logo
ಕನ್ನಡ ಸುದ್ದಿ  /  ಜೀವನಶೈಲಿ  /  ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದು ಅಪಾಯವೇ? ಇದರಿಂದ ದೇಹಕ್ಕಾಗುವ ಪ್ರಯೋಜನವೇನು? ತಜ್ಞರ ಅಭಿಪ್ರಾಯ ಇಲ್ಲಿದೆ

ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದು ಅಪಾಯವೇ? ಇದರಿಂದ ದೇಹಕ್ಕಾಗುವ ಪ್ರಯೋಜನವೇನು? ತಜ್ಞರ ಅಭಿಪ್ರಾಯ ಇಲ್ಲಿದೆ

Reshma HT Kannada

Oct 19, 2023 06:00 PM IST

google News

ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದು ಅಪಾಯವೇ? ಇದರಿಂದ ದೇಹಕ್ಕಾಗುವ ಪ್ರಯೋಜನವೇನು?

    • ಕೆಲವರು ರಾತ್ರಿ ಮಲಗುವ ಮುನ್ನ ನೀರು ಕುಡಿಯಬೇಕು ಎಂದು ಹೇಳಿದರೆ ಇನ್ನು ಕೆಲವರು ನೀರು ಕುಡಿಯಲೇಬಾರದು ಎನ್ನುತ್ತಾರೆ. ಹಾಗಾದರೆ ಇದರಲ್ಲಿ ಯಾವುದು ಉತ್ತಮ ಹಾಗೂ ಯಾಕೆ ಎಂಬುದಕ್ಕೆ ತಜ್ಞರ ಉತ್ತರ ಹೀಗಿದೆ.
ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದು ಅಪಾಯವೇ? ಇದರಿಂದ ದೇಹಕ್ಕಾಗುವ ಪ್ರಯೋಜನವೇನು?
ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದು ಅಪಾಯವೇ? ಇದರಿಂದ ದೇಹಕ್ಕಾಗುವ ಪ್ರಯೋಜನವೇನು?

ಕೆಲವರಿಗೆ ಹಗಲಿಗಿಂತ ರಾತ್ರಿ ಬಾಯಾರಿಕೆ ಹೆಚ್ಚು. ಇನ್ನು ಕೆಲವರು ಮಲಗುವ ಮುನ್ನ ನೀರು ಕುಡಿಯಲು ಬಯಸುತ್ತಾರೆ. ಪ್ರತಿಯೊಬ್ಬರಿಗೂ ಒಂದೊಂದು ಅಭ್ಯಾಸ ರೂಢಿಯಾಗಿರುತ್ತದೆ. ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದು ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂಬ ಬಗ್ಗೆ ಹಲವು ಜಿಜ್ಞಾಸೆಗಳಿವೆ. ಹಾಗಾದರೆ ಇದರಿಂದ ಆಗುವ ಅನುಕೂಲ ಹಾಗೂ ಅನಾನುಕೂಲಗಳನ್ನು ತಿಳಿಯಿರಿ.

ಮಲಗುವ ಮುನ್ನ ನೀರು ಕುಡಿಯುವುದರಿಂದಾಗುವ ಪ್ರಯೋಜನಗಳು

ನಾವು ದಿನವಿಡೀ ಹಲವು ಕೆಲಸಗಳನ್ನು ಮಾಡುತ್ತೇವೆ. ಇದರಿಂದ ದೇಹ ಹಾಗೂ ಸ್ನಾಯುಗಳು ಸಾಕಷ್ಟು ದಣಿಯುತ್ತವೆ. ಈ ಕಾರಣದಿಂದಾಗಿ, ದೇಹದಿಂದ ಸಾಕಷ್ಟು ನೀರಿನಾಂಶ ಹೊರಹೋಗುತ್ತದೆ. ಪರಿಣಾಮವಾಗಿ, ದೇಹದಲ್ಲಿ ನೀರಿನ ಶೇಕಡಾವಾರು ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ನಿದ್ರೆಯ ಕೊರತೆ ಉಂಟಾಗಬಹುದು ಮತ್ತು ದೇಹದ ಅಸ್ವಸ್ಥತೆಗೆ ಕಾರಣವಾಗಬಹುದು. ಇದು ಗಂಟಲು ಒಣಗುವುದು ಮತ್ತು ಗೊರಕೆಯ ಸಾಧ್ಯತೆ ಹೆಚ್ಚಬಹುದು. ಈ ಸಮಸ್ಯೆಗಳಿಂದ ದೂರವಿರಲು, ದೇಹವನ್ನು ಹೈಡ್ರೀಕರಿಸಬೇಕು. ಹಾಗಾಗಿ ಮಲಗುವ ಮುನ್ನ ನೀರು ಕುಡಿಯುವುದು ಉತ್ತಮ. ಇದರಿಂದ ಒತ್ತಡಕ್ಕೊಳಗಾದ ಸ್ನಾಯುಗಳು ಶಮನಗೊಳ್ಳುತ್ತವೆ. ಅವು ಮತ್ತೆ ಬಲಗೊಳ್ಳುತ್ತವೆ. ಚೆನ್ನಾಗಿ ನಿದ್ದೆ ಮಾಡುವುದರಿಂದ ಮರುದಿನ ನಾವು ಹೆಚ್ಚು ಜಾಗೃತರಾಗುತ್ತೇವೆ. ನೀರು ದೇಹದಲ್ಲಿ ಸಂಗ್ರಹವಾದ ವಿಷವನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಇದು ನಮ್ಮ ತ್ವಚೆಯನ್ನು ನಯವಾಗಿ ಮತ್ತು ಮೃದುವಾಗಿ ಮಾಡುತ್ತದೆ. ನಾವು ನಿದ್ರಿಸಿದ ನಂತರ, ನಮ್ಮ ದೇಹದ ಉಷ್ಣತೆಯು ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ. ಮಲಗುವ ಮುನ್ನ ನೀರು ಕುಡಿಯುವುದು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ. ಇದು ದೇಹದ ತಾಪವನ್ನು ಕಡಿಮೆ ಮಾಡುತ್ತದೆ. ದೇಹದ ಉಷ್ಣತೆ ಸಮತೋಲಿತವಾಗಿರಲು ಇದು ಸಹಕಾರಿ.

ಅನಾನುಕೂಲಗಳು

ಮಲಗುವ ಮುನ್ನ ಹೆಚ್ಚು ನೀರು ಕುಡಿಯುವುದರಿಂದ ಮೂತ್ರದ ಪದೇ ಪದೇ ಮೂತ್ರ ಮಾಡಬೇಕು ಎನ್ನಿಸಬಹುದು. ಇದು ಎಲ್ಲರೂ ಎದುರಿಸುವ ಸಾಮಾನ್ಯ ಸಮಸ್ಯೆಯಾಗಿದೆ. ಮಲಗುವ ಮುನ್ನ ಹೆಚ್ಚು ನೀರು ಕುಡಿದರೆ ರಾತ್ರಿಯಿಡೀ ಬೇಕೆಂದಾಗ ಮೂತ್ರ ವಿಸರ್ಜನೆಗೆ ಎದ್ದೇಳಬೇಕಾಗುತ್ತದೆ. ಹೀಗಾಗಿ ನಿದ್ರೆಗೆ ತುಂಬಾ ತೊಂದರೆಯಾಗುತ್ತದೆ. ಅಲ್ಲದೆ, ಇದರಿಂದಾಗಿ ನಿದ್ರೆಯ ಕೊರತೆ ಕಾಡಬಹುದು. ರಾತ್ರಿಯಲ್ಲಿ ಹೆಚ್ಚು ನೀರು ಕುಡಿಯುವುದರಿಂದ ಎದೆಯುರಿ ಮತ್ತು ಉಸಿರಾಟದ ತೊಂದರೆ ಉಂಟಾಗುತ್ತದೆ. ನಾವು ರಾತ್ರಿ ವೇಳೆ ಹೆಚ್ಚು ದ್ರವಾಹಾರ ಸೇವಿಸಿದರೆ, ಅವು ಉಸಿರಾಟದ ಪ್ರದೇಶಕ್ಕೆ ಪ್ರವೇಶಿಸಬಹುದು ಮತ್ತು ಇದರಿಂದ ಉಸಿರಾಟದ ತೊಂದರೆಗೆ ಕಾರಣವಾಗಬಹುದು.

ಮಲಗುವ ಮುನ್ನ ನೀರು ಕುಡಿಯುವ ಕ್ರಮ

ಮಲಗುವ ಮುನ್ನ ಸರಿಯಾಗಿ ಅರ್ಧ ಗಂಟೆ ಅಥವಾ ಕನಿಷ್ಠ ಒಂದು ಗಂಟೆ ಮೊದಲು ನೀರು ಕುಡಿಯಿರಿ. ಪದೇ ಪದೇ ನೀರು ಕುಡಿಯಬೇಡಿ. ಅನಿವಾರ್ಯ ಎನ್ನಿಸಿದರೆ ಮಾತ್ರ ಮಲಗುವ ಸಮಯ ಹತ್ತಿರವಿದ್ದಾಗ ನೀರು ಕುಡಿಯಿರಿ, ರಾತ್ರಿ ಮಲಗುವಾಗ ಸಾಧ್ಯವಾದಷ್ಟು ನೀರು ಕಡಿಮೆ ಕುಡಿಯವುದು ಉತ್ತಮ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ