PM scholarship 2024: ವಿದ್ಯಾರ್ಥಿಗಳಿಗೆ 30- 36 ಸಾವಿರ ರೂ ಸ್ಕಾಲರ್‌ಶಿಪ್, ಪ್ರಧಾನಮಂತ್ರಿ ವಿದ್ಯಾರ್ಥಿ ವೇತನಕ್ಕೆ ಹೀಗೆ ಅರ್ಜಿ ಸಲ್ಲಿಸಿ
Nov 25, 2024 05:37 PM IST
ಪ್ರಧಾನಮಂತ್ರಿ ವಿದ್ಯಾರ್ಥಿ ವೇತನ 2024
- PM scholarship yojana online registration 2024: ವೃತ್ತಿಪರ ಮತ್ತು ತಾಂತ್ರಿಕ ಕೋರ್ಸ್‌ಗಳನ್ನು ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಈ ವಿದ್ಯಾರ್ಥಿ ವೇತನಕ್ಕೆ ಇದೇ ನವೆಂಬರ್ 30ರೊಳಗೆ ksb.gov.in ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಸ್ಟೆಪ್ ಟು ಸ್ಟೆಪ್ ಗೈಡ್ ಇಲ್ಲಿದೆ.
PM Scholarship Scheme apply online: ಭಾರತದಲ್ಲಿ ಹಲವು ಸ್ಕಾಲರ್‌ಶಿಪ್‌ಗಳು ಲಭ್ಯವಿದ್ದು, ಸಾಕಷ್ಟು ವಿದ್ಯಾರ್ಥಿಗಳು ಮಾಹಿತಿ ಕೊರತೆಯಿಂದ ಇಂತಹ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದಿಲ್ಲ. ವೃತ್ತಿಪರ ಮತ್ತು ತಾಂತ್ರಿಕ ಕೋರ್ಸ್‌ಗಳನ್ನು ಕಲಿಯುವ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಪ್ರಧಾನಮಂತ್ರಿ ಸ್ಕಾಲರ್‌ಶಿಪ್ ಯೋಜನೆ ಇದೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೆಲವೇ ದಿನಗಳು ಬಾಕಿ ಉಳಿದಿವೆ. 2024-25ರ ಶೈಕ್ಷಣಿಕ ವರ್ಷದಲ್ಲಿ ಪೂರ್ಣಾವಧಿ ವೃತ್ತಿಪರ ಮತ್ತು ತಾಂತ್ರಿಕ ಕೋರ್ಸ್‌ಗೆ ಸೇರಿರುವ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗೆ 30 ಸಾವಿರ ರೂಪಾಯಿ ಮತ್ತು ವಿದ್ಯಾರ್ಥಿನಿಯರಿಗೆ 36 ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ಪ್ರಧಾನಮಂತ್ರಿ ವಿದ್ಯಾರ್ಥಿ ವೇತನ ಯೋಜನೆಯಡಿಯಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೇಂದ್ರ ಮಿಲಿಟರಿ ಮಂಡಳಿ ನೀಡುವ ಪ್ರಧಾನ ಮಂತ್ರಿ ವಿದ್ಯಾರ್ಥಿವೇತನ ಯೋಜನೆಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಯೋಜನೆಯಡಿ, ವೃತ್ತಿಪರ ಮತ್ತು ತಾಂತ್ರಿಕ ಕೋರ್ಸ್ ಗಳನ್ನು ಅಧ್ಯಯನ ಮಾಡುವ ಅರ್ಹ ಅಭ್ಯರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ನವೆಂಬರ್ 30ರೊಳಗೆ ಅರ್ಜಿ ಸಲ್ಲಿಸಬಹುದು. 2024-25ರ ಶೈಕ್ಷಣಿಕ ವರ್ಷದಲ್ಲಿ ಪೂರ್ಣಾವಧಿ ವೃತ್ತಿಪರ ಮತ್ತು ತಾಂತ್ರಿಕ ಕೋರ್ಸ್ ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪ್ರಧಾನ ಮಂತ್ರಿ ವಿದ್ಯಾರ್ಥಿವೇತನ ಯೋಜನೆಯಡಿ ವಿದ್ಯಾರ್ಥಿವೇತನ ನೀಡಲಾಗುವುದು. ಈ ಯೋಜನೆಯಡಿ ಆಯ್ಕೆಯಾದ ಬಾಲಕರಿಗೆ ವಾರ್ಷಿಕ 30,000 ರೂ., ಬಾಲಕಿಯರಿಗೆ 36,000 ರೂ. ಅರ್ಜಿಗಳನ್ನು ಕೇಂದ್ರ ಮಿಲಿಟರಿ ಮಂಡಳಿಯ ವೆಬ್ ಸೈಟ್‌ನಲ್ಲಿ ಸಲ್ಲಿಸಬೇಕಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು s ಕೇಂದ್ರೀಯ ಸೈನಿಕ ಬೋರ್ಡ್‌ನ ವೆಬ್‌ಸೈಟ್ online.ksb.gov.in ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಹಂತಹಂತದ ಮಾರ್ಗದರ್ಶಿ
- ಹಂತ 1: ಮೊದಲಿಗೆ www.ksb.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30 ಆಗಿದೆ. ಅಲ್ಲಿಯ ತನಕ ಕಾಯದೆ ಬೇಗ ಅರ್ಜಿ ಸಲ್ಲಿಸುವುದು ಉತ್ತಮ.
- ಹಂತ 2: ಯಾವೆಲ್ಲ ದಾಖಲೆ, ಮಾಹಿತಿ ಅಪ್ಲೋಡ್ ಮಾಡಬೇಕೋ ಅದನ್ನು ಮೊದಲೇ ಸಿದ್ಧವಾಗಿಟ್ಟುಕೊಳ್ಳಿ. ಅಂದರೆ, ಫೋಟೋಗ್ರಾಫ್, ಪಿಪಿಒ ಸಂಖ್ಯೆ, ಬ್ಯಾಂಕ್ ಅಕೌಂಟ್ ಸಂಖೆ (ಎಸ್‌ಬಿಐ/ಪಿಎನ್‌ಬಿ), ಇಎಸ್‌ಎಂ ಐ/ ಕಾರ್ಡ್‌ಸಂಖ್ಯೆ, ಆಧಾರ್ ನಂಬರ್, ಮೊಬೈಲ್ ನಂಬರ್, ಇಮೇಲ್ ಐಡಿ, ಡೇಟ್ ಆಫ್‌ಬರ್ತ್, ಕೋರ್ಸ್‌ಗೆ ಸೇರಿದ ದಿನಾಂಕ, ಬ್ಯಾಂಕ್ ಖಾತೆ ವಿವರ(ಬ್ರಾಂಚ್ ಹೆಸರು, ಐಎಫ್‌ಎಸ್‌ಸಿ ಕೋಡ್ ಇತ್ಯಾದಿ). (ಯಾವೆಲ್ಲ ದಾಖಲೆಪತ್ರಗಳು ಬೇಕೆಂಬ ಸವಿರವಾದ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ)
- ಹಂತ 3: ಆನ್‌ಲೈನ್ ಅರ್ಜಿ ನಮೂನೆ ಭರ್ತಿ ಮಾಡಿ. ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿರುವ ಪ್ರತಿಗಳನ್ನು ಅಪ್ಲೋಡ್ ಮಾಡಿ.
- ಹಂತ 4: ಸೇವ್‌ಆಂಡ್ ಫಾರ್ವರ್ಡ್ ಕ್ಲಿಕ್ ಮಾಡಿ. ಎಲ್ಲಾದರೂ ನೀವು ಸೇವ್ ಮಾಡದೆ, ಫಾರ್ವರ್ಡ್ ಬಟನ್ ಒತ್ತದೆ ಇದ್ದರೆ ಅರ್ಜಿ ಸಲ್ಲಿಕೆಯಾಗುವುದಿಲ್ಲ. ಡ್ಯಾಷ್‌ಬೋರ್ಡ್‌ನಲ್ಲಿ ಡ್ರಾಫ್ಟ್ ಆಗಿಯೇ ಉಳಿಯುತ್ತದೆ. ಹೀಗಾಗಿ, ಈ ಹಂತದಲ್ಲಿ ಎಚ್ಚರಿಕೆವಹಿಸಿ. ಸೇವ್‌ಆಂಡ್ ಫಾರ್ವರ್ಡ್ ಕ್ಲಿಕ್ ಮಾಡಿದಾಗ ಅರ್ಜಿ ಸಲ್ಲಿಕೆ ಪೂರ್ಣಗೊಳ್ಳುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು?
ಮಾಜಿ ಸೈನಿಕರ ಮಕ್ಕಳು/ ವಿಧವೆಯರು ಅರ್ಜಿ ಸಲ್ಲಿಸಬಹುದು. ಪ್ರತಿ ಶೈಕ್ಷಣಿಕ ವರ್ಷದಲ್ಲಿ ಒಟ್ಟು 5500 ಮಾಜಿ ಸೈನಿಕರ ಮಕ್ಕಳು/ ವಿಧವೆಯರನ್ನು ವಿದ್ಯಾರ್ಥಿವೇತನಕ್ಕಾಗಿ ಆಯ್ಕೆ ಮಾಡಲಾಗುವುದು. ಪ್ರತಿ ವರ್ಷ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ 2750 ರಂತೆ 2750 ಅಭ್ಯರ್ಥಿಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ. ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಅನುಮೋದಿಸಲ್ಪಟ್ಟ 2-5 ವರ್ಷಗಳ ಪೂರ್ಣಾವಧಿ ಕೋರ್ಸ್ ಗಳನ್ನು ಓದುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
ಈಗಾಗಲೇ ಹಿಂದೂಸ್ತಾನ್ ಟೈಮ್ಸ್ ಕನ್ನಡವು ಪ್ರಧಾನಮಂತ್ರಿ ಸ್ಕಾಲರ್‌ಶಿಪ್ ವಿಷಯದ ಕುರಿತು ವಿವರವಾದ ಲೇಖನ ಪ್ರಕಟಿಸಿದೆ. (ಲಿಂಕ್ ಇಲ್ಲಿದೆ). ಪ್ರಧಾನ ಮಂತ್ರಿ ವಿದ್ಯಾರ್ಥಿವೇತನ ಯೋಜನೆಯು ಮಾಜಿ ಸೈನಿಕರ ವಂಶಸ್ಥರಿಗೆ ಮತ್ತು ಭೂಸೇನೆ, ನೌಕಾಪಡೆ, ವಾಯುಪಡೆ ಮತ್ತು ಕರಾವಳಿ ಕಾವಲು ಪಡೆಗಳಲ್ಲಿ ಸೇವೆ ಸಲ್ಲಿಸಿದವರ ಕುಟುಂಬಕ್ಕೆ ಮಾತ್ರ ಅನ್ವಯವಾಗುತ್ತದೆ.