Breakfast recipe: ಹೈ ಪ್ರೋಟೀನ್ ಉಪಹಾರ ಬೇಕೆಂದರೆ ಇಲ್ಲಿದೆ ನೋಡಿ ರೆಸಿಪಿ
Jul 12, 2022 10:39 PM IST
ಪನೀರ್ ಪ್ಯಾನ್ ಕೇಕ್
- ಜೇನುತುಪ್ಪದೊಂದಿಗೆ ಸೇವಿಸುವ ಈ ಪನೀರ್ ಪ್ಯಾನ್‌ಕೇಕ್ ಬಹಳ ರುಚಿ ಕೂಡಾ. ಪನೀರ್ ಪ್ಯಾನ್ ಕೇಕ್ ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೀಗಿದೆ ನೋಡಿ
ಬೆಳಗಿನ ಉಪಹಾರವನ್ನು ಸ್ಕಿಪ್ ಮಾಡುವಂತಿಲ್ಲ. ಆರೋಗ್ಯಕರ ಬ್ರೇಕ್‌ಫಾಸ್ಟ್ ನಮ್ಮನ್ನು ಇಡೀ ದಿನ ಲವಲವಿಕೆಯಿಂದ ಇರಿಸಲು ಸಹಾಯಕಾರಿಯಾಗಿದೆ. ನಿಮಗೆ ಹೈ ಪ್ರೋಟೀನ್ ಬ್ರೇಕ್‌ಫಾಸ್ಟ್ ಬೇಕೆಂದರೆ ಈ ರೆಸಿಪಿಯನ್ನು ಫಾಲೋ ಮಾಡಿ.
ನೀವು ಅಮೇರಿಕನ್ ಕ್ಲಾಸಿಕ್ ಬ್ರೇಕ್‌ಫಾಸ್ಟ್‌ನೊಂದಿಗೆ ನಿಮ್ಮ ಬೆಳಗ್ಗೆಯನ್ನು ಪ್ರಾರಂಭಿಸಲು ಬಯಸಿದರೆ ಪನೀರ್ ಪ್ಯಾನ್ ಕೇಕ್ ಅತ್ಯುತ್ತಮ ಆಯ್ಕೆಯಾಗಿದೆ. ಜೊತೆಗೆ ಇದು ಹೆಚ್ಚಿನ ಪ್ರೋಟೀನ್ ಉಪಹಾರವಾಗಿದೆ. ಜೇನುತುಪ್ಪದೊಂದಿಗೆ ಸೇವಿಸುವ ಈ ಪನೀರ್ ಪ್ಯಾನ್‌ಕೇಕ್ ಬಹಳ ರುಚಿ ಕೂಡಾ. ಪನೀರ್ ಪ್ಯಾನ್ ಕೇಕ್ ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೀಗಿದೆ ನೋಡಿ
ಬೇಕಾಗುವ ಪದಾರ್ಥಗಳು
ಪನೀರ್ - 250 ಗ್ರಾಂ
ಮೊಟ್ಟೆ - 2
ಸಕ್ಕರೆ - 3 ಟೀ ಸ್ಪೂನ್
ಬೇಕಿಂಗ್ ಪೌಡರ್ - 1/2 ಟೀ ಸ್ಪೂನ್
ಗೋಧಿ ಹಿಟ್ಟು - ಅರ್ಧ ಕಪ್
ಹಾಲು - 3 ಟೇಬಲ್ ಸ್ಪೂನ್
ಬೆಣ್ಣೆ - ಅಗತ್ಯಕ್ಕೆ ತಕ್ಕಷ್ಟು
ಉಪ್ಪು - ಸ್ವಲ್ಪ
ತಯಾರಿಸುವ ವಿಧಾನ
ಪನೀರನ್ನು ತುರಿದುಕೊಂಡು ಪಕ್ಕಕ್ಕೆ ಇಡಿ
ಒಂದು ಬೌಲ್ನಲ್ಲಿ ಮೊಟ್ಟೆಗಳನ್ನು ಒಡೆದು ಚೆನ್ನಾಗಿ ಬೀಟ್ ಮಾಡಿ
ನಂತರ ಸಕ್ಕರೆ ಸೇರಿಸಿ ಅದು ಚೆನ್ನಾಗಿ ಬೆರೆಯುವವರೆಗೆ ಬೀಟ್ ಮಾಡಿ, ಇದಕ್ಕೆ ಹ್ಯಾಂಡ್ ಮಿಕ್ಸರ್ ಇದ್ದರೆ ಚೆಂದ
ಈ ಮಿಶ್ರಣಕ್ಕೆ ತುರಿದ ಪನೀರ್, ಬೇಕಿಂಗ್ ಪೌಡರ್, ಗೋಧಿ ಹಿಟ್ಟು, ಉಪ್ಪು ಸೇರಿಸಿ ಮತ್ತೆ ಮಿಕ್ಸ್ ಮಾಡಿ
ಇದಕ್ಕೆ ಹಾಲು ಸೇರಿಸಿ ಮತ್ತೆ ಬೆರೆಸಿ, ಬ್ಯಾಟರ್ ತುಂಬಾ ತೆಳುವಾಗಿ ಇರಬಾರದು ಹಾಗೇ ಗಟ್ಟಿಯಾಗೂ ಇರಬಾರದು
ಸ್ಟೋವ್ ಮೇಲೆ ಪ್ಯಾನ್ ಇಡಿ, ಸಣ್ಣ ಉರಿ ಇರಿಸಿ
ಬೆಣ್ಣೆ ಬಿಸಿ ಮಾಡಿ, ಒಂದು ಸೌಟು ಪ್ಯಾನ್ ಕೇಕ್ ಮಿಶ್ರಣ ಸುರಿಯಿರಿ
ಒಂದು ಕಡೆ ಕುಕ್ ಆದ ನಂತರ ಫ್ಲಿಪ್ ಮಾಡಿ, ಎರಡೂ ಕಡೆ ಬೇಯಿಸಿ
ಉಳಿದ ಮಿಶ್ರಣದಿಂದ ಇದೇ ರೀತಿ ಪ್ಯಾನ್ ಕೇಕ್ ತಯಾರಿಸಿ
ಪ್ಯಾನ್ ಕೇಕ್ಗಳನ್ನು ಸರ್ವಿಂಗ್ ಪ್ಲೇಟ್‌ಗೆ ವರ್ಗಾಯಿಸಿ ಹಣ್ಣುಗಳು, ಜೇನುತುಪ್ಪ ಅಥವಾ ಮೇಪಲ್ ಸಿರಪ್‌ನೊಂದಿಗೆ ಎಂಜಾಯ್ ಮಾಡಿ
ವಿಭಾಗ