logo
ಕನ್ನಡ ಸುದ್ದಿ  /  ಜೀವನಶೈಲಿ  /  Yoga:ಮಧುಮೇಹವನ್ನು ನಿಯಂತ್ರಿಸಲು ಈ ಆಸನಗಳು ಪ್ರಯೋಜನಕಾರಿ...ನಿಮಗೂ ಉಪಯೋಗವಾಗಬಹುದು ನೋಡಿ

Yoga:ಮಧುಮೇಹವನ್ನು ನಿಯಂತ್ರಿಸಲು ಈ ಆಸನಗಳು ಪ್ರಯೋಜನಕಾರಿ...ನಿಮಗೂ ಉಪಯೋಗವಾಗಬಹುದು ನೋಡಿ

HT Kannada Desk HT Kannada

Aug 07, 2022 12:09 PM IST

google News

ಡಯಾಬಿಟಿಸ್​​​ ಕಂಟ್ರೋಲ್ ಮಾಡಲು ಉಪಯೋಗವಾಗುವ ಆಸನಗಳು

  • ಬೆನ್ನುಮೂಳೆಯನ್ನು ಆರೋಗ್ಯಕರವಾಗಿರಿಸುವಲ್ಲಿ ಹಲಾಸನ ಬಹಳ ಉಪಯುಕ್ತವಾಗಿದೆ. ಬೆನ್ನಿನಲ್ಲಿ ಶೇಖರಣೆಯಾದ ಕೊಬ್ಬನ್ನು ಕಡಿಮೆ ಮಾಡಲು ಕೂಡಾ ಇದು ಸಹಾಯಕಾರಿ. ಥೈರಾಯ್ಡ್ ಗ್ರಂಥಿಯನ್ನು ಉತ್ತೇಜಿಸುವ ಮೂಲಕ, ಇದು ಬೊಜ್ಜು, ಕುಬ್ಜತೆ, ಕ್ಷೀಣತೆ ಇತ್ಯಾದಿ ಸಮಸ್ಯೆಗಳನ್ನು ನಿವಾರಿಸುತ್ತದೆ.

ಡಯಾಬಿಟಿಸ್​​​ ಕಂಟ್ರೋಲ್ ಮಾಡಲು ಉಪಯೋಗವಾಗುವ ಆಸನಗಳು
ಡಯಾಬಿಟಿಸ್​​​ ಕಂಟ್ರೋಲ್ ಮಾಡಲು ಉಪಯೋಗವಾಗುವ ಆಸನಗಳು

ಮಧುಮೇಹ ಮತ್ತು ಬೊಜ್ಜಿನ ಸಮಸ್ಯೆಯಿಂದ ಮತ್ತಷ್ಟು ಆರೋಗ್ಯ ಸಮಸ್ಯೆಗಳು ಉದ್ಭವವಾಗುತ್ತದೆ. ಆದರೆ ಬೊಜ್ಜು ಕಡಿಮೆ ಮಾಡಲು ಹಲವು ಮಾರ್ಗಗಳಿವೆ ಅದರಲ್ಲಿ ಯೋಗ ಉತ್ತಮ ಮಾರ್ಗವಾಗಿದೆ. ಯೋಗದ ಮೂಲಕ ಮಧುಮೇಹ ಮತ್ತು ಸ್ಥೂಲಕಾಯತೆಯನ್ನು ನಿಯಂತ್ರಿಸಬಹುದು. ಅದರಲ್ಲಿ ಮಧುಮೇಹವನ್ನು ನಿಯಂತ್ರಿಸಲೆಂದೇ ಕೆಲವು ಯೋಗಾಸನಗಳಿವೆ. ಈ ಆಸನಗಳ ಬಗ್ಗೆ ಒಂದಿಷ್ಟು ಮಾಹಿತಿ.

ಸರ್ವಾಂಗಾಸನ

ಈ ಆಸನವು ಥೈರಾಯ್ಡ್ ಗ್ರಂಥಿಯನ್ನು ಸಕ್ರಿಯಗೊಳಿಸಿ ಆರೋಗ್ಯಕರವಾಗಿಸುತ್ತದೆ. ಆದ್ದರಿಂದ ಬೊಜ್ಜು, ದೌರ್ಬಲ್ಯ, ಆಯಾಸ ಇತ್ಯಾದಿ ರೋಗಗಳು ದೂರವಾಗುತ್ತವೆ. ಮೂತ್ರಜನಕಾಂಗದ ಗ್ರಂಥಿಗಳು, ವೀರ್ಯ ಬಳ್ಳಿ, ಅಂಡಾಶಯಗಳನ್ನು ಬಲಪಡಿಸುತ್ತದೆ. ಈ ಆಸನದಿಂದ ಅಸ್ತಮಾ ಕಡಿಮೆಯಾಗುತ್ತದೆ. ಈ ಭಂಗಿಯಿಂದ ಭುಜಗಳು ಸ್ಥಿರವಾಗಿರುತ್ತವೆ. ಕಿಬ್ಬೊಟ್ಟೆಯ ಅಂಗಗಳು, ಕರುಳುಗಳು ಮುಂತಾದ ಆಂತರಿಕ ಅಂಗಗಳ ಆರೋಗ್ಯವನ್ನು ಸುಧಾರಿಸುತ್ತದೆ.

ಉತ್ತಾನ ಪಾದಾಸನ

ಈ ಆಸನವು ಕರುಳನ್ನು ದೃಢವಾಗಿ ಮತ್ತು ಆರೋಗ್ಯಕರವಾಗಿ ಮಾಡುತ್ತದೆ ಮತ್ತು ಮಲಬದ್ಧತೆ, ಗ್ಯಾಸ್, ಬೊಜ್ಜು ಇತ್ಯಾದಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಹಾಗೂ ಗ್ಯಾಸ್ಟ್ರಿಕ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ, ಹೃದ್ರೋಗ, ಹೊಟ್ಟೆ ನೋವು, ಉಸಿರಾಟದ ಕಾಯಿಲೆಗಳನ್ನು ಕೂಡಾ ನಿವಾರಿಸುತ್ತದೆ. ಬೆನ್ನು ನೋವನ್ನು ಕಡಿಮೆ ಮಾಡಲು ಈ ಆಸನ ಪ್ರಯೋಜನಕಾರಿ

ಹಲಾಸನ

ಬೆನ್ನುಮೂಳೆಯನ್ನು ಆರೋಗ್ಯಕರವಾಗಿರಿಸುವಲ್ಲಿ ಹಲಾಸನ ಬಹಳ ಉಪಯುಕ್ತವಾಗಿದೆ. ಬೆನ್ನಿನಲ್ಲಿ ಶೇಖರಣೆಯಾದ ಕೊಬ್ಬನ್ನು ಕಡಿಮೆ ಮಾಡಲು ಕೂಡಾ ಇದು ಸಹಾಯಕಾರಿ. ಥೈರಾಯ್ಡ್ ಗ್ರಂಥಿಯನ್ನು ಉತ್ತೇಜಿಸುವ ಮೂಲಕ, ಇದು ಬೊಜ್ಜು, ಕುಬ್ಜತೆ, ಕ್ಷೀಣತೆ ಇತ್ಯಾದಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಜೀರ್ಣ, ಗ್ಯಾಸ್, ಮಲಬದ್ಧತೆ, ಗುಲ್ಮ, ಯಕೃತ್ತು ಹಿಗ್ಗುವಿಕೆ, ಹೃದಯ ರೋಗಗಳಿಗೆ ಇದು ಪ್ರಯೋಜನಕಾರಿ. ಈ ಆಸನದಿಂದ ಮೇದೋಜ್ಜೀರಕ ಗ್ರಂಥಿ ಸಕ್ರಿಯಗೊಳಿಸುತ್ತದೆ ಮತ್ತು ಮಧುಮೇಹವನ್ನು ಗುಣಪಡಿಸುತ್ತದೆ. ಈ ಆಸನವು ಮುಟ್ಟಿನ ನೋವನ್ನು ಶಮನಗೊಳಿಸುತ್ತದೆ.

ನವಾಸನ

ಈ ಆಸನದಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಇದು ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡುತ್ತದೆ. ಪ್ರಾಣವಾಯುವಿನ ಪ್ರವೇಶದಿಂದ ಹೃದಯ ಮತ್ತು ಶ್ವಾಸಕೋಶಗಳು ಸಹ ಬಲಗೊಳ್ಳುತ್ತವೆ. ಕರುಳು, ಹೊಟ್ಟೆ, ಮೇದೋಜೀರಕ ಗ್ರಂಥಿಗಳು ಯಕೃತ್ತನ್ನು ಆರೋಗ್ಯಕರವಾಗಿಸುತ್ತದೆ. ಈ ಆಸನದಿಂದ ತೂಕವನ್ನು ಕಡಿಮೆ ಮಾಡಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ