logo
ಕನ್ನಡ ಸುದ್ದಿ  /  ಜೀವನಶೈಲಿ  /  Healthy Recipes: ತೂಕ ಇಳಿಸುವವರಿಗೆ, ಮಧುಮೇಹಿಗಳಿಗೆ ಉತ್ತಮ ಬ್ರೇಕ್​​ಫಾಸ್ಟ್​​​​...ಜೋಳದ ಇಡ್ಲಿ ಮಾಡೋದು ಹೇಗೆ ನೋಡಿ

Healthy Recipes: ತೂಕ ಇಳಿಸುವವರಿಗೆ, ಮಧುಮೇಹಿಗಳಿಗೆ ಉತ್ತಮ ಬ್ರೇಕ್​​ಫಾಸ್ಟ್​​​​...ಜೋಳದ ಇಡ್ಲಿ ಮಾಡೋದು ಹೇಗೆ ನೋಡಿ

HT Kannada Desk HT Kannada

Jul 31, 2022 10:25 AM IST

ಜೋಳದ ಇಡ್ಲಿ ರೆಸಿಪಿ ( ಫೋಟೋ ಕೃಪೆ: ಪಿಕ್ಸಬೇ, ಚೈತ್ರಾಸ್​​ ಅಭಿರುಚಿ)

    • ಆರೋಗ್ಯಕ್ಕೆ ಉತ್ತಮವಾದ ಅನೇಕ ಆಹಾರ ಪದಾರ್ಥಗಳಿವೆ. ಅದರಲ್ಲಿ ಜೋಳ ಕೂಡಾ ಒಂದು. ಜೋಳ ಎಂದರೆ ಸಾಮಾನ್ಯವಾಗಿ ನಮಗೆ ನೆನಪಾಗುವುದು ಜೋಳದ ರೊಟ್ಟಿ. ಉತ್ತರ ಕರ್ನಾಟಕದ ಜನರು ಬಹುತೇಕ ಪ್ರತಿ ದಿನ ಜೋಳದ ರೊಟ್ಟಿ ತಿನ್ನುತ್ತಾರೆ. ಆದರೆ ಜೋಳದ ಹಿಟ್ಟಿನಿಂದ ರೊಟ್ಟಿ ಮಾತ್ರವಲ್ಲ, ಇಡ್ಲಿ ಕೂಡಾ ಮಾಡಬಹುದು.
ಜೋಳದ ಇಡ್ಲಿ ರೆಸಿಪಿ ( ಫೋಟೋ ಕೃಪೆ: ಪಿಕ್ಸಬೇ, ಚೈತ್ರಾಸ್​​ ಅಭಿರುಚಿ)
ಜೋಳದ ಇಡ್ಲಿ ರೆಸಿಪಿ ( ಫೋಟೋ ಕೃಪೆ: ಪಿಕ್ಸಬೇ, ಚೈತ್ರಾಸ್​​ ಅಭಿರುಚಿ)

ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿ ಎಂಬ ಮಾತಿನಂತೆ ನಮ್ಮ ಜೀವನಶೈಲಿ ಚೆನ್ನಾಗಿದ್ದರೆ ಆರೋಗ್ಯ ಕೂಡಾ ಚೆನ್ನಾಗಿರುತ್ತದೆ. ಆದರೆ ಬಾಯಿಗೆ ರುಚಿ ಎನಿಸುವ ಆಹಾರ ತಿನ್ನುವುದು, ವ್ಯಾಯಾಮ ಮಾಡದಿರುವುದು ಸೇರಿದಂತೆ ನಮ್ಮ ಜೀವನಶೈಲಿ ಸರಿ ಇಲ್ಲದಿದ್ದರೆ ನಾನಾ ಕಾಯಿಲೆಗಳನ್ನು ನಾವೇ ಮೈ ಮೇಲೆ ಎಳೆದುಕೊಂಡಂತೆ ಆಗುತ್ತದೆ.

ಟ್ರೆಂಡಿಂಗ್​ ಸುದ್ದಿ

Sweating Benefits: ಸೆಖೆ ಹೆಚ್ಚಾಗಿ ಮೈಯೆಲ್ಲಾ ಬೆವರುತ್ತೆ ಅಂತಾ ಬೇಸರ ಮಾಡ್ಬೇಡಿ; ಬೆವರುವುದರಿಂದ ದೇಹಕ್ಕೆ ಇಷ್ಟೆಲ್ಲಾ ಲಾಭವಿದೆ

ಗುಡ್‌ಟಚ್‌, ಬ್ಯಾಡ್‌ಟಚ್‌ ಗೊತ್ತು, ವರ್ಚ್ಯುಯಲ್‌ ಟಚ್‌ ಕುರಿತು ಎಚ್ಚರಿಸಿದ ಕೋರ್ಟ್‌; ಈ ಟಚ್ಚಲಿ ಏನೋ ಇದೆ!

Chicken Recipe: ಢಾಬಾ ಸ್ಟೈಲ್‌ ಚಿಕನ್‌ ಗ್ರೇವಿ ನಿಮಗೂ ಇಷ್ಟನಾ? ಹಾಗಿದ್ರೆ ಇದನ್ನು ಮನೆಯಲ್ಲೇ ಮಾಡಿ ತಿನ್ನಿ, ರೆಸಿಪಿ ಇಲ್ಲಿದೆ

ಮುಖದ ಮೊಡವೆ ಕಲೆಗಳನ್ನು ಮಾಯವಾಗಿಸುತ್ತೆ ಪುದೀನಾ ಎಲೆಗಳು; ಈ ರೀತಿ ಬಳಸಿ ನೋಡಿ

ಆರೋಗ್ಯಕ್ಕೆ ಉತ್ತಮವಾದ ಅನೇಕ ಆಹಾರ ಪದಾರ್ಥಗಳಿವೆ. ಅದರಲ್ಲಿ ಜೋಳ ಕೂಡಾ ಒಂದು. ಜೋಳ ಎಂದರೆ ಸಾಮಾನ್ಯವಾಗಿ ನಮಗೆ ನೆನಪಾಗುವುದು ಜೋಳದ ರೊಟ್ಟಿ. ಉತ್ತರ ಕರ್ನಾಟಕದ ಜನರು ಬಹುತೇಕ ಪ್ರತಿ ದಿನ ಜೋಳದ ರೊಟ್ಟಿ ತಿನ್ನುತ್ತಾರೆ. ಆದರೆ ಜೋಳದ ಹಿಟ್ಟಿನಿಂದ ರೊಟ್ಟಿ ಮಾತ್ರವಲ್ಲ, ಇಡ್ಲಿ ಕೂಡಾ ಮಾಡಬಹುದು. ಜೋಳದ ಇಡ್ಲಿ ರೆಸಿಪಿಯನ್ನು ನಿಮಗಾಗಿ ಚೈತ್ರ ಹೇಳಿಕೊಡುತ್ತಿದ್ದಾರೆ.

ಬೇಕಾಗುವ ಸಾಮಗ್ರಿಗಳು

ಜೋಳದ ಹಿಟ್ಟು - 3 ಕಪ್

ಉದ್ದಿನ ಬೇಳೆ - 1 ಕಪ್

ಅವಲಕ್ಕಿ - 1 ಕಪ್

ಮೆಂತ್ಯ - 1 ಟೀ ಚಮಚ

ಎಣ್ಣೆ - ಸ್ವಲ್ಪ

ಉಪ್ಪು - ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ಒಂದು ಪಾತ್ರೆಗೆ ಉದ್ದಿನ ಬೇಳೆ, ಅವಲಕ್ಕಿ, ಮೆಂತ್ಯ ಸೇರಿಸಿ ನೀರಿನಿಂದ 2-3 ಬಾರಿ ತೊಳೆಯಿರಿ

ಮತ್ತೊಮ್ಮೆ ನೀರು ಸೇರಿಸಿ ಸುಮಾರು 8 ಗಂಟೆಗಳ ಕಾಲ ನೆನೆಯಲು ಬಿಡಿ

8 ಗಂಟೆಗಳ ನಂತರ ಮತ್ತೊಮ್ಮೆ ಉದ್ದಿನ ಬೇಳೆ ಹಾಗೂ ಅವಲಕ್ಕಿ ಮಿಶ್ರಣವನ್ನು ತೊಳೆದು ಜಾರ್​ಗೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ

ರುಬ್ಬಿದ ಮಿಶ್ರಣಕ್ಕೆ ಜೋಳದ ಹಿಟ್ಟನ್ನು ಸೇರಿಸಿ ಗಂಟುಗಳು ಇಲ್ಲದಂತೆ ಚೆನ್ನಾಗಿ ಮಿಕ್ಸ್ ಮಾಡಿ

ಇಡ್ಲಿ ಹಿಟ್ಟಿನ ಹದ ನೋಡಿಕೊಂಡು ನೀರನ್ನು ಅಡ್ಜೆಸ್ಟ್ ಮಾಡಿಕೊಳ್ಳಿ

ಹಿಟ್ಟಿಗೆ ಉಪ್ಪು ಸೇರಿಸಿ ಮಿಕ್ಸ್ ಮಾಡಿ 8 ಗಂಟೆಗಳ ಕಾಲ ಫರ್ಮೆಂಟ್ ಆಗಲು ಬಿಡಿ ( ಉಪ್ಪನ್ನು ಮರುದಿನ ಇಡ್ಲಿ ಮಾಡುವಾಗ ಕೂಡಾ ಸೇರಿಸಬಹುದು)

ಇಡ್ಲಿ ಪಾತ್ರೆಗೆ ಎಣ್ಣೆ ಸವರಿ ಒಂದೊಂದು ಸೌಟು ಹಿಟ್ಟನ್ನು ಸೇರಿಸಿ ಹಬೆಯಲ್ಲಿ ಬೇಯಿಸಿ

ಇಡ್ಲಿ ಪಾತ್ರೆಗಳಿಂದ ನಿಧಾನವಾಗಿ ಇಡ್ಲಿ ಬಿಡಿಸಿ, ಚಟ್ನಿ ಅಥವಾ ನಿಮಗಿಷ್ಟವಾದ ಡಿಪ್ ಜೊತೆ ಸವಿಯಬಹುದು.

ಜೋಳ ಆರೋಗ್ಯಕ್ಕೆ ಬಹಳ ಉತ್ತಮವಾದ ಧಾನ್ಯ. ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿದೆ. ಜೊತೆಗೆ ಇದು ಗ್ಲೂಟನ್ ಫ್ರೀ ಆಗಿರುವುದರಿಂದ ಯಾವುದೇ ಭಯವಿಲ್ಲದೆ ಇದನ್ನು ಬಳಸಬಹುದು.

ಜೋಳದ ಉಪಯೋಗಗಳು

ಜೋಳ ತಿನ್ನುವುದರಿಂದ ದೇಹಕ್ಕೆ ನಾನಾ ರೀತಿಯ ಉಪಯೋಗಗಳಿವೆ. ಸಣ್ಣ ಆಗಲು ಬಯಸುವವರು ಚಪಾತಿ ಬದಲಿಗೆ ಜೋಳದ ಹಿಟ್ಟಿನಿಂದ ಯಾವುದೇ ಆಹಾರ ಸೇವಿಸಿದರೆ ತೂಕ ಇಳಿಸಲು ಸಹಾಯಕಾರಿ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಜೋಳ, ಮದುಮೇಹಿಗಳಿಗೆ ಕೂಡಾ ಉತ್ತಮ ಆಹಾರ. ಇದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.

ಜೋಳದಲ್ಲಿ ಮೆಗ್ನೀಷಿಯಂ, ಕ್ಯಾಲ್ಸಿಯಂ, ವಿಟಮಿನ್ ಬಿ3 ಹಾಗೂ ಇನ್ನಿತರ ಪೋಷಕಾಂಶಗಳಿವೆ. ಇದು ಮೂಳೆಗಳನ್ನು ಬಲಪಡಿಸುವುದಲ್ಲದೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಜೋಳದ ಧಾನ್ಯಗಳು ಕಬ್ಬಿಣಾಂಶ, ಮೆಗ್ನೀಶಿಯಂ, ಕಾಪರ್, ಕ್ಯಾಲ್ಸಿಯಂ, ಜಿಂಕ್, ವಿಟಮಿನ್ ಬಿ3 ಮುಂತಾದ ವಿಟಮಿನ್ , ಮಿನರಲ್‍ಗಳು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುವುದರಿಂದ ಅವು ದೇಹದ ಮೂಳೆಗಳ ಆರೋಗ್ಯಕ್ಕೂ ಉತ್ತಮ. ಜೋಳ ಸೇವನೆಯಿಂದ ಚಯಾಪಚಯ ಕ್ರಿಯೆ ಕೂಡಾ ಉತ್ತಮಗೊಳ್ಳುತ್ತದೆ. ಜೊತೆಗೆ ಮಲಬದ್ಧತೆ ಕೂಡಾ ನಿವಾರಣೆಯಾಗುತ್ತದೆ.

ಹೆಚ್ಚಿನ ಮಾಹಿತಿಗೆ ಈ ಲಿಂಕ್​​​​ ನೋಡಿ

https://www.youtube.com/watch?v=6pIpN6w6DHc

ವಿಭಾಗ

    ಹಂಚಿಕೊಳ್ಳಲು ಲೇಖನಗಳು