logo
ಕನ್ನಡ ಸುದ್ದಿ  /  ಜೀವನಶೈಲಿ  /  ತಲೆಹೊಟ್ಟು ಸಮಸ್ಯೆ ಹೆಚ್ಚಾಗುವುದು ಯಾಕೆ; ತ್ವರಿತವಾಗಿ ಡ್ಯಾಂಡ್ರಫ್‌ ನಿವಾರಿಸಲು ಸರಳ ಮನೆಮದ್ದುಗಳಿವು

ತಲೆಹೊಟ್ಟು ಸಮಸ್ಯೆ ಹೆಚ್ಚಾಗುವುದು ಯಾಕೆ; ತ್ವರಿತವಾಗಿ ಡ್ಯಾಂಡ್ರಫ್‌ ನಿವಾರಿಸಲು ಸರಳ ಮನೆಮದ್ದುಗಳಿವು

Jayaraj HT Kannada

Nov 28, 2024 12:02 PM IST

google News

ತಲೆಹೊಟ್ಟು ಸಮಸ್ಯೆ ಹೆಚ್ಚಾಗೋದು ಯಾಕೆ; ತ್ವರಿತವಾಗಿ ಡ್ಯಾಂಡ್ರಫ್‌ ನಿವಾರಿಸಲು ಸರಳ ಮನೆಮದ್ದು

    • ತಲೆಹೊಟ್ಟು ಸಮಸ್ಯೆ ಶುರುವಾದರೆ, ಕೆಲವು ದಿನಗಳವರೆಗೂ ನೆಮ್ಮದಿ ಇರುವುದಿಲ್ಲ. ನೆತ್ತಿಯ ಚಿಕಿತ್ಸೆ ಹಾಗೂ ಆರೈಕೆಗಾಗಿ ಬಗೆಬಗೆಯ ಶಾಂಪೂಗಳ ಮೊರೆ ಹೋಗುವವರು ಹೆಚ್ಚು. ಮನೆಯಲ್ಲೇ ಡ್ಯಾಂಡ್ರಫ್‌ ಕಡಿಮೆ ಮಾಡಲು ಹಲವು ವಿಧಗಳಿವೆ. ತಲೆಹೊಟ್ಟು ನಿವಾರಣೆಗೆ ಸರಳ ಪರಿಹಾರ ವಿಧಗಳು ಇಲ್ಲಿವೆ.
ತಲೆಹೊಟ್ಟು ಸಮಸ್ಯೆ ಹೆಚ್ಚಾಗೋದು ಯಾಕೆ; ತ್ವರಿತವಾಗಿ ಡ್ಯಾಂಡ್ರಫ್‌ ನಿವಾರಿಸಲು ಸರಳ ಮನೆಮದ್ದು
ತಲೆಹೊಟ್ಟು ಸಮಸ್ಯೆ ಹೆಚ್ಚಾಗೋದು ಯಾಕೆ; ತ್ವರಿತವಾಗಿ ಡ್ಯಾಂಡ್ರಫ್‌ ನಿವಾರಿಸಲು ಸರಳ ಮನೆಮದ್ದು (Twitter/Simpfr2)

ಕೂದಲಿನ ಸಮಸ್ಯೆಗಳು ಸಾಮಾನ್ಯ. ಪ್ರತಿನಿತ್ಯ ಕೂದಲಿಗೆ ಸಂಬಂಧಿಸಿದಂತೆ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತೇವೆ. ಇದರಲ್ಲಿ ಡ್ಯಾಂಡ್ರಫ್ ಪ್ರಮುಖ ಸಮಸ್ಯೆ. ತಲೆಹೊಟ್ಟು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರಂತರವಾಗಿ ವಿವಿಧ ಮಾರ್ಗಗಳನ್ನು ಹುಡುಕುತ್ತಿರುತ್ತೇವೆ. ಸಾಮಾನ್ಯವಾಗಿ ತಲೆಹೊಟ್ಟು ಜಿಡ್ಡಿನ ಕೂದಲಿನಿಂದ ಉಂಟಾಗುತ್ತದೆ. ತಲೆಗೆ ಅಹಿತಕರ ಸ್ಥಿತಿ ಇದಾಗಿದ್ದು, ಇದಕ್ಕೆ ಪರಿಹಾರ ಕ್ರಮಗಳೂ ಇವೆ. ಶ್ಯಾಂಪೂ ಅಥವಾ ಇತರ ರಾಸಾಯನಿಕ ಉತ್ಪನ್ನಗಳನ್ನು ಬಳಸುವ ಮೊದಲು, ಕೂದಲಿಗೆ ಕೆಲವೊಂದು ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ. ಇದರಿಂದ ನೀವು ಡ್ಯಾಂಡ್ರಫ್‌ ಮುಕ್ತರಾಗುವಿರಿ.

ತಲೆಹೊಟ್ಟು ಸಮಸ್ಯೆಯು ಸಾಮಾನ್ಯವಾಗಿ ಸೆಬೊರ್ಹೆಕ್ ಡರ್ಮಟೈಟಿಸ್ (SD)ಗೆ ಸಂಬಂಧಿಸಿದೆ. ಇದು ನೆತ್ತಿ ಮೇಲೆ ತುರಿಕೆ ಮತ್ತು ಒಣ ಚರ್ಮ ಸೃಷ್ಟಿಸುತ್ತದೆ. ಇದು ಒಬ್ಬಿಬ್ಬರ ಸಮಸ್ಯೆ ಅಲ್ಲ. ಪ್ರಪಂಚದ ಅರ್ಧದಷ್ಟು ವಯಸ್ಕ ಜನಸಂಖ್ಯೆಯ ಮೇಲೆ ಪರಿಣಾಮ ಬೀರುವಷ್ಟು ವ್ಯಾಪಕವಾಗಿದೆ. ತಲೆಹೊಟ್ಟು ವಿವಿಧ ಸಂದರ್ಭಗಳಿಂದ ಉಂಟಾಗಬಹುದು. ಇದಕ್ಕೆ ಕಾರಣಗಳು ಹೀಗಿವೆ.

  • ಚರ್ಮದ ಮೇಲ್ಮೈಯಲ್ಲಿ ಶಿಲೀಂಧ್ರಗಳು ಸೇರುವುದು
  • ಹೆಚ್ಚು ಶಾಂಪೂ ಬಳಕೆ ಚರ್ಮದ ಕೋಶಗಳನ್ನು ಸಂಗ್ರಹಿಸಲು ಕಾರಣವಾಗಬಹುದು.
  • ಆಗಾಗ ಶಾಂಪೂ ಬಳಸುವುದು ನೆತ್ತಿ ಒಣಗಲು ಕಾರಣವಾಗಬಹುದು.
  • ಕೂದಲನ್ನು ಹೆಚ್ಚು ಅಥವಾ ಬಲವಾಗಿ ಉಜ್ಜುವುದು, ನೆತ್ತಿಯ ಮೇಲಿನ ಸೂಕ್ಷ್ಮ ಚರ್ಮದ ಮೇಲೆ ಘರ್ಷಣೆ ಉಂಟುಮಾಡಬಹುದು.
  • ಸೂರ್ಯನಿಂದ ಹಾನಿ

ಇದನ್ನೂ ಓದಿ | ಸ್ನಾನ ಮಾಡುವಾಗ, ಬಾಚುವಾಗ ಅತಿ ಹೆಚ್ಚು ಕೂದಲು ಉದುರುತ್ತಾ: ಚಳಿಗಾಲದಲ್ಲಿ ಹೀಗಿರಲಿ ತಲೆಗೂದಲಿನ ಆರೈಕೆ

  • ಟೋಪಿ, ಹೆಲ್ಮೆಟ್ ಬಳಕೆ ನೆತ್ತಿಯ ಮೇಲೆ ಅತಿಯಾದ ಒತ್ತಡ ಬೀರುತ್ತವೆ.
  • ಪೋಷಕಾಂಶಗಳ ಕೊರತೆಯಿರುವ ಆಹಾರ ಸೇವನೆ
  • ಧೂಳಿಗೆ ಒಡ್ಡಿಕೊಳ್ಳುವುದು.

ತಲೆಹೊಟ್ಟು ಸಮಸ್ಯೆ ನಿವಾರಿಸುವ ಮನೆಮದ್ದುಗಳು

ನಿಂಬೆ ರಸ

ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿರುವ ನಿಂಬೆ ರಸವು, ತಲೆಹೊಟ್ಟಿಗೂ ಮೊದಲ ಪರಿಹಾರ. ತ್ವರಿತವಾಗಿ ತಲೆಹೊಟ್ಟು ತೊಡೆದುಹಾಕಲು ಸಹಾಯ ಮಾಡುತ್ತದೆ. ಇಂಡಿಯನ್ ಜರ್ನಲ್ ಆಫ್ ಡರ್ಮಟಾಲಜಿಯಲ್ಲಿ ಪ್ರಕಟವಾದ ಅಧ್ಯಯನವು, ತಲೆಹೊಟ್ಟು ನಿವಾರಿಸಲು ನಿಂಬೆ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. 1/4 ಕಪ್‌ ನೀರಿಗೆ 1 ಚಮಚ ನಿಂಬೆ ರಸ ಬೆರೆಸಿ, ತಲೆಸ್ನಾನಕ್ಕಿಂತ ಮುಂಚೆ ಹಚ್ಚಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ. ಇದರಲ್ಲಿರುವ ಸಿಟ್ರಿಕ್ ಆಮ್ಲ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಡ್ಯಾಂಡ್ರಫ್‌ ನಿವಾರಣೆಗೆ ನೆರವಾಗುತ್ತದೆ.

ಚಹಾ ಮರದ ಎಣ್ಣೆ

ತಲೆಹೊಟ್ಟು ನಿವಾರಣೆಗೆ ಮತ್ತೊಂದು ಮನೆಮದ್ದು ಚಹಾ ಮರದ ಎಣ್ಣೆ. ಜರ್ನಲ್ ಆಫ್ ದಿ ಅಮೆರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿಯಲ್ಲಿ ಪ್ರಕಟವಾದ ಈ ಅಧ್ಯಯನವು, ಟೀ ಟ್ರೀ ಆಯಿಲ್‌ನಲ್ಲಿ ಆಂಟಿಫಂಗಲ್ ಗುಣಲಕ್ಷಣ ಇದೆ ಎಂದು ಹೇಳಿದೆ. ಅದು ತಲೆಹೊಟ್ಟು ತೊಡೆದುಹಾಕಲು ಸಹಾಯ ಮಾಡುತ್ತದೆ ಎಂದು ಸೂಚಿಸಿದೆ. ಎಣ್ಣೆ ಜಿಡ್ಡಿನ ಅಂಶ ಹೆಚ್ಚಿಸುವುದಿಲ್ಲ. ಬದಲಾಗಿ, ಇದು ನೆತ್ತಿಯಿಂದ ಕೊಳಕು ಮತ್ತು ತಲೆಹೊಟ್ಟನ್ನು ಹೀರಿಕೊಳ್ಳುತ್ತದೆ.

ಕಾಫಿ

ಡ್ಯಾಂಡ್ರಫ್ ತ್ವರಿತ ನಿವಾರಣೆಗೆ ಕಾಫಿ ಕೂಡಾ ಉತ್ತಮ ಮದ್ದು. ಚರ್ಮ ಮತ್ತು ಕೂದಲಿಗೆ ಕಾಫಿ ಉತ್ತಮವಾಗಿದೆ. ಸಾಮಾನ್ಯವಾಗಿ ಕಾಫಿಯನ್ನು ಎಫ್ಫೋಲಿಯೇಟ್ ಮಾಡಲು ಬಳಸಲಾಗುತ್ತದೆ. ಕೊಳೆಯನ್ನು ಕಡಿಮೆ ಮಾಡುತ್ತದೆ. ಕಾಫಿಯು ನೆತ್ತಿಯನ್ನು ಸ್ವಚ್ಛಗೊಳಿಸುವ ಮತ್ತು ಎಫ್ಫೋಲಿಯೇಟ್ ಮಾಡುವ ಸಾಮರ್ಥ್ಯ ಹೊಂದಿದೆ. ಇದು ತಲೆಹೊಟ್ಟು ಉಂಟುಮಾಡುವ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳನ್ನು ತೊಡೆದುಹಾಕುತ್ತದೆ. ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವುದರಿಂದ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡಿ ಕೂದಲಿನ ಹಾನಿಯನ್ನು ತಡೆಯುತ್ತದೆ.

ಕಾಫಿ ಬಳಸುವುದು ಹೇಗೆ

ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಕಾಫಿ ಪುಡಿ ಸೇರಿಸಿ. ನಯವಾದ ಪೇಸ್ಟ್ ಆಗುವಂತೆ ಚೆನ್ನಾಗಿ ಮಿಶ್ರಣ ಮಾಡಿ. ತಣ್ಣಗಾದ ನಂತರ ಕೂದಲು, ಬೇರುಗಳು ಮತ್ತು ನೆತ್ತಿಗೆ ಹಚ್ಚಿ. 30 ನಿಮಿಷಗಳ ನಂತರ ಮೃದುವಾದ ಶಾಂಪೂ ಬಳಸಿ ತಲೆ ಸ್ನಾನ ಮಾಡಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ ಕೂಡಾ ಡ್ಯಾಂಡ್ರಫ್ ಮನೆಮದ್ದುಗಳಲ್ಲಿ ಅತ್ಯುತ್ತಮ ಆಯ್ಕೆಯಾಗಿದೆ. ಅಧ್ಯಯನದ ಪ್ರಕಾರ, ಈ ಸಾಂಪ್ರದಾಯಿಕ ಮನೆಮದ್ದು ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ, ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿದೆ. ಇದು ನೆತ್ತಿಯ ಸೋಂಕಿನ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ