logo
ಕನ್ನಡ ಸುದ್ದಿ  /  ಜೀವನಶೈಲಿ  /  ಪರ್ಸ್‌ ದಪ್ಪಗಿದ್ದರೆ ಮಾತ್ರ ಸ್ಲಿಮ್‌ ಖರೀದಿಸಬಹುದು! ಆಪಲ್‌ ಕಂಪನಿಯ 2025ರ ದುಬಾರಿ ಫೋನ್‌ ಆಗಲಿದೆಯೇ ಐಫೋನ್‌ 17 ಸ್ಲಿಮ್‌

ಪರ್ಸ್‌ ದಪ್ಪಗಿದ್ದರೆ ಮಾತ್ರ ಸ್ಲಿಮ್‌ ಖರೀದಿಸಬಹುದು! ಆಪಲ್‌ ಕಂಪನಿಯ 2025ರ ದುಬಾರಿ ಫೋನ್‌ ಆಗಲಿದೆಯೇ ಐಫೋನ್‌ 17 ಸ್ಲಿಮ್‌

Praveen Chandra B HT Kannada

Oct 08, 2024 05:47 PM IST

google News

ಆಪಲ್‌ ಕಂಪನಿಯ 2025ರ ದುಬಾರಿ ಫೋನ್‌ ಆಗಲಿದೆಯೇ ಐಫೋನ್‌ 17 ಸ್ಲಿಮ್‌

  • ಆಪಲ್‌ ಕಂಪನಿಯ ಮುಂದಿನ ದುಬಾರಿ ಐಫೋನ್‌ ಯಾವುದು? ಟೆಕ್‌ ತಜ್ಞರ ಪ್ರಕಾರ ಐಫೋನ್‌ 17 ಸ್ಲಿಮ್‌ ಆಪಲ್‌ನ ದುಬಾರಿ ಫೋನ್‌ ಆಗಲಿದೆ. ಅಂದಹಾಗೆ, ಈ ಫೋನ್‌ನ ಹೆಸರು ಆಪಲ್‌ ಐಫೋನ್‌ ಸ್ಲಿಮ್‌ ಎಂದಿರಬಹುದೇ? ಆಪಲ್‌ ಐಫೋನ್‌ 17 ಏರ್‌ ಎಂದಿರಬಹುದೇ ಎಂದು ಇನ್ನೂ ಸ್ಪಷ್ಟವಾಗಿಲ್ಲ.

ಆಪಲ್‌ ಕಂಪನಿಯ 2025ರ ದುಬಾರಿ ಫೋನ್‌ ಆಗಲಿದೆಯೇ ಐಫೋನ್‌ 17 ಸ್ಲಿಮ್‌
ಆಪಲ್‌ ಕಂಪನಿಯ 2025ರ ದುಬಾರಿ ಫೋನ್‌ ಆಗಲಿದೆಯೇ ಐಫೋನ್‌ 17 ಸ್ಲಿಮ್‌

ಐಫೋನ್‌16 ಸರಣಿ ಬಿಡುಗಡೆಯಾದ ಬಳಿಕ ಮುಂದಿನ ಸರಣಿ ಕುರಿತು ವದಂತಿ ಆರಂಭವಾಗಿದೆ. ಐಫೋನ್‌ 17 ಹೇಗಿರಲಿದೆ, ಇದರ ದರ ಎಷ್ಟಿರಬಹುದು ಎಂಬೆಲ್ಲ ಚರ್ಚೆಗಳು ಆರಂಭವಾಗಿವೆ. 2025ರಲ್ಲಿ ಬಿಡುಗಡೆಯಾಗುವ ಐಫೋನ್‌ 17 ಸರಣಿಯಲ್ಲಿ ಸ್ಲಿಮ್‌ ಅಥವಾ ಏರ್‌ ಹೆಸರಿನ ಹೊಸ ಐಫೋನ್‌ ಕುರಿತು ಚರ್ಚೆಗಳು ನಡೆಯುತ್ತಿದೆ. ಇದು ಆಪಲ್‌ನ ದುಬಾರಿ ಐಫೋನ್‌ ಆಗಿರಲಿದೆಯೇ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ. ಈಗಾಗಲೇ ಕಂಪನಿಯು ಐಫೋನ್‌ ಮಿನಿ ಮತ್ತು ಐಫೋನ್‌ ಪ್ಲಸ್‌ ಮಾಡೆಲ್‌ಗಳನ್ನು ಪರಿಚಯಿಸಿದೆ. ಇದೇ ರೀತಿಯ ಮೂರನೇ ಪ್ರಯತ್ನವಾಗಿ ಐಫೋನ್‌ ಸ್ಲಿಮ್‌ ಪರಿಚಯಿಸಲಿದೆ ಎಂದು ವರದಿಗಳು ತಿಳಿಸಿವೆ.

ಐಫೋನ್‌ 17 ಸ್ಲಿಮ್‌: ಪ್ರೊ ಮ್ಯಾಕ್ಸ್‌ಗಿಂತಲೂ ದುಬಾರಿಯೇ?

ಸ್ಲಿಮ್‌ ಮತ್ತು ಏರ್‌ ಐಫೋನ್‌ಗಳು ಹೆಸರಿನಂತೆ ತೆಳ್ಳಗೆ ಇರಲಿವೆ. ಹಗುರವಾಗಿರಲಿವೆ. ಆಪಲ್‌ನ ಹಲವು ಅನ್ವೇಷಣೆಗಳಿಗೆ ಸಾಕ್ಷಿಯಾಗಿರಲಿವೆ. ಹೊಸ ಡಿಸ್‌ಪ್ಲೇ ಟೆಕ್ನಾಲಜಿ ಇರಲಿದೆ. ಇದೇ ಸಮಯದಲ್ಲಿ ಇದು ಅತ್ಯಧಿಕ ದರ ಹೊಂದಿರುವ ಸೂಚನೆಯೂ ಇದೆ. ಆರಂಭಿಕರಿಗೆ ಇದು ಒಲೆಡ್‌ ಪ್ಯಾನೆಲ್‌ನಿಂದ ಆಗಮಿಸಬಹುದು. ಇದೇ ಸಮಯದಲ್ಲಿ ಸ್ಲಿಮ್‌ನ ಟಾಪ್‌ ಎಂಡ್‌ ಆವೃತ್ತಿ ದುಬಾರಿಯಾಗಿರಲಿದೆ. ಇದು 2025ರ ದುಬಾರಿ ಆಪಲ್‌ ಐಫೋನ್‌ ಆಗಿರಲಿದೆ ಎಂದು ವಿವಿಧ ಟೆಕ್‌ ಮಾಧ್ಯಮಗಳು ವರದಿ ಮಾಡಿವೆ. ಇದರ ದರ 1,199 ಡಾಲರ್‌ಗಿಂತಲೂ ಹೆಚ್ಚಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಐಫೋನ್‌ ಎಕ್ಸ್‌ ರೀತಿಯ ಡಿಸೈನ್‌ ಮ್ಯಾಜಿಕ್‌

ಐಫೋನ್‌ ಎಕ್ಸ್‌ ಮೂಲಕ ಆಪಲ್‌ ಹೇಗೆ ಜಗತ್ತನ್ನು ಅಚ್ಚರಿಗೊಳಿಸಿತು ಎಂದು ನೆನಪಿರುವುದೇ? ಆಧುನಿಕ ಲುಕ್‌ ಮತ್ತು ಪ್ರೀಮಿಯಂ ಸ್ಟೈನ್‌ಲೆಸ್‌ ಸ್ಟೀಲ್‌ ವಿನ್ಯಾಸದ ಮೂಲಕ ಆ ಸಮಯಲ್ಲಿ ಎಲ್ಲರನ್ನು ಅಚ್ಚರಿಗೆ ದೂಡಿತ್ತು. ಐಫೋನ್‌ 17 ಸ್ಲಿಮ್‌ ಮೂಲಕ ಮತ್ತೊಮ್ಮೆ ಆಪಲ್‌ ಕಮಾಲ್‌ ಮಾಡುವ ಸೂಚನೆಯಿದೆ.

ವಿನ್ಯಾಸದ ಬದಲಾವಣೆ ಮಾತ್ರವಲ್ಲದೆ ಡೈನಾಮಿಕ್‌ ಐಸ್‌ಲ್ಯಾಂಡ್‌ ಕಟೌಟ್‌ ಗಾತ್ರವನ್ನೂ ಕಡಿಮೆ ಮಾಡುವ ಸೂಚನೆಯಿದೆ. ಐಫೋನ್‌ 16 ಪ್ಲಸ್‌ಗೆ ಹೋಲಿಸಿದರೆ ಇದು ಕಾಂಪ್ಯಾಕ್ಟ್‌ ವಿನ್ಯಾಸ ಹೊಂದಿರಲಿದೆ.

ಇಷ್ಟು ಮಾತ್ರವಲ್ಲ, ಇದರಲ್ಲಿ ಹಲವು ಸುಧಾರಿತ ಎಐ ಫೀಚರ್‌ಗಳು, ಟಾಪ್‌ ಎಂಡ್‌ ಫೀಚರ್‌ಗಳು ಇರುವ ಸೂಚನೆಯಿದೆ. ಆಪಲ್‌ಟೆಕ್‌ ತೋಟದಲ್ಲಿ ಬೆಳೆಯುವ ಸುಂದರ ಹಣ್ಣು ಇದಾಗಿರುವ ಸೂಚನೆಯಿದೆ.

ಇತ್ತೀಚೆಗೆ ಬಿಡುಗಡೆಯಾದ ಆಪಲ್‌ ಐಫೋನ್‌ 16ನಲ್ಲಿ ಮಹತ್ವದ ಸುಧಾರಣೆಗಳು ಇರಲಿಲ್ಲ. ಕ್ಯಾಮೆರಾ ಬಟನ್‌, ಎಐ ಫೀಚರ್‌ಗಳು ಸೇರಿದಂತೆ ಕೆಲವು ಬದಲಾವಣೆಗಳು ಮಾತ್ರ ಇದ್ದವು. ಹೀಗಾಗಿ, ಸಾಕಷ್ಟು ಆಪಲ್‌ ಐಫೋನ್‌ 15 ಗ್ರಾಹಕರು ಐಫೋನ್‌ 16ಗೆ ಅಪ್‌ಗ್ರೇಡ್‌ ಆಗಲು ಬಯಸಲಿಲ್ಲ. ಆದರೆ, ಬಹುತೇಕರು ಆಪಲ್‌ ಐಫೋನ್‌ 17ಗೆ ಕಾಯುತ್ತಿರುವುದು ಸುಳ್ಳಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ