logo
ಕನ್ನಡ ಸುದ್ದಿ  /  ಜೀವನಶೈಲಿ  /  New Year Trip: ನ್ಯೂ ಇಯರ್‌ ಆಚರಿಸಲು ಕುಟುಂಬ ಸಮೇತ ಟ್ರಿಪ್​​ ಹೊರಟಿದ್ದೀರಾ? ಜರ್ನಿಯಲ್ಲಿ ಮಕ್ಕಳಿಗಾಗಿ ಇಲ್ಲಿವೆ ಬೆಸ್ಟ್‌ ಚಟುವಟಿಕೆಗಳು

New Year Trip: ನ್ಯೂ ಇಯರ್‌ ಆಚರಿಸಲು ಕುಟುಂಬ ಸಮೇತ ಟ್ರಿಪ್​​ ಹೊರಟಿದ್ದೀರಾ? ಜರ್ನಿಯಲ್ಲಿ ಮಕ್ಕಳಿಗಾಗಿ ಇಲ್ಲಿವೆ ಬೆಸ್ಟ್‌ ಚಟುವಟಿಕೆಗಳು

HT Kannada Desk HT Kannada

Dec 12, 2023 08:00 AM IST

google News

ಜರ್ನಿಯಲ್ಲಿ ಮಕ್ಕಳಿಗಾಗಿ ಚಟುವಟಿಕೆಗಳು (istockphoto)

    • Travel activities for children: ಕುಟುಂಬ ಸಮೇತ ಮಕ್ಕಳ ಜೊತೆ ಪ್ರವಾಸಕ್ಕೆ ಹೋಗುವುದು ಒಳ್ಳೆಯ ನೆನಪುಗಳನ್ನು ನಮ್ಮ ಜೊತೆ ಇರಿಸಿಕೊಳ್ಳುವ ಉತ್ತಮ ಮಾರ್ಗ. ಮಕ್ಕಳ ಜೊತೆ ಆಟವಾಡುತ್ತ ಟ್ರಿಪ್‌ಗೆ ಹೋಗುವುದು ಉತ್ಸಾಹವನ್ನು ಹೆಚ್ಚಿಸುತ್ತದೆ. ಆದರೆ ಮಕ್ಕಳ ಜೊತೆ ಪ್ರವಾಸದ ಮಜಾ ಹೆಚ್ಚಿಸಲು ಕೆಲವು ಸಲಹೆಗಳು ಇಲ್ಲಿವೆ.
ಜರ್ನಿಯಲ್ಲಿ ಮಕ್ಕಳಿಗಾಗಿ ಚಟುವಟಿಕೆಗಳು (istockphoto)
ಜರ್ನಿಯಲ್ಲಿ ಮಕ್ಕಳಿಗಾಗಿ ಚಟುವಟಿಕೆಗಳು (istockphoto)

ಈಗ ನಾವು ವರ್ಷದ ಕೊನೆಯಲ್ಲಿದ್ದೇವೆ. ಬಹಳಷ್ಟು ಶಾಲೆಗಳಿಗೆ ವಿಂಟರ್‌ ಹಾಲಿಡೇಗಳನ್ನು ನೀಡಲಾಗುತ್ತದೆ. ಜೊತೆಗೆ ವರ್ಷಾಂತ್ಯವಾದ್ದರಿಂದ ಎಲ್ಲರೂ ಪ್ರವಾಸಕ್ಕೆ ಹೋಗುವ ಮೂಡ್‌ನಲ್ಲಿರುತ್ತಾರೆ. ನ್ಯೂ ಇಯರ್‌ ಅನ್ನು ಹೊಸ ಊರಿನಲ್ಲಿ ಕುಟುಂಬ ಸಮೇತ ಆಚರಿಸಬೇಕೆಂಬ ಬಯಕೆ ಕೆಲವರಲ್ಲಿರುತ್ತದೆ. ಕುಟುಂಬ ಸಮೇತ ಮಕ್ಕಳ ಜೊತೆ ಪ್ರವಾಸಕ್ಕೆ ಹೋಗುವುದು ಒಳ್ಳೆಯ ನೆನಪುಗಳನ್ನು ನಮ್ಮ ಜೊತೆ ಇರಿಸಿಕೊಳ್ಳುವ ಉತ್ತಮ ಮಾರ್ಗ. ಮಕ್ಕಳ ಜೊತೆ ಆಟವಾಡುತ್ತ ಟ್ರಿಪ್‌ಗೆ ಹೋಗುವುದು ಉತ್ಸಾಹವನ್ನು ಹೆಚ್ಚಿಸುತ್ತದೆ. ಆದರೆ ಮಕ್ಕಳ ಜೊತೆ ಪ್ರವಾಸದ ಮಜಾ ಹೆಚ್ಚಿಸಲು ಕೆಲವು ಸಲಹೆಗಳು ಇಲ್ಲಿವೆ. ಪ್ರವಾಸದ ಸಂದರ್ಭದಲ್ಲಿ ಅವರ ಜೊತೆಗೂಡಿ ಮಾಡಬಹುದಾದ ಕೆಲವು ಆಸಕ್ತಿದಾಯಕ ಚಟುವಟಿಕೆಗಳು ಇಲ್ಲಿವೆ.

ಮಕ್ಕಳ ಜೊತೆ ಪ್ರವಾಸ ಹೊರಟಾಗ ನೀವೇನು ಮಾಡಬೇಕು?

– ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಿರಿ.

– ಆರೋಗ್ಯಕರ ವಿವಿಧ ತಿಂಡಿಗಳನ್ನು ತೆಗೆದುಕೊಂಡು ಹೋಗಿ. ಮಕ್ಕಳ ಅಗತ್ಯ ವಸ್ತುಗಳು, ಒರೆಸುವ ಬಟ್ಟೆ, ಮುಂತಾದ ಸ್ವಚ್ಛತಾ ಪರಿಕರಗಳನ್ನು ತೆಗೆದುಕೊಳ್ಳಿ.

– ಪ್ಯಾಕಿಂಗ್‌ ಮಾಡುವಾಗ ಮಕ್ಕಳನ್ನು ಸೇರಿಸಿಕೊಳ್ಳಿ. ಇದು ಪ್ರವಾಸದ ಉತ್ಸಾಹವನ್ನು ಅವರಲ್ಲಿ ಹೆಚ್ಚಿಸುತ್ತದೆ.

– ಪ್ರಯಾಣದಲ್ಲಿ ಮಕ್ಕಳಿಗೆ ಬೇಕಾಗುವ ವಸ್ತುಗಳನ್ನು ಅವರ ಬ್ಯಾಗ್‌ನಲ್ಲೇ ಇರಿಸಿ. ಮಕ್ಕಳು ಬೇಕೆಂದಾಗ ಅವರಿಗೆ ಕೊಡಲು ಅನುಕೂಲವಾಗುತ್ತದೆ.

– ನಿಮ್ಮ ಪ್ರಯಾಣ ಮತ್ತು ಪ್ರವಾಸಕ್ಕೆ ಹೊಗುವ ಸ್ಥಳಗಳ ಬಗ್ಗೆ ಕಿರುಪರಿಚಯ ಮಕ್ಕಳಿಗೂ ನೀಡಿ. ಉದಾಹರಣೆಗೆ ಯಾವ ಊರಿಗೆ ಹೋಗುತ್ತಿದ್ದೇವೆ, ಅಲ್ಲಿ ಏನೇನು ಮಾಡಬಹುದು, ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು ಮುಂತಾದವುಗಳು.

– ಪ್ರವಾಸದ ಸಂದರ್ಭದಲ್ಲಿ ಸಿಗುವ ಸಹ-ಪ್ರಯಾಣಿಕರ ಜೊತೆ ಹೇಗೆ ವರ್ತಿಸಬೇಕೆಂದು ಮೊದಲೇ ಅವರಿಗೆ ತಿಳಿ ಹೇಳಿ. ಉದಾಹರಣೆಗೆ ನೀವು ಟ್ರೈನ್‌ನಲ್ಲಿ ಪ್ರವಾಸಕ್ಕೆ ಹೊರಟಿದ್ದರೆ, ಅಲ್ಲಿ ಸಿಗುವ ಅವರದೇ ವಯಸ್ಸಿನ ಮಕ್ಕಳ ಜೊತೆ ಸೇರಿ ಪ್ರಯಾಣಿಸುವುದು ಹೇಗೆ ಎಂದು ತಿಳಿಸಿಕೊಡಿ.

– ಪ್ರವಾಸದಲ್ಲಿರುವಾಗ ಊಟ, ತಿಂಡಿ ಮತ್ತು ವಿಶ್ರಾಂತಿಯ ಸಮಯಗಳ ಬಗ್ಗೆ ಮೊದಲೇ ಯೋಜನೆ ಸಿದ್ಧಪಡಿಸಿಟ್ಟುಕೊಳ್ಳಿ. ಮಕ್ಕಳಿಗೆ ಬಹುಬೇಗ ದಣಿವಾಗುತ್ತದೆ. ಹಾಗಾಗಿ ನಿಮ್ಮ ಪ್ರವಾಸದ ಸಂತೋಷ ಕೆಡದಂತೆ ಯಾವ ಸಮಯದಲ್ಲಿ ಏನು ಮಾಡಬೇಕು ಎಂಬುದರ ಕಿರು ಯೋಜನೆ ರೂಪಿಸಿಟ್ಟುಕೊಳ್ಳಿ.

ಪ್ರವಾಸದಲ್ಲಿ ನೀವು ಮತ್ತು ಮಕ್ಕಳು ಸೇರಿ ಮಾಡಬಹುದಾದ ಆಸಕ್ತಿದಾಯಕ ಚಟುವಟಿಕೆಗಳು

– ನಿಮ್ಮ ಮಕ್ಕಳು ಸಂಪೂರ್ಣವಾಗಿ ಪ್ರವಾಸ ಎಂಜಾಯ್‌ ಮಾಡಲು ಅವರನ್ನು ಸದಾ ಚಟುವಟಿಕೆಯಿಂದಿರುವಂತೆ ನೋಡಿಕೊಳ್ಳಿ.

– ನೀವು ಕಾರ್‌ನಲ್ಲಿ ಪ್ರವಾಸಕ್ಕೆ ಹೊರಟಿದ್ದರೆ, ಮಕ್ಕಳಿಗೆ ಇಷ್ಟವಾಗುವ ಹಾಡು, ಕಥೆಗಳನ್ನು ಮೊಬೈಲ್‌ ಅಥವಾ ಟ್ಯಾಬ್‌ನಲ್ಲಿ ಹಾಕಿಕೊಂಡು ಹೋಗಿ. ಹೊಸ ಹೊಸ ಹಾಡು, ಪಜಲ್‌ಗಳು ಮಕ್ಕಳನ್ನು ಆಕರ್ಷಿಸುತ್ತವೆ.

– ಮ್ಯಾಗ್ನೆಟಿಕ್‌ ಬೋರ್ಡ್‌ ಗೇಮ್‌ಗಳನ್ನು ಮರೆಯದೇ ತೆಗೆದುಕೊಂಡು ಹೋಗಿ. ಲುಡೋ, ಸ್ನೇಕ್‌ ಆಂಡ್‌ ಲ್ಯಾಡರ್‌, ಚೆಸ್‌, ನಂಬರ್‌ ಗೇಮ್‌ ಪಜಲ್‌ ಮುಂತಾದವುಗಳು.

– ಕೆಲವು ಆಕ್ಟಿವಿಟಿ ಬುಕ್‌ಗಳನ್ನು ಇರಿಸಿಕೊಳ್ಳಿ.

– ಡ್ರಾ ಆಂಡ್‌ ಇರೇಸ್‌ ಬೋರ್ಡ್‌ ತೆಗೆದುಕೊಂಡಿ ಹೋಗಿ. ಪ್ರವಾಸದಲ್ಲಿ ಮಕ್ಕಳನ್ನು ಆಕರ್ಷಿಸಿದ ವಸ್ತು ಅಥವಾ ಸ್ಥಳಗಳ ಚಿತ್ರ ಬರೆಯಲು ಹೇಳಿ. ಅದಕ್ಕೆ ಅವರಿಗೆ ಚಿಕ್ಕಪುಟ್ಟ ಗಿಫ್ಟ್‌ ಕೊಡಿ.

– ಕಿಡ್ಸ್‌ ಗೇಮ್‌ ಕಾರ್ಡ್‌ಗಳೂ ನಿಮ್ಮ ಜೊತೆಯಲ್ಲಿರಲಿ. ಅವುಗಳನ್ನು ನೀವೂ ಸಹ ಆಡಬಹುದು.

– ನಿಮ್ಮ ಮಗು ತುಂಬಾ ಚಿಕ್ಕದಿದ್ದರೆ ಅಂದರೆ 6 ತಿಂಗಳಿಂದ ಮೂರು ವರ್ಷದ ಒಳಗಿದ್ದರೆ, ಅವರಿಗೆ ಸ್ಪಿನ್‌ ಟಾಯ್‌ಗಳನ್ನು ತೆಗೆದುಕೊಂಡು ಹೋಗಿ.

– ಮಕ್ಕಳ ಜೊತೆ ಸ್ಟ್ರೀಟ್‌ ಶಾಪಿಂಗ್‌ಗೆ ಹೋಗಿ. ಅಲ್ಲಿ ಮಕ್ಕಳಿಗೆ ಇಷ್ಟವಾಗುವ ಮತ್ತು ದುಬಾರಿಯಲ್ಲದ ವಸ್ತುಗಳನ್ನು ಖರೀದಿಸಿ. ಅದು ಮಕ್ಕಳಿಗೆ ಬಹಳಷ್ಟು ಸಂತೋಷ ನೀಡುತ್ತದೆ. ಉದಾಹರಣೆಗೆ ಸೈಕಲ್‌ ಕೀ ಬಂಚ್‌, ಪುಸ್ತಕಗಳು, ಕೆಲವು ಆಟಿಕೆಗಳು.

(ಬರಹ: ಅರ್ಚನಾ ವಿ. ಭಟ್‌)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ