78ನೇ ಸ್ವಾತಂತ್ರ್ಯೋತ್ಸವಕ್ಕೆ ಮಹೀಂದ್ರಾದಿಂದ ಭರ್ಜರಿ ಗಿಫ್ಟ್: ಬಹುನಿರೀಕ್ಷಿತ ಥಾರ್ ROXX ಬಿಡುಗಡೆ
Aug 15, 2024 11:04 AM IST
ಹೊಸ ಮಹೀಂದ್ರ ಥಾರ್ ರಾಕ್ಸ್ 5
ಹೊಸ ಮಹೀಂದ್ರ ಥಾರ್ ರಾಕ್ಸ್ 5 ಡೋರ್ ಎಸ್‌ಯುವಿ ಬೆಲೆಯನ್ನು ನಟ-ನಿರ್ದೇಶಕ ಮತ್ತು ಗಾಯಕ ಫರ್ಹಾನ್ ಅಖ್ತರ್ ಕೊಚ್ಚಿಯಲ್ಲಿ ನಡೆದ ಹೈ-ಆಕ್ಟೇನ್ ಸಂಗೀತ ಕಚೇರಿಯಲ್ಲಿ ಬಹಿರಂಗಪಡಿಸಿದರು. ಹೊಸ ಥಾರ್ ರಾಕ್ಸ್ ಕಪ್ಪು ಮತ್ತು ಬಿಳಿ ಮತ್ತು ಇತರ ಆಕರ್ಷಕ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. (ವರದಿ: ವಿನಯ್ ಭಟ್)
ಸುದೀರ್ಘ ಕಾಯುವಿಕೆಯ ನಂತರ, ಮಹೀಂದ್ರಾ ಅಂತಿಮವಾಗಿ ತನ್ನ ಹೊಸ 5 ಡೋರ್ನ ಥಾರ್ ಅನ್ನು 78 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಭಾರತದಲ್ಲಿ ಬಿಡುಗಡೆ ಮಾಡುವ ಮೂಲಕ ಗ್ರಾಹಕರ ಆಸೆಗಳನ್ನು ಪೂರೈಸಿದೆ. ಹೊಸ ಮಹೀಂದ್ರ ಥಾರ್ ರಾಕ್ಸ್ ಐಷಾರಾಮಿ, ಕಾರ್ಯಕ್ಷಮತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ವಿಶ್ವ ದರ್ಜೆಯ NHV (ಶಬ್ದ, ಕಂಪನ ಮತ್ತು ಕಠಿಣತೆ) ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಹೊಸ ಮಹೀಂದ್ರ ಥಾರ್ ಅನ್ನು 3 ಡೋರ್ ಮಾದರಿಗೆ ಹೋಲಿಸಿದರೆ ಇದರಲ್ಲಿ ಅತ್ಯಂತ ವಿಶೇಷ ವೈಶಿಷ್ಟ್ಯಗಳೊಂದಿಗೆ ಶಕ್ತಿಯುತ ಎಂಜಿನ್ ಅನ್ನು ಹೊಂದಿದೆ, ಇದರಿಂದಾಗಿ ಇದು ಗ್ರಾಹಕರ ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ.
ಬೆಲೆ ಎಷ್ಟಿದೆ ನೋಡಿ
ಬೆಲೆಯ ಬಗ್ಗೆ ಮಾತನಾಡುತ್ತಾ, ಪ್ರಸ್ತುತ ಮಹೀಂದ್ರ ಥಾರ್ ರಾಕ್ಸ್ ಎಸ್‌ಯುವಿಯ ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳಲ್ಲಿ ಲಭ್ಯವಿದೆ. MX1 ಪೆಟ್ರೋಲ್ ಮ್ಯಾನ್ಯುವಲ್ ರಿಯರ್ ವೀಲ್ ಡ್ರೈವ್ ರೂಪಾಂತರದ ಆರಂಭಿಕ ಎಕ್ಸ್ ಶೋರೂಂ ಬೆಲೆ 12.99 ಲಕ್ಷ ರೂಪಾಯಿಗಳು ಮತ್ತು ಡೀಸೆಲ್ ಮ್ಯಾನುವಲ್ ರಿಯರ್ ವೀಲ್ ಡ್ರೈವ್ ರೂಪಾಂತರದ ಎಕ್ಸ್ ಶೋರೂಂ ಬೆಲೆ 13.99 ಲಕ್ಷ ರೂಪಾಯಿಗಳಾಗಿವೆ. 4-ವೀಲ್ ಡ್ರೈವ್ ರೂಪಾಂತರಗಳ ಬೆಲೆ ಕೂಡ ಶೀಘ್ರದಲ್ಲೇ ಬಹಿರಂಗಗೊಳ್ಳಲಿದೆ.
ಹೊಸ ಮಹೀಂದ್ರ ಥಾರ್ ರಾಕ್ಸ್ 5 ಡೋರ್ ಎಸ್‌ಯುವಿ ಬೆಲೆಯನ್ನು ನಟ-ನಿರ್ದೇಶಕ ಮತ್ತು ಗಾಯಕ ಫರ್ಹಾನ್ ಅಖ್ತರ್ ಕೊಚ್ಚಿಯಲ್ಲಿ ನಡೆದ ಹೈ-ಆಕ್ಟೇನ್ ಸಂಗೀತ ಕಚೇರಿಯಲ್ಲಿ ಬಹಿರಂಗಪಡಿಸಿದರು. ಹೊಸ ಥಾರ್ ರಾಕ್ಸ್ ಕಪ್ಪು ಮತ್ತು ಬಿಳಿ ಮತ್ತು ಇತರ ಆಕರ್ಷಕ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ.
ಹೊಸ ಮಹೀಂದ್ರ ಥಾರ್ ರಾಕ್ಸ್
ಹೊಸ ಮಹೀಂದ್ರ ಥಾರ್ ರಾಕ್ಸ್ ಎಸ್‌ಯುವಿಯ ನೋಟ ಮತ್ತು ವೈಶಿಷ್ಟ್ಯಗಳ ಬಗ್ಗೆ ಮಾತನಾಡುತ್ತಾ, ಇದು ಹೊಸ ಫ್ರಂಟ್ ಗ್ರಿಲ್, ಎಲ್‌ಇಡಿ ಲೈಟ್ಸ್, ಉತ್ತಮ ಬೂಟ್ ಸ್ಪೇಸ್ ಮತ್ತು ಕ್ಯಾಬಿನ್‌ನಲ್ಲಿ ಹೆಚ್ಚಿನ ಸ್ಥಳಾವಕಾಶ, ಉತ್ತಮ ಲೆಗ್‌ರೂಮ್ ಮತ್ತು ಹೆಡ್‌ರೂಮ್, 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್‌ಗಿಂತ ದೊಡ್ಡದಾದ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಹರ್ಮನ್ ಕಾರ್ಡನ್ ಬ್ರಾಂಡ್ ಆಡಿಯೋ ಸಿಸ್ಟಮ್, ಪನೋರಮಿಕ್ ಸನ್‌ರೂಫ್ ಮತ್ತು ಲೆಥೆರೆಟ್ ಡ್ಯಾಶ್‌ಬೋರ್ಡ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಅಂತೆಯೆ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಚಾರ್ಜರ್, ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಅಟೊಮೆಟಿಕ್ ಕ್ಲೈಮೆಟ್ ಕಂಟ್ರೊಲ್, ಪವರ್ ವಿಡೋ, ಸ್ಲೈಡಿಂಗ್ ಫ್ರಂಟ್ ಆರ್ಮ್‌ರೆಸ್ಟ್ ಮತ್ತು ಆಂಬಿಯೆಂಟ್ ಲೈಟಿಂಗ್‌ನಂತಹ ವೈಶಿಷ್ಟ್ಯವೂ ಇದೆ.
ಎಂಜಿನ್ ವಿವರ
ಥಾರ್ ರಾಕ್ಸ್ (MX1 ರೂಪಾಂತರ) ಎಂಜಿನ್ ಬಗ್ಗೆ ಮಾತನಾಡುತ್ತಾ, ಇದು 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಪೆಟ್ರೋಲ್ ಹೊರತಾಗಿ, ಡೀಸೆಲ್ ಎಂಜಿನ್‌ನೊಂದಿಗೆ ಥಾರ್ ರಾಕ್ಸ್ MX1 ಅನ್ನು ಖರೀದಿಸಲು ಸಹ ಅವಕಾಶವಿದೆ. ಡೀಸೆಲ್ ಆವೃತ್ತಿಯು 2.2 ಲೀಟರ್ ಡೀಸೆಲ್ ಎಂಜಿನ್‌ಗೆ ಬೆಂಬಲವನ್ನು ಪಡೆಯುತ್ತದೆ. 5 ಬಾಗಿಲಿನ ಥಾರ್‌ನ MX1 ರೂಪಾಂತರವು ಪವರ್ ಟ್ರಾನ್ಸ್‌ಮಿಷನ್‌ಗಾಗಿ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಹೊಂದಿದೆ. ಬ್ರೇಕ್ ಲಾಕಿಂಗ್ ಡಿಫರೆನ್ಷಿಯಲ್ ಅನ್ನು ಕೂಡ ನೀಡಲಾಗಿದೆ. 6 ಏರ್‌ಬ್ಯಾಗ್‌ಗಳು ಮತ್ತು ESC ನಂತಹ ಸುರಕ್ಷತಾ ವೈಶಿಷ್ಟ್ಯಗಳು ಮೂಲ ರೂಪಾಂತರದಲ್ಲಿ ಲಭ್ಯವಿದೆ.