Health Benefits of Green Apple: ಇದರ ಉಪಯೋಗ ತಿಳಿದರೆ ಇನ್ಮುಂದೆ ಗ್ರೀನ್ ಆಪಲ್ ತಿನ್ನೋದನ್ನು ಮಿಸ್ ಮಾಡೋದೆ ಇಲ್ಲ..!
Oct 17, 2022 01:13 PM IST
ಹಸಿರು ಸೇಬಿನ ಉಪಯೋಗಗಳು
- ಹಸಿರು ಸೇಬಿನಲ್ಲಿ ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದನ್ನು ತಿನ್ನುವುದರಿಂದ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ಹಸಿರು ಸೇಬು ದೇಹಕ್ಕೆ ಬಹಳ ಶಕ್ತಿ ನೀಡುತ್ತದೆ. ಪ್ರತಿನಿತ್ಯ ಇದನ್ನು ತಿನ್ನುವುದರಿಂದ ತೂಕ ಇಳಿಸಲು ಕೂಡಾ ಸಹಕಾರಿಯಾಗಿದೆ. ಜೊತೆಗೆ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಚರ್ಮಕ್ಕೆ ಹೊಳಪು ಬರುತ್ತದೆ.
ಯಾರಿಗಾದರೂ ಆರೋಗ್ಯ ಸರಿ ಇಲ್ಲದಿದ್ದಲ್ಲಿ ಅವರಿಗೆ ಸೇಬು ನೀಡಲು ವೈದ್ಯರು ಸಲಹೆ ನೀಡುತ್ತಾರೆ. ಕಾರಣ, ಅದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದು. ಅಷ್ಟೇ ಅಲ್ಲ ಸೇಬಿನಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಕೆಂಪು ಸೇಬು ಮಾತ್ರವಲ್ಲದೆ ಹಸಿರು ಸೇಬು ಕೂಡಾ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಸಿರು ಸೇಬಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ.
ಹಸಿರು ಸೇಬಿನಲ್ಲಿ ಕ್ವೆರ್ಸೆಟಿನ್ ಎಂಬ ಅಂಶವಿದೆ. ಹಸಿರು ಬಣ್ಣದ ಸೇಬು ಸೇವಿಸುವುದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಆಲ್ಜೈಮರ್ ಕಾಯಿಲೆ ಇರುವವರು ನಿಯಮಿತವಾಗಿ ಹಸಿರು ಸೇಬುಗಳನ್ನು ಸೇವಿಸಿದರೆ ಬಹಳ ಒಳ್ಳೆಯದು.
ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಅತ್ಯಗತ್ಯ. ಹಸಿರು ಸೇಬಿನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದೆ. ವಯಸ್ಸಾದಂತೆ ಮಹಿಳೆಯರಲ್ಲಿ ಮೂಳೆಗಳು ದುರ್ಬಲಗೊಳ್ಳುತ್ತವೆ. ಆದರೆ ಈ ಸಮಯದಲ್ಲಿ ಹಸಿರು ಸೇಬು ಸೇರಿಸಿದರೆ ಮೂಳೆಗಳು ಬಲಗೊಳ್ಳುತ್ತವೆ.
ಹಸಿರು ಸೇಬಿನಲ್ಲಿರುವ ಪೋಷಕಾಂಶಗಳು ಯಕೃತ್ತನ್ನು ಬಲಪಡಿಸುವ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ ಇರುತ್ತದೆ. ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಹಸಿರು ಸೇಬು ತಿನ್ನುವುದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.
ಹಸಿರು ಸೇಬಿನಲ್ಲಿ ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದನ್ನು ತಿನ್ನುವುದರಿಂದ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ಹಸಿರು ಸೇಬು ದೇಹಕ್ಕೆ ಬಹಳ ಶಕ್ತಿ ನೀಡುತ್ತದೆ. ಪ್ರತಿನಿತ್ಯ ಇದನ್ನು ತಿನ್ನುವುದರಿಂದ ತೂಕ ಇಳಿಸಲು ಕೂಡಾ ಸಹಕಾರಿಯಾಗಿದೆ. ಜೊತೆಗೆ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಚರ್ಮಕ್ಕೆ ಹೊಳಪು ಬರುತ್ತದೆ.
ಹಸಿರು ಸೇಬಿನಲ್ಲಿ ವಿಟಮಿನ್ ಎ ಉತ್ತಮ ಪ್ರಮಾಣದಲ್ಲಿದ್ದು ಕಣ್ಣಿನ ದೃಷ್ಟಿ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ಶ್ವಾಸಕೋಶಕ್ಕೂ ಒಳ್ಳೆಯದು. ಇದನ್ನು ಸೇವಿಸುವುದರಿಂದ ಶ್ವಾಸಕೋಶದ ಕಾರ್ಯ ನಿರ್ವಹಣೆಯನ್ನು ಬಲಪಡಿಸುತ್ತದೆ ಮತ್ತು ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ.
ವಿಭಾಗ