New Year Trip: ಹೊಸ ವರ್ಷವನ್ನ ವೆಲ್ಕಮ್ ಮಾಡೋಕೆ ಭಾರತದ 5 ಬಜೆಟ್-ಸ್ನೇಹಿ ತಾಣಗಳಿವು
Dec 10, 2023 08:00 AM IST
ಹೊಸ ವರ್ಷವನ್ನ ವೆಲ್ಕಮ್ ಮಾಡೋಕೆ ಬಜೆಟ್-ಸ್ನೇಹಿ ತಾಣಗಳು (istockphoto)
- Budget Friednly Destinations To Welcome New Year: ನಿಮ್ಮ ಪ್ಲಾನ್ ಹಾಗೂ ಬಜೆಟ್ಗೆ ತಕ್ಕಂತೆ ನ್ಯೂ ಇಯರ್ ವೆಲಕಮ್ ಮಾಡಲು ಇಲ್ಲಿವೆ 5 ಬೆಸ್ಟ್ ಸ್ಥಳಗಳು..
ಹೊಸ ವರ್ಷವನ್ನು ಹೇಗೆ ಬರಮಾಡಿಕೊಳ್ಳಬೇಕು ಎಂದು ಪ್ಲಾನ್ ಮಾಡಿದ್ದೀರಿ? ಪಾರ್ಟಿ ಮಾಡುತ್ತಾನಾ ಅಥವಾ ಶಾಂತಿಯುತವಾಗಾ ಅಥವಾ ಆಧ್ಯಾತ್ಮಿಕವಾಗಾ ಅಥವಾ ಹಿಮದ ನಡುವೆಯೇ ಅಥವಾ ಪ್ರಕೃತಿ ನಡುವೆಯೇ? ನಿಮ್ಮ ಪ್ಲಾನ್ ಹಾಗೂ ಬಜೆಟ್ಗೆ ತಕ್ಕಂತೆ ನ್ಯೂ ಇಯರ್ ವೆಲಕಮ್ ಮಾಡಲು ಇಲ್ಲಿವೆ 5 ಉತ್ತಮ ತಾಣಗಳು..
1) ಗೋವಾ: ಇದನ್ನ ನಾವು ಭಾರತದ ಪಾರ್ಟಿಗಳ ರಾಜಧಾನಿ ಅಂತಾನೇ ಕರೀಬೋದು. ಏಕೆಂದರೆ ಹೆಚ್ಚಿನ ಜನರು ವಿಶೇಷ ದಿನಗಳಂದು ವಿಶೇಷ ಪಾರ್ಟಿಗಳನ್ನು ಇಲ್ಲಿಯೇ ಆಯೋಜನೆ ಮಾಡ್ತಾರೆ. ಹೊಸ ವರ್ಷವನ್ನು ಪಾರ್ಟಿಯೊಂದಿಗೆ ವೆಲ್ಕಮ್ ಮಾಡಬೇಕೆಂದು ನೀವು ಅಂದುಕೊಂಡಿದ್ದರೆ ಗೋವಾ ಬೆಸ್ಟ್ ಪ್ಲೇಸ್. ಗೋವಾದ ಬೀಚ್ಗಳು, ರೆಸಾರ್ಟ್ಗಳು, ಕೆಫೆ, ರೆಸ್ಟಾರೆಂಟ್, ಕ್ರೂಸ್ ಹಡಗುಗಳಲ್ಲಿ ನೀವು ಸೂಪರ್ ಆಗಿ ಹೊಸ ವರ್ಷವನ್ನು ಆಚರಿಸಬಹುದು. ಗೋವಾದಲ್ಲಿ ಒಬ್ಬರಿಗೆ 5 ರಿಂದ 8 ಸಾವಿರ ರೂಪಾಯಿ ವೆಚ್ಚದಲ್ಲಿ ನೀವು ಎಂಜಾಯ್ ಮಾಡಬಹುದು.
2) ಊಟಿ: ಹೊಸ ವರ್ಷವನ್ನು ನೀವು ಶಾಂತಿಯುತವಾಗಿ ಹಚ್ಚಹಸಿರಿನ ನಡುವೆ ಸ್ವಾಗತಿಸಬೇಕು ಅಂದುಕೊಂಡಿದ್ರೆ ತಮಿಳುನಾಡಿನ ಊಟಿ ಉತ್ತಮ ಆಯ್ಕೆ. ಇದನ್ನು ಪಶ್ಚಿಮ ಘಟ್ಟದ ರೆಸಾರ್ಟ್ ಪಟ್ಟಣವೆಂದೇ ಕರೆಯಬಹುದು. ಊಟಿಯಲ್ಲಿ ನೀವು ಟೀ ಫ್ಯಾಕ್ಟರಿ, ಬೊಟಾನಿಕಲ್ ಗಾರ್ಡನ್ ಮತ್ತು ಮ್ಯೂಸಿಯಂಗೆ ಭೇಟಿ ನೀಡಬಹುದು, ಬೋಟಿಂಗ್ ಹೋಗಬಹುದು. ಊಟಿಯಲ್ಲಿ ಪ್ರತಿ ವ್ಯಕ್ತಿಗೆ 7 ರಿಂದ 8 ಸಾವಿರ ರೂಪಾಯಿ ವೆಚ್ಚದಲ್ಲಿ ನೀವು ಹೊಸ ವರ್ಷವನ್ನು ಜಾಲಿ ಮಾಡಬಹುದು.
3) ಮನಾಲಿ: ಹಿಮ-ಮಂಜಿನ ಜೊತೆ ಹೊಸ ವರ್ಷ ಜಾಲಿ ಮಾಡೋ ಚಾನ್ಸ್ ಸಿಗತ್ತೆ ಅಂದ್ರೆ ಯಾರ್ ತಾನೆ ಬೇಡ ಅಂತಾರೆ ಅಲ್ವಾ? ನಿಮ್ಮ ಸಂಗಾತಿ ಆಗಿರಲಿ, ಸ್ನೇಹಿತರು ಆಗಿರಲಿ ಅಥವಾ ಫ್ಯಾಮಿಲಿ ಆಗಿರಲಿ ಯಾರೊಂದಿಗಾದ್ರೂ ಹೊಸ ವರ್ಷವನ್ನು ಎಂಜಾಯ್ ಮಾಡೋಕೆ ಹಿಮಾಚಲ ಪ್ರದೇಶದ ಮನಾಲಿ ಒಳ್ಳೆಯ ತಾಣವಾಗಿದೆ. ಸ್ಕೇಟಿಂಗ್, ಪ್ಯಾರಾಚೂಟಿಂಗ್, ಪ್ಯಾರಾಗ್ಲೈಡಿಂಗ್, ಟ್ರೆಕ್ಕಿಂಗ್ನಲ್ಲಿ ತೊಡಗಿ. ಅಥವಾ ಟಿಬೆಟಿಯನ್ ಆಶ್ರಮ, ವಿವಿಧ ದೇವಾಲಯಗಳಿಗೆ ಭೇಟಿ ನೀಡಿ. ಒಳ್ಳೆಯ ವ್ಯೂ ಇರುವ ರೆಸಾರ್ಟ್ಗಳು ಇಲ್ಲಿ ಸಾಕಷ್ಟಿವೆ. 4 ರಿಂದ 6 ಸಾವಿರ ರೂ ಒಬ್ಬರಿಗೆ ಖರ್ಚಾಗಬಹುದು.
4) ವಾರಣಾಸಿ: ಹೊಸ ವರ್ಷವನ್ನು ಆಧ್ಯಾತ್ಮಿಕತೆಯ ಸಾರದೊಂದಿಗೆ ಆಚರಿಸಲು ಬಯಸುವವರಿಗೆ ಉತ್ತರ ಪ್ರದೇಶದ ವಾರಣಾಸಿ ಅಥವಾ ಬನಾರಸ್ ಬೆಸ್ಟ್ ಪ್ಲೇಸ್. ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿ ಕಳೆದ ವರ್ಷಗಳಲ್ಲಿ ಮಾಡಿದ ಪಾಪಗಳನ್ನು ತೊಳೆದುಕೊಂಡು ಹೊಸ ವರ್ಷ ಆರಂಭಿಸಬಹುದು. ವಿವಿಧ ಘಾಟ್‌ಗಳು ಮತ್ತು ಅನೇಕ ದೇವಾಲಯಗಳಿಗೆ ಭೇಟಿ ನೀಡಬಹುದು. ನದಿಗಳಲ್ಲಿ ದೋಣಿ ವಿಹಾರ ತೆರಳಬಹುದು. ಸಂಜೆ ವೇಳೆ ಗಂಗಾರತಿಯನ್ನು ವೀಕ್ಷಿಸಬಹುದು. ವಾರಣಾಸಿಯಲ್ಲಿ ಪ್ರತಿ ವ್ಯಕ್ತಿಗೆ 8-10 ಸಾವಿರ ಖರ್ಚು ಆಗಬಹುದು.
5) ಪುಷ್ಕರ್: ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಪುಷ್ಕರ್ ಪ್ರದೇಶವು ಮರಳಿನಿಂದ ಮಾತ್ರ ಆವೃತವಾಗಿಲ್ಲ ಅಲ್ಲಿ ಅನೇಕ ದೇವಾಲಯಗಳೂ ಇವೆ. ಹೊಸ ವರ್ಷವನ್ನು ಪುಷ್ಕರ್ನಲ್ಲಿ ಸ್ವಾಗತಿಸಲು ಬಯಸುವವರು ಪುಷ್ಕರ್ ಸರೋವರದ ಬಳಿ ಸಮಯ ಕಳೆದಬಹುದು. ಬ್ರಹ್ಮ ದೇವಾಲಯ, ಸಾವಿತ್ರಿ ಮಾತಾ ದೇವಾಲಯಕ್ಕೆ ಭೇಟಿ ನೀಡಬಹುದು. ಮರಳುಗಾಡಿನಲ್ಲಿ ಒಂಟೆ ಸವಾರಿ ಮಾಡಬಹುದು. ಪುಷ್ಕರ್ನಲ್ಲಿ ಒಬ್ಬರಿಗೆ 7 ರಿಂದ 8 ಸಾವಿರ ರೂಪಾಯಿ ವೆಚ್ಚದಲ್ಲಿ ನೀವು ಹೊಸ ವರ್ಷವನ್ನು ವೆಲ್ಕಮ್ ಮಾಡಬಹುದು.
ಉಳಿದಂತೆ ಬೆಂಗಳೂರು, ಕೋಲ್ಕತ್ತಾ, ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಕೊಚ್ಚಿಯಂತಹ ನಗರಗಳಲ್ಲಿ ಪಾರ್ಟಿ ಮಾಡುತ್ತಾ ಹೊಸ ವರ್ಷವನ್ನು ಬರಮಾಡಿಕೊಳ್ಳಬಹುದು.