Success Mantra: ಶ್ರೀರಾಮನ ಈ 5 ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಖಚಿತ
Jan 22, 2024 01:51 PM IST
ಭಗವಾನ್ ಶ್ರೀರಾಮ
ಭಗವಾನ್ ಶ್ರೀರಾಮನದ್ದ ಕೆಲವು ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಪ್ರತಿ ಹಂತಗಳಲ್ಲೂ ಯಶಸ್ವಿಯಾಗುತ್ತೇವೆ. ರಾಮನಲ್ಲಿದ್ದ ಪ್ರಮುಖ 5 ಗುಣಗಳನ್ನು ತಿಳಿಯೋಣ.
ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಕಠಿಣ ಪರಿಶ್ರಮದ ಜೊತೆಗೆ ಕೆಲಸ ನಿರ್ವಹಣೆಯ ಕೌಶಲ್ಯವು ಬಹಳ ಮುಖ್ಯವಾಗುತ್ತದೆ. ಜೀವನದಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಏರಬೇಕು ಎಂದರೆ ಶ್ರೀರಾಮನ ಈ 5 ಗುಣಗಳನ್ನು ಅಳವಡಿಸಿಕೊಂಡರೆ ಯಶಸ್ವಿ ವ್ಯಕ್ತಿ ನೀವಾಗುತ್ತೀರಿ. ಭಗವಾನ್ ಶ್ರೀರಾಮನಿಂದ ಕಲಿಯಬಹುದಾದ 5 ಪ್ರಮುಖ ಗುಣಗಳನ್ನು ಇಲ್ಲಿ ನೀಡಲಾಗಿದೆ.
ತಂಡವನ್ನು ಪ್ರೊತ್ಸಾಹಿಸುವ ಗುಣ
ವಾಲ್ಮೀಕಿ ರಾಮಾಯಣ ಪ್ರಕಾರ, ಶ್ರೀರಾಮನು ಸಮುದ್ರವನ್ನು ನೋಡಿ ಯಾವ ಸ್ಥಳದಿಂದ ಸೇತುವೆಯನ್ನು ಕಟ್ಟಿದರೆ ಸುಲಭವಾಗುತ್ತದೆ ಎಂಬುದನ್ನು ತಿಳಿಯಲು ಮುಂದಾಗುತ್ತಾನೆ. ಬಳಿಕ ಸೇತುವೆ ನಿರ್ಮಾಣದ ಕಾಮಗಾರಿ ಆರಂಭವಾಗುತ್ತದೆ. ರಾಮನು ತನ್ನ ವಾನರ ಸೈನ್ಯವನ್ನು ಉತ್ತೇಜಿಸಿದ ರೀತಿಯಿಂದಾಗಿ ತುಂಬಾ ಕಡಿಮೆ ಸಮಯದಲ್ಲಿ ಸೇತುವೆಯನ್ನು ನಿರ್ಮಿಸುತ್ತಾರೆ. ಒಬ್ಬ ಉತ್ತಮ ನಾಯಕ ತನ್ನ ತಂಡದ ಸದಸ್ಯರನ್ನು ಸಕಾರಾತ್ಮಕ ರೀತಿಯಲ್ಲಿ ಪ್ರೇರೇಪಿಸುವ ಗುಣ ಇದ್ದಾಗ ಮಾತ್ರ ತಮ್ಮ ಗುರಿ ಸಾಧನೆಯನ್ನು ಮಾಡಬಹುದು.
ಸಂಕಲ್ಪ
ಜೀವನದಲ್ಲಿ ಮುನ್ನಡೆಯುವ ಸಂಕಲ್ಪ ತುಂಬಾ ಮುಖ್ಯವಾಗುತ್ತದೆ. ಸಂಕಲ್ಪದ ಜೊತೆಗೆ ಅಗತ್ಯ ಸಂಪನ್ಮೂಲಗಳು ಇದ್ದಾಗ ವ್ಯಕ್ತಿ ಸಾಗುವ ಹಾದಿ ಸುಗಮವಾಗುತ್ತದೆ. ಸಣ್ಣ ಸೈನ್ಯವೇ ಇರಲಿ ಅಥವಾ ಸೌಲಭ್ಯಗಳ ಕೊರತೆಯೇ ಇರಲಿ ರಾಮನು ತನ್ನ ಸಂಕಲ್ಪದಿಂದ ರಾವಣ ವಿರುದ್ಧ ಗೆಲುವು ಕಾಣುತ್ತಾನೆ.
ಸಾಮಾಜಿಕ ಸಮಾನತೆ
ಶ್ರೀರಾಮನು ರಾಜಮನೆತನಕ್ಕೆ ಸೇರಿದವನು. ಒಬ್ಬ ಒಳ್ಳೆಯ ರಾಜನಾಗಿ ತನ್ನ ಎಲ್ಲಾ ಪ್ರಜೆಗಳನ್ನು ಸಮಾನವಾಗಿ ನಡೆಸಿಕೊಂಡನು. ಇದು ಜನರಲ್ಲಿ ಸಮಾನತೆಯ ನಂಬಿಕೆಯನ್ನು ಹುಟ್ಟುಹಾಕಿತು. ಒಬ್ಬ ಉತ್ತಮ ನಾಯಕನು ತನ್ನ ಉದ್ಯೋಗಿಗಳ ಪೈಕಿ ದೊಡ್ಡವರು ಇರಲಿ ಸಣ್ಣ ಉದ್ಯೋಗಿಗಳು ಇರಲಿ. ಯಾವುದೇ ತಾರತಮ್ಯ ಮಾಡದೆ ಜೀವನದಲ್ಲಿ ಮುಂದುವರಿಯಲು ಪ್ರೋತ್ಸಾಹಿಸುತ್ತಲೇ ಬರುತ್ತಾನೆ.
ಎದುರಾಳಿಯಿಂದಲೂ ಕಲಿಯುವ ಗುಣ
ಶ್ರೀರಾಮನು ತನ್ನ ಎದುರಾಳಿ ಅಥವವಾ ಶತ್ರುಗಳಿಂದಲೂ ಕಲಿಯುವ ಗುಣವನ್ನು ಹೊಂದಿದ್ದನು. ರಾಮನ ಶತ್ರು ರಾವಣ. ತನ್ನ ಕಿರಿಯ ಸಹೋದರ ಲಕ್ಷ್ಮಣನಿಗೆ ಹೀಗೆ ಹೇಳುತ್ತಾನೆ. ರಾವಣ ನಮ್ಮ ಶತ್ರುವಾಗಿದ್ದರೂ ಆತನಿಗೆ ಸರಸ್ವತಿ ದೇವಿಯ ಆಶೀರ್ವಾದವಿದೆ. ಅವನು ಜ್ಞಾನವುಳ್ಳವನು. ಆದ್ದರಿಂದ ನಾವು ಅವನನ್ನು ಗೌರವದಿಂದ ಕಾರಣಬೇಕಂದು ಪ್ರೇರೇಪಿಸಿದ್ದನು.
ಶಾಂತ ಸ್ವಭಾವ
ಗಂಭೀರ ಮತ್ತು ಶಾಂತ ಸ್ವಭಾವದ ಶ್ರೀರಾಮನು ಎಂತಹ ಕಠಿಣ ಸಂದರ್ಭಗಳಲ್ಲೂ ತಾಳ್ಮೆಯನ್ನು ಕಳೆದುಕೊಳ್ಳಲಿಲ್ಲ. ಕಠಿಣ ಪರಿಸ್ಥಿತಿಯಲ್ಲೂ ಶಾಂತಿಯಿಂದ ಇರುವ ದೃಢತೆಯನ್ನು ಕಾಯ್ದುಕೊಳ್ಳುವ ಸ್ವಭಾವವನ್ನು ಹೊಂದಿದ್ದನು. ಸವಾಲುಗಳೇ ತುಂಬಿರುವ ಜೀವನದಲ್ಲಿ ಯಶಸ್ಸನ್ನು ಕಾಣಬೇಕಾದರೆ ಶ್ರೀರಾಮನ ಈ 5 ಗುಣಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.