ಮದ್ಯಪಾನಕ್ಕೂ ಮುನ್ನ ಈ ಆಹಾರ ಪದಾರ್ಥಗಳನ್ನ ಸೇವಿಸಿದ್ರೆ ಅಪಾಯ ಕಡಿಮೆ
Dec 28, 2023 09:55 PM IST
ಮದ್ಯಪಾನ
- ಮದ್ಯಪಾನ ಆರೋಗ್ಯಕ್ಕೆ ಎಂದಿಗೂ ಒಳ್ಳೆಯದಲ್ಲ. ಆದರೆ ಮದ್ಯಪಾನ ಸೇವನೆಗೂ ಮುನ್ನ ಈ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದರೆ ಮದ್ಯಪಾನ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗಬಲ್ಲ ದುಷ್ಪರಿಣಾಮಗಳಿಂದ ಕೊಂಚ ದೂರ ಸರಿಯಬಹುದಾಗಿದೆ.
ಹೊಸ ವರ್ಷ ಬೇರೆ ಸಮೀಪಿಸುತ್ತಿದೆ. ವರ್ಷಾಂತ್ಯದಲ್ಲಿ ಪಾರ್ಟಿ ಮಾಡಬೇಕು ಎಂದುಕೊಂಡಿರುವವರು ಡಿಸೆಂಬರ್ 31 ಯಾವಾಗ ಬರುತ್ತೋ ಅಂತಾ ಕಾಯುತ್ತಿದ್ದಾರೆ. ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೂ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂದರ್ಭದಲ್ಲಿ ಅನೇಕರು ಮದ್ಯಪಾನ ಮಾಡುತ್ತಾರೆ. ನೀವು ಕೂಡ ಈ ಸಾಲಿಗೆ ಸೇರಿದವರಾದರೆ ಮದ್ಯಪಾನ ಸೇವಿಸುವ ಮುನ್ನ ನೀವು ಯಾವೆಲ್ಲ ಆಹಾರವನ್ನು ಸೇವಿಸುವುದು ಒಳ್ಳೆಯದು ಹಾಗೂ ಮದ್ಯಪಾನದಿಂದ ಆರೋಗ್ಯದ ಮೇಲೆ ಉಂಟಾಗುವ ಅಪಾಯಗಳನ್ನು ಯಾವೆಲ್ಲ ಆಹಾರವನ್ನು ಸೇವಿಸುವ ಮೂಲಕ ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ..
ಬಾಳೆ ಹಣ್ಣು : ಮದ್ಯಪಾನ ಸೇವಿಸುವ ಮುನ್ನ ನೀವು ಬಾಳೆಹಣ್ಣುಗಳನ್ನು ಸೇವನೆ ಮಾಡಬಹುದು. ಈ ಹಣ್ಣುಗಳ ಸೇವನೆಯಿಂದ ಮದ್ಯಪಾನದ ಬಳಿಕ ಇರುವ ಹ್ಯಾಂಗ್ಓವರ್ ಹಾಗೂ ನಿರ್ಜಲೀಕರಣ ಸಮಸ್ಯೆಗಳಿಂದ ನೀವು ಪಾರಾಗಬಹುದಾಗಿದೆ. ಇದರಲ್ಲಿರುವ ಪೊಟ್ಯಾಷಿಯಂ ಅಂಶವು ದೇಹದಲ್ಲಿ ಎಲೆಕ್ಟ್ರೋಲೈಟ್ಗಳ ಉತ್ಪಾದನೆಗೆ ನೆರವಾಗುತ್ತದೆ.
ಅವಕಾಡೋ : ಅವಕಾಡೋದಲ್ಲಿರುವ ಉತ್ತಮ ಕೊಬ್ಬಿನಂಶವು ಹೊಟ್ಟೆಯ ಭಾಗದಲ್ಲಿ ಸುರಕ್ಷಿತವಾದ ಪದರಗಳನ್ನು ನಿರ್ಮಾಣ ಮಾಡುತ್ತದೆ. ಮದ್ಯಪಾನ ಸೇವನೆ ಬಳಿಕ ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಅವಕಾಡೋ ಸಹಾಯಕಾರಿಯಾಗಿದೆ.
ಮೊಟ್ಟೆಗಳು : ಮೊಟ್ಟೆಯಲ್ಲಿ ಅಗಾಧ ಪ್ರಮಾಣದಲ್ಲಿ ಪ್ರೊಟೀನ್ ಅಂಶ ಅಡಗಿದೆ. ಅಲ್ಲದೇ ಮೊಟ್ಟೆಯು ಮದ್ಯಪಾನ ಸೇವನೆಯ ಬಳಿಕ ಜೀರ್ಣಕ್ರಿಯೆಯನ್ನು ಸರಾಗಗೊಳಿಸಲು ಸಹಕಾರಿಯಾಗಿದೆ. ಅಲ್ಲದೇ ಹ್ಯಾಂಗ್ಓವರ್ಗಳಿಂದ ನಿಮ್ಮನ್ನು ನೀವು ಬಚಾವು ಮಾಡಿಕೊಳ್ಳಲೂ ಸಹ ಮೊಟ್ಟೆಗಳು ಸಹಾಯ ಮಾಡುತ್ತವೆ .
ಶುಂಠಿ : ಶುಂಠಿಯು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ ಎಂಬ ವಿಷಯ ತಿಳಿದೇ ಇದೆ. ಹೀಗಾಗಿ ಮದ್ಯಪಾನ ಸೇವೆಯಿಂದ ಹೊಟ್ಟೆಯಲ್ಲಿ ಅಸಮತೋಲನ ಉಂಟಾಗುವುದನ್ನು ತಪ್ಪಿಸುವಲ್ಲಿ ಕೂಡ ಶುಂಠಿ ಸಹಾಯಕಾರಿಯಾಗಿದೆ. ನೀವು ಮದ್ಯಪಾನ ಸೇವನೆಗೂ ಮುನ್ನ ಶುಂಠಿ ಸೇವನೆ ಮಾಡುವುದು ಒಳ್ಳೆಯದು.
ಓಟ್ಸ್ : ಓಟ್ಸ್ನಲ್ಲಿ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ ಪ್ರಮಾಣ ಅಗಾಧವಾಗಿರುತ್ತದೆ. ಇವುಗಳು ಶಕ್ತಿಯನ್ನು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಬಿಡುಗಡೆ ಮಾಡುತ್ತವೆ, ಇವುಗಳು ನಿಮ್ಮ ಸಕ್ಕರೆ ಪ್ರಮಾಣವನ್ನು ಸರಿದೂಗಿಸುವಲ್ಲಿ ಸಹಾಯಕಾರಿಯಾಗಿವೆ.
ಡ್ರೈಫ್ರೂಟ್ಸ್ : ಡ್ರೈಫ್ರೂಟ್ಸ್ಗಳಲ್ಲಿ ಆರೋಗ್ಯಕರ ಕೊಬ್ಬು ಹಾಗೂ ಪ್ರೊಟೀನ್ ಪ್ರಮಾಣ ಅಗಾಧವಾಗಿರುತ್ತದೆ. ಇವುಗಳು ನಿಮ್ಮ ಮದ್ಯಪಾನ ಸೇವನೆಯನ್ನು ಕಡಿಮೆ ಮಾಡಿಸುತ್ತವೆ. ಅಲ್ಲದೇ ನಿಮ್ಮ ದೇಹದಲ್ಲಿ ಮಧುಮೇಹದ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಕಲ್ಲಂಗಡಿ : ಅತೀ ಹೆಚ್ಚು ನೀರಿನ ಅಂಶ ಹೊಂದಿರುವ ಹಣ್ಣು ಎಂದರೆ ಅದು ಕಲ್ಲಂಗಡಿ. ಇವುಗಳ ಮದ್ಯಪಾನ ಸೇವನೆ ಬಳಿಕ ನಿಮ್ಮ ದೇಹದಲ್ಲಿ ಉಂಟಾಗಬಲ್ಲ ನಿರ್ಜಲೀಕರಣವನ್ನು ಕಡಿಮೆ ಮಾಡುತ್ತವೆ. ಮದ್ಯಪಾನದ ಬಳಿಕವೂ ನಿಮ್ಮ ದೇಹದಲ್ಲಿ ನೀರಿನಂಶ ಸರಿಯಾಗಿ ಇರಬೇಕು ಎಂದರೆ ನೀವು ಮೊದಲು ಕಲ್ಲಂಗಡಿ ಹಣ್ಣು ಸೇವಿಸುವುದು ಒಳಿತು.