Onion Rava Dosa: ಸಂಜೆ ಕಾಫಿಗೆ ಬೆಸ್ಟ್ ಕಾಂಬಿನೇಷನ್ ಗರಿಗರಿ ಈರುಳ್ಳಿ ರವಾ ದೋಸೆ; ಇದನ್ನು ಮಾಡೋದು ಹೇಗೆ ನೋಡಿ
Sep 03, 2023 07:31 PM IST
ಈರುಳ್ಳಿ ರವಾ ದೋಸೆ
- ದೋಸೆ ದಕ್ಷಿಣ ಭಾರತದ ಪ್ರಸಿದ್ಧ ಖಾದ್ಯ. ದಕ್ಷಿಣದಲ್ಲಿ ಬೆಳಗಿನ ಉಪಾಹಾರಕ್ಕೆ ದೋಸೆ ಮಾಡುವುದು ಸಾಮಾನ್ಯ. ಮನೆಗಳಲ್ಲಿ ಹೋಟೆಲ್‌ಗಳಲ್ಲಿ ಬಿಸಿ ಬಿಸಿ ದೋಸೆಯ ಘಮ ಹರಡುತ್ತಿರುತ್ತದೆ. ಉದ್ದಿನದೋಸೆ, ನೀರ್ ದೋಸೆ, ರಾಗಿ ದೋಸೆ, ಗೋಧಿ ದೋಸೆ, ರವೆ ದೋಸೆ ಹೀಗೆ ದೋಸೆಯಲ್ಲಿಯೂ ಹಲವು ವಿಧಗಳಿವೆ. ಇಂದು ಈರುಳ್ಳಿ ರವಾ ದೋಸೆ ಮಾಡೋದು ಹೇಗೆ ಎಂದು ನೋಡೋಣ.
ಹೋಟೆಲ್‌ಗೆ ಹೋದಾಗ ಈರುಳ್ಳಿ ರವಾ ದೋಸೆ ತಿಂದು ವಾವ್, ಸಖತ್ ಆಗಿದೆ ಅಂದುಕೊಂಡಿರಬಹುದು. ಮತ್ತೆ ಮತ್ತೆ ಇಂತಹ ರುಚಿಯ ದೋಸೆಯನ್ನು ತಿನ್ನಬೇಕು ಎಂದು ನಾಲಿಗೆಯೂ ಆಸೆ ಪಡಬಹುದು. ಪ್ರತಿದಿನ ಉದ್ದಿನದೋಸೆ, ರಾಗಿ ದೋಸೆ, ನೀರ್ ದೋಸೆ ತಿಂದು ನಾಲಿಗೆ ಜಿಡ್ಡು ಹಿಡಿರಬಹುದು. ಹಾಗಿದ್ರೆ ನೀವು ಮನೆಯಲ್ಲೇ ಈರುಳ್ಳಿ ರವಾ ದೋಸೆ ಮಾಡಿ ತಿನ್ನಬಹುದು. ಈ ದೋಸೆ ಮಾಡೋದು ಸುಲಭ ಹಾಗೂ ಇದಕ್ಕೆ ಟೈಮ್ ಕೂಡ ಹೆಚ್ಚು ಬೇಡ. ಮನೆಹೆ ಅತಿಥಿಗಳು ಬಂದಾಗ, ಧಿಡೀರ್ ಆಗಿ ದೋಸೆ ತಿನ್ನಬೇಕು ಅನ್ನಿಸಿದಾಗ ಈರುಳ್ಳಿ ರವಾ ದೋಸೆ ಮಾಡಿ ಸವಿಯಬಹುದು. ಹಾಗಾದ್ರೆ ಈ ದೋಸೆ ಮಾಡೋದು ಹೇಗೆ ನೋಡಿ.
ದೋಸೆ ಮಾಡೋಕೆ ಅಗತ್ಯವಿರುವ ಸಾಮಗ್ರಿಗಳು
ರವೆ - 1 ಕಪ್, ಚಿಕ್ಕದಾಗಿ ಹೆಚ್ಚಿದ ಈರುಳ್ಳಿ - 3, ಅಕ್ಕಿಹಿಟ್ಟು - 1 ಕಪ್, ಕತ್ತರಿಸಿದ ಶುಂಠಿ - 1/2 ತುಂಡು, ಹುರಿದ ಗೋಡಂಬಿ - 3 ಟೀ ಚಮಚ, ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ - 3, ಜೀರಿಗೆ - 1/4 ಟೀ ಚಮಚ, ಇಂಗು - ಚಿಟಿಕೆ, ಎಣ್ಣೆ - ಸ್ವಲ್ಪ, ಉಪ್ಪು - ರುಚಿಗೆ
ತಯಾರಿಸುವ ವಿಧಾನ: ಈರುಳ್ಳಿ ದೋಸೆ ಮಾಡಲು ಮೊದಲು ಅಗಲವಾದ ಪಾತ್ರೆಯನ್ನು ತೆಗೆದುಕೊಂಡು ರವೆ ಮತ್ತು ಅಕ್ಕಿಹಿಟ್ಟು ಸೇರಿಸಿ ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಮಿಶ್ರಣಕ್ಕೆ ಸ್ವಲ್ಪ ನೀರು ಸೇರಿಸಿ ಮಿಶ್ರಣ ಮಾಡಿ. ನಂತರ ಜೀರಿಗೆ, ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ. ಈಗ ತಯಾರಾದ ಹಿಟ್ಟನ್ನು ಮುಚ್ಚಿ ಮತ್ತು 3 ಗಂಟೆಗಳ ಕಾಲ ಬೆಚ್ಚಗಿನ ಸ್ಥಳದಲ್ಲಿ ಇರಿಸಿ. ಈ ಮಧ್ಯೆ, ಈರುಳ್ಳಿ, ಶುಂಠಿ, ಹಸಿರು ಮೆಣಸಿನಕಾಯಿ ಮತ್ತು ಗೋಡಂಬಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ.
ಹಿಟ್ಟನ್ನು ಬೆಚ್ಚಗಿನ ಸ್ಥಳದಲ್ಲಿ ಇರಿಸಿದರೆ, ಅದು ಸ್ವಲ್ಪ ಉಬ್ಬುತ್ತದೆ. ಈಗ ಹಿಟ್ಟಿಗೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಗೂ ಉಳಿದ ಎಲ್ಲವನ್ನೂ ಸೇರಿಸಿ, ಮಿಶ್ರಣ ಮಾಡಿ. ನಂತರ ಅಗತ್ಯವಿರುವಷ್ಟು ನೀರು ಸೇರಿಸಿ ಮಿಶ್ರಣ ಮಾಡಿ. ಹಿಟ್ಟು ತೆಳುವಾಗುವವರೆಗೆ ನೀರು ಸೇರಿಸಿ. ಇದರ ನಂತರ, ಮಧ್ಯಮ ಉರಿಯಲ್ಲಿ ನಾನ್ ಸ್ಟಿಕ್ ಪ್ಯಾನ್/ಗ್ರಿಡಲ್ ಅನ್ನು ಬಿಸಿ ಮಾಡಿ. ಪ್ಯಾನ್ ಬಿಸಿಯಾದ ನಂತರ, ಸ್ವಲ್ಪ ಎಣ್ಣೆಯನ್ನು ಸೇರಿಸಿ ಮತ್ತು ಅದನ್ನು ಎಲ್ಲಾ ಕಡೆ ಹರಡಿ. ದೋಸೆ ಚೆನ್ನಾಗಿ ಕಾಯಬೇಕು, ಎರಡೂ ಕಡೆ ಚೆನ್ನಾಗಿ ಬೇಯಿಸಬೇಕು.
ಇದನ್ನು ಓದಿ
Chutney Recipe: 5 ನಿಮಿಷದಲ್ಲಿ ರೆಡಿ ಆಗುವ ಸೂಪರ್ ಟೇಸ್ಟಿ ಚಟ್ನಿ ರೆಸಿಪಿ ಇಲ್ಲಿದೆ; ಅನ್ನ, ದೋಸೆ, ಚಪಾತಿಗೆ ಇದು ಬೆಸ್ಟ್ ಕಾಂಬಿನೇಷನ್
ಬೆಳಗೆದ್ದು ತಿಂಡಿಗೆ ಏನು ಮಾಡೋದು, ಮಧ್ಯಾಹ್ನ ಊಟಕ್ಕೆ ನೆಂಜಿಕೊಳ್ಳಲು ಏನೂ ಮಾಡಿಲ್ಲ, ಚಪಾತಿ ಜೊತೆ ಸಾಗು, ಪಲ್ಯ ತಿಂದು ಬೇಸರ ಆಗಿದೆ, ಏನು ಮಾಡಬೇಕು ತಿಳಿತಿಲ್ಲ. ಇಡ್ಲಿ ಮಾಡಿದ್ದೆ, ಸಾಂಬಾರ್ ಮಾಡೋಕೆ ಟೈಮ್ ಇಲ್ಲ ಈ ಎಲ್ಲಾ ಚಿಂತೆಯನ್ನು ದೂರ ಮಾಡುವ, 5 ನಿಮಿಷದಲ್ಲಿ ತಯಾರಿಸಬಹುದಾದ, ಅನ್ನ, ಇಡ್ಲಿ, ದೋಸೆ ಜೊತೆ ಬೆಸ್ಟ್ ಕಾಂಬಿನೇಷನ್ ಚಟ್ನಿ ರೆಸಿಪಿ ಇಲ್ಲಿದೆ.