logo
ಕನ್ನಡ ಸುದ್ದಿ  /  ಜೀವನಶೈಲಿ  /  Ganesh Chaturthi Prasadam List: ಮೋದಕ, ಲಡ್ಡು ಮಾತ್ರವಲ್ಲ...ಗಣೇಶ ಪ್ರಸನ್ನನಾಗಲು ಯಾವೆಲ್ಲಾ ನೈವೇದ್ಯ ಇಡಬೇಕು ನೋಡಿ

Ganesh Chaturthi Prasadam List: ಮೋದಕ, ಲಡ್ಡು ಮಾತ್ರವಲ್ಲ...ಗಣೇಶ ಪ್ರಸನ್ನನಾಗಲು ಯಾವೆಲ್ಲಾ ನೈವೇದ್ಯ ಇಡಬೇಕು ನೋಡಿ

HT Kannada Desk HT Kannada

Aug 24, 2022 04:57 PM IST

google News

ಗಣೇಶನಿಗೆ ಪ್ರಿಯವಾದ ನೈವೇದ್ಯಗಳು

    • ಇತ್ತೀಚೆಗೆ ಮಂಗಳೂರಿನ ಭಕ್ತೆಯೊಬ್ಬರು ಕೃಷ್ಣ ಜನ್ಮಾಷ್ಟಮಿಗೆ 100 ಕ್ಕೂ ಹೆಚ್ಚು ವಿವಿಧ ಬಗೆಯ ನೈವೇದ್ಯಗಳನ್ನು ತಯಾರಿಸಿ ಕೃಷ್ಣನಿಗೆ ಅರ್ಪಿಸಿದ್ದ ಸುದ್ದಿ ವೈರಲ್‌ ಆಗಿತ್ತು. ಹಾಗೇ ಗಣೇಶನ ಭಕ್ತರು ಕೂಡಾ ಆತನಿಗೆ ಪ್ರಿಯವಾದ ಎಲ್ಲಾ ತಿಂಡಿಗಳನ್ನೂ ಮಾಡಿ ನೈವೇದ್ಯ ಅರ್ಪಿಸುತ್ತಾರೆ. ಕೆಲವರು ಗಣೇಶನಿಗೆ ನಾನಾ ರೀತಿಯ ನೈವೇದ್ಯಗಳನ್ನು ಮಾಡಿದರೆ, ಇನ್ನೂ ಕೆಲವರು ಭಕ್ತಿಯಿಂದ ಒಂದೆರಡು ನೈವೇದ್ಯ ತಯಾರಿಸುತ್ತಾರೆ.
ಗಣೇಶನಿಗೆ ಪ್ರಿಯವಾದ ನೈವೇದ್ಯಗಳು
ಗಣೇಶನಿಗೆ ಪ್ರಿಯವಾದ ನೈವೇದ್ಯಗಳು (PC: Unsplash, Freepik)

ಗಣೇಶ ಹಬ್ಬಕ್ಕೆ ಇನ್ನು ವಾರವಷ್ಟೇ ಬಾಕಿ ಇದೆ. ಈಗಾಗಲೇ ಜನರು ಹಬ್ಬಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಗಣೇಶನನ್ನು ಕೂರಿಸುವ ಪೀಠ, ಅಲಂಕಾರ, ಗಣೇಶನ ಮೂರ್ತಿ, ನೈವೇದ್ಯ ಎಲ್ಲದರ ಬಗ್ಗೆ ಪ್ರಿಪೇರ್‌ ಆಗುತ್ತಿದ್ದಾರೆ. ಇಡೀ ದೇಶದಲ್ಲೇ ಎಲ್ಲಾ ಹಿಂದೂಗಳ ಮನೆಯಲ್ಲಿ ಗಣೇಶನನ್ನು ಪೂಜಿಸಲಾಗುತ್ತದೆ. ಆ ವಿಶೇಷ ದಿನದಂದು ಗಣೇಶನಿಗೆ ಇಷ್ಟವಾದ ನೈವೇದ್ಯಗಳನ್ನು ಮಾಡುತ್ತಾರೆ.

ಇತ್ತೀಚೆಗೆ ಮಂಗಳೂರಿನ ಭಕ್ತೆಯೊಬ್ಬರು ಕೃಷ್ಣ ಜನ್ಮಾಷ್ಟಮಿಗೆ 100 ಕ್ಕೂ ಹೆಚ್ಚು ವಿವಿಧ ಬಗೆಯ ನೈವೇದ್ಯಗಳನ್ನು ತಯಾರಿಸಿ ಕೃಷ್ಣನಿಗೆ ಅರ್ಪಿಸಿದ್ದ ಸುದ್ದಿ ವೈರಲ್‌ ಆಗಿತ್ತು. ಹಾಗೇ ಗಣೇಶನ ಭಕ್ತರು ಕೂಡಾ ಆತನಿಗೆ ಪ್ರಿಯವಾದ ಎಲ್ಲಾ ತಿಂಡಿಗಳನ್ನೂ ಮಾಡಿ ನೈವೇದ್ಯ ಅರ್ಪಿಸುತ್ತಾರೆ. ಕೆಲವರು ಗಣೇಶನಿಗೆ ನಾನಾ ರೀತಿಯ ನೈವೇದ್ಯಗಳನ್ನು ಮಾಡಿದರೆ, ಇನ್ನೂ ಕೆಲವರು ಭಕ್ತಿಯಿಂದ ಒಂದೆರಡು ನೈವೇದ್ಯ ತಯಾರಿಸುತ್ತಾರೆ. ವಿಘ್ನ ನಿವಾರಕನಿಗೆ ಯಾವ ನೈವೇದ್ಯ ಇಷ್ಟ...ಯಾವ ನೈವೇದ್ಯಗಳನ್ನು ಇಟ್ಟರೆ ಗಣಪತಿ ಪ್ರಸನ್ನನಾಗಿ ವರ ನೀಡುತ್ತಾನೆ ಎಂಬುದನ್ನು ತಿಳಿಯೋಣ.

ಲಾಡು

ನೀವು ಗಣೇಶನ ಮೂರ್ತಿ ಅಥವಾ ಫೋಟೋಗಳನ್ನು ನೋಡಿದರೆ ವಕ್ರತುಂಡನ ಕೈಯಲ್ಲಿ ಲಾಡುಗಳನ್ನು ನೋಡಬಹುದು. ಗಣೇಶನಿಗೆ ಲಾಡು ಎಂದರೆ ಬಹಳ ಇಷ್ಟ. ಆದ್ದರಿಂದ ಈ ಬಾರಿ ನೀವು ನಿಮ್ಮ ಕೈಯಾರೆ ತಯಾರಿಸಿದ ಲಾಡುವನ್ನು ಗಣೇಶನ ನೈವೇದ್ಯಕ್ಕೆ ಇಡಿ. ಒಂದು ವೇಳೆ ತಯಾರಿಸಲು ಸಾಧ್ಯವಾಗದಿದ್ದರೆ ಒಳ್ಳೆಯ ಅಂಗಡಿಯಿಂದ ಕೊಂಡು ತಂದು ನೈವೇದ್ಯಕ್ಕೆ ಇಟ್ಟು ಏಕದಂತನ ಕೃಪಾಕಟಾಕ್ಷ ಪಡೆಯಿರಿ.

ಪಾಯಸ

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಗಣೇಶನು ಪಾರ್ವತಿ ದೇವಿ ಮಾಡಿದ ಪಾಯಸವನ್ನು ತಿನ್ನಲು ಇಷ್ಟಪಡುತ್ತಾನೆ. ಆದ್ದರಿಂದ ನೀವೂ ಕೂಡಾ ಮನೆಯಲ್ಲಿ ವಕ್ರತುಂಡನಿಗೆ ಕಡ್ಲೆಬೇಳೆ ಪಾಯಸ, ಹೆಸರುಬೇಳೆ ಪಾಯಸ, ಗಸಗಸೆ ಪಾಯಸ, ಕೊಬ್ಬರಿ ಪಾಯಸ ಅಥವಾ ಅಕ್ಕಿ ಪಾಯಸ ಮಾಡಿ ನೈವೇದ್ಯ ಅರ್ಪಿಸಿ.

ಬಾಳೆಹಣ್ಣು, ತೆಂಗಿನಕಾಯಿ

ಗಣೇಶನಿಗೆ ಯಾವಾಗಲೂ ಬಾಳೆಹಣ್ಣಿನ ಪ್ರಸಾದ ತಿನ್ನಲು ಇಷ್ಟ. ಆದ್ದರಿಂದ ನೀವು ಗಣೇಶನ ಪ್ರಸಾದದಲ್ಲಿ ಬಾಳೆಹಣ್ಣನ್ನು ಸೇರಿಸಿದರೆ ಉತ್ತಮ. ತೆಂಗಿನಕಾಯಿ ಕೂಡಾ ತುಂಬಾ ಒಳ್ಳೆಯದು. ಹಾಗಾಗಿ ಗಣೇಶನಿಗೆ ತಯಾರಿಸುವ ಪ್ರಸಾದದಲ್ಲಿ ಇವೆರಡೂ ಇರಲಿ. ಸಾಧ್ಯವಾದರೆ ಬಾಳೆಹಣ್ಣು, ತೆಂಗಿನತುರಿ, ಬೆಲ್ಲ ಸೇರಿಸಿ ರಸಾಯನ ತಯಾರಿಸಿ.

ಮೋದಕ

ಗಣೇಶ ಮೋದಕಪ್ರಿಯ. ಪ್ರತಿ ಗಣೇಶ ಚತುರ್ಥಿಗೆ ಬಹುತೇಕ ಮನೆಗಳಲ್ಲಿ ಮೋದಕ ತಯಾರಿಸುತ್ತಾರೆ. ಖೋವಾ ಮೋದಕ, ಅಕ್ಕಿಹಿಟ್ಟಿನ ಮೋದಕ, ಡ್ರೈ ಫ್ರೂಟ್ಸ್‌ ಮೋದಕ, ಚಾಕೊಲೇಟ್‌ ಮೋದಕ, ರವೆ ಮೋದಕ ಹೀಗೆ ನಾನಾ ರೀತಿಯ ಮೋದಕಗಳನ್ನು ತಯಾರಿಸಿ ಅರ್ಪಿಸಲಾಗುತ್ತದೆ. ಹಬೆಯಲ್ಲಿ ಬೇಯಿಸಿದ, ಕರಿದ ಮೋದಕಗಳನ್ನು ಇಡುತ್ತಾರೆ.

ಕಡುಬು-ಕಜ್ಜಾಯ

ಗಣೇಶನಿಗೆ ಕರಿಗಡುಬು ಹಾಗು ಕಜ್ಜಾಯ ಕೂಡಾ ಬಹಳ ಇಷ್ಟ. ಆದ್ದರಿಂದ ನೀವು ಗಣಪತಿಗೆ ಕಡುಬು ಹಾಗೂ ಕಜ್ಜಾಯ ತಯಾರಿಸಲು ಪ್ರಯತ್ನಿಸಿ.

ರವೆ ಉಂಡೆ

ಸಕ್ಕರೆ, ರವೆ, ಹಾಲು, ಕೊಬ್ಬರಿ ಬಳಸಿ ತಯಾರಿಸಲಾಗುವ ರವೆಉಂಡೆ ಕೂಡಾ ಗಣಪತಿಗೆ ಬಹಳ ಇಷ್ಟ. ಇದನ್ನೂ ಕೂಡಾ ನೀವು ನೈವೇದ್ಯವಾಗಿ ಇಡಬಹುದು.

ಇದರೊಂದಿಗೆ ಹಸಿ ತಂಬಿಟ್ಟು, ಎಳ್ಳು ಉಂಡೆ, ಹೋಳಿಗೆ, ಸಿಹಿ ಪೊಂಗಲ್‌ ಕೂಡಾ ಇಡಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ