logo
ಕನ್ನಡ ಸುದ್ದಿ  /  ಜೀವನಶೈಲಿ  /  Mushroom Farming: ಅಣಬೆ ಕೃಷಿಯಿಂದ ಕೈತುಂಬಾ ಸಂಪಾದಿಸಿ, ಅತ್ಯಲ್ಪ ಹೂಡಿಕೆ, ಮನೆಯಲ್ಲಿ ಚೂರು ಜಾಗವಿದ್ದರೆ ಸಾಕು, ಇಲ್ಲಿದೆ ಮಾರ್ಗದರ್ಶಿ

Mushroom Farming: ಅಣಬೆ ಕೃಷಿಯಿಂದ ಕೈತುಂಬಾ ಸಂಪಾದಿಸಿ, ಅತ್ಯಲ್ಪ ಹೂಡಿಕೆ, ಮನೆಯಲ್ಲಿ ಚೂರು ಜಾಗವಿದ್ದರೆ ಸಾಕು, ಇಲ್ಲಿದೆ ಮಾರ್ಗದರ್ಶಿ

Prasanna Kumar P N HT Kannada

Nov 21, 2024 07:19 PM IST

google News

ಅಣಬೆ ಕೃಷಿಯಿಂದ ಕೈತುಂಬಾ ಸಂಪಾದಿಸಿ, ಅತ್ಯಲ್ಪ ಹೂಡಿಕೆ, ಮನೆಯಲ್ಲಿ ಚೂರು ಜಾಗವಿದ್ದರೆ ಸಾಕು, ಇಲ್ಲಿದೆ ಮಾರ್ಗದರ್ಶಿ

    • Mushroom Farming: ಕಡಿಮೆ ಖರ್ಚಿನಲ್ಲಿ ಮತ್ತು ಹೆಚ್ಚು ಶ್ರಮ ವಹಿಸದೆ ಸ್ವ ಉದ್ಯೋಗ ಮಾಡಬೇಕು ಎನ್ನುವವರಿಗೆ ಅಣಬೆ ಬೇಸಾಯ ಉತ್ತಮವಾದದ್ದು. ಭಾರತದಲ್ಲಿ ಈ ಕೃಷಿಗೆ ಹೆಚ್ಚಿನ ಬೇಡಿಕೆ ಇದೆ. ಹಾಗಾದರೆ ಅಣಬೆ ಬೆಳೆಯುವ ವಿಧಾನ ಹೇಗಿದೆ?
ಅಣಬೆ ಕೃಷಿಯಿಂದ ಕೈತುಂಬಾ ಸಂಪಾದಿಸಿ, ಅತ್ಯಲ್ಪ ಹೂಡಿಕೆ, ಮನೆಯಲ್ಲಿ ಚೂರು ಜಾಗವಿದ್ದರೆ ಸಾಕು, ಇಲ್ಲಿದೆ ಮಾರ್ಗದರ್ಶಿ
ಅಣಬೆ ಕೃಷಿಯಿಂದ ಕೈತುಂಬಾ ಸಂಪಾದಿಸಿ, ಅತ್ಯಲ್ಪ ಹೂಡಿಕೆ, ಮನೆಯಲ್ಲಿ ಚೂರು ಜಾಗವಿದ್ದರೆ ಸಾಕು, ಇಲ್ಲಿದೆ ಮಾರ್ಗದರ್ಶಿ

ಬಿಸಿನೆಸ್ ಮಾಡಬೇಕು ಎನ್ನುವುದು ಹಲವರು ಕನಸು. ವೇಗವಾಗಿ ಆದಾಯ ಗಳಿಸಬೇಕು, ಬೇಗನೇ ಶ್ರೀಮಂತರಾಗಬೇಕು ಎಂಬುದು ಸಾಕಷ್ಟು ಮಂದಿಯ ಬಯಕೆ. ಕೆಲವರಿಗೆ ಬಿಸಿನೆಸ್ ಮಾಡುವಷ್ಟು ದುಡ್ಡಿರಲ್ಲ, ಕೆಲವರಿಗೆ ಜಾಗದ ಕೊರತೆ. ಆದರೆ ಅಂತಹವರಿಗೆ ಹೇಳಿ ಮಾಡಿಸಿದ ಕೃಷಿ ಅಂದರೆ ಅಣಬೆ ಬೇಸಾಯ (Mushroom Farming)! ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ಅಣಬೆ ಕೃಷಿ, ಅತ್ಯಂತ ಲಾಭದಾಯಕ ಬೇಸಾಯ. ಈ ಕೃಷಿ ಮಾಡುವವರಿಗೆ ಎಕರೆಗಟ್ಟಲೆ ಭೂಮಿ ಬೇಕಿಲ್ಲ. ಭಾರೀ ಹೂಡಿಕೆ ಮಾಡುವ ಅಗತ್ಯ ಇಲ್ಲ. ಕಡಿಮೆ ವೆಚ್ಚದಲ್ಲೇ ಮನೆಯಲ್ಲೇ ಮಶ್ರೂಮ್ ಫಾರ್ಮ್ ಪ್ರಾರಂಭಿಸಬಹುದು!

ತರಕಾರಿಗಳಲ್ಲಿ 'ಡಿ' ವಿಟಮಿನ್ ಹೊಂದಿರುವ ಏಕೈಕ ತರಕಾರಿ ಅಣಬೆ ಎಂಬುದು ವಿಶೇಷ. ಅತ್ಯಧಿಕ ಪ್ರೋಟಿನ್ ಹೊಂದಿದೆ. ಇದು ಅಪ್ಪಟ ಸಾವಯವ ಕೃಷಿಯಾಗಿದೆ. ಮಧುಮೇಹ ಹೊಂದಿರುವವರಿಗೆ ಇದು ಉತ್ತಮ ಆಹಾರ. ಚಿಕ್ಕ ಜಾಗದಲ್ಲೂ ಅಣಬೆ ಬೆಳೆದು ತಿಂಗಳಿಗೆ ಲಕ್ಷಾಂತರ ಆದಾಯ ಗಳಿಸಬಹುದು. ಅಣಬೆ ಬೆಳೆಯುವ ವಿಧಾನ ಹೇಗಿದೆ ನೋಡೋಣ ಬನ್ನಿ.

ಅಣಬೆ ಬೆಳೆಯುವ ವಿಧಾನ

ಅಣಬೆ ಬೆಳೆಯುವ ಕೊಠಡಿಯನ್ನು ಸೋಂಕು ಇಲ್ಲದಂತೆ ಸ್ವಚ್ಛವಾಗಿ ಇಡಬೇಕು. ಶುಚಿತ್ವ ಕಾಪಾಡಬೇಕು.

ಬಳಿಕ ಭತದ ಹುಲ್ಲನ್ನು ಬೇಯಿಸಬೇಕು, ಅದನ್ನು 5 ಕೆಜಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಡಬೇಕು.

ಈ ಬ್ಯಾಗ್​ಗಳಿಗೆ ಬೇವಿನ ಕಡ್ಡಿಗಳಿಂದ 20 ರಂಧ್ರಗಳನ್ನು ಮಾಡಬೇಕು, ಆ ರಂಧ್ರಗಳಿಗೆ ಹತ್ತಿ ಇಡಬೇಕು.

ಬಳಿಕ ಈ ಬ್ಯಾಗ್‌ಗಳನ್ನು ವಿಶೇಷ ರೂಮ್​​ನಲ್ಲಿ ತೂಗು ಹಾಕಬೇಕು. ಅಥವಾ ಫ್ಲಾಟ್​ ಟ್ರೇಗಳಲ್ಲೂ ಇಡಬಹುದು.

ಆದರೆ ಆ ರೂಮ್​ನಲ್ಲಿ ಗಾಳಿ ಬೆಳಕು ಇಲ್ಲದ ರೀತಿ 22 ದಿನಗಳ ಕಾಲ ನೋಡಿಕೊಳ್ಳಬೇಕು.

ಕೊಠಡಿ 28 ಡಿಗ್ರಿ ಉಷ್ಣಾಂಶದಲ್ಲಿ ಇರುವಂತೆ ವ್ಯವಸ್ಥೆ ಮಾಡಬೇಕಿದೆ.

22 ದಿನಗಳ ಬಳಿಕ ಬ್ಯಾಗ್‌ಗಳನ್ನು ಬೇರೆ ರೂಮ್​ಗೆ ಶಿಫ್ಟ್ ಮಾಡಬೇಕು.

ಎಲ್ಲ ಬ್ಯಾಗ್‌ ತೂಗು ಹಾಕಬೇಕು. ಪ್ರತೀ ದಿನವು ರಂಧ್ರದ ಮೂಲಕ ಅಣಬೆ ಬೆಳೆಯಲು ಪ್ರಾರಂಭವಾಗುತ್ತದೆ.

ಎಷ್ಟು ಫಸಲು ಬರಬಹುದು?

ಒಂದು ಕೆಜಿ ಅಣಬೆ ಬೀಜದಲ್ಲಿ 10 ಬ್ಯಾಗ್ ತೂಗು ಹಾಕಬಹುದು.

ಒಂದು ಬ್ಯಾಗ್​ನಿಂದ 40 ದಿನಗಳಲ್ಲಿ ಕನಿಷ್ಠ 2 ಕೆಜಿ ಫಸಲು ಬರಲಿದೆ.

ಗರಿಷ್ಠ 5 ರಿಂದ ಆರು ಕೆಜಿ ಫಸಲು ಬರಲಿದೆ.

ಮಾರುಕಟ್ಟೆಯಲ್ಲಿ ಕೆಜಿ ಅಣಬೆಗೆ 300 ರಿಂದ 350 ರೂ.ಗೆ ಮಾರಾಟ.

ಏನಕ್ಕೆಲ್ಲಾ ಬಳಸಬಹುದು?

ಬೀದಿ ಬದಿ ಕ್ಯಾಂಟೀನ್‌ಗಳು, ಹೋಟೆಲ್‌ಗಳು, ಮನೆಗಳಲ್ಲಿ ಪೌಷ್ಠಿಕ ಆಹಾರವಾಗಿ ಬಳಕೆ ಮಾಡಲಾಗುತ್ತದೆ.

ಒಣ ಅಣಬೆಯ ಪೌಡರ್​ ಅನ್ನು ಅಕ್ಕಿಯೊಂದಿಗೆ ಬೆರೆಸಿ ತಯಾರಿಸಿದ ಅನ್ನವು ಮಕ್ಕಳಿಗೆ ಅದ್ಭುತವಾದ ಪೌಷ್ಠಿಕ ಆಹಾರವಾಗಿದೆ.

ಅಣಬೆಯು ವಿವಿಧ ಆಹಾರದ ತಿನಿಸುಗಳಿಗೆ ಉಪಯೋಗವಾಗುತ್ತದೆ.

ಅಣಬೆ ಬಿರಿಯಾನಿ, ಪರೋಡಾ, ಸಾರು, ಸೂಪ್, ಮಂಚೂರಿ, ಕಟ್​ಲೆಟ್, ಪಲ್ಯ, ಸಲಾಡ್, ಪಿಜ್ಜಾ, ಬರ್ಗರ್​​ಗಳ ತಯಾರಿಕೆ ಮಾಡಲಾಗುತ್ತದೆ.

ಯಾವ ರೋಗಳಿಗೆ ಮನೆ ಮದ್ದು?

ಅಣಬೆ ಸೇವಿಸುವುದರಿಂದ ವಿಟಮಿನ್​ ಡಿ ಯುಕ್ತ, ಆ್ಯಂಟಿ ಆಕ್ಸಿಡೆಂಟ್​, ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.

ಮಾರಕ ಕ್ಯಾನ್ಸರ್​ ವಿರುದ್ಧ ಹೋರಾಡುತ್ತದೆ. ಆಟೋ ಇಮ್ಮೂನ್​ ಕಾಯಿಲೆಗಳನ್ನು ನಿರ್ವಹಿಸಲು ನೆರವಾಗುತ್ತದೆ.

ಆ್ಯಂಟಿ ವೈರಲ್​, ಆ್ಯಂಟಿ ಮೈಕ್ರೋಬಿಯಲ್​, ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಿಸುತ್ತದೆ.

ಕೆಟ್ಟ ಕೊಲೆಸ್ಟ್ರಾಲ್​ ಮತ್ತು ಟ್ರೆಗ್ಲಿಸರೈಡ್ಸ್​ ಅಂಶವನ್ನು ಕಡಿಮೆ ಮಾಡುತ್ತದೆ.

ಅಣಬೆಗೆ ಯಾವ ರೋಗ ಬರಲಿದೆ?

ಹವಾಮಾನ ವೈಪರೀತ್ಯದಿಂದ ಅಣಬೆಗೆ ಗ್ರೀನ್​ ಫಂಗಸ್​ (ಪಾಚಿರೋಗ) ತಗಲುವ ಸಾಧ್ಯತೆ ಹೆಚ್ಚು.

ಆದರೆ ಹಸಿರು ಪಾಚಿಯಾದ ಸ್ಥಳಕ್ಕೆ ಬಾವಿಸ್ಟಿನ್​ ಔಷಧ ಸಿರೀಂಜ್​ ಮೂಲಕ ನೀಡಿದರೆ ನೀಡಿದಲ್ಲಿ ರೋಗ ಗುಣವಾಗುತ್ತದೆ.

ಎಲ್ಲೆಲ್ಲಿ ಅಣಬೆ ಕೃಷಿ ಬಗ್ಗೆ ಮಾಹಿತಿ ಸಿಗುತ್ತದೆ?

ಕೃಷಿ ವಿಶ್ವವಿದ್ಯಾಲಯಗಳಲ್ಲಿ ಆಗಾಗ್ಗೆ ಅಣಬೆ ಕೃಷಿ ತರಬೇತಿ ನೀಡಲಾಗುತ್ತದೆ.

ನಿಮಗೆ ತಿಳಿದಿರುವವರಿಂದಲೂ ಮಾಹಿತಿ ಪಡೆದುಕೊಳ್ಳಬಹುದು.

ಯೂಟ್ಯೂಬ್​ಗಳಲ್ಲೂ ಅಣಬೆ ಬೇಸಾಯ ಮಾಡಿದವರು ಮಾಹಿತಿ ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ