Google Maps: ಗೂಗಲ್ ಮ್ಯಾಪ್‌ನ 10 ಅಚ್ಚರಿಗಳು, ಮ್ಯಾಪ್‌ನೊಳಗೆ ಸೇರಿಕೊಂಡಿವೆ ನಿಮಗೆ ಗೊತ್ತಿಲ್ಲದ ಹಲವು ಕೂಲ್ ಫೀಚರ್‌ಗಳು, ಇಲ್ಲಿದೆ ವಿವರ
Aug 11, 2023 05:00 PM IST
Google Maps: ಗೂಗಲ್ ಮ್ಯಾಪ್‌ನ 10 ಅಚ್ಚರಿಗಳು
- Google maps tips and tricks: ಗೂಗಲ್ ಮ್ಯಾಪ್‌ನಲ್ಲಿ ಹಲವು ವಿಶೇಷ ಫೀಚರ್‌ಗಳಿವೆ. ಟ್ರಾಫಿಕ್ ಮಾಹಿತಿ, ಅಗ್ಯುಮೆಂಟೆಡ್ ರಿಯಾಲ್ಟಿ, ಪಾರ್ಕಿಂಗ್ ಸ್ಥಳದ ಮಾಹಿತಿ, ರೈಲು ಸಂಚಾರ ಮಾಹಿತಿ, ಕಟ್ಟಡಗಳಲ್ಲಿ ನ್ಯಾವಿಗೇಷನ್ ಸೇರಿದಂತೆ ಹಲವು ಕೂಲ್ ಫೀಚರ್‌ಗಳಿವೆ.
ಗೂಗಲ್ ಮ್ಯಾಪ್ ಈಗ ಸಾಕಷ್ಟು ಅಪ್‌ಡೇಟ್ ಆಗಿದೆ. ಅದರೊಳಗೆ ಸಾಕಷ್ಟು ಕೂಲ್ ಫೀಚರ್‌ಗಳು ಸೇರಿಕೊಂಡಿವೆ. ನೀವು ಮೊಬೈಲ್ ಅಥವಾ ಜಿಪಿಎಸ್ ಬಳಸಿ ವಾಹನದಲ್ಲಿ ಪ್ರಯಾಣ ಕೈಗೊಳ್ಳುವಾಗ ಕೆಲವೊಂದು ಕೂಲ್ ಫೀಚರ್‌ಗಳನ್ನು ಗಮನಿಸಿರಬಹುದು. ಕೆಲವು ಫೀಚರ್‌ಗಳನ್ನು ಗಮನಿಸದೆ ಇರಬಹುದು.
1. ಟ್ರಿಪ್‌ನಲ್ಲಿ ಸ್ಟಾಪ್ ಹಾಕಿ
ರೋಡ್ ಟ್ರಿಪ್ ಕೈಗೊಳ್ಳುವ ಮೊದಲು ನಡುವೆ ಊಟ ಅಥವಾ ಪೆಟ್ರೋಲ್ ಹಾಕಲು ಸ್ಟಾಪ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ಇದಕ್ಕಾಗಿ ಮೊದಲು ನೀವು ತಲುಪಬೇಕಾದ ಸ್ಥಳವನ್ನು ಆಯ್ಕೆ ಮಾಡಬೇಕು. ಅದು ಸೆಟ್ ಮಾಡಿದ ಬಳಿಕ ಎಲ್ಲೆಲ್ಲಿ ಸ್ಟಾಪ್ ಮಾಡಲು ಬಯಸುವಿರಿ ಅಲ್ಲಿ ಸ್ಟಾಪ್ಸ್ ಹಾಕಬಹುದು. ಅಲ್ಲಿ ಗ್ಯಾಸ್ ಸ್ಟೇಷನ್ಸ್, ರೆಸ್ಟೂರೆಂಟ್ ಇತ್ಯಾದಿಗಳಲ್ಲಿ ಇಂತಹ ಸ್ಟಾಪ್ ಆಯ್ಕೆ ಮಾಡಬಹುದು.
2. ಈಗಿನ ಮತ್ತು ಭವಿಷ್ಯದ ಟ್ರಾಫಿಕ್
ಗೂಗಲ್ ಮ್ಯಾಪ್‌ನಲ್ಲಿ ಟ್ರಾಫಿಕ್ ಎಂಬ ಲೇಯರ್ ಬಟನ್ ಕ್ಲಿಕ್ ಮಾಡಿ ಪರಿಶೀಲಿಸಿ. ಈಗಿನ ಟ್ರಾಫಿಕ್ ಮಾತ್ರವಲ್ಲದೆ ಸಾಮಾನ್ಯವಾಗಿ ಈ ದಿನ, ಈ ವಾರ ಟ್ರಾಫಿಕ್ ಹೇಗಿರಬಹುದು ಎಂಬ ಅಪ್‌ಡೇಟ್ ಕೂಡ ದೊರಕುತ್ತದೆ.
3. ಅಗ್ಯುಮೆಂಟೆಡ್ ರಿಯಾಲ್ಟಿ ಬಳಸಿ
ಮ್ಯಾಪ್ ಬಳಸಿ ಹೋಗುತ್ತಿರುವಾಗ ಎಡ ಮತ್ತು ಬಲಕ್ಕೆ ಎಲ್ಲಿಗೆ ಹೋಗಬೇಕೆಂದು ಗೊಂದಲ ಉಂಟಾಗಬಹುದು. ಇಂತಹ ಸಮಯದಲ್ಲಿ ಮ್ಯಾಪ್‌ನಲ್ಲಿ ಇರುವ ಕಂಪಾಸ್ ಚಿಹ್ನೆ ಕ್ಲಿಕ್ ಮಾಡಿ.
4. ಕಟ್ಟಡಗಳಲ್ಲಿ ನ್ಯಾವಿಗೇಷನ್
ದೊಡ್ಡ ಸ್ಟೇಡಿಯಂನಲ್ಲಿ ನಿಮ್ಮ ಸೀಟು ಎಲ್ಲಿದೆ ಎಂದು ಹುಡುಕಲು ಬಯಸುವಿರಾ. ದೊಡ್ಡ ಮಾಲ್‌ನಲ್ಲಿ ಯಾವ ಕಡೆಗೆ ಹೋಗಬೇಕೆಂದು ಬಯಸುವಿರಾ. ಕೆಲವೊಂದು ಇಂತಹ ಪ್ರದೇಶಗಳಲ್ಲಿಯೂ ಗೂಗಲ್ ಮ್ಯಾಪ್ ವರ್ಕ್ ಆಗುತ್ತದೆ.
5. ರೈಲು ಪ್ರಯಾಣಕ್ಕೆ ಬಳಕೆ
ರೈಲಿನ ಒಳಗೆ ಪ್ರಯಾಣಿಸುವಾಗ ಅಥವಾ ರೈಲಿಗಾಗಿ ಕಾಯುವಾಗ ರೈಲು ಎಲ್ಲಿದೆ, ಎಲ್ಲಿ ತಲುಪಿದೆ, ಎಲ್ಲಿ ನಿಂತಿದೆ ಇತ್ಯಾದಿ ಹಲವು ಮಾಹಿತಿಗಳನ್ನು ಗೂಗಲ್ ಮ್ಯಾಪ್‌ನಿಂದ ತಿಳಿದುಕೊಳ್ಳಬಹುದು. ಗೂಗಲ್ ಮ್ಯಾಪ್‌ನಲ್ಲಿರುವ ಟ್ರೇನ್ ಐಕಾನ್ ಬಳಸಿರಿ.
6. ಒಂದೇ ಕೈನಲ್ಲಿ ಝೂಮ್ ಮಾಡಿ
ಗೂಗಲ್ ಮ್ಯಾಪ್‌ನಲ್ಲಿ ಝೂಮ್ ಮಾಡಲು ಎರಡು ಕೈ ಬಳಸಬೇಕು ಎಂದು ಇಲ್ಲ. ಸ್ಕ್ರಿನ್ ಮೇಲೆ ಡಬಲ್ ಟ್ಯಾಪ್ ಮಾಡಿ. ಸುಲಭವಾಗಿ ಒಂದೇ ಕೈನಲ್ಲಿ ಝೂಮ್ ಇನ್ ಅಥವಾ ಝೂಮ್ ಔಟ್ ಮಾಡಬಹುದು.
7. ಫೇವರಿಟ್ ಲೊಕೆಷನ್ ಸೇವ್ ಮಾಡಿ
ನೀವು ದಿನನಿತ್ಯ ಹೋಗುವ ಫೇವರಿಟ್ ಲೊಕೆಷನ್‌ಗಳನ್ನು ಸೇವ್ ಮಾಡಲು ಬಯಸುವಿರಾ. ಸ್ಟೋರ್, ರೆಸ್ಟೂರೆಂಟ್ ಇತ್ಯಾದಿಗಳನ್ನು ಸೇವ್ ಮಾಡಲು "ಸೇವ್" ಐಕಾನ್ ಕ್ಲಿಕ್ ಮಾಡಿ. ಫೇವರಿಟ್, ವಾಟ್ ಟು ಗೋ, ಸ್ಟಾರ್ಡ್ ಪ್ಲೇಸಸ್ ಇತ್ಯಾದಿ ಆಯ್ಕೆಗಳು ಇಲ್ಲಿ ದೊರಕುತ್ತವೆ. ಮಾತ್ರವಲ್ಲದೆ ಗೂಗಲ್ ಮ್ಯಾಪ್‌ನಲ್ಲಿ ನಿಮ್ಮ ಮನೆ ಅಥವಾ ಆಫೀಸ್ ವಿಳಾಸವನ್ನೂ ಸೇವ್ ಮಾಡಬಹುದು. ವಾಹನ ಚಾಲನೆ ಮಾಡಲು ಇದರಿಂದ ಸುಲಭವಾಗುತ್ತದೆ.
8. ಆಫ್‌ಲೈನ್ ಮ್ಯಾಪ್ ರಚಿಸಿ
ಇಂಟರ್‌ನೆಟ್ ಇಲ್ಲದ ಸ್ಥಳಗಳಲ್ಲಿ ಪ್ರಯಾಣಿಸಲು ಅನುವಾಗುವಂತೆ ನೀವು ಆಫ್‌ಲೈನ್ ಮ್ಯಾಪ್‌ಗಳನ್ನು ಸೇವ್ ಮಾಡಬಹುದು. ಗೂಗಲ್ ಮ್ಯಾಪ್‌ನಲ್ಲಿರುವ ಮೈಕ್ ಸಿಂಬಲ್ ಕ್ಲಿಕ್ ಮಾಡಿ. ಓಕೆ ಮ್ಯಾಪ್ ಎಂದು ಹೇಳಿ. ಸ್ಕ್ರೀನ್‌ನಲ್ಲಿರುವ ಮ್ಯಾಪ್ ಸ್ಕ್ರೀನ್ ಸೇವ್ ಆಗುತ್ತದೆ. ಪ್ರೊಫೈಲ್ ಪಿಕ್ಚರ್ ಪಕ್ಕದಲ್ಲಿರುವ ಮೆನು ಕ್ಲಿಕ್ ಮಾಡಿ. ಅಲ್ಲಿ ಆಫ್‌ಲೈನ್ ಮ್ಯಾಪ್ ಎಂಬ ಆಯ್ಕೆ ಇದೆ. ಅಲ್ಲಿ ಸೆಲೆಕ್ಟ್ ಯುವರ್ ಓನ್ ಮ್ಯಾಪ್ ತೆರೆಯಿರಿ. ಅಲ್ಲಿ ಸೇವ್ ಆಗಿರುವ ಮ್ಯಾಪ್ ಇರುತ್ತದೆ.
9.ಟೋಲ್ ತಪ್ಪಿಸಲು ಅವಕಾಶ
ಟೋಲ್ ಗೇಟ್‌ಗಳನ್ನು ತಪ್ಪಿಸಿ ಪರ್ಯಾಯ ರಸ್ತೆಗಳ ಮೂಲಕ ಪ್ರಯಾಣಿಸಿ ಕೆಲವು ನೂರು ರೂಪಾಯಿ ಉಳಿಸಲು ಬಯಸಿದ್ದೀರಾ. ಡೈರೆಕ್ಷನ್ ಬಟನ್ ಕ್ಲಿಕ್ ಮಾಡಿ. ಅಲ್ಲಿ ರೂಟ್ ಆಯ್ಕೆಗಳನ್ನು ನೋಡಿ. ಅಲ್ಲಿ ನೋ ಟೋಲ್ಸ್ ಆಯ್ಕೆಗಳು ದೊರಕುತ್ತವೆ. ಮೆನು ಕ್ಲಿಕ್ ಮಾಡಿ. ಅಲ್ಲಿ ಆಪ್ಷನ್ ಕ್ಲಿಕ್ ಮಾಡಿ. ಅವಾಯ್ಡ್ ಟೋಲ್ಸ್ ಕ್ಲಿಕ್ ಮಾಡಿ. ನೆನಪಿಡಿ, ಟೋಲ್ಸ್ ತಪ್ಪಿಸಲು ಹೋಗಿ ನೀವು ಹಲವು ಕಿಲೋಮೀಟರ್ ಹೆಚ್ಚು ದೂರ ಪ್ರಯಾಣಿಸಬೇಕಾಗಬಹುದು.
10. ಕಾರು ಎಲ್ಲಿ ಪಾರ್ಕಿಂಗ್ ಮಾಡಿರುವಿರಿ
ನೀವು ನಿಗದಿತ ಸ್ಥಳ ತಲುಪಿ ಕಾರು ಪಾರ್ಕಿಂಗ್ ಮಾಡುವಿರಿ. ಮತ್ತೆ ಅಲ್ಲಿಗೆ ಬರಲು ನೆನಪು ಇರಬೇಕು. ನಿಮ್ಮ ಲೊಕೆಷನ್‌ನಲ್ಲಿ ಕಾಣಿಸುವ ಸಣ್ಣ ನೀಲಿ ಚುಕ್ಕಿ ಕ್ಲಿಕ್ ಮಾಡಿ. ಒಂದು ಸಿಂಗಲ್ ಟ್ಯಾಪ್ ಮಾಡಿ. ಸೇವ್ ಪಾರ್ಕಿಂಗ್ ಆಯ್ಕೆ ಕಾಣಿಸುತ್ತದೆ. ಅದನ್ನು ಸೇವ್ ಮಾಡಿ.
ಮ್ಯಾಪ್‌ನಲ್ಲಿ ಇನ್ನೂ ಹಲವು ಫೀಚರ್‌ಗಳಿವೆ. ಕಾಡ್ಜಿಚ್ಚು ಮಾಹಿತಿ, ಗಾಳಿಯ ಗುಣಮಟ್ಟ ತಿಳಿದುಕೊಳ್ಳಬಹುದು. ನಿಮ್ಮ ಲೊಕೆಷನ್ ಶೇರ್ ಮಾಡುವ ಆಯ್ಕೆಯಿದೆ. ಕಾರಿನಲ್ಲಿ ಪ್ರಯಾಣಿಸುವಾಗ ಕಾರಿನ ಸ್ಪೀಕರ್‌ನಲ್ಲಿ ಮ್ಯಾಪ್ ವಾಯ್ಸ್ ಕೇಳಿಸಬಹುದು. ಎರಡು ನಿಗದಿತ ಪಾಯಿಂಟ್‌ಗಳ ನಡುವೆ ಎಷ್ಟು ದೂರ ಇದೆ ಎಂದು ತಿಳುದಕೊಳ್ಳಬಹುದು. ನೀವು ಪ್ರಯಾಣಿಸುವ ಸ್ಥಳದ ಸುತ್ತಮುತ್ತಲು ಇರುವ ಸ್ಟೋರ್‌ಗಳು, ರೆಸ್ಟೂರೆಂಟ್‌ಗಳು ಇತ್ಯಾದಿಗಳ ಮಾಹಿತಿ ಪಡೆಯಬಹುದು. ಈಗಲೇ ನಿಮ್ಮ ಗೂಗಲ್ ಮ್ಯಾಪ್ ತೆರೆದು ಏನೆಲ್ಲ ಹೊಸ ಫೀಚರ್‌ಗಳು ಇವೆ ಎಂದು ತಿಳಿದುಕೊಳ್ಳಿ.