logo
ಕನ್ನಡ ಸುದ್ದಿ  /  ಜೀವನಶೈಲಿ  /  ರಕ್ಷಾ ಬಂಧನ 2023; ಸಹೋದರರಿಗೆ ಕಟ್ಟಲು ಕಪ್ಪು ಬಣ್ಣದ,ಆಯುಧಗಳ ಚಿಹ್ನೆ ಇರುವ ರಾಖಿ ಖರೀದಿಸಬೇಡಿ

ರಕ್ಷಾ ಬಂಧನ 2023; ಸಹೋದರರಿಗೆ ಕಟ್ಟಲು ಕಪ್ಪು ಬಣ್ಣದ,ಆಯುಧಗಳ ಚಿಹ್ನೆ ಇರುವ ರಾಖಿ ಖರೀದಿಸಬೇಡಿ

HT Kannada Desk HT Kannada

Aug 30, 2023 06:36 AM IST

google News

ರಕ್ಷಾ ಬಂಧನ 2023

  • ಕೈಗೆ ಕಟ್ಟುವ ರಾಖಿ, ಒಂದು ರೀತಿಯ ರಣ ಕಂಕಣದಂತೆ. ಚರಿತ್ರೆಯ ದಿನಗಳಲ್ಲಿ ರಾಖಿ ಕಟ್ಟಿದ ಕ್ಷಣದಿಂದಲೇ ಆ ಮಹಿಳೆಯ ರಕ್ಷಣೆ ಸಂಪೂರ್ಣವಾಗಿ ಆ ಪುರುಷನನಾಗಿರುತ್ತಿತ್ತು. ಸೋದರರು, ಸೋದರಿಯರ ಸಂಪೂರ್ಣ ರಕ್ಷಣೆಗೆ ಬದ್ಧರಾಗುತ್ತಾರೆ. ಅದೇ ರೀತಿ ಸಹೋದರಿಯರು ಸಹೋದರರ ದೀರ್ಘಾಯಸ್ಸು ಮತ್ತು ಯಶಸ್ಸನ್ನು ಕೋರುತ್ತಾರೆ.

ರಕ್ಷಾ ಬಂಧನ 2023
ರಕ್ಷಾ ಬಂಧನ 2023

ಇಂದು, ಅಣ್ಣ ತಂಗಿಯರ ಬಾಂಧವ್ಯದ ಹಬ್ಬ ರಕ್ಷಾ ಬಂಧನವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಕಡೆಯ ದಿನ ಅಂದರೆ ಹುಣ್ಣಿಮೆಯಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸುತ್ತೇವೆ. ಬುಧವಾರ ಬೆಳಗ್ಗೆ 10.19ಕ್ಕೆ ಹುಣ್ಣಿಮೆ ಆರಂಭವಾಗಿ ಮರುದಿನ ಬೆಳಗ್ಗೆ 7.50 ವರೆಗೂ ಇರುತ್ತದೆ. ಆದ್ದರಿಂದ ಈ ವರ್ಷ ರಕ್ಷಾ ಬಂಧನವನ್ನು 2 ದಿನಗಳು ಆಚರಿಸಬಹುದು.

ಪುರಾಣ ಕಾಲದಿಂದಲೂ ಸೋದರತೆಗೆ ವಿಶೇಷ ಪ್ರಾಶಸ್ತ್ಯ

ಈ ಹಬ್ಬವನ್ನು ವಯಸ್ಸಿನ ಅಂತರವಿಲ್ಲದೆ ಜಾತಿ ಬೇಧವಿಲ್ಲದೆ ಆಚರಿಸಲಾಗುತ್ತದೆ. ಈ ಹಬ್ಬವು ಸೋದರತೆಯ ಸಂಕೇತ. ಸೋದರ ಸೋದರಿಯರ ಪ್ರೀತಿಯ ಆಳವನ್ನು ಹೇಳಲು ಅಸಾಧ್ಯ. ಪುರಾಣದ ಕಾಲ ಆಗಲಿ ಅಥವಾ ಭಾರತೀಯ ಇತಿಹಾಸವಾಗಲೀ ಸೋದರತೆಗೆ ವಿಶೇಷ ಪ್ರಾಶಸ್ತ್ಯ ಇದೆ. ಶ್ರೀ ಕೃಷ್ಣ ಮತ್ತು ದ್ರೌಪದಿಯ ನಡುವಿನ ಪ್ರೀತಿ ನಂಬಿಕೆ, ರಾಣಾ ಪ್ರತಾಪ ಸಿಂಹರ ಸೋದರ ಪ್ರೇಮ, ಅಷ್ಟೇ ಏಕೆ ಪರ ನಾರಿ ಸೋದರ ಎಂಬ ಬಿರುದು ಗಳಿಸಿದ ಮದಕರಿ ನಾಯಕ. ಬ್ರಿಟಿಷರ ಕಪಿಮುಷ್ಠಿಯಿಂದ ಸಿಂಧೂರ ಲಕ್ಷ್ಮಣನನ್ನು ಪಾರು ಮಾಡಿದ ಓರ್ವ ವೀರ ವನಿತೆ ನಿಜವಾದ ಸೋದರತೆಯ ಪ್ರತೀಕವಾಗುತ್ತಾರೆ.

ಪ್ರತಿ ಹಿಂದೂಗಳು ಆಚರಿಸಬೇಕಾದ ಹಬ್ಬ

ಇದರಿಂದಾಗಿ ನಮಗೆ ತಿಳಿಯುವ ಒಂದು ಮುಖ್ಯ ವಿಚಾರ ಎಂದರೆ ರಕ್ಷಾ ಬಂಧನ ಹಬ್ಬವನ್ನು ಆಚರಿಸಲು ಸಂಬಂಧವೊಂದೇ ಮುಖ್ಯವಲ್ಲ. ಸಂಬಂಧದಷ್ಟೇ ಮನೋಭಾವನೆಯೂ ಮುಖ್ಯ. ಇದು ಗಣೇಶ ಚತುರ್ಥಿ, ಗೌರಿ ಹಬ್ಬ, ದೀಪಾವಳಿಯಂತೆ ಪ್ರತಿ ಹಿಂದುವೂ ಆಚರಿಸಬೇಕಾದ ಹಬ್ಬವಾಗಿದೆ. ನಮ್ಮ ದೇಶದಲ್ಲಿ ಆತ್ಮೀಯರನ್ನು ಭೇಟಿ ಮಾಡುವಾಗ ಏನಾದರೂ ಉಡುಗೊರೆ ಕೊಡುವುದು ಸಾಮಾನ್ಯವಾಗಿದೆ. ಅದೇ ರೀತಿಯಲ್ಲಿ ರಕ್ಷಾ ಬಂಧನದ ದಿನ ಪರಸ್ಪರ ಸೋದರ ಸೋದರಿಯರು ಉಡುಗೊರೆ ಕೊಡುತ್ತಾರೆ.

ಸೋದರರ ದೀರ್ಘಾಯಸ್ಸು ಕೋರುವ ಸಹೋದರಿಯರು

ಕೈಗೆ ಕಟ್ಟುವ ರಾಖಿ, ಒಂದು ರೀತಿಯ ರಣ ಕಂಕಣದಂತೆ. ಚರಿತ್ರೆಯ ದಿನಗಳಲ್ಲಿ ರಾಖಿ ಕಟ್ಟಿದ ಕ್ಷಣದಿಂದಲೇ ಆ ಮಹಿಳೆಯ ರಕ್ಷಣೆ ಸಂಪೂರ್ಣವಾಗಿ ಆ ಪುರುಷನನಾಗಿರುತ್ತಿತ್ತು. ಸೋದರರು, ಸೋದರಿಯರ ಸಂಪೂರ್ಣ ರಕ್ಷಣೆಗೆ ಬದ್ಧರಾಗುತ್ತಾರೆ. ಅದೇ ರೀತಿ ಸಹೋದರಿಯರು ಸಹೋದರರ ದೀರ್ಘಾಯಸ್ಸು ಮತ್ತು ಯಶಸ್ಸನ್ನು ಕೋರುತ್ತಾರೆ. ಹೆಣ್ಣು ಮಕ್ಕಳು ಬೆಳಗಿನ ಜಾವ ಎದ್ದು ಎಣ್ಣೆ ಸ್ನಾನ ಮಾಡಬೇಕು. ತಮ್ಮ ಬಳಿ ಇರುವ ರಾಖಿಯನ್ನು ದೇವರ ಬಳಿ ಇಟ್ಟು ಪೂಜಿಸಬೇಕು. ಸೋದರರನ್ನು ಪೂರ್ವಭಿಮುಖವಾಗಿ ಕುಳ್ಳಿರಿಸಿ, ಹೆಣ್ಣು ಮಕ್ಕಳು ರಾಖಿ ಕಟ್ಟುವ ಮುನ್ನ ದೇವರಲ್ಲಿ ಸೋದರರ ದೀರ್ಘಾಯಸ್ಸು ಮತ್ತು ಯಶಸ್ಸಿಗಾಗಿ ಪ್ರಾರ್ಥಿಸಬೇಕು.

ಕಪ್ಪು ಬಣ್ಣದ ರಾಖಿ ಬೇಡ

ಸಾಧ್ಯವಾದಷ್ಟು ಕಪ್ಪು ಬಣ್ಣವುಳ್ಳ ರಾಖಿ ಕಟ್ಟುವುದನ್ನು ಅವಾಯ್ಡ್‌ ಮಾಡಿ. ಅದೇ ರೀತಿಯಲ್ಲಿ ಆಯುಧಗಳ ಚಿನ್ಹೆ ಇರುವ ರಾಖಿಗಳನ್ನು ಕಟ್ಟಬಾರದು. ರಾಖಿಯಲ್ಲಿ ಬೆಂಕಿಯ ಚಿತ್ರಗಳೂ ಇರಬಾರದು. ರಾಖಿ ಕಟ್ಟಿದ ನಂತರ ಪರಸ್ಪರ ಸೋದರ ಸೋದರಿಯರು ಸಿಹಿ ತಿಂದು ನಂತರ ಕುಟುಂಬದ ಎಲ್ಲರಿಗೂ ಸಿಹಿಯನ್ನು ಹಂಚಬೇಕು. ಒಟ್ಟಾರೆ ನಾವು ಆಚರಿಸುವ ರಕ್ಷಾ ಬಂಧನ ಹಬ್ಬಕ್ಕೆ ಧಾರ್ಮಿಕ, ಪೌರಾಣಿಕ ಮತ್ತು ಚಾರಿತ್ರಿಕ ಹಿನ್ನೆಲೆ ಇದೆ ಎಂದರೂ ತಪ್ಪಾಗುವುದಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ