logo
ಕನ್ನಡ ಸುದ್ದಿ  /  ಜೀವನಶೈಲಿ  /  ಹೋಳಿ 2023: ಹೋಳಿ ಸಂಭ್ರಮದಲ್ಲಿ ಸಾಕುಪ್ರಾಣಿಯನ್ನೂ ಜೊತೆ ಮಾಡಿಕೊಳ್ಳುವ ಹಂಬಲವಿದೆಯೇ? ಹಾಗಾದರೆ ಈ ಟಿಪ್ಸ್‌ ಪಾಲಿಸಿ

ಹೋಳಿ 2023: ಹೋಳಿ ಸಂಭ್ರಮದಲ್ಲಿ ಸಾಕುಪ್ರಾಣಿಯನ್ನೂ ಜೊತೆ ಮಾಡಿಕೊಳ್ಳುವ ಹಂಬಲವಿದೆಯೇ? ಹಾಗಾದರೆ ಈ ಟಿಪ್ಸ್‌ ಪಾಲಿಸಿ

HT Kannada Desk HT Kannada

Mar 07, 2023 04:18 PM IST

google News

ಹೋಲಿ ಹಬ್ಬ ಹಾಗೂ ಸಾಕುಪ್ರಾಣಿ

    • Holi and pet care: ಹೋಳಿ ಸಂಭ್ರಮದಲ್ಲಿ ನಿಮ್ಮ ಮುದ್ದಿನ ಸಾಕುಪ್ರಾಣಿಯನ್ನು ಸೇರಿಸಿಕೊಳ್ಳಬೇಕು ಎಂಬ ಹಂಬಲ ಇದೆಯೇ? ಆದರೆ ರಾಸಾಯನಿಕ ಬಣ್ಣ, ಸಿಹಿತಿನಿಸುಗಳಿಂದ ಅವುಗಳನ್ನು ದೂರವಿರಿಸುವುದು ಹೇಗೆ ಎನ್ನುವ ಚಿಂತೆ ಕಾಡುತ್ತಿದೆಯೆ? ಚಿಂತಿಸಬೇಡಿ, ನಿಮ್ಮ ಸಾಕುಪ್ರಾಣಿಯೊಂದಿಗೆ ಹೋಳಿಯಾಡಲು ಕೆಲವೊಂದು ಸುರಕ್ಷಿತ ಮಾರ್ಗಗಳಿವೆ.
ಹೋಲಿ ಹಬ್ಬ ಹಾಗೂ ಸಾಕುಪ್ರಾಣಿ
ಹೋಲಿ ಹಬ್ಬ ಹಾಗೂ ಸಾಕುಪ್ರಾಣಿ

ಹೋಳಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲೆಲ್ಲೂ ಬಣ್ಣಗಳ ರಂಗು ಹರಡಲು ಶುರುವಾಗಿದೆ. ಸ್ನೇಹಿತರು, ಕುಟಂಬದವರೆಲ್ಲರೂ ಹಬ್ಬದ ಸಂಭ್ರಮಕ್ಕಾಗಿ ಒಂದೆಡೆ ಸೇರಿರುತ್ತಾರೆ. ಬಣ್ಣ, ಸಂಗೀತ, ಸಿಹಿ ತಿನಿಸುಗಳೂ ಸಿದ್ಧಗೊಂಡು ಹಬ್ಬದ ಕ್ಷಣಕ್ಕೆ ಕಾಯುತ್ತಿರಬಹುದು. ಈ ಸಂಭ್ರಮಕ್ಕೆ ನಿಮ್ಮ ಮುದ್ದಿನ ಸಾಕುಪ್ರಾಣಿಯನ್ನು ಸೇರಿಸಿಕೊಳ್ಳಬೇಕು ಎಂಬ ಹಂಬಲ ಇದೆಯೇ? ಆದರೆ ಬಣ್ಣ, ರಾಸಾಯನಿಕಗಳಿಂದ ಅವುಗಳನ್ನು ದೂರವಿರಿಸಿ ಚರ್ಮ, ಕೂದಲು ಹಾಗೂ ಆರೋಗ್ಯವನ್ನು ಕಾಪಾಡುವುದು ಹೇಗೆ ಎನ್ನುವ ಚಿಂತೆ ಕಾಡುತ್ತಿದೆಯೆ? ಚಿಂತಿಸಬೇಡಿ, ನಿಮ್ಮ ಸಾಕುಪ್ರಾಣಿಯೊಂದಿಗೆ ಹೋಳಿಯಾಡಲು ಕೆಲವೊಂದು ಸುರಕ್ಷಿತ ಮಾರ್ಗಗಳಿವೆ.

ಅದೇನೆ ಇದ್ದರೂ ಸಾಕುಪ್ರಾಣಿಗಳ ಮಾಲೀಕರಾಗಿ ಹೋಳಿ ಆಚರಿಸುವ ನಡುವೆ ಅವುಗಳ ಸುರಕ್ಷತೆಯ ವಿಷಯದಲ್ಲಿ ರಾಜಿಮಾಡಿಕೊಳ್ಳದೆ ಇರುವುದು ಮುಖ್ಯ. ಏಕೆಂದರೆ ಹಬ್ಬಗಳು ಅವುಗಳ ಆರೋಗ್ಯ ಹಾಗೂ ಸುರಕ್ಷತೆಯ ಮೇಲೆ ಪರಿಣಾಮ ಬೀರಬಹುದು.

ಸಾಕುಪ್ರಾಣಿಗಳನ್ನು ಹೋಳಿ ಸಂಭ್ರಮದಲ್ಲಿ ಸುರಕ್ಷಿತವಾಗಿರಿಸಲು ಇಲ್ಲಿವೆ ಕೆಲವು ಉಪಾಯ.

ಸಾಕುಪ್ರಾಣಿಗಳಿಗೆಂದೇ ಇರುವ ಬಣ್ಣ ಬಳಸಿ

ಸಾಂಪ್ರದಾಯಿಕ ಹೋಳಿ ಉತ್ಸವಕ್ಕೆ ರಂಗು ತರುವ ಬಣ್ಣಗಳಲ್ಲಿ ರಾಸಾಯನಿಕ ಹಾಗೂ ಕೆಲವು ಹಾನಿಕಾರಕ ಪದಾರ್ಥಗಳನ್ನು ಸೇರಿಸಲಾಗುತ್ತದೆ. ಇದರ ಬಳಕೆಯಿಂದ ಸಾಕುಪ್ರಾಣಿಗಳ ಚರ್ಮ, ತುಪ್ಪಳ ಹಾಗೂ ಕಣ್ಣಿಗೆ ತೊಂದರೆಯಾಗಬಹುದು. ಆ ಕಾರಣಕ್ಕೆ ರಾಸಾಯನಿಕ ಬಣ್ಣಗಳನ್ನು ಬಳಸುವ ಬದಲು ಅರಿಸಿನ, ಬಿಟ್ರೂಟ್‌, ಗುಲಾಬಿದಳಗಳಿಂದ ತಯಾರಿಸಿದ ನೈಸರ್ಗಿಕ ಬಣ್ಣಗಳನ್ನು ಬಳಸಬಹುದು. ಸಾವಯವ ಬಣ್ಣಗಳು ಬಳಸಲು ಯೋಗ್ಯವಾಗಿರುತ್ತವೆ.

ಕಣ್ಣು, ಕಿವಿಗೆ ಹಾನಿಯಾಗದಂತೆ ನೋಡಿಕೊಳ್ಳಿ

ದೊಡ್ಡ ಧ್ವನಿಯಲ್ಲಿ ಮ್ಯೂಸಿಕ್‌ ಹಾಕುವುದು, ಪಟಾಕಿ ಹೊಡೆಯುವುದು, ವಾಟರ್‌ ಬಲೂನ್‌ ಒಡೆಯುವುದು ಇಂತಹ ಶಬ್ದಗಳು ಸಾಕುಪ್ರಾಣಿಗಳಲ್ಲಿ ಒತ್ತಡ, ಆತಂಕ ಉಂಟಾಗಲು ಕಾರಣವಾಗಬಹುದು. ಆ ಕಾರಣಕ್ಕೆ ನಿಮ್ಮ ಮುದ್ದಿನ ಕೂಸನ್ನು ಶಾಂತಿ ಹಾಗೂ ಸುರಕ್ಷಿತ ಜಾಗದಲ್ಲಿ ಇರಿಸುವುದು ಬಹಳ ಮುಖ್ಯ. ಸದ್ದು, ಗದ್ದಲ, ಹೆಚ್ಚು ಜನ ಸೇರಿರುವ ಜಾಗದಿಂದ ದೂರ ಇರಿಸಿ. ಹೊರಗಡೆ ಕರೆದುಕೊಂಡು ಹೋಗಲೇಬೇಕು ಎನ್ನುವ ಹಂಬಲವಿದ್ದರೆ ಅದರ ಕಿವಿಗಳಿಗೆ ಇಯರ್‌ ಫ್ಲಗ್‌ ಅಥವಾ ಹತ್ತಿಯ ಉಂಡೆ ಸಿಕ್ಕಿಸಿ, ಕಣ್ಣುಗಳಿಗೆ ಗಾಗಲ್‌ ಅಥವಾ ಸುರಕ್ಷಿತ ಗ್ಲಾಸ್‌ ತೊಡಿಸಿ.

ಸಾಕಷ್ಟು ನೀರು ಕುಡಿಸಿ

ಬೇಸಿಗೆಯ ವಾತಾವರಣ ಹಾಗೂ ಹೋಳಿಯ ಸಂಭ್ರಮದ ನಡುವೆ ನಿಮ್ಮ ಮುದ್ದಿನ ಪ್ರಾಣಿ ಬೇಗನೆ ನಿರ್ಜಲೀಕರಣಕ್ಕೆ ಒಳಗಾಗಬಹುದು. ಆ ಕಾರಣಕ್ಕೆ ಅವಕ್ಕೆ ಸಾಧ್ಯವಾದಷ್ಟು ತಾಜಾ ನೀರು ಕುಡಿಸಿ. ತಂಪು ಪಾನೀಯ ಹಾಗೂ ಅವುಗಳ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಆಹಾರ ಪದಾರ್ಥಗಳಿಂದ ದೂರವಿರಿಸಿ.

ಒಳಾಂಗಣ ಜಾಗದಲ್ಲಿ ಹೋಳಿಯಾಡಿ

ಹೋಳಿ ಸಂಭ್ರಮದಲ್ಲಿ ಸಾಕುಪ್ರಾಣಿಯನ್ನೂ ಸೇರಿಸಿಕೊಳ್ಳಬೇಕು ಎನ್ನುವ ಹಂಬಲ ಇದ್ದರೆ, ಮನೆಯ ಟೆರೆಸ್‌, ಅಂಗಳ, ಕಾರ್‌ಶೆಡ್‌ ಹೀಗೆ ಒಳಾಂಗಣ ಜಾಗವನ್ನೇ ಆರಿಸಿಕೊಳ್ಳಿ. ಸಾಮಾನ್ಯವಾಗಿ ಒಳಾಂಗಣ ಜಾಗಗಳು ಸ್ವಚ್ಛವಾಗಿ, ಸುರಕ್ಷಿತವಾಗಿರುತ್ತವೆ. ಇದರಿಂದ ಗಾಯ, ನೋವು ಉಂಟಾಗವುದನ್ನು ತಪ್ಪಿಸಬಹುದು.

ಸ್ನಾನ ಮಾಡಿಸಿ

ಹೋಳಿಯಾಡಿದ ಬಳಿಕ ನಿಮ್ಮ ಮುದ್ದಿನ ಮರಿಗೆ ಸ್ನಾನ ಮಾಡಿಸುವುದನ್ನು ಮರೆಯಬೇಡಿ. ಸಾಕುಪ್ರಾಣಿಗಳಿಗೆಂದೇ ಇರುವ ಶ್ಯಾಂಪೂ ಮತ್ತು ಬಿಸಿನೀರಿನಿಂದ ಸ್ನಾನ ಮಾಡಿಸಿ. ಇದರಿಂದ ರಾಸಾಯನಿಕಗಳು ಹಾಗೂ ಹಾನಿಕಾರಕ ಅಂಶಗಳು ತುಪ್ಪಳ ಅಥವಾ ಚರ್ಮಕ್ಕೆ ಅಂಟಿಕೊಂಡಿದ್ದರೆ ಸ್ವಚ್ಛವಾಗುತ್ತದೆ. ಸ್ನಾನ ಮಾಡಿಸುವಾಗ ಅವುಗಳ ಕಿವಿ, ತುಪ್ಪ ಹಾಗೂ ಬಾಯಿಯನ್ನು ಮರೆಯದೇ ಸ್ವಚ್ಛ ಮಾಡಿ.

ಹೋಳಿ ಪಾರ್ಟಿ ನೀಡಿ

ಹೋಳಿ ಸಂಭ್ರಮ, ಸಿಹಿ, ಹೋಳಿ ಪಾರ್ಟಿ ನಿಮಗಷ್ಟೇ ಅಲ್ಲ. ನಿಮ್ಮ ಸಾಕುಪ್ರಾಣಿಗೂ ಈ ಸಂಭ್ರಮದಲ್ಲಿ ಪಾಲಿರಲಿ. ಹೊರಗಡೆ ಸಿಗುವ ಸಿಹಿ ಪದಾರ್ಥಗಳನ್ನು ನೀಡಿದ ಅವುಗಳ ಆರೋಗ್ಯ ಕೆಡಿಸುವ ಬದಲು ಮನೆಯಲ್ಲೇ ಸಿಹಿ ತಿನಿಸುಗಳನ್ನು ತಯಾರಿಸಿ. ಪೀನಟ್‌ ಬಟರ್‌, ಕ್ಯಾರೆಟ್‌ ಹಾಗೂ ಸಿಹಿ ಗೆಣಸು ಮೊದಲಾದವುಗಳಿಂದ ಸಿಹಿ ತಿಂಡಿ ತಯಾರಿಸಿ ನಿಮ್ಮ ಮರಿಗೆ ಹಬ್ಬದ ಟ್ರೀಟ್‌ ನೀಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ