logo
ಕನ್ನಡ ಸುದ್ದಿ  /  ಜೀವನಶೈಲಿ  /  Badam Burfi Recipe: ಬಾಯಲ್ಲಿ ಇಟ್ಟರೆ ಕರಗುವ ಬಾದಾಮಿ ಬರ್ಫಿ ರೆಸಿಪಿ

Badam Burfi Recipe: ಬಾಯಲ್ಲಿ ಇಟ್ಟರೆ ಕರಗುವ ಬಾದಾಮಿ ಬರ್ಫಿ ರೆಸಿಪಿ

HT Kannada Desk HT Kannada

Sep 26, 2022 10:19 PM IST

google News

ಬಾದಾಮಿ ಬರ್ಫಿ ರೆಸಿಪಿ

    • ನಾವು ಸಿಹಿ ಅಂಗಡಿಯಿಂದ ಎಷ್ಟೋ ಬಾರಿ ಬಾದಾಮಿ ಬರ್ಫಿಯನ್ನು ಕೊಂಡು ತಂದಿರುತ್ತೇವೆ. ಆದರೆ ಅದನ್ನು ಮನೆಯಲ್ಲಿ ಕೂಡಾ ತಯಾರಿಸಬಹುದು. ಆದರೆ ಸ್ವಲ್ಪ ತಾಳ್ಮೆ ಬೇಕು ಅಷ್ಟೇ. ಹಾಗಂತ ಅದನ್ನು ತಯಾರಿಸುವುದು ಕಷ್ಟವೇನಲ್ಲ.
ಬಾದಾಮಿ ಬರ್ಫಿ ರೆಸಿಪಿ
ಬಾದಾಮಿ ಬರ್ಫಿ ರೆಸಿಪಿ (PC: Freepik)

ಕೆಲವೊಂದು ಸಿಹಿಗಳನ್ನು ನಾವು ಮನೆಯಲ್ಲಿ ಮಾಡಲು ಅಸಾಧ್ಯ ಎಂಬ ತಪ್ಪು ಕಲ್ಪನೆ ಎಲ್ಲರಿಗೂ ಇರುತ್ತದೆ. ಆದರೆ ಅಗತ್ಯ ಸಾಮಗ್ರಿಗಳನ್ನು, ಸೂಕ್ತ ಪ್ರಮಾಣದಲ್ಲಿ ಬಳಸಿ ತಯಾರಿಸಿದರೆ, ಯಾರು ಯಾವ ಅಡುಗೆಯನ್ನಾದರೂ ಮಾಡಬಹುದು.

ನಾವು ಸಿಹಿ ಅಂಗಡಿಯಿಂದ ಎಷ್ಟೋ ಬಾರಿ ಬಾದಾಮಿ ಬರ್ಫಿಯನ್ನು ಕೊಂಡು ತಂದಿರುತ್ತೇವೆ. ಆದರೆ ಅದನ್ನು ಮನೆಯಲ್ಲಿ ಕೂಡಾ ತಯಾರಿಸಬಹುದು. ಆದರೆ ಸ್ವಲ್ಪ ತಾಳ್ಮೆ ಬೇಕು ಅಷ್ಟೇ. ಹಾಗಂತ ಅದನ್ನು ತಯಾರಿಸುವುದು ಕಷ್ಟವೇನಲ್ಲ. ಬಾದಾಮಿ ಬರ್ಫಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಇಲ್ಲಿದೆ.

ಬಾದಾಮಿ ಬರ್ಫಿ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಬಾದಾಮಿ - 1 ಕಪ್‌

ಸಕ್ಕರೆ ಪುಡಿ - 1 ಕಪ್‌

ತುಪ್ಪ - 2 ಟೇಬಲ್‌ ಸ್ಪೂನ್‌

ಹಾಲು - 1/2 ಕಪ್‌

ಕೇಸರಿ ದಳ - 10-15

ಬಾದಾಮಿ ಬರ್ಫಿ ತಯಾರಿಸುವ ವಿಧಾನ

ಬಾದಾಮಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಸಿಹಿ ಮಾಡುವ ಸಮಯದಲ್ಲಿ ಸಿಪ್ಪೆ ಬಿಡಿಸಿ

ರಾತ್ರಿ ಬಾದಾಮಿ ನೆನೆಸಲು ಸಾಧ್ಯವಾಗದಿದ್ದರೆ, ಒಂದು ಪಾತ್ರೆಗೆ ನೀರು ಸೇರಿಸಿ ಸ್ಟೋವ್‌ ಮೇಲಿಟ್ಟು ಕುದಿಯಲು ಬಿಡಿ

ಕೇಸರಿಗೆ ಸ್ವಲ್ಪ ಹಾಲು ಸೇರಿಸಿ ನೆನೆಯಲು ಬಿಡಿ

ನೀರು ಕುದಿಯುತ್ತಿದ್ದಂತೆ ಬಾದಾಮಿಯನ್ನು ನೀರಿಗೆ ಸೇರಿಸಿ ಮುಚ್ಚಳ ಮುಚ್ಚಿ 5 ನಿಮಿಷ ಬಿಡಿ

5 ನಿಮಿಷದ ನಂತರ ಬಿಸಿ ನೀರಿನಲ್ಲಿದ್ದ ಬಾದಾಮಿಯನ್ನು ತಣ್ಣನೆಯ ನೀರಿಗೆ ಸೇರಿಸಿ ಸಿಪ್ಪೆ ಸುಲಿಯಿರಿ

ಸಿಪ್ಪೆ ಬಿಡಿಸಿದ ಬಾದಾಮಿಯನ್ನು ಸ್ವಲ್ಪ ಬಿಸಿ ನೀರಿಗೆ ಸೇರಿಸಿ 1 ಗಂಟೆ ನೆನೆಯಲು ಬಿಡಿ

ಮಿಕ್ಸಿಯಲ್ಲಿ ಬಾದಾಮಿ, ಸ್ವಲ್ಪ ಹಾಲು, ನೆನೆಸಿದ ಕೇಸರಿ ಸೇರಿಸಿ ಬಾದಾಮಿಯನ್ನು ಪೇಸ್ಟ್‌ ಮಾಡಿ

ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಕರಗಿಸಿ ಬಾದಾಮಿ ಪೇಸ್ಟ್‌, ಪುಡಿ ಸಕ್ಕರೆ ಸೇರಿಸಿ ಕಡಿಮೆ ಉರಿಯಲ್ಲಿ ಬಿಡದಂತೆ ತಿರುವಿ

ಮಿಶ್ರಣ ಗಟ್ಟಿಯಾಗುತ್ತಿದ್ದಂತೆ ಸ್ಟೋಫ್‌ ಆಫ್‌ ಮಾಡಿ ತಣ್ಣಗಾಗಲು ಬಿಡಿ

ಒಂದು ಬಟರ್‌ ಪೇಪರ್‌ಗೆ ತುಪ್ಪ ಸವರಿ, ಕೈಗಳಿಗೂ ತುಪ್ಪ ಸವರಿಕೊಂಡು ಬಾದಾಮಿ ಮಿಶ್ರಣವನ್ನು ಸಮನಾಗಿ ಹರಡಿಕೊಳ್ಳಿ, ಅದರ ಮೇಲೆ ಕೇಸರಿ ದಳಗಳು, ಪಿಸ್ತಾ ಚೂರುಗಳನ್ನು ಹರಡಿ

ಲಟ್ಟಣಿಗೆಯಲ್ಲಿ ಬಾದಾಮಿ ಮಿಶ್ರಣವನ್ನು ಸಮನಾಗಿ ಒತ್ತಿಕೊಳ್ಳಬಹುದು

ಸ್ವಲ್ಪ ಸಮಯದ ನಂತರ ನಿಮಗಿಷ್ಟವಾದ ಶೇಪ್‌ನಲ್ಲಿ ಬಾದಾಮಿ ಬರ್ಫಿಯನ್ನು ಕತ್ತರಿಸಿ

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ