Snacks Recipe: ಎಷ್ಟು ಟೇಸ್ಟಿ ನೋಡ್ರಿ ಈ ಮಿಕ್ಸ್ಡ್ ದಾಲ್ ವಡೆ...ಬೇಕಿದ್ರೆ ಒಮ್ಮೆ ಮಾಡಿ ನೋಡಿ
Jul 25, 2022 05:51 PM IST
ಮಿಕ್ಸ್ಡ್ ದಾಲ್ ವಡೆ (freepik.com)
- ವಡೆ ಎಂದರೆ ಕೂಡಲೇ ನೆನಪಾಗುವುದು ಕಡ್ಲೆಬೇಳೆ ವಡೆ ಹಾಗೂ ಉದ್ದಿನ ವಡೆ, ಆದರೆ ಎಲ್ಲಾ ಕಾಳುಗಳನ್ನು ಬೆರೆಸಿ ಮಾಡಿರುವ ವಡೆಯನ್ನು ಎಂದಾದರೂ ಟೇಸ್ಟ್ ಮಾಡಿದ್ದೀರಾ...? ಇಲ್ಲ ಎಂದಾದರೆ ಆ ವಡೆಯ ರುಚಿ ತಿಳಿಯುವ ಸಮಯ ಇದು.
ವಡೆ, ಬಹುತೇಕ ಎಲ್ಲರ ಫೇವರೆಟ್ ಸ್ನಾಕ್ಸ್. ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ ಪ್ರತಿ ಹಿಂದೂಗಳ ಮನೆಯಲ್ಲಿ ವಡೆ ಮಾಡಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಇದು ಹೆಚ್ಚು.
ಇನ್ನು, ವಡೆ ಎಂದರೆ ಕೂಡಲೇ ನೆನಪಾಗುವುದು ಕಡ್ಲೆಬೇಳೆ ವಡೆ ಹಾಗೂ ಉದ್ದಿನ ವಡೆ, ಆದರೆ ಎಲ್ಲಾ ಕಾಳುಗಳನ್ನು ಬೆರೆಸಿ ಮಾಡಿರುವ ವಡೆಯನ್ನು ಎಂದಾದರೂ ಟೇಸ್ಟ್ ಮಾಡಿದ್ದೀರಾ...? ಇಲ್ಲ ಎಂದಾದರೆ ಆ ವಡೆಯ ರುಚಿ ತಿಳಿಯುವ ಸಮಯ ಇದು. ಮಿಕ್ಸ್ಡ್ ದಾಲ್ ವಡೆ ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆ ನೋಡೋಣ.
ಬೇಕಾಗುವ ಸಾಮಗ್ರಿಗಳು
ಕಡ್ಲೆ ಬೇಳೆ - 3/4 ಕಪ್
ಉದ್ದಿನ ಬೇಳೆ - 1/4 ಕಪ್
ತೊಗರಿ ಬೇಳೆ - 1/4 ಕಪ್
ಹೆಸರು ಬೇಳೆ - 1/4 ಕಪ್
ಅಕ್ಕಿ - 2 ಟೇಬಲ್ ಸ್ಪೂನ್
ಹಸಿಮೆಣಸಿನಕಾಯಿ - 3
ಶುಂಠಿ - 1 ಇಂಚು
ಈರುಳ್ಳಿ - 4
ಕೊತ್ತಂಬರಿ ಸೊಪ್ಪು - 1 ಕಟ್ಟು
ಕರಿಬೇವು - 2 ಎಸಳು
ಉಪ್ಪು - ರುಚಿಗೆ ತಕ್ಕಷ್ಟು
ಹಿಂಗು - ಸ್ವಲ್ಪ
ಎಣ್ಣೆ - ಕರಿಯಲು
ತಯಾರಿಸುವ ವಿಧಾನ
ಕಡ್ಲೆ ಬೇಳೆ, ಉದ್ದಿನ ಬೇಳೆ, ತೊಗರಿ ಬೇಳೆ, ಅಕ್ಕಿ ಹಾಗೂ ಹೆಸರು ಬೇಳೆಯನ್ನು ಒಂದು ಬೌಲ್ಗೆ ಸೇರಿಸಿ
2-3 ಬಾರಿ ತೊಳೆದು ನೀರು ಶೋಧಿಸಿ ಮತ್ತೆ ನೀರು ಸೇರಿಸಿ, 3-4 ಗಂಟೆಗಳ ಕಾಲ ನೆನೆಸಿ
ನೆನೆದ ಬೇಳೆಗಳಿಂದ ನೀರು ಶೋಧಿಸಿದ ನಂತರ ಮಿಕ್ಸಿ ಜಾರ್ಗೆ ವರ್ಗಾಯಿಸಿ.
ಬೇಳೆಗಳೊಂದಿಗೆ ಶುಂಠಿ ಹಾಗೂ ಹಸಿಮೆಣಸಿನಕಾಯಿ ಸೇರಿಸಿ ಆದಷ್ಟು ನೀರು ಸೇರಿಸದೆ ಗಟ್ಟಿಯಾಗಿ ಗ್ರೈಂಡ್ ಮಾಡಿಕೊಳ್ಳಿ
ಗ್ರೈಂಡ್ ಮಾಡಿಕೊಂಡ ಮಿಶ್ರಣವನ್ನು ಒಂದು ಬೌಲ್ಗೆ ಸೇರಿಸಿ ಅದರೊಂದಿಗೆ ಕರಿಬೇವು, ಕತ್ತರಿಸಿದ ಕೊತ್ತಂಬರಿ ಸೊಪ್ಪು, ಹಿಂಗು, ಉಪ್ಪು, ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಎಲ್ಲಾ ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿ
ಮಿಶ್ರಣದಿಂದ ಸಣ್ಣ ವಡೆಗಳನ್ನು ತಟ್ಟಿ ಬಿಸಿ ಎಣ್ಣೆಯಲ್ಲಿ ಕಂದು ಬಣ್ಣ ಬರುವರೆಗೂ ಮಧ್ಯಮ ಉರಿಯಲ್ಲಿ ಕರಿಯಿರಿ.
ಬಿಸಿ ಬಿಸಿ ಗರಿಯಾದ ವಡೆಯನ್ನು ಚಟ್ನಿ, ಪುದೀನಾ ಚಟ್ನಿ ಅಥವಾ ನಿಮಗಿಷ್ಟವಾದ ಡಿಪ್ನೊಂದಿಗೆ ಎಂಜಾಯ್ ಮಾಡಿ
ವಿಭಾಗ