logo
ಕನ್ನಡ ಸುದ್ದಿ  /  ಜೀವನಶೈಲಿ  /  Ayurveda Tablet For Constipation: ಮಲಬದ್ಧತೆಗೆ ರಾಮಬಾಣ; ಅಡ್ಡಪರಿಣಾಮವಿಲ್ಲದ ಎಂಟಿಪೆಕ್ಸ್ ಆಯುರ್ವೇದ ಮಾತ್ರೆ ಬಿಡುಗಡೆ

Ayurveda Tablet for Constipation: ಮಲಬದ್ಧತೆಗೆ ರಾಮಬಾಣ; ಅಡ್ಡಪರಿಣಾಮವಿಲ್ಲದ ಎಂಟಿಪೆಕ್ಸ್ ಆಯುರ್ವೇದ ಮಾತ್ರೆ ಬಿಡುಗಡೆ

HT Kannada Desk HT Kannada

Dec 22, 2022 07:08 PM IST

google News

ಎಂಟಿಪೆಕ್ಸ್ ಆಯುರ್ವೇದ ಮಾತ್ರೆ ಬಿಡುಗಡೆ

    • ಆಧುನಿಕ ಒತ್ತಡದ ಜೀವನ ಹಾಗೂ ಜಡ ಜೀವನ ಶೈಲಿಯಿಂದಾಗಿ ಮಲಬದ್ಧತೆ ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಮಲಬದ್ಧತೆ ತೊಂದರೆ ಇರುವರಿಗಾಗಿ ಅಫೆಕ್ಸ್ ಲ್ಯಾಬೋರೇಟರೀಸ್ ಪ್ರೈವೇಟ್ ಲಿಮಿಟೆಡ್ ಅಡ್ಡ ಪರಿಣಾಮವಿಲ್ಲದ ಎಂಟಿಪೆಕ್ಸ್ ಆಯುರ್ವೇದ ಮಾತ್ರೆಗಳನ್ನು ಹೊರತಂದಿದೆ. ಇದು ಮಲಬದ್ಧತೆಯಂತಹ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡಲಿದೆ.
ಎಂಟಿಪೆಕ್ಸ್ ಆಯುರ್ವೇದ ಮಾತ್ರೆ ಬಿಡುಗಡೆ
ಎಂಟಿಪೆಕ್ಸ್ ಆಯುರ್ವೇದ ಮಾತ್ರೆ ಬಿಡುಗಡೆ

ಬೆಂಗಳೂರು: ಆಧುನಿಕ ಒತ್ತಡದ ಜೀವನ ಹಾಗೂ ಜಡ ಜೀವನ ಶೈಲಿಯಿಂದಾಗಿ ಮಲಬದ್ಧತೆ ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಮಲಬದ್ಧತೆ ತೊಂದರೆ ಇರುವರಿಗಾಗಿ ಅಫೆಕ್ಸ್ ಲ್ಯಾಬೋರೇಟರೀಸ್ ಪ್ರೈವೇಟ್ ಲಿಮಿಟೆಡ್ ಅಡ್ಡ ಪರಿಣಾಮವಿಲ್ಲದ ಎಂಟಿಪೆಕ್ಸ್ ಆಯುರ್ವೇದ ಮಾತ್ರೆಗಳನ್ನು ಹೊರತಂದಿದೆ. ಇದು ಮಲಬದ್ಧತೆಯಂತಹ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡಲಿದೆ.

ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ ಹೊಸ ಆಯುರ್ವೇದ ಉತ್ಪನ್ನವಾದ ಎಂಟಿಪೆಕ್ಸ್ ಮಾತ್ರೆಗಳನ್ನು ಆಯುವೇದ ರತ್ನ ಹಾಗೂ ಅಖಿಲ ಭಾರತ ಆಯುರ್ವೇದ ಪ್ರತಿಷ್ಠಾನದ ಡಾ. ಸಿ.ಎ. ಕಿಶೋರ್ ಬಿಡುಗಡೆ ಮಾಡಿದರು.

ಈ ಮಾತ್ರೆ ದೇಹದ ತ್ಯಾಜ್ಯವನ್ನು ಒಂದೇ ಬಾರಿಗೆ ಹೊರಗೆ ಹಾಕುತ್ತದೆ. ರಾತ್ರಿ ಸೇವಿಸಿದರೆ ಬೆಳಗ್ಗೆ ವೇಳೆಗೆ ಯಾವುದೇ ತೊಂದರೆ ಇಲ್ಲದೇ, ನಿದ್ರಾಭಂಗವಾಗದೇ ಸುಗಮವಾಗಿ ಮಲ ವಿಸರ್ಜನೆಯಾಗಲಿದೆ. ಜೊತೆಗೆ ದೇಹದಲ್ಲಿರುವ ಎಲ್ಲಾ ರೀತಿಯ ಕಲ್ಮಷವನ್ನು ಹೊರ ಹಾಕುತ್ತದೆ. ಸಂಪೂರ್ಣ ನೈಸರ್ಗಿಕ ವಸ್ತುಗಳಿಂದ ತಯಾರಾಗಿರುವ ಎಂಟಿಪೆಕ್ಸ್ ಬಳಕೆಯಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳ ನಿವಾರಣೆಯಾಗಲಿದೆ ಎಂದು ಅಫೆಕ್ಸ್ ಲ್ಯಾಬೋರೇಟರೀಸ್ ಪ್ರವೈಟ್ ಲಿಮಿಟೆಡ್ ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ವಿ.ಪಿ. ರಾಘವನ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಸುಶ್ರುತ ಆಯುವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಾಯಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಶುಭ ರಾಣಿ, ಬೆಂಗಳೂರಿನ ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ. ಅರುಣ್ ಜೈನರ್, ಅಫೆಕ್ಸ್ ಲ್ಯಾಬೋರೇಟರೀಸ್ ಪ್ರವೈಟ್ ಲಿಮಿಟೆಡ್ ಉಪಾಧ್ಯಕ್ಷ ಶ್ರೀಧರ್, ಕರ್ನಾಟಕ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಶ್ರೀ ವಲ್ಲಭ ಮತ್ತಿತರರು ಉಪಸ್ಥಿತರಿದ್ದರು.

ಮಲಬದ್ಧತೆ ಸಮಸ್ಯೆ ಹೊಡೆದೋಡಿಸಲು ನಿಮ್ಮ ಜೀವನಶೈಲಿಯಲ್ಲಿ ಈ ಬದಲಾವಣೆ ಅಗತ್ಯ

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಅನೇಕ ಜನರ ಸಾಮಾನ್ಯ ಸಮಸ್ಯೆಯಾಗಿದೆ. ಮಲಬದ್ಧತೆ ಎಂದರೆ ಆಹಾರದ ಜೀರ್ಣಕ್ರಿಯೆಯ ನಂತರ ಹೊರಹಾಕಬೇಕಾದ ತ್ಯಾಜ್ಯ ಅಥವಾ ಮಲವು ಕರುಳಿನಲ್ಲಿ ಬಹಳ ನಿಧಾನವಾಗಿ ಚಲಿಸುವ ಸ್ಥಿತಿಯಾಗಿದೆ. ಈ ಸ್ಥಿತಿಯು ಗುದನಾಳದಿಂದ ಮಲವನ್ನು ಸರಿಯಾಗಿ ಹೊರಹಾಕುವುದಿಲ್ಲ. ಇದು ಗಟ್ಟಿಯಾಗಬಹುದು ಅಥವಾ ಒಣಗಬಹುದು. ಆಯುರ್ವೇದದ ಪ್ರಕಾರ, ಸಂಧಿವಾತಕ್ಕೆ ಸಂಬಂಧಿಸಿದ ಅಸಮತೋಲನದಿಂದ ಮಲಬದ್ಧತೆ ಉಂಟಾಗುತ್ತದೆ. ಇದು ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಲೂ ಉಂಟಾಗುತ್ತದೆ.

ಆಹಾರದಲ್ಲಿ ಫೈಬರ್ ಕೊರತೆ, ನಿದ್ರೆಯ ಕೊರತೆ, ದೈಹಿಕ ಚಟುವಟಿಕೆಯ ಕೊರತೆ, ಒತ್ತಡ-ಆತಂಕ ಇತ್ಯಾದಿಗಳು ಮಲಬದ್ಧತೆಗೆ ಕಾರಣವಾಗುತ್ತವೆ. ಈ ಸಮಸ್ಯೆಯು ನಿಮ್ಮ ದಿನಚರಿಯ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆಯೊಂದಿಗೆ ಕರುಳಿನ ಚಲನೆಗಳು ಅಸಹಜವಾಗಬಹುದು, ಆತಂಕವನ್ನು ಉಂಟುಮಾಡಬಹುದು. ದೇಹಕ್ಕೆ ಅಗತ್ಯವಿರುವ ವಿಟಮಿನ್​ಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ, ಜೊತೆಗೆ ಇತರ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ದೀರ್ಘಕಾಲ ಹೀಗೆಯೇ ಮುಂದುವರಿದರೆ ಮೂಲವ್ಯಾಧಿಯಂತಹ ಸ್ಥಿತಿಗಳು ಬರಬಹುದು. ಹಾಗಾಗಿ ಮಲಬದ್ಧತೆಯ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳಬೇಕು.

ಆಯುರ್ವೇದ ತಜ್ಞರ ಸಲಹೆಯ ಪ್ರಕಾರ ಇಷ್ಟವಿಲ್ಲದೆ ಏನನ್ನೂ ತಿನ್ನಬೇಡಿ. ತಣ್ಣನೆಯ ಆಹಾರಗಳು, ಮಸಾಲೆಯುಕ್ತ ಆಹಾರಗಳು, ಕರಿದ ಆಹಾರಗಳ ಅತಿಯಾದ ಸೇವನೆಯು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಮಲಬದ್ಧತೆ ಸಮಸ್ಯೆ ಇದ್ದಾಗ ಫೈಬರ್​ ಒಳಗೊಂಡ ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ತೆಗೆದುಕೊಳ್ಳಬೇಕು. ಸಾಕಷ್ಟು ನೀರು ಕುಡಿಯಬೇಕು ಎನ್ನುತ್ತಾರೆ ತಜ್ಞರು.

ಅಲ್ಲದೆ ರಾತ್ರಿಯ ಊಟವನ್ನು ತಡವಾಗಿ ಮಾಡಬಾರದು, ಬೇಗ ಊಟ ಮಾಡಿ ಬೇಗ ಮಲಗಬೇಕು. ಸಾಕಷ್ಟು ನಿದ್ದೆ ಮಾಡಿ ಬೆಳಗ್ಗೆ ಏಳಬೇಕು. ಇದನ್ನು ನಿಯಮಿತವಾಗಿ ಮಾಡುವುದರಿಂದ ಕರುಳಿನ ಚಲನೆ ಉತ್ತಮಗೊಳ್ಳುತ್ತದೆ. ಹಾಗಾಗಿ ಮಲಬದ್ಧತೆ ಸಮಸ್ಯೆ ಆಗುವುದಿಲ್ಲ.

ದೀರ್ಘಕಾಲದ ಮಲಬದ್ಧತೆ ಸಮಸ್ಯೆಯನ್ನು ತಡೆಯಲು ಕೆಲವು ಸಲಹೆಗಳು:

- ಶೌಚಾಲಯಕ್ಕೆ ಹೋದಾಗ ಯಾವ ಕೆಲಸಕ್ಕೆ ಬಂದಿದ್ದೇವೆ ಎಂಬುದರ ಮೇಲೆ ಗಮನ ಹರಿಸಬೇಕು. ಈ ಸಮಯದಲ್ಲಿ ಫೋನ್‌ಗಳಂತಹ ಗ್ಯಾಜೆಟ್‌ಗಳನ್ನು ಬಳಸುವುದನ್ನು ಮತ್ತು ಪತ್ರಿಕೆಗಳನ್ನು ಓದುವುದನ್ನು ನಿಲ್ಲಿಸಿ.

- ಅಭ್ಯಾಸ ಇಲ್ಲದವರು ವೆಸ್ಟರ್ನ್​ಗಿಂತ ಭಾರತೀಯ ಶೈಲಿಯ ಶೌಚಾಲಯ ಬಳಸಬೇಕು.

- ಪ್ರತಿದಿನ ಒಂದೇ ಸಮಯಕ್ಕೆ ಏಳುವ ಮತ್ತು ನಿದ್ದೆ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಿ.

- ಸಾಕಷ್ಟು ನೀರು ಕುಡಿಯಿರಿ. ನಿಮ್ಮ ಜೀರ್ಣಕ್ರಿಯೆ ಸರಿಯಾಗಿ ಕೆಲಸ ಮಾಡಲು ನಿಮ್ಮ ದೇಹಕ್ಕೆ ನೀರಿನ ಅಗತ್ಯವಿದೆ.

- ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಸಣ್ಣ ಸಣ್ಣ ವಿಚಾರಕ್ಕೆ ಆತಂಕ ಪಡಬಾರದು.

- ಯಾವುದೋ ವಿಚಾರದ ಕುರಿತು ಗಾಢವಾಗಿ, ಆಳವಾಗಿ ಯೋಚಿಸುವುದು ಕೂಡ ಮಲಬದ್ಧತೆಗೆ ಕಾರಣವಾಗಬಹುದು. ಹಾಗಾಗಿ ನಿಮ್ಮ ಆಲೋಚನೆಗಳನ್ನು ನಿಯಂತ್ರಿಸಬೇಕು.

- ಮಲಾಸನ, ಹಲಾಸನ, ಮುಕ್ತಾಸನ, ಅರ್ಧ-ಮತ್ಯೇಂದ್ರಾಸನ ಮುಂತಾದ ಕೆಲವು ಯೋಗಾಸನಗಳನ್ನು ಮಾಡಬೇಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ