logo
ಕನ್ನಡ ಸುದ್ದಿ  /  ಜೀವನಶೈಲಿ  /  Winter Fashion: ಚಳಿಗಾಲದಲ್ಲಿ ದೇಹ ಬೆಚ್ಚಗಿದ್ದು, ಸ್ಟೈಲಿಶ್‌ ಆಗಿ ಕಾಣ್ಬೇಕು ಅಂತಿದ್ರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಫ್ಯಾಷನ್‌ ಟಿಪ್ಸ್‌

Winter Fashion: ಚಳಿಗಾಲದಲ್ಲಿ ದೇಹ ಬೆಚ್ಚಗಿದ್ದು, ಸ್ಟೈಲಿಶ್‌ ಆಗಿ ಕಾಣ್ಬೇಕು ಅಂತಿದ್ರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಫ್ಯಾಷನ್‌ ಟಿಪ್ಸ್‌

Reshma HT Kannada

Jan 06, 2024 11:00 AM IST

google News

ಚಳಿಗಾಲದ ಫ್ಯಾಷನ್‌

    • ಚಳಿಗಾಲದಲ್ಲಿ ಮೈಕೊರೆಯುವ ಚಳಿಯ ಕಾರಣದಿಂದ ಸ್ಟೈಲಿಶ್‌ ಆದ ಬಟ್ಟೆ ಧರಿಸುವುದು ಕಷ್ಟವಾಗುತ್ತದೆ. ಒಂದು ವೇಳೆ ಮಾರ್ಡನ್‌ ಆಗಿರುವ ಡ್ರೆಸ್‌ ಹಾಕಿದ್ರು ಜಾಕೆಟ್‌ ಅದನ್ನು ಮುಚ್ಚಿ ಬಿಡುತ್ತೆ. ಹಾಗಾದ್ರೆ ಚಳಿಗಾಲದಲ್ಲಿ ಸ್ಟೈಲಿಶ್‌ ಆಗಿ ಕಾಣೋದು ಹೇಗೆ? ಇಲ್ಲಿದೆ ಐಡಿಯಾ.
ಚಳಿಗಾಲದ ಫ್ಯಾಷನ್‌
ಚಳಿಗಾಲದ ಫ್ಯಾಷನ್‌

ಚಳಿಗಾಲದಲ್ಲಿ ದೇಹ ಬೆಚ್ಚಗಿಡೋದೆ ದೊಡ್ಡ ಚಿಂತೆ. ಮೈ ಕೊರೆಯುವ ಚಳಿಯಲ್ಲಿ ಮೈ ತುಂಬಾ ಹೊದ್ದಿರುವ ಬಟ್ಟೆ ಧರಿಸಬೇಕು ಎನ್ನಿಸುವುದು ಸಹಜ. ಆದರೆ ಈ ರೀತಿ ಬಟ್ಟೆ ಧರಿಸುವುದರಿಂದ ಅಂದಗೆಡುವುದು ಪಕ್ಕಾ. ಹಾಗಂತ ಬೆಚ್ಚಗಿಲ್ಲದೇ ಇರಲು ಸಾಧ್ಯವಿಲ್ಲ.

ಚಳಿಗಾಲದಲ್ಲಿ ಸ್ಟೈಲ್‌ ಆಗಿಯೂ ಕಾಣುವಂತಿದ್ದು, ದೇಹವನ್ನು ಬೆಚ್ಚಗಿಡಬೇಕು ಅಂದ್ರೆ ಈ ಕೆಲವು ಐಡಿಯಾಗಳನ್ನು ಫಾಲೋ ಮಾಡಬಹುದು. ಇದು ಚಳಿಗಾಲಕ್ಕೆ ಹೊಂದುವುದು ಮಾತ್ರವಲ್ಲ, ಆರಾಮದಾಯಕ ಫೀಲ್‌ ಕೊಡುತ್ತದೆ. ಲೇಯರಿಂಗ್‌ ಉಡುಪುಗಳು ನಿಮ್ಮ ನೋಟವನ್ನು ಬದಲಿಸುವುದರಲ್ಲಿ ಎರಡು ಮಾತಿಲ್ಲ. ಹಾಗಿದ್ರೆ ಚಳಿಗಾಲಕ್ಕೆ ಹೊಂದುವಂತೆ ಹೇಗೆ ಡ್ರೆಸ್‌ ಮಾಡಿಕೊಳ್ಳಬಹುದು ನೋಡಿ.

ಟಾರ್ಟಲ್‌ನೆಕ್‌ ಉಡುಪು

ಟಾರ್ಟಲ್‌ ನೆಕ್‌ ಇರುವ ಉಡುಪುಗಳು ಕುತ್ತಿಗೆಯವರೆಗೂ ಮುಚ್ಚಿರುತ್ತವೆ. ಇದರ ಮೇಲೆ ಕಾಂಟ್ರ್ಯಾಸ್ಟ್‌ ಬಣ್ಣದ ಜಾಕೆಟ್‌ ಧರಿಸುವುದರಿಂದ ನೀವು ಸಖತ್‌ ಟ್ರೆಂಡಿ ಆಗಿ ಕಾಣಿಸುತ್ತೀರಿ. ಇದು ನಿಮ್ಮ ದೇಹವನ್ನು ಕೂಡ ಬೆಚ್ಚಗಿರಿಸುತ್ತದೆ.

ಉದ್ದನೆಯ ಜಾಕೆಟ್‌ಗಳು

ಚಳಿಗಾಲದಲ್ಲಿ ಉದ್ದನೆಯ ಜಾಕೆಟ್‌ಗಳು ಚಳಿಯನ್ನು ತಡೆಯುವಂತೆ ಮಾಡುವುದು ಮಾತ್ರವಲ್ಲ, ಇದು ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ. ಟ್ಯೂನಿಕ್‌ ಟಾಪ್‌, ಕ್ರಾಪ್‌ ಟಾಪ್‌ ಜೊತೆಗೆ ಉದ್ದನೆಯ ಟಾಪ್‌ ಧರಿಸಬಹುದು. ಇದು ನಿಮಗೆ ಮಾರ್ಡನ್‌ ಲುಕ್‌ ಕೊಡುವುದರಲ್ಲಿ ಎರಡು ಮಾತಿಲ್ಲ.

ಸ್ಲಿಂಗ್‌ ಬ್ಯಾಕ್‌ ಹೀಲ್ಸ್‌ನೊಂದಿಗೆ ಹೊಸೈರಿ

ಚಳಿಗಾಲದಲ್ಲಿ ಹೊಸೈರಿಗಳು ನಿಮ್ಮ ಅಂದಕ್ಕೆ ಇನ್ನೊಂದು ಅರ್ಥ ನೀಡುವುದರಲ್ಲಿ ಎರಡು ಮಾತಿಲ್ಲ. ಶಾರ್ಟ್‌ ಸ್ಕರ್ಟ್‌, ಟ್ಯೂನಿಕ್‌ ಟಾಪ್‌ಗಳ ಜೊತೆ ಹೊಸೈರಿ ಧರಿಸಬಹುದು. ಇದು ನಿಮ್ಮ ಅಂದವನ್ನು ಹೆಚ್ಚಿಸಿ, ಚಳಿಯಿಂದ ಕಾಪಾಡಿಕೊಳ್ಳಲು ನೆರವಾಗುತ್ತದೆ.

ಉಡುಪಿನ ಮೇಲೆ ಟರ್ಟಲ್‌ನೆಕ್‌ ಜಾಕೆಟ್‌

ನೀವು ಟೀ ಶರ್ಟ್‌, ಬ್ಲೌಸ್‌, ಟಾಪ್‌ ಯಾವುದೇ ಧರಿಸಿರಲಿ ಅದರ ಮೇಲೆ ಟರ್ಟಲ್‌ ನೆಕ್‌ ಇರುವ ಜಾಕೆಟ್‌ ಧರಿಸುವುದರಿಂದ ಅಂದ ಹೆಚ್ಚಿಸಿಕೊಳ್ಳಬಹುದಾಗಿದೆ.

ಡೆನಿಮ್‌ ಜೀನ್ಸ್‌

ಚಳಿಗಾಲದಲ್ಲಿ ಅಂದ ಹೆಚ್ಚಿಸಿಕೊಳ್ಳಲು ಡೆನಿಮ್‌ ಜೀನ್ಸ್‌ ಅನ್ನು ಕೂಡ ಧರಿಸಬಹುದು. ಡೆನಿಮ್‌ ಜೀನ್ಸ್‌ ಚಳಿಯನ್ನು ದೂರ ಮಾಡುವುದು ಮಾತ್ರವಲ್ಲ, ಇದ ಮೇಲೆ ಟಾಪ್‌, ಜಾಕೆಟ್‌ ಧರಿಸಿದಾಗ ಅಂದ ಹೆಚ್ಚುವುದು ಸುಳ್ಳಲ್ಲ.

ಅಂಡರ್‌ ಸ್ವೆಟರ್‌ ಡ್ರೆಸ್‌

ಅಂಡರ್‌ ಸ್ವೆಟರ್‌ ಡ್ರೆಸ್‌ಗಳು ಸರ್ವಕಾಲಕ್ಕೂ ಟ್ರೆಂಡಿ ಆಗಿಯೇ ಇರುತ್ತವೆ. ಇವು ನೀಳಕಾಯದವರಿಗೆ ಹೆಚ್ಚು ಒಪ್ಪುತ್ತದೆ. ಇದನ್ನು ಡೆನಿಮ್‌, ಜಗ್ಗಿನ್‌, ಸ್ಕರ್ಟ್‌ ಮೇಲೆ ಧರಿಸಬಹುದು. ಇವು ಅಂದ ಹೆಚ್ಚಿಸುವ ಜೊತೆಗೆ ಮಾರ್ಡನ್‌ ಲುಕ್‌ ಕೂಡ ಸಿಗುವಂತೆ ಮಾಡುತ್ತದೆ.

ಓವರ್‌ ನೀ ಬೂಟ್ಸ್‌

ಚಳಿಗಾಲದಲ್ಲಿ ಕಾಲುಗಳನ್ನು ಬೆಚ್ಚಗಿರಿಸುವುದು ಮುಖ್ಯವಾಗುತ್ತದೆ. ಅದಕ್ಕಾಗಿ ಓವರ್‌ ನೀ ಬೂಟ್ಸ್‌ಗಳನ್ನು ಧರಿಸಬಹುದು. ಇದು ಮಾರ್ಡನ್‌ ಲುಕ್‌ ಕೊಡುತ್ತದೆ. ಜೀನ್ಸ್‌, ಸ್ಕರ್ಟ್‌, ಟ್ಯೂನಿಕ್‌ ಟಾಪ್‌ ಜೊತೆ ಇದು ಹೆಚ್ಚು ಹೊಂದುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ