Tomato Pickle Recipe: ಟೊಮೆಟೊ ಉಪ್ಪಿನಕಾಯಿ ಒಂದಿದ್ರೆ, ಸಾರೇ ಬೇಕಿಲ್ಲ.. ಬಾಯಿ ಚಪ್ಪರಿಸಿ ತಿನ್ನಬಹುದು; ಇಲ್ಲಿದೆ ನೋಡಿ ನಾಟಿ ರೆಸಿಪಿ..
Oct 22, 2022 04:18 PM IST
ಟೊಮೆಟೊ ಉಪ್ಪಿನಕಾಯಿ ಒಂದಿದ್ರೆ, ಸಾರೇ ಬೇಕಿಲ್ಲ.. ಬಾಯಿ ಚಪ್ಪರಿಸಿ ತಿನ್ನಬಹುದು; ಇಲ್ಲಿದೆ ನೋಡಿ ನಾಟಿ ರೆಸಿಪಿ..
- ಇದೀಗ ಟೊಮೆಟೊ ಹಣ್ಣಿನಿಂದಲೂ ಉಪ್ಪಿನ ಕಾಯಿಯನ್ನು ನೀವು ಮಾಡಬಹುದು. ಹೊಟ್ಟೆಗೂ ಹಿತ, ಬಾಯಿಗೂ ರುಚಿ. ಕಡಿಮೆ ಸಮಯದಲ್ಲಿ, ಕಡಿಮೆ ಪದಾರ್ಥಗಳನ್ನು ಬಳಸಿಕೊಂಡು, ಫಟಾಫಟ್ ಅಂತ ಈ ರೆಸಿಪಿ ಮಾಡಬಹುದು. ಇಲ್ಲಿದೆ ನೋಡಿ...
ಉಪ್ಪಿನ ಕಾಯಿಗಳಲ್ಲಿ ಹಲವು ವಿಧಗಳಿವೆ. ಯಾವುದೇ ಪದಾರ್ಥ ಹಿಡಿದರೂ ಅದರಿಂದ ಉಪ್ಪಿನಕಾಯಿ ಮಾಡಬಹುದು. ಆದರೆ, ಥಟ್ ಅಂತ ಹೇಳುವುದಾದರೆ ಎಲ್ರಿಗೂ ಮಾವಿನ ಕಾಯಿ ಮತ್ತು ನಿಂಬೆ ಕಾಯಿ ನೆನಪಿಗೆ ಬರುತ್ತದೆ. ಇತ್ತೀಚೆಗಷ್ಟೇ ಈರುಳ್ಳಿ ಉಪ್ಪಿನಕಾಯಿ ಮಾಡುವುದನ್ನು ಓದಿ ಅದರ ರುಚಿ ನೋಡಿದ್ದೀರಿ. ಇದೀಗ ಟೊಮೆಟೊ ಹಣ್ಣಿನಿಂದಲೂ ಉಪ್ಪಿನ ಕಾಯಿಯನ್ನು ನೀವು ಮಾಡಬಹುದು. ಹೊಟ್ಟೆಗೂ ಹಿತ, ಬಾಯಿಗೂ ರುಚಿ. ಕಡಿಮೆ ಸಮಯದಲ್ಲಿ, ಕಡಿಮೆ ಪದಾರ್ಥಗಳನ್ನು ಬಳಸಿಕೊಂಡು, ಫಟಾಫಟ್ ಅಂತ ಈ ರೆಸಿಪಿ ಮಾಡಬಹುದು. ಇಲ್ಲಿದೆ ನೋಡಿ...
ಟೊಮೆಟೊ ಉಪ್ಪಿನಕಾಯಿಗೆ ಬೇಕಿರುವ ಸಾಮಾಗ್ರಿ..
30 ಗ್ರಾಂ ಹುಣಸೆಹಣ್ಣು
1 ಕೆಜಿ ಒಳ್ಳೆಯ ಟೊಮೆಟೊ ಹಣ್ಣು
1 ಟೀ ಚಮಚ ಮೆಂತ್ಯೆ ಕಾಳು
1 ಟೀ ಚಮಚ ಸಾಸಿವೆ ಪುಡಿ
200 ಗ್ರಾಂ ಎಣ್ಣೆ
1 ಟೀ ಚಮಚ ಸಾಸಿವೆ
10 ತುಂಡು ಬೆಳ್ಳುಳ್ಳಿ
50 ಗ್ರಾಂ ಕೆಂಪು ಮೆಣಸಿನ ಖಾರದಪುಡಿ
ಉಪ್ಪು
1 ಟೀ ಚಮಚ ಇಂಗು..
ಟೊಮೆಟೊ ಉಪ್ಪಿನಕಾಯಿ ಮಾಡುವ ವಿಧಾನ..
ಇಡ್ಲಿ ಪಾತ್ರೆಯಲ್ಲಿ ಟೊಮೆಟೊ ಮತ್ತು ಹುಣಸೆ ಹಣ್ಣನ್ನು ಒಂದು ಹಂತಕ್ಕೆ ಮೆತ್ತಗಾಗುವವರೆಗೂ ಬೇಯಿಸಿಕೊಳ್ಳಿ. ಬಳಿಕ ಕೆಲ ನಿಮಿಷಗಳ ಬಳಿಕ ಗ್ಯಾಸ್ ಆಫ್ ಮಾಡಿ, ಬೇಯಿಸಿದ ಟೊಮೆಟೊದ ಸಿಪ್ಪೆ ಬಿಡಿಸಿ, ಹಾಗಡ ಬಿಡಿಸಿದ ಸಿಪ್ಪೆಯನ್ನು ಒಂದು ಪಾತ್ರೆಗೆ ಹಾಕಿ, ಮನೆಯಲ್ಲಿ ಕಟ್ಟಿಗೆ ಹುಟ್ಟು ಇದ್ದರೆ ಅದರಿಂದ ಚೆನ್ನಾಗಿ ಸ್ಮ್ಯಾಷ್ ಮಾಡಿ. ಬಳಿಕ ಅದೇ ಪಾತ್ರೆಗೆ ಸಿಪ್ಪೆ ಸುಲಿದ ಟೊಮೆಟೊ ಮತ್ತು ಹುಣಸೆ ಹಣ್ಣನ್ನು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ, ನೋಡಲು ಅದು ಸಂಪೂರ್ಣ ಗ್ರೇವಿಯಂಥಾಗಲಿ. ಇತ್ತ ಮೆಂತ್ಯೆ ಕಾಳು ಮತ್ತು ಸಾಸಿವೆಯನ್ನು ಹುರಿದುಕೊಂಡು ಮಿಕ್ಸರ್‌ನಲ್ಲಿ ಪೌಡರ್ ಮಾಡಿಟ್ಟುಕೊಳ್ಳಿ.
ಅದಾದ ಮೇಲೆ ಬಳಿಕ ಗ್ಯಾಸ್ ಹೊತ್ತಿಸಿ ಅದರ ಮೇಲೆ ಒಂದು ಕಡಾಯಿ ಇಟ್ಟು ಎಣ್ಣೆ ಸುರಿಯಿರಿ, ಎಣ್ಣೆ ಕಾದ ನಂತರ ಅದಕ್ಕೆ ಸಾಸಿವೆ ಕಾಳು ಸೇರಿಸಿ, ಸಾಸಿವೆ ಸಿಡಿಯುತ್ತಿದ್ದಂತೆ, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿಯನ್ನು ಹಾಕಿ. ಹಸಿ ವಾಸನೆ ಹೋಗುವವರೆಗೂ ಫ್ರೈ ಮಾಡಿ. ಬಳಿಕ ಅದಕ್ಕೆ ಕೆಂಪು ಮೆಣಸಿನ ಖಾರದ ಪುಡಿಯನ್ನು ಸುರಿಯಿರಿ.
ಚೆನ್ನಾಗಿ ಬಾಡಿಸಿ, ಅದಕ್ಕೆ ಬೌಲ್‌ನಲ್ಲಿ ಚೆನ್ನಾಗಿ ಸ್ಮ್ಯಾಷ್ ಮಾಡಿದ ಟೊಮೊಟೊ ಗ್ರೇವಿಯನ್ನು ಸುರಿಯಿರಿ. ಬಳಿಕ ಅದಕ್ಕೆ ಮಿಕ್ಸರ್‌ನಲ್ಲಿ ಪೌಡರ್ ಮಾಡಿದ ಪುಡಿಯನ್ನು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು, ಇಂಗು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಗ್ರೇವಿ ಚೆನ್ನಾಗಿ ಫ್ರೈ ಆಗಿ ಅದು ಎಣ್ಣೆ ಬಿಡುವವರೆಗೂ ಬೇಯಿಸಿ. ಯಾವುದೇ ಕಾರಣಕ್ಕೂ ನೀರು ಸೇರಿಸಬೇಡಿ. ಕೆಲ ನಿಮಿಷದ ಬಳಿಕ ಟೊಮೆಟೊ ಉಪ್ಪಿನಕಾಯಿ ಸಿದ್ಧವಾಗುತ್ತದೆ. ಹಾಗೆ ಸಿದ್ಧವಾದ ಉಪ್ಪಿನಕಾಯಿಯನ್ನು ಗಾಜಿನ ಬಾಟಲ್‌ನಲ್ಲಿ ಹಾಕಿಡಿ. ಫ್ರಿಡ್ಜ್‌ನಲ್ಲಿಯೂ ಅದನ್ನು ನೀವು ಸಂರಕ್ಷಿಸಬಹುದು.
ಈ ರೆಸಿಪಿಯನ್ನು ನೀವು ಬಿಸಿ ಅನ್ನದ ಜತೆಗೆ ಸೇವಿಸಬಹುದು. ಇದೊಂದಿದ್ದರೆ, ನಿಮಗೆ ಸಾಂಬರ್‌ನ ಅವಶ್ಯಕತೆಯೂ ಬೀಳುವುದಿಲ್ಲ.
ಇನ್ನೂ ಕೆಲ ರೆಸಿಪಿಗಳು ಇಲ್ಲಿವೆ ಟ್ರೈ ಮಾಡಿ…
ವಿಭಾಗ