೂ ಕೆಲವರು ಸ್ಮೂಥಿಗೆ ಸೇರಿಸುತ್ತಾರೆ.

ಮಕ್ಕಳ ಬೆಳವಣಿಗೆಗೆ ಕೂಡಾ ಡ್ರೈ ಫ್ರೂಟ್ಸ್‌ ಬಹಳ ಒಳ್ಳೆಯದು. ಮಕ್ಕಳು ಕೂಡಾ ಡ್ರೈ ಪ್ರೂಟ್ಸನ್ನು ಹಾಗೇ ತಿನ್ನಲು ಇಷ್ಟ ಪಡುವುದಿಲ್ಲ. ಅದರ ಬದಲಿಗೆ ಅದರಿಂದ ಲಡ್ಡು ತಯಾರಿಸಿ ಕೊಟ್ಟರೆ ಖಂಡಿತ ತಿನ್ನುತ್ತಾರೆ. ಡ್ರೈ ಪ್ರೂಟ್ಸ್‌ ಲಡ್ಡು ತಯಾರಿಸಲು ಬೇಕಾದ ಸಾಮಗ್ರಿಗಳು , ತಯಾರಿಸುವ ವಿಧಾನ ಹೀಗಿದೆ.

ಡ್ರೈ ಫ್ರೂಟ್ಸ್‌ ಲಡ್ಡು ತಯಾರಿಸಲು ಬೇಕಾಗುವ ಸಾಮಗ್ರಿಗಳು

ಹಸಿ ಖರ್ಜೂರ - 100 ಗ್ರಾಂ

ಬಾದಾಮಿ - 1/4 ಕಪ್‌

ವಾಲ್‌ ನಟ್ - 1/4 ಕಪ್

ಗೋಡಂಬಿ - 1/4 ಕಪ್

ಗಸಗಸೆ - 1 ಟೇಬಲ್‌ ಸ್ಪೂನ್‌

ಒಣದ್ರಾಕ್ಷಿ - 2 ಟೇಬಲ್‌ ಸ್ಪೂನ್‌

ತುಪ್ಪ - 1/2 ಕಪ್‌

ಕೊಬ್ಬರಿ ತುರಿ - 1/2 ಕಪ್‌

ಜಾಯಿಕಾಯಿ - 1 ಟೀ ಸ್ಪೂನ್‌

ಜೇನುತುಪ್ಪ - 1/2 ಕಪ್‌

ಕುಂಬಳ ಕಾಯಿ ಬೀಜ - 1 ಟೇಬಲ್‌ ಸ್ಪೂನ್‌

ಸೂರ್ಯಕಾಂತಿ ಬೀಜ - 1 ಟೇಬಲ್‌ ಸ್ಪೂನ್‌

ಡ್ರೈ ಫ್ರೂಟ್ಸ್‌ ಲಡ್ಡು ತಯಾರಿಸುವ ವಿಧಾನ

ಹಸಿ ಖರ್ಜೂರದ ಬೀಜ ತೆಗೆದು ಸಣ್ಣ ಸಣ್ಣ ಚೂರುಗಳನ್ನಾಗಿ ಕತ್ತರಿಸಿಕೊಳ್ಳಿ

ಒಂದು ಪ್ಯಾನಿನಲ್ಲಿ ತುಪ್ಪ ಬಿಸಿ ಮಾಡಿಕೊಂಡು ಬಾದಾಮಿಯನ್ನು 1-2 ನಿಮಿಷ ಫ್ರೈ ಮಾಡಿ ( ಕಡಿಮೆ ಉರಿ ಇರಲಿ)

ಇದರೊಂದಿಗೆ ವಾಲ್‌ ನಟ್ಸ್‌ ಸೇರಿಸಿ ಸ್ವಲ್ಪ ಫ್ರೈ ಮಾಡಿ

ನಂತರ ಗೋಡಂಬಿ ಸೇರಿಸಿ ಹುರಿದು ಒಂದು ಪ್ಲೇಟ್‌ನಲ್ಲಿ ತೆಗೆದಿಡಿ

ಉಳಿದ ತುಪ್ಪದೊಂದಿಗೆ ಕುಂಬಳ ಕಾಯಿ ಬೀಜ, ಸೂರ್ಯಕಾಂತಿ ಬೀಜ ಸೇರಿಸಿ ಹುರಿದು ತೆಗೆದಿಡಿ

ನಂತರ ಗಸಗಸೆ, ಒಣದ್ರಾಕ್ಷಿ ಸೇರಿಸಿ ಹುರಿದು, ಕೊಬ್ಬರಿ ಪುಡಿ ಸೇರಿಸಿ ಹುರಿದು ಸ್ಟೋವ್‌ ಆಫ್‌ ಮಾಡಿ

ಮೊದಲೇ ಫ್ರೈ ಮಾಡಿಕೊಂಡ ನಟ್‌ಗಳನ್ನು ಕ್ರಷ್‌ ಮಾಡಿಕೊಳ್ಳಿ

ಬಾಣಲೆಗೆ ಸ್ವಲ್ಪ ತುಪ್ಪ ಸೇರಿಸಿ ಕತ್ತರಿಸಿಕೊಂಡ ಡೇಟ್ಸ್‌ ಸೇರಿಸಿ 5-3 ನಿಮಿಷ ಫೈ ಮಾಡಿ

ಇದರೊಂದಿಗೆ ಜಾಯಿಕಾಯಿ ಪುಡಿ, ಮೊದಲು ಹುರಿದಿಟ್ಟುಕೊಂಡ ಎಲ್ಲ್ ಮಿಶ್ರಣ ಸೇರಿಸಿ ಕೈಯಿಂದ ಮ್ಯಾಶ್‌ ಮಾಡಿ

ನಂತರ ಜೇನುತುಪ್ಪ ಸೇರಿಸಿ ಮತ್ತೆ ಮಿಕ್ಸ್‌ ಮಾಡಿ, ಉಂಡೆಗಳನ್ನು ಕಟ್ಟಿದರೆ ಡ್ರೈ ಫ್ರೂಟ್ಸ್‌ ಲಡ್ಡು ತಿನ್ನಲು ರೆಡಿ

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ