Chicken Recipe: ನಾನ್ವೆಜ್ ಪ್ರಿಯರಿಗೆ ಭರ್ಜರಿ ಬಾಡೂಟ...ಗ್ರೀನ್ ಚಿಕನ್ ರೆಸಿಪಿ
Jul 23, 2022 02:16 PM IST
ಗ್ರೀನ್ ಚಿಕನ್ ( Freepik)
- ವಾರವಿಡೀ ಕೆಲಸ ಮಾಡಿ ವೀಕೆಂಡ್ನಲ್ಲಿ ಚಿಲ್ ಮಾಡುವುದು ಯಾರಿಗೆ ತಾನೇ ಇಷ್ಟವಿಲ್ಲ..? ಈ ಭಾನುವಾರ ನಿಮ್ಮ ಕುಟುಂಬದವರೊಂದಿಗೆ ಅಥವಾ ನಿಮ್ಮ ಸ್ನೇಹಿತರೊಂದಿಗೆ ಎಂಜಾಯ್ ಮಾಡಬೇಕು ಎಂದಿದ್ದಲ್ಲಿ, ನೀವು ನಾನ್ ವೆಜ್ ಪ್ರಿಯರಾಗಿದ್ದಲ್ಲಿ ಗ್ರೀನ್ ಚಿಕನ್ ರೆಸಿಪಿ ಮಾಡಿ.
ನಾನ್ ವೆಜ್ ಪ್ರಿಯರಿಗೆ ಭಾನುವಾರ ಬಂತೆಂದರೆ ಒಂದು ರೀತಿಯ ಹಬ್ಬ. ಚಿಕನ್ ಅಥವಾ ಮಟನ್ ತಿನ್ನದೆ ಹಲವರಿಗೆ ಭಾನುವಾರ ಕಂಪ್ಲೀಟ್ ಆಗುವುದೇ ಇಲ್ಲ. ಹಾಗೇ ಭಾನುವಾರ ಎಂದರೆ ಬಹುತೇಕರಿಗೆ ಕೆಲಸಕ್ಕೆ ಬ್ರೇಕ್.
ವಾರವಿಡೀ ಕೆಲಸ ಮಾಡಿ ವೀಕೆಂಡ್ನಲ್ಲಿ ಚಿಲ್ ಮಾಡುವುದು ಯಾರಿಗೆ ತಾನೇ ಇಷ್ಟವಿಲ್ಲ..? ಈ ಭಾನುವಾರ ನಿಮ್ಮ ಕುಟುಂಬದವರೊಂದಿಗೆ ಅಥವಾ ನಿಮ್ಮ ಸ್ನೇಹಿತರೊಂದಿಗೆ ಎಂಜಾಯ್ ಮಾಡಬೇಕು ಎಂದಿದ್ದಲ್ಲಿ, ನೀವು ನಾನ್ ವೆಜ್ ಪ್ರಿಯರಾಗಿದ್ದಲ್ಲಿ ಗ್ರೀನ್ ಚಿಕನ್ ರೆಸಿಪಿ ಮಾಡಿ. ಗ್ರೀನ್ ಚಿಕನ್ ಮಾಡಲು ಬೇಕಾದ ರೆಸಿಪಿಗಳು ಹಾಗೂ ತಯಾರಿಸುವ ವಿಧಾನ ಹೇಗೆ ನೋಡಿ.
ಬೇಕಾಗುವ ಸಾಮಗ್ರಿಗಳು
ಚಿಕನ್ - 1 ಕಿಲೋ
ಹಸಿಮೆಣಸಿನಕಾಯಿ - 4
ಪುದೀನಾ - 1 ಕಟ್ಟು
ಕೊತ್ತಂಬರಿ ಸೊಪ್ಪು - 1 ಕಟ್ಟು
ಗೋಡಂಬಿ - 15
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಟೇಬಲ್ ಸ್ಪೂನ್
ಮೊಸರು - 1 ಕಪ್
ಧನಿಯಾ ಪುಡಿ - 1 ಟೇಬಲ್ ಸ್ಪೂನ್
ಗರಂ ಮಸಾಲೆ ಪುಡಿ - 1 ಟೀ ಸ್ಪೂನ್
ಅರಿಶಿನ - ಸ್ವಲ್ಪ
ಕರಿಮೆಣಸಿನ ಪುಡಿ - 1/2 ಟೀ ಸ್ಪೂನ್
ಜೀರ್ಗೆ ಪುಡಿ - 1 ಟೀ ಸ್ಪೂನ್
ಎಣ್ಣೆ - 3 ಟೇಬಲ್ ಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
ಮೊದಲು ಚಿಕನ್ ತೊಳೆದು ನೀರು ಸಂಪೂರ್ಣ ಸೋರುವರೆಗೂ ಬಿಡಿ
ನಂತರ ಇದಕ್ಕೆ ವಿಸ್ಕ್ ಮಾಡಿದ ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಉಪ್ಪು ಸೇರಿಸಿ ಮಿಕ್ಸ್ ಮಾಡಿ ಅರ್ಧ ಗಂಟೆ ಮ್ಯಾರಿನೇಡ್ ಆಗಲು ಬಿಡಿ
ಮಿಕ್ಸಿ ಜಾರ್ಗೆ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಹಸಿಮೆಣಸಿನಕಾಯಿ, ಗೋಡಂಬಿ ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ
ಗ್ರೈಂಡ್ ಮಾಡಿಕೊಂಡ ಪೇಸ್ಟನ್ನು ಚಿಕನ್ ಮಿಶ್ರಣದೊಂದಿಗೆ ಸೇರಿಸಿ ಮಿಕ್ಸ್ ಮಾಡಿ ಮತ್ತೆ 1 ಗಂಟೆ ಬಿಡಿ
ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ ಚಿಕನ್ ಮಿಶ್ರಣ ಸೇರಿಸಿ 5 ನಿಮಿಷ ಫ್ರೈ ಮಾಡಿ
ನಂತರ ಮುಚ್ಚಳ ಮುಚ್ಚಿ 10 ನಿಮಿಷ ಮಧ್ಯಮ ಉರಿಯಲ್ಲಿ ಕುಕ್ ಮಾಡಿ
ಇದರೊಂದಿಗೆ ಧನಿಯಾ ಪುಡಿ, ಜೀರ್ಗೆ ಪುಡಿ, ಗರಂ ಮಸಾಲೆ ಪುಡಿ, ಉಪ್ಪು ಸೇರಿಸಿ ಮಿಕ್ಸ್ ಮಾಡಿ15 ನಿಮಿಷ ಕಡಿಮೆ ಉರಿಯಲ್ಲಿ ಕುಕ್ ಮಾಡಿ
ಕೊನೆಯಲ್ಲಿ ಕರಿಮೆಣಸಿನ ಪುಡಿ ಸೇರಿಸಿ 5 ನಿಮಿಷದ ನಂತರ ಸ್ಟೋವ್ ಆಫ್ ಮಾಡಿ
ನಾನ್, ರೊಟ್ಟಿ, ಚಪಾತಿ ಅನ್ನ ಯಾವುದರೊಂದಿಗಾದರೂ ಗ್ರೀನ್ ಚಿಕನ್ ತಿನ್ನಬಹುದು.
ಗಮನಿಸಿ: ಮೊಸರಿನ ಜೊತೆ ಚಿಕನ್ ಮ್ಯಾರಿನೇಡ್ ಮಾಡುವಾಗ ಮಿಶ್ರಣ ಗಟ್ಟಿಯಾಗಿರಬೇಕು. ಆದ್ದರಿಂದ ಈ ರೆಸಿಪಿಗೆ ಗಟ್ಟಿ ಮೊಸರನ್ನು ಬಳಸಿ
ವಿಭಾಗ