ಥಟ್ಟಂತ ಮಾಡಿ ಮಟನ್ ಬಿರಿಯಾನಿ: ತ್ವರಿತವಾಗಿ ಸಿದ್ಧವಾಗುವ ಈ ರೆಸಿಪಿ ಮಾಡುವುದು ತುಂಬಾನೇ ಸಿಂಪಲ್
Nov 19, 2024 10:00 AM IST
ಥಟ್ಟಂತ ಮಾಡಿ ಮಟನ್ ಬಿರಿಯಾನಿ: ತ್ವರಿತವಾಗಿ ಸಿದ್ಧವಾಗುವ ಈ ರೆಸಿಪಿ ಮಾಡುವುದು ತುಂಬಾನೇ ಸಿಂಪಲ್
ಮಟನ್ ಬಿರಿಯಾನಿ ಬೇಯಿಸುವುದು ಕಷ್ಟ ಎಂದು ಅನಿಸುತ್ತದೆಯೆ. ಈ ರೆಸಿಪಿ ಮಾಡುವುದು ಅಂತಹ ಕಷ್ಟವೇನಲ್ಲ. ಮಟನ್ ಬಿರಿಯಾನಿಯನ್ನು ಕುಕ್ಕರ್‌ನಲ್ಲಿ ಬಹಳ ಸುಲಭವಾಗಿ ಬೇಯಿಸಬಹುದು. ಬ್ಯಾಚುಲರ್ಸ್‌ಗೆ ಹಾಗೂ ಆರಂಭಿಕರು ಈ ಸರಳ ಪಾಕವಿಧಾನವನ್ನು ಅನುಸರಿಸಬಹುದು. ಇಲ್ಲಿದೆ ರೆಸಿಪಿ ಮಾಡುವ ವಿಧಾನ.
ಮಟನ್ ಬಿರಿಯಾನಿ ಬೇಯಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂದು ಬಹುತೇಕರು ಬಿರಿಯಾನಿ ಮಾಡಲು ಹೋಗುವುದಿಲ್ಲ. ಮಟನ್ ಖಾದ್ಯಗಳನ್ನಷ್ಟೇ ತಯಾರಿಸುತ್ತಾರೆ. ಮಟನ್ ಬಿರಿಯಾನಿಯನ್ನು ಕುಕ್ಕರ್‌ನಲ್ಲಿ ಬಹಳ ಸುಲಭವಾಗಿ ಬೇಯಿಸಬಹುದು. ಇದು ಕೇವಲ 1 ಗಂಟೆಯಲ್ಲಿ ಸಿದ್ಧವಾಗುತ್ತದೆ. ಮಟನ್ ಬಿರಿಯಾನಿ ಚಿಕನ್ ಬಿರಿಯಾನಿಗಿಂತ ಹೆಚ್ಚು ಕಷ್ಟಕರವೆಂದೇ ಬಹುತೇಕರು ಭಾವಿಸಿದ್ದಾರೆ. ಆದರೆ, ಇದನ್ನು ಕುಕ್ಕರ್‌ನಲ್ಲಿ ಬಹಳ ಸುಲಭವಾಗಿ ಮಾಡಬಹುದು. ಇಲ್ಲಿ ನಾವು ಮಟನ್ ಬಿರಿಯಾನಿ ರೆಸಿಪಿ ನೀಡಿದ್ದೇವೆ. ಕುಕ್ಕರ್‌ನಲ್ಲಿ ಸರಳವಾಗಿ ಬೇಯಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದು.
ಮಟನ್ ಬಿರಿಯಾನಿ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಮಟನ್ ಮಾಂಸ- ಅರ್ಧ ಕೆ.ಜಿ, ಬಾಸ್ಮತಿ ಅಕ್ಕಿ- ಅರ್ಧ ಕೆಜಿ, ನೀರು- ಬೇಕಾಗುವಷ್ಟು, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಎರಡು ಟೀ ಚಮಚ, ಜೀರಿಗೆ ಪುಡಿ- ಅರ್ಧ ಟೀ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಅರಿಶಿನ- ಅರ್ಧ ಟೀ ಚಮಚ, ಮೆಣಸಿನಪುಡಿ- ಒಂದು ಟೀ ಚಮಚ, ಗರಂ ಮಸಾಲೆ- 1 ಟೀ ಚಮಚ, ಹಸಿ ಮೆಣಸಿನಕಾಯಿ- 6, ಈರುಳ್ಳಿ- ಎರಡು, ಬಿರಿಯಾನಿ ಎಲೆಗಳು- ಎರಡು, ಏಲಕ್ಕಿ- ನಾಲ್ಕು, ಶಾಜೀರಾ- ಒಂದು ಟೀ ಚಮಚ, ಲವಂಗ- ಆರು, ದಾಲ್ಚಿನ್ನಿ- 1 ಸಣ್ಣ ತುಂಡು, ತುಪ್ಪ- ಮೂರು ಟೀ ಚಮಚ, ನಿಂಬೆ ರಸ- ಒಂದು ಟೀ ಚಮಚ. ಎಣ್ಣೆ- ಎರಡು ಟೀ ಚಮಚ.
ಮಾಡುವ ವಿಧಾನ: ಮಟನ್ ತುಂಡುಗಳನ್ನು ತೊಳೆದು ಬಟ್ಟಲಿನಲ್ಲಿ ಹಾಕಿ. ಇದಕ್ಕೆ ಅರಿಶಿನ, ಉಪ್ಪು, ಮೆಣಸಿನಕಾಯಿ ಮತ್ತು ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕೆ ಇರಿಸಿ. ಈಗ ಕುಕ್ಕರ್ ಅನ್ನು ಒಲೆಯ ಮೇಲೆ ಇರಿಸಿ. ಕುಕ್ಕರ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ದಾಲ್ಚಿನ್ನಿ, ಲವಂಗ, ಏಲಕ್ಕಿ, ಶಾಜೀರಾ ಮತ್ತು ಬಿರಿಯಾನಿ ಎಲೆಗಳನ್ನು ಫ್ರೈ ಮಾಡಿ. ಇದಕ್ಕೆ ತೆಳುವಾಗಿ ಕತ್ತರಿಸಿದ ಹಸಿರು ಮೆಣಸಿನಕಾಯಿ ಮತ್ತು ಈರುಳ್ಳಿ ತುಂಡುಗಳನ್ನು ಸೇರಿಸಿ. ಬಣ್ಣ ಬದಲಾಗುವವರೆಗೆ ಹುರಿಯಿರಿ.
ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಮೊದಲು ಮ್ಯಾರಿನೇಟ್ ಮಾಡಿದ ಮಟನ್ ತುಂಡುಗಳನ್ನು ಸೇರಿಸಿ, ಐದು ನಿಮಿಷ ಬೇಯಿಸಿ. ಇದಕ್ಕೆ ಮೆಣಸಿನಕಾಯಿ ಉಪ್ಪು, ಅರಿಶಿನ ಮತ್ತು ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಒಂದು ಕಪ್ ನೀರು ಹಾಕಿ ಒಮ್ಮೆ ಮಿಕ್ಸ್ ಮಾಡಿ. ಹತ್ತು ನಿಮಿಷ ಮುಚ್ಚಿ ಬೇಯಿಸಿ. ನಂತರ ಬಾಸ್ಮತಿ ಅಕ್ಕಿಯನ್ನು ಸ್ವಚ್ಛವಾಗಿ ತೊಳೆದು ಅದರಲ್ಲಿ ಹಾಕಬೇಕು. ಈ ವೇಳೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಅರ್ಧ ಕಪ್ ಅಕ್ಕಿಗೆ 1 ಕಪ್‍ನಷ್ಟು ಸೇರಿಸಿ, ಮಿಶ್ರಣ ಮಾಡಿ. ಮೇಲೆ ಪುದೀನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಕತ್ತರಿಸಿ ಹಾಕಿ. ಕುಕ್ಕರ್ ಅನ್ನು ಮುಚ್ಚಿ, 1 ಸೀಟಿ ಹಾಕಿಸಿ. ಕಡಿಮೆ ಉರಿಯಲ್ಲಿ ಬೇಯಲು ಇಡಬೇಕು. ಒಂದು ಸೀಟಿಯ ನಂತರ, ಸ್ಟೌವ್ ಆಫ್ ಮಾಡಬೇಕು. ಸ್ವಲ್ಪ ಸಮಯದ ಬಳಿಕ ಬಿರಿಯಾನಿ ಮಿಶ್ರಣ ಮಾಡಿದರೆ ರುಚಿಕರವಾದ ಮಟನ್ ಬಿರಿಯಾನಿ ಸವಿಯಲು ಸಿದ್ಧ.
ಮಟನ್ ಬಿರಿಯಾನಿ ಬೇಯಿಸಲು ಕೇವಲ 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಮೊದಲು ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹುರಿಯಲು ಹತ್ತರಿಂದ 15 ನಿಮಿಷಗಳು ಬೇಕಾಗುತ್ತದೆ. ಸೀಟಿ ಆವಿಯಾಗಲು ಸಹ ಹತ್ತು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಒಂದು ಗಂಟೆಯಲ್ಲಿ ಮಟನ್ ಬಿರಿಯಾನಿ ಸವಿಯಲು ಸಿದ್ಧ. ಇಲ್ಲಿ ತಿಳಿಸಿದ ವಿಧಾನವನ್ನು ಒಮ್ಮೆ ಪ್ರಯತ್ನಿಸಿದರೆ, ನಿಮಗೆ ಮಾಡಲು ತುಂಬಾ ಸುಲಭವಾಗುತ್ತದೆ.