logo
ಕನ್ನಡ ಸುದ್ದಿ  /  ಜೀವನಶೈಲಿ  /  Teacher's Day Celebration Mistakes: ಶಿಕ್ಷಕರ ದಿನಾಚರಣೆ ವೇಳೆ ನೀವು ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ..

Teacher's Day Celebration Mistakes: ಶಿಕ್ಷಕರ ದಿನಾಚರಣೆ ವೇಳೆ ನೀವು ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ..

HT Kannada Desk HT Kannada

Sep 04, 2024 03:16 PM IST

google News

ಶಿಕ್ಷಕರ ದಿನಾಚರಣೆ ವೇಳೆ ನೀವು ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ..

    • ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ.. ಗುರುವಿನಲ್ಲಿಯೇ ಎಲ್ಲ ದೇವರು ಕಾಣುತ್ತಾರೆ ಎಂಬ ಮಾತಿದೆ. ಏಕೆಂದರೆ ವಿದ್ಯೆ ನೀಡುವ ಗುರು ದೇವರಿಗಿಂತ ಮಿಗಿಲು. ಇದೇ ದೇವರ ಪೂಜಿಸುವ ದಿನ ಬಂದೇ ಬಿಟ್ಟಿದೆ.
ಶಿಕ್ಷಕರ ದಿನಾಚರಣೆ ವೇಳೆ ನೀವು ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ..
ಶಿಕ್ಷಕರ ದಿನಾಚರಣೆ ವೇಳೆ ನೀವು ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ..

ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ.. ಗುರುವಿನಲ್ಲಿಯೇ ಎಲ್ಲ ದೇವರು ಕಾಣುತ್ತಾರೆ ಎಂಬ ಮಾತಿದೆ. ಏಕೆಂದರೆ ವಿದ್ಯೆ ನೀಡುವ ಗುರು ದೇವರಿಗಿಂತ ಮಿಗಿಲು. ಇದೇ ದೇವರ ಪೂಜಿಸುವ ದಿನ ಬಂದೇ ಬಿಟ್ಟಿದೆ. ಕೇವಲ ಸೆಪ್ಟಂಬರ್‌ 5, ಆ ಒಂದೇ ದಿನಕ್ಕೆ ಈ ದಿನವನ್ನು ಸೀಮಿತಗೊಳಿಸದೆ, ನಿತ್ಯದ ಸೇವೆ ಸಲ್ಲಿಕೆಯಾಗಲಿ. ಸಾಧ್ಯವಾದಷ್ಟು ಶಿಕ್ಷಕರು ಎದುರಿಗೆ ಸಿಕ್ಕರೆ, ನಮ್ರತೆಯಿಂದ ಮಾತನಾಡಿಸಿ. ಅವರು ನಮ್ಮಿಂದ ಬೇರೆ ಏನನ್ನೂ ನಿರೀಕ್ಷಿಸುವುದಿಲ್ಲ. ಆದರೆ, ಈ ಕೆಳಗಿನ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ..

ಕಳಪೆ ಜೋಕ್ಸ್‌ ಕಳಿಸುವುದು ಬೇಡ..

ಎಷ್ಟೇ ವಯಸ್ಸಾದರೂ ಶಿಕ್ಷಕರ ಸ್ಥಾನಮಾನ ಮೇಲ್ಮಟ್ಟದಲ್ಲಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಶಿಕ್ಷಕರಿಗೆ ಸಂದೇಶದ ನೆಪದಲ್ಲಿ ಕಳಪೆ ಡಬಲ್ ಮೀನಿಂಗ್ ಅಥವಾ ಕವನಗಳನ್ನು ಕಳುಹಿಸಬೇಡಿ. ಹಾಗೆ ಮಾಡುವುದರಿಂದ ಈ ದಿನದ ಘನತೆಗೆ ಧಕ್ಕೆಯಾಗುವುದು ಮಾತ್ರವಲ್ಲದೆ ನಿಮ್ಮ ಇಮೇಜ್ ಕೂಡ ಹಾಳಾಗುತ್ತದೆ.

ಶಿಕ್ಷಕರ ವೈಯಕ್ತಿಕ ಜೀವನ ಉಲ್ಲೇಖಿಸಬೇಡಿ

ನೀವು ಶಿಕ್ಷಕರನ್ನು ಭೇಟಿ ಮಾಡುತ್ತಿದ್ದರೆ, ಅವರ ವೈಯಕ್ತಿಕ ಜೀವನವನ್ನು ಎಂದಿಗೂ ಉಲ್ಲೇಖಿಸಬೇಡಿ. ಅವರು ಉತ್ತರಿಸಲು ನಿರಾಕರಿಸುವ ವಿಚಾರಗಳನ್ನು ಅವರೊಂದಿಗೆ ಚರ್ಚಿಸಬೇಡಿ. ಯಾವ ಕಾರ್ಯ ನಿಮಿತ್ತ ಹೋಗಿರುತ್ತಿರಿ ಅದನ್ನಷ್ಟೇ ಮುಗಿಸಿ ಬನ್ನಿ.

ನಿಮ್ಮ ವೈಯಕ್ತಿಕ ಕಷ್ಟ ತೋಡಿಕೊಳ್ಳಬೇಡಿ..

ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಏನೇ ಗೊಂದಲಗಳಿದ್ದರೂ ಅದನ್ನು ಶಿಕ್ಷಕರ ಜತೆಗೆ ಬಗೆಹರಿಸಿಕೊಳ್ಳಿ. ಅದನ್ನು ಬಿಟ್ಟು, ನಿಮ್ಮ ಮನೆಯ ಸಮಸ್ಯೆಗಳನ್ನು ಅವರೆದುರು ಹೇಳಿಕೊಳ್ಳಬೇಡಿ. ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಮಸ್ಯೆಗಳನ್ನು ನಿಮಗೆ, ನಿಮ್ಮ ಕುಟುಂಬ ಮತ್ತು ಸ್ನೇಹಿತ ಬಳಗಕ್ಕಷ್ಟೇ ಸೀಮಿತಗೊಳಿಸಿ.

ಉಡುಗೊರೆ ಆಯ್ಕೆಯಲ್ಲಿರಲಿ ಜಾಗೃತೆ..

ಶಿಕ್ಷಕರಿಗೆ ನೀವು ಉಡುಗೊರೆಗಳನ್ನು ಕಳುಹಿಸುತ್ತಿದ್ದರೆ, ಇದರಲ್ಲೂ ಜಾಗರೂಕರಾಗಿರಿ. ಸಾಧ್ಯವಾದಷ್ಟು ಪುಸ್ತಕಗಳು, ಕಾದಂಬರಿಗಳನ್ನು ಉಡುಗೊರೆ ರೂಪದಲ್ಲಿ ನೀಡಿ. ಇದನ್ನು ಹೊರತುಪಡಿಸಿ, ಖಾದಿ ಬಟ್ಟೆ, ಬ್ಯಾಗ್‌ಗಳನ್ನೂ ನೀಡಬಹುದು. ನೀವೇ ನಿಮ್ಮ ಕೈಯಾರೆ ಬರೆದ ಪತ್ರವನ್ನೂ ನೀಡಬಹುದು.

ಕೇಕ್ ಕತ್ತರಿಸಿ.. ಆದರೆ ಹೀಗೆ ಮಾಡಬೇಡಿ..

ಸ್ನೇಹಿತರ ಜತೆ ಶಿಕ್ಷಕರ ಮನೆಗೆ ತೆರಳಿ, ಈ ದಿನವನ್ನು ಕೇಕ್‌ ಕತ್ತರಿಸಿ ಸಂಭ್ರಮಿಸುವುದಿದ್ದರೆ, ಅದು ಖುಷಿಯ ವಿಚಾರವೇ. ಹಾಗಂತ ಹಾಗೆ ತೆಗೆದುಕೊಂಡು ಹೋದ ಕೇಕ್‌ ಅನ್ನು ಶಿಕ್ಷಕರ ಮುಖಕ್ಕೆ ಹಚ್ಚುವುದಾಗಲಿ, ಹಾಳು ಮಾಡುವುದಾಗಲಿ ಮಾಡಬೇಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ