Study room vastu tips: ನಿಮ್ಮ ಮಕ್ಕಳು ಪರೀಕ್ಷೆ ಚೆನ್ನಾಗಿ ಬರೆಯಬೇಕಾ; ಮನೆಯಲ್ಲಿ ಓದುವ ಕೋಣೆ ಹೀಗಿರಲಿ
Jan 30, 2024 10:48 PM IST
ಮಕ್ಕಳ ಸ್ಟಡಿ ರೂಂ ಹೇಗಿರಬೇಕು?
Study room vastu tips: ಮಕ್ಕಳು ಚೆನ್ನಾಗಿ ಓದದ ಕಾರಣ ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಪೋಷಕರೇ ಗಮನಿಸಿ. ಅವರ ಓದುವ ಕೋಣೆ ಹೀಗಿದ್ದರೆ ಯಶಸ್ವಿಯಾಗುತ್ತಾರೆ.
ಬೆಂಗಳೂರು: ಮಕ್ಕಳು ಎಷ್ಟು ಹೊತ್ತು ಬೇಕಾದರೂ ಆಟವಾಡುತ್ತಾರೆ. ಆದರೆ ಪುಸ್ತಕ ಹಿಡಿದು ಓದೋಕೆ ಕುಳಿದರೆ ಸಾಕು ತಲೆ ನೋವು, ಬೇಸರ ಕಾಡಲು ಶುರುವಾಗುತ್ತದೆ. ಹೀಗಿದ್ದಾಗ ಮಕ್ಕಳು ನಿಜವಾಗಿಯೂ ಓದುವ ಕಡೆಗೆ ಕಮನ ಕೊಡುವುದಿಲ್ಲ. ಪೋಷಕರ ಒತ್ತಾಯದಿಂದ ಬುಕ್ ಮುಂದೆ ಕುಳಿತುಕೊಳ್ಳುತ್ತಾರೆ. ಆದರೆ ಓದಿದ್ದು ತಲೆಯೊಳಕ್ಕೆ ಹೋಗುವುದೇ ಇಲ್ಲ. ಮಕ್ಕಳಲ್ಲಿನ ಈ ಸಮಸ್ಯೆಗಳು ಅನೇಕ ಪೋಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಮಕ್ಕಳು ವಿದ್ಯಾಭ್ಯಾಸದತ್ತ ಗಮನ ಹರಿಸದಿರಲು ಮನೆಯಲ್ಲಿರುವ ವಾಸ್ತು ದೋಷಗಳೂ ಕಾರಣವಾಗಿರಬಹುದು.
ವಾಸ್ತು ಶಾಸ್ತ್ರದಲ್ಲಿ ಮಕ್ಕಳಿಗಾಗಿ ಅನೇಕ ಪರಿಹಾರಗಳಿವೆ. ಮನೆಯಲ್ಲಿ ವಾಸ್ತು ಇಲ್ಲದಿದ್ದರೆ ಮಕ್ಕಳ ವಿದ್ಯಾಭ್ಯಾಸದ ಮೇಲೂ ಪರಿಣಾಮ ಬೀರುತ್ತದೆ. ಮಕ್ಕಳು ಮಾತು ಕೇಳುತ್ತಿಲ್ಲ, ಓದಿನ ಕಡೆ ಗಮನ ಹರಿಸುತ್ತಿಲ್ಲ ಎಂದು ಪಾಲಕರು ದೂರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಮಗುವಿನ ಓದುವ ಕೋಣೆಯ ದಿಕ್ಕನ್ನು ಪರಿಶೀಲಿಸಿ. ಮಕ್ಕಳ ಭವಿಷ್ಯವನ್ನು ಸುಧಾರಿಸಲು ವಾಸ್ತು ಶಾಸ್ತ್ರವು ಕೆಲವು ಸರಳ ಪರಿಹಾರಗಳನ್ನು ಒದಗಿಸುತ್ತದೆ. ಅವುಗಳನ್ನು ಅನುಸರಿಸಿದರೆ ನಿಮ್ಮ ಮಕ್ಕಳ ಓದಿನಲ್ಲಿ ಅಗ್ರಸ್ಥಾನಕ್ಕೆ ತಲುಪುತ್ತಾರೆ.
ಮಕ್ಕಳ ಓದುವ ಕೋಣೆ ಯಾವ ದಿಕ್ಕಿನಲ್ಲಿರಬೇಕು?
ವಾಸ್ತು ಪ್ರಕಾರ ಮಕ್ಕಳಿರುವ ಕೋಣೆ, ಅವರು ಓದುಕೊಳ್ಳುವ ಕೊಠಡಿ ನೈಋತ್ಯ ದಿಕ್ಕಿನಲ್ಲಿದ್ದರೆ ಅವರು ನಿಮ್ಮ ಮಾತು ಕೇಳುವುದಿಲ್ಲ. ಅದಕ್ಕಾಗಿಯೇ ಮಕ್ಕಳಿಗೆ ಮನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿರುವ ಕೋಣೆಯನ್ನು ನೀಡಬೇಕು. ಕೋಣೆಯ ಪೂರ್ವ ದಿಕ್ಕಿನಲ್ಲಿ ಉದಯಿಸುತ್ತಿರುವ ಸೂರ್ಯನ ಫೋಟೊವನ್ನು ಇಡಿ. ಓದುವ ಕೋಣೆಯ ಈಶಾನ್ಯ ಮೂಲೆಯಲ್ಲಿ ಹೆಚ್ಚು ತೂಕವನ್ನು ಇಡಬೇಡಿ. ಸಾಧ್ಯವಾದರೆ ಈಶಾನ್ಯ ಮೂಲೆಯನ್ನು ಖಾಲಿ ಬಿಡುವುದೇ ಉತ್ತಮ.
ಕೊಠಡಿ ಸ್ವಚ್ಛವಾಗಿರಬೇಕು
ಮಕ್ಕಳ ಓದುವ ಕೋಣೆಗೆ ಸೂರ್ಯ ಬೆಳಕು ಪ್ರವೇಶಿಸುವಂತೆ ಇರಬೇಕು. ಜೊತೆಗೆ ಸರಸ್ವತಿ ದೇವಿಯ ಫೋಟೊವನ್ನುು ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಮಕ್ಕಳು ಓದುವಾಗ ಟೇಬಲ್ ಮೇಲೆ ಒಂದು ಲೋಟ ನೀರು ಕೂಡ ಇಟ್ಟಿರಬೇಕು. ಈ ಕೊಠಡಿಯಲ್ಲಿ ಭಾರವಾದ ವಸ್ತುಗಳನ್ನು ಇಡಬಾರದು. ಕೊಠಡಿ ಹೆಚ್ಚು ಖಾಲಿ ಮತ್ತು ಶುಚಿಯಾಗಿದ್ದರೆ ಓದಲು ಉತ್ತಮವಾಗಿರುತ್ತದೆ.
ಮಕ್ಕಳ ಓದುವ ಕೋಣೆಯ ಬಣ್ಣ ಯಾವುದಿರಬೇಕು?
ಮಕ್ಕಳು ಸ್ಟಡಿ ಮಾಡುವ ರೂಂನ ಬಣ್ಣ ವಾಸ್ತು ಪ್ರಕಾರವೇ ಇರಬೇಕು. ಈ ಕೊಠಡಿಯ ಬಣ್ಣ ಯಾವಾಗಲೂ ತಿಳಿ ಬಣ್ಣದಿಂದ ಕೂಡಿರಬೇಕು. ತಿಳಿ ಹಳದಿ, ತಿಳಿ ಗುಲಾಬಿ, ತಿಳಿ ಹಸಿರು ಬಣ್ಣಗಳು ಒಳ್ಳೆಯದು. ಈ ಬಣ್ಣಗಳು ಓದುವ ಕೋಣೆಯಲ್ಲಿದ್ದರೆ ಗುರಿ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಓದುವ ಕೋಣೆಯಲ್ಲಿ ಗ್ಲೋಬ್ ಅತ್ಯಗತ್ಯ
ವಾಸ್ತು ಪ್ರಕಾರ ಮಕ್ಕಳು ಓದುವ ಕೋಣೆಯಲ್ಲಿ ಗ್ಲೋಬ್ ಇಡಬೇಕು. ಗೋಳವನ್ನು ಇಟ್ಟುಕೊಳ್ಳುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಭೂಗೋಳವನ್ನು ಈಶಾನ್ಯ ದಿಕ್ಕಿನಲ್ಲಿ ಇರಿಸುವುದರಿಂದ ನಿಮ್ಮ ಮಕ್ಕಳು ಅಧ್ಯಯನದತ್ತ ಗಮನ ಹರಿಸುತ್ತಾರೆ. ಪರೀಕ್ಷೆಯಲ್ಲಿ ಯಶಸ್ಸು ಕಾಣುತ್ತಾರೆ.
ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ
ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ನೈಋತ್ಯ ದಿಕ್ಕಿನಲ್ಲಿ ಎರಡು ಸ್ಪಟಿಕ ವೃತ್ತಗಳನ್ನು ಇಡಿ. ಅವುಗಳನ್ನು ಬಳಸುವ ಮೊದಲು ಒಂದು ವಾರ ಉಪ್ಪು ನೀರಿನಲ್ಲಿ ನೆನೆಸಿ. ನಂತರ ಅವುಗಳನ್ನು ತೊಳೆದು ಗಾಜಿನ ತಟ್ಟೆಯಲ್ಲಿ ಹಾಕಿ. ಮೂರು ಗಂಟೆಗಳ ಕಾಲ ಬಿಸಿಲಿನಲ್ಲಿ ಇಟ್ಟು ಮತ್ತೆ ಒಣಗಿಸಿ ಮನೆಯಲ್ಲಿಟ್ಟರೆ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಅಲ್ಲದೆ, ನೈಋತ್ಯ ದಿಕ್ಕಿನಲ್ಲಿ ಕುಟುಂಬದ ಸದಸ್ಯರು ನಗುತ್ತಿರುವ ಫೋಟೊ ಫ್ರೇಮ್ ಹಾಕುವುದು ಒಳ್ಳೆಯದು. ಮನೆಯಲ್ಲಿ ಮಹಾಭಾರತ ಮತ್ತು ಯುದ್ಧದ ದೃಶ್ಯಗಳನ್ನು ಪ್ರದರ್ಶಿಸಬಾರದು. ಚಾರು, ಕತ್ತರಿ, ಸೂಚಿ ಇತ್ಯಾದಿಗಳನ್ನು ತೆರೆದ ಸ್ಥಳಗಳಲ್ಲಿ ಇಡಬಾರದು. ಅಲ್ಲದೆ ಅವುಗಳನ್ನು ಅಡುಗೆ ಮನೆಯಲ್ಲಿ ನೇತು ಹಾಕಬಾರದು. ಈ ವಸ್ತುಗಳನ್ನು ಸಾಧ್ಯವಾದಷ್ಟು ಕಬೋರ್ಡ್‌ಗಳಲ್ಲಿ ಇಡಿ. ಹೀಗೆ ಮಾಡಿದಾಗ ನಿಮ್ಮ ಮಕ್ಕಳ ಓದುವ ಆಸಕ್ತಿ ಹೆಚ್ಚಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ವಿಭಾಗ