Long Weekends: 2024ರ ಲಾಂಗ್ ವೀಕೆಂಡ್ಗಳ ಲಿಸ್ಟ್ ಇಲ್ಲಿದೆ: 3-4 ದಿನಗಳ ಕಾಲ ಜಾಲಿ ಮಾಡಲು ಟ್ರಿಪ್ ಪ್ಲಾನ್ ಹೀಗೆ ಮಾಡಿ
Dec 14, 2023 09:19 PM IST
2024ರ ಲಾಂಗ್ ವೀಕೆಂಡ್ಗಳಲ್ಲಿ ಟ್ರಿಪ್ (istockphoto)
- Long weekend in 2024: ನೀವು ಪ್ರವಾಸ ಪ್ರಿಯರಾಗಿದ್ದರೆ 2024 ನಿಮಗೆ ಹೇಳಿ ಮಾಡಿಸಿದಂತಹ ವರ್ಷವಾಗಿದೆ. ಮುಂದಿನ ವರ್ಷ ನಿಮಗೆ ಸಾಕಷ್ಟು ಲಾಂಗ್ ವೀಕೆಂಡ್ಗಳು ಸಿಗಲಿದ್ದು ರಜೆಯನ್ನು ಹೇಗೆ ಪ್ಲಾನ್ ಮಾಡಬೇಕು ಹಾಗೂ ಯಾವ ಸಮಯದಲ್ಲಿ ಎಲ್ಲಿಗೆ ಪ್ರವಾಸಕ್ಕೆ ತೆರಳಬೇಕು ಎನ್ನುವುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ.
ಲಾಂಗ್ ವೀಕೆಂಡ್ಗಳನ್ನು ಎಂಜಾಯ್ ಮಾಡುವವರ ಪಾಲಿಗೆ 2024 ಪ್ರಿಯವಾದ ವರ್ಷ ಎಂದೇ ಹೇಳಬಹುದು. ಏಕೆಂದರೆ 2024ರಲ್ಲಿ ಹೆಚ್ಚು ಲಾಂಗ್ ವೀಕೆಂಡ್ಗಳು ನಿಮಗೆ ಸಿಗಲಿದ್ದು ನೀವು ಈಗಲೇ ಯಾವೆಲ್ಲ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು ಎಂಬ ಲಿಸ್ಟ್ ಬರೆದಿಟ್ಟುಕೊಳ್ಳಬಹುದಾಗಿದೆ. ಈ ಬಾರಿ ಲಾಂಗ್ ವೀಕೆಂಡ್ಗಳು ಸಿಗುತ್ತಿರುವುದರಿಂದ ನೀವು ಯಾವ ರೀತಿಯಲ್ಲಿ ಇದರ ಲಾಭ ಪಡೆಯಬೇಕು. ನಿಮ್ಮ ರಜೆಯ ಪ್ಲಾನ್ ಯಾವ ರೀತಿ ಇರಬೇಕು ಮತ್ತು ಯಾವೆಲ್ಲ ದೇಶಗಳಿಗೆ ನೀವು ವೀಸಾ ಫ್ರೀ ಪ್ರಯಾಣ ಮಾಡಬಹುದು ಎಂಬುದರ ವಿವರ ಇಲ್ಲಿ ನೀಡಿದ್ದೇವೆ .
ಡಿಸೆಂಬರ್ 2023- ಜನವರಿ 2024
ಶನಿವಾರ : ಡಿಸೆಂಬರ್ 30
ಭಾನುವಾರ : ಡಿಸೆಂಬರ್ 31
ಸೋಮವಾರ : ಜನವರಿ 1 : ಹೊಸ ವರ್ಷ
ಮಂಗಳವಾರ : ಜನವರಿ 2 : ಒಂದು ದಿನ ರಜೆ ಹಾಕಿ
ಹೊಸ ವರ್ಷ ಎಂಜಾಯ್ ಮಾಡಲು ನಿಮಗೆ ಗೋವಾಕ್ಕಿಂತ ಬೆಸ್ಟ್ ಆಯ್ಕೆ ಇನ್ನೊಂದು ಸಿಗಲು ಸಾಧ್ಯವೇ ಇಲ್ಲ. ಬುಕ್ ಮೈ ಶೋನಲ್ಲಿ ವಿವಿಧ ಇವೆಂಟ್ಗಳ ಟಿಕೆಟ್ ಕೂಡ ನೀವು ಬುಕ್ಕಿಂಗ್ ಮಾಡಬಹುದಾಗಿದೆ. ಸನ್‌ಬರ್ನ್ (ಡಿಸೆಂಬರ್ 28 ರಿಂದ); ಅಂಜುನಾ ಓಪನ್ ಏರ್ (ಡಿಸೆಂಬರ್ 30), ಟಿಟೊಸ್, ಎಲ್‌ಪಿಕೆ ವಾಟರ್‌ಫ್ರಂಟ್‌ನಲ್ಲಿ ಹೊಸ ವರ್ಷದ ಪಾರ್ಟಿ, ಕೆಫೆ ಮ್ಯಾಂಬೊದಲ್ಲಿ ದಿ ಮಂಬೊ ಈ ರೀತಿ ಸಾಕಷ್ಟು ಇವೆಂಟ್ಗಳಿಗೆ ನೀವು ಸಾಕ್ಷಿಯಾಗಬಹುದಾಗಿದೆ.
ಜನವರಿ 2024
ಶನಿವಾರ : ಜನವರಿ 13
ಭಾನುವಾರ :ಜನವರಿ 14
ಸೋಮವಾರ : ಜನವರಿ 15: ಸಂಕ್ರಾಂತಿ ರಜೆ
ಜೀವನದಲ್ಲಿ ಒಮ್ಮೆಯಾದರೂ ಗುಜರಾತ್ನ ವೈಭವವನ್ನು ಕಣ್ತುಂಬಿಕೊಳ್ಳಬೇಕು ಎನ್ನುವವರಿಗೆ ಇದು ಒಳ್ಳೆಯ ಸಮಯ ಆಗಿರುತ್ತದೆ. ಅಹಮದಾಬಾದ್ನಲ್ಲಿ ಇದೇ ಸಮಯದಲ್ಲಿ ಗಾಳಿಪಟ ಉತ್ಸವ ನಡೆಯುತ್ತದೆ. ಅಲ್ಲದೇ ಇತ್ತೀಚಿಗೆ ವಿಶ್ವ ಪ್ರವಾಸೋದ್ಯಮ ಸಂಸ್ಥೆ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ಎಂದು ಬಡ್ತಿ ನೀಡಿದ ಧೋರ್ಡೋಗೆ ಕೂಡ ನೀವು ಭೇಟಿ ನೀಡಬಹುದಾಗಿದೆ. ಅನುಮತಿ ಸಿಕ್ಕರೆ ಬಿಳಿ ಮರುಭೂಮಿಗೆ ನೀವು ಭೇಟಿ ಕೊಡಬಹುದಾಗಿದೆ.
ಜನವರಿ 2024
ಜನವರಿ 26 : ಶುಕ್ರವಾರ : ಗಣರಾಜ್ಯೋತ್ಸವ
ಶನಿವಾರ : ಜನವರಿ 27
ಭಾನುವಾರ : ಜನವರಿ 28
ಗಣರಾಜ್ಯೋತ್ಸವ ವಾರವಾಗಿರುವ ಹಿನ್ನೆಲೆಯಲ್ಲಿ ನೀವು ಜಲಿಯಲ್ವಾಲಾಬಾಗ್ ಹಾಗೂ ವಾಘಾ ಗಡಿಗೆ ಭೇಟಿ ನೀಡಬಹುದಾಗಿದೆ. ಅಥವಾ ಕಾಶ್ಮೀರದಲ್ಲಿ ನೀವು ಗಣರಾಜ್ಯೋತ್ಸವವನ್ನು ಆಚರಿಸಬಹುದು. ಅಲಿಬಾದ್ ಅಥವಾ ಗೋಕರ್ಣವನ್ನೂ ನೀವು ಆಯ್ಕೆ ಮಾಡಿಕೊಳ್ಳಬಹುದು.
ಮಾರ್ಚ್ 2024
ಶುಕ್ರವಾರ : ಮಾರ್ಚ್ 8 : ಶಿವರಾತ್ರಿ
ಶನಿವಾರ : ಮಾರ್ಚ್ 9
ಭಾನುವಾರ : ಮಾರ್ಚ್ 10
ಬೇಸಿಗೆ ಕಾಲ ಆರಂಭಗೊಳ್ಳುವ ಮುನ್ನವೇ ಆಹಾರ ಪ್ರಿಯರಿಗೆ ಹೇಳಿಮಾಡಿಸಿದಂತಹ ಸ್ಥಳವಾದ ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡಲು ಇದು ಸರಿಯಾದ ಸಮಯವಾಗಿದೆ. ಇದನ್ನು ಹೊರತುಪಡಿಸಿ ನೀವು ಕೋಲ್ಕತ್ತಾ, ಚೆನ್ನೈ, ಜೈಪುರ, ಅಮೃತಸರ, ಅಹಮದಾಬಾದ್ ಹಾಗೂ ಹೈದರಾಬಾದ್ಗೆ ಕೂಡ ವಿಸಿಟ್ ನೀಡಬಹುದು.
ಮಾರ್ಚ್ 2024
ಶನಿವಾರ: ಮಾರ್ಚ್ 23
ಭಾನುವಾರ : ಮಾರ್ಚ್ 24
ಸೋಮವಾರ : ಮಾರ್ಚ್ 25: ಹೋಳಿ ಹಬ್ಬ
ವಾರಣಾಸಿ, ಮಥುರಾ, ಜೈಪುರ, ಶಾಂತಿನಿಕೇತನ, ಆಗ್ರಾ, ಉದಯಪುರ ಇವುಗಳು ಹೋಳಿ ಹಬ್ಬದ ಸಂದರ್ಭದಲ್ಲಿ ನೀವು ಆಯ್ಕೆ ಮಾಡಿಕೊಳ್ಳಬಹುದಾದ ಪ್ರವಾಸಿ ತಾಣಗಳಾಗಿವೆ. ಪ್ರಕೃತಿಯನ್ನು ಹೆಚ್ಚು ಪ್ರೀತಿಸುವವವರು ಕೇರಳಕ್ಕೆ ಕೂಡ ಭೇಟಿ ನೀಡಬಹುದು.
ಮಾರ್ಚ್ 2024
ಶುಕ್ರವಾರ : ಮಾರ್ಚ್ 29: ಗುಡ್ ಫ್ರೈಡೇ
ಶನಿವಾರ : ಮಾರ್ಚ್ 30
ಭಾನುವಾರ : ಮಾರ್ಚ್ 31 : ಈಸ್ಟರ್
ಈಸ್ಟರ್ ಹಬ್ಬದ ಸಂದರ್ಭದಲ್ಲಿ ಪಾಂಡಿಚೇರಿಯಲ್ಲಿ ಸಂಭ್ರಮಾಚರಣೆಯನ್ನು ನೋಡುವುದೇ ಆನಂದ. ಇದನ್ನು ಬಿಟ್ಟು ಮಡಿಕೇರಿ, ಗೋವಾ, ವಿಶಾಖಪಟ್ಟಣಂಗಳಿಗೂ ನೀವು ತೆರಳಬಹುದಾಗಿದೆ .
ಮೇ, 2024
ಗುರುವಾರ, ಮೇ 23: ಬುದ್ಧ ಪೂರ್ಣಿಮೆ
ಶುಕ್ರವಾರ, ಮೇ 24: ರಜೆ ತೆಗೆದುಕೊಳ್ಳಿ
ಶನಿವಾರ, 25 ಮೇ
ಭಾನುವಾರ, 26 ಮೇ
ಮೇ ತಿಂಗಳ ಬಿಸಿಲ ಧಗೆಯನ್ನು ಕಡಿಮೆ ಮಾಡಿಕೊಳ್ಳಲು ನೀವು ಬೀಚ್ ಕಡೆಗೆ ಮುಖ ಮಾಡಬಹುದು. ಕರ್ನಾಟಕದಲ್ಲೇ ಇರುವ ಮಲ್ಪೆ, ಮಹಾರಾಷ್ಟ್ರದ ಕೊಂಡೂರು, ಕೇರಳದ ಮರಾರಿ, ಗುಜರಾತ್ನ ಮಾಧ್ವ, ತಮಿಳುನಾಡಿನ ತರಂಗಂಬಾಡಿ ಹೀಗೆ ಅನೇಕ ಬೀಚ್ಗಳಿಗೆ ನೀವು ವಿಸಿಟ್ ಮಾಡಬಹುದಾಗಿದೆ.
ಜೂನ್ 2024
ಶನಿವಾರ : ಜೂನ್ 15
ಭಾನುವಾರ : ಜೂನ್ 16
ಸೋಮವಾರ : ಜೂನ್ 17 ಬಕ್ರೀದ್
ಟ್ರೆಕ್ಕಿಂಗ್ ತೆರಳಲು ಇದು ಸೂಕ್ತವಾದ ಸಮಯವಾಗಿದೆ. ಡಾರ್ಜೆಲಿಂಗ್, ಶಿಮ್ಲಾ, ಮನಾಲಿ, ಕಸೋಲ್, ಕಸುವಲಿ, ಮೆಕ್ಲಿಯೋಡ್ಗಂಜ್ನಂತಹ ಪ್ರದೇಶಗಳಿಗೆ ನೀವು ಈ ಸಮಯದಲ್ಲಿ ಭೇಟಿ ನೀಡಬಹುದಾಗಿದೆ.
ಆಗಸ್ಟ್ 2024
ಆಗಸ್ಟ್ 15 : ಗುರುವಾರ : ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 16 : ಶುಕ್ರವಾರ : ರಜೆ ತೆಗೆದುಕೊಳ್ಳಿ
ಆಗಸ್ಟ್ 17: ಶನಿವಾರ
ಆಗಸ್ಟ್ 18 : ಭಾನುವಾರ
ಆಗಸ್ಟ್ 19 : ಸೋಮವಾರ : ರಕ್ಷಾ ಬಂಧನ
ಈ ಟೈಂನಲ್ಲಿ ನೀವು ವಿದೇಶಿ ಪ್ರವಾಸಕ್ಕೆ ತೆರಳುವ ಬಗ್ಗೆ ಯೋಚನೆ ಮಾಡಬಹುದಾಗಿದೆ. ಥೈಲ್ಯಾಂಡ್, ಶ್ರೀಲಂಕಾ, ಮಲೇಷ್ಯಾ, ಹಾಂಗ್ಕಾಂಗ್ ಅಥವಾ ಸಿಂಗಾಪುರದಂತ ವೀಸಾ ಮುಕ್ತ ದೇಶಗಳಿಗೆ ನೀವು ವಿಸಿಟ್ ನೀಡಬಹುದಾಗಿದೆ. ಮಳೆಗಾಲದಲ್ಲಿ ಗೋವಾ ಅಥವಾ ಆಸ್ಸಾಂ ಪ್ರವಾಸವನ್ನೂ ನೀವು ಕೈಗೊಳ್ಳಬಹುದು.
ಸೆಪ್ಟೆಂಬರ್, 2024
ಗುರುವಾರ, ಸೆಪ್ಟೆಂಬರ್ 5: ಓಣಂ
ಶುಕ್ರವಾರ, ಸೆಪ್ಟೆಂಬರ್ 6: ರಜೆ ತೆಗೆದುಕೊಳ್ಳಿ
ಶನಿವಾರ, ಸೆಪ್ಟೆಂಬರ್ 7: ಗಣೇಶ ಚತುರ್ಥಿ
ಭಾನುವಾರ : ಸೆಪ್ಟೆಂಬರ್ 8
ಮಾಲ್ಡೀವ್ಸ್, ಭೂತಾನ್ ಹಾಗೂ ನೇಪಾಳಕ್ಕೆ ನೀವು ಈ ಸಮಯದಲ್ಲಿ ಭೇಟಿ ನೀಡಬಹುದಾಗಿದೆ. ಈ ಸಮಯಲ್ಲಿ ದಕ್ಷಿಣ ಭಾರತದಲ್ಲಿ ತಾಪಮಾನ ಕೂಡ ಚೆನ್ನಾಗಿ ಇರುವುದರಿಂದ ನೀವು ಅಲ್ಲಿ ಕೂಡ ಭೇಟಿ ನೀಡಬಹುದಾಗಿದೆ.
ಅಕ್ಟೋಬರ್, 2024
ಶುಕ್ರವಾರ, ಅಕ್ಟೋಬರ್ 11: ಮಹಾ ನವಮಿ
ಶನಿವಾರ, ಅಕ್ಟೋಬರ್ 12: ದಸರಾ
ಭಾನುವಾರ, ಅಕ್ಟೋಬರ್ 13
ದುರ್ಗಾ ಪೂಜೆಯ ವೈಭವ ನೋಡಬೇಕು ಎಂದುಕೊಂಡಿದ್ದರೆ ಮೈಸೂರು ಅಥವಾ ಕೋಲ್ಕತ್ತಾ ನಿಮ್ಮ ಆಯ್ಕೆಯಾಗಿರಲಿ. ಅಥವಾ ನಿಮಗೆ ಏಕಾಂತ ಬೇಕು ಎನಿಸಿದರೆ ಬಂಡೀಪುರ ಅಥವಾ ಗೋವಾಗೆ ವಿಸಿಟ್ ಕೊಡಬಹುದಾಗಿದೆ.
ನವೆಂಬರ್, 2024
ಶುಕ್ರವಾರ, ನವೆಂಬರ್ 1: ದೀಪಾವಳಿ
ಶನಿವಾರ, ನವೆಂಬರ್ 2
ಭಾನುವಾರ, ನವೆಂಬರ್ 3: ಭಾಯಿ ದೂಜ್
ಕನ್ಯಾಕುಮಾರಿ, ತಿರುವನಂತಪುರಂ, ಮುಂಬೈ, ಗೋವಾ, ಜೋಧಪುರ, ಭುವನೇಶ್ವರಗಳಿಗೆ ನೀವು ಈ ಸಮಯದಲ್ಲಿ ಭೇಟಿ ನೀಡಬಹುದು. ಮುಂಗಡ ರೈಲು ಬುಕ್ ಮಾಡುವ ಮೂಲಕ ಬಜೆಟ್ ಸ್ನೇಹಿ ಪ್ರವಾಸ ಮಾಡಬಹುದಾಗಿದೆ.