logo
ಕನ್ನಡ ಸುದ್ದಿ  /  ಜೀವನಶೈಲಿ  /  Varalakshmi Vratam Puja: ವರಮಹಾಲಕ್ಷ್ಮಿ ಪೂಜೆ ಹೇಗೆ? ವಿಧಿವಿಧಾನಗಳೇನು? ವರವ ಕರುಣಿಸುವ ದೇವಿಯನ್ನು ಹೀಗೆ ಪೂಜಿಸಿ

Varalakshmi Vratam Puja: ವರಮಹಾಲಕ್ಷ್ಮಿ ಪೂಜೆ ಹೇಗೆ? ವಿಧಿವಿಧಾನಗಳೇನು? ವರವ ಕರುಣಿಸುವ ದೇವಿಯನ್ನು ಹೀಗೆ ಪೂಜಿಸಿ

Praveen Chandra B HT Kannada

Aug 04, 2022 06:00 PM IST

ವರಮಹಾಲಕ್ಷ್ಮಿ ಪೂಜೆ ಹೇಗೆ? ವಿಧಿವಿಧಾನಗಳೇನು?

    • ವರಮಹಾಲಕ್ಷ್ಮಿ ವ್ರತ ಪೂಜೆ (Varalakshmi Vratam Puja) ಕೈಗೊಳ್ಳಲು ಬಯಸುವವರು ಪೂಜಾ ವಿಧಿವಿಧಾನಗಳನ್ನು (varamahalakshmi pooja vidhanam) ತಿಳಿದುಕೊಳ್ಳುವುದು ಅತ್ಯಂತ ಅವಶ್ಯ. ದೀಪಾವಳಿ ಹಬ್ಬದ ಸಮಯದಲ್ಲಿ ಲಕ್ಷ್ಮಿಪೂಜೆ ಮಾಡಲು ಗೊತ್ತಿರುವವರಿಗೆ ವರಮಹಾಲಕ್ಷ್ಮಿ ಪೂಜೆ ಮಾಡುವುದು ಸುಲಭವಾಗಬಹುದು. ಏಕೆಂದರೆ, ವರಮಹಾಲಕ್ಷ್ಮಿ ಪೂಜೆಯ ವಿವಿಧ ಹಂತಗಳು (Varalakshmi Vratam Puja Vidhi) ದೀಪಾವಳಿಯ ಲಕ್ಷ್ಮಿ ಪೂಜೆಯನ್ನು ಹೋಲುತ್ತದೆ. ಪೂಜೆಯನ್ನು ಸರಿಯಾದ ಕ್ರಮದಲ್ಲಿ, ಸರಿಯಾದ ವಿಧಿ ವಿಧಾನದಲ್ಲಿ ಮಾಡಿದರೆ ಖಂಡಿತಾ ಫಲ ದೊರಕುತ್ತದೆ.
ವರಮಹಾಲಕ್ಷ್ಮಿ ಪೂಜೆ ಹೇಗೆ? ವಿಧಿವಿಧಾನಗಳೇನು?
ವರಮಹಾಲಕ್ಷ್ಮಿ ಪೂಜೆ ಹೇಗೆ? ವಿಧಿವಿಧಾನಗಳೇನು? (Wikipedia)

ಎಲ್ಲೆಡೆ ಶ್ರಾವಣ ಹುಣ್ಣಿಮೆಯ ಮುನ್ನ ದಿನವಾದ ಶುಕ್ರವಾರ (ಆಗಸ್ಟ್‌ 5) ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ವಿಶೇಷವಾಗಿ ಮನೆಯ ಮಹಿಳೆಯರು, ಹೆಣ್ಣುಮಕ್ಕಳು ದೇವಿಯ ಆರಾಧನೆಯಲ್ಲಿ ತೊಡಗುವರು. ವರಮಹಾಲಕ್ಷ್ಮಿ ವ್ರತ ಪೂಜೆ (Varalakshmi Vratam Puja) ಕೈಗೊಳ್ಳಲು ಬಯಸುವವರು ಪೂಜಾ ವಿಧಿವಿಧಾನಗಳನ್ನು (varamahalakshmi pooja vidhanam) ತಿಳಿದುಕೊಳ್ಳುವುದು ಅತ್ಯಂತ ಅವಶ್ಯ. ದೀಪಾವಳಿ ಹಬ್ಬದ ಸಮಯದಲ್ಲಿ ಲಕ್ಷ್ಮಿಪೂಜೆ ಮಾಡಲು ಗೊತ್ತಿರುವವರಿಗೆ ವರಮಹಾಲಕ್ಷ್ಮಿ ಪೂಜೆ ಮಾಡುವುದು ಸುಲಭವಾಗಬಹುದು. ಏಕೆಂದರೆ, ವರಮಹಾಲಕ್ಷ್ಮಿ ಪೂಜೆಯ ವಿವಿಧ ಹಂತಗಳು (Varalakshmi Vratam Puja Vidhi) ದೀಪಾವಳಿಯ ಲಕ್ಷ್ಮಿ ಪೂಜೆಯನ್ನು ಹೋಲುತ್ತದೆ. ದೇವರು ಮತ್ತು ದೇವಿಯರ ಪೂಜೆಗಳನ್ನು ಸರಿಯಾದ ಕ್ರಮದಲ್ಲಿ, ವಿಧಾನದಲ್ಲಿ ಮಾಡಿದರೆ ಖಂಡಿತಾ ಫಲ ದೊರಕುತ್ತದೆ.

ಟ್ರೆಂಡಿಂಗ್​ ಸುದ್ದಿ

Optical Illusion: ಇಲ್ಲಿರುವ ನಾಲ್ಕು ಬಾಕ್ಸ್‌ಗಳಲ್ಲಿ ಒಂದು ಮಾತ್ರ ಭಿನ್ನವಾಗಿದೆ, ಅದು ಯಾವುದು? ನಿಮ್ಮ ಕಣ್ಣು ಶಾರ್ಪ್‌ ಇದ್ರೆ ಉತ್ತರ ಹೇಳಿ

ಬೇಸಿಗೆ ರಜೆ ಅಂತ ಮಕ್ಕಳನ್ನು ಹೊರಗಡೆ ಆಟವಾಡಲು ಕಳುಹಿಸುವ ಮುನ್ನ ಈ ಮುನ್ನೆಚ್ಚರಿಕೆಗಳನ್ನು ಮರೆಯದೇ ಪಾಲಿಸಿ, ಪೋಷಕರಿಗೆ ಸಲಹೆ

ಅನಾನಸ್ ಸ್ಪೆಷಲ್ ಕೇಸರಿಬಾತ್: ಬಾಯಲ್ಲಿ ನೀರೂರಿಸುವ ಸಿಹಿ ಖಾದ್ಯ ತಯಾರಿಸುವುದು ತುಂಬಾ ಸುಲಭ

Beauty Tips: ರಾತ್ರಿ ಮಲಗುವಾಗ ಮುಖಕ್ಕೆ ಎರಡೇ ಎರಡು ಹನಿ ಈ ಕ್ರೀಮ್‌ ಹಚ್ಚಿ ನೋಡಿ, ಮುಂಜಾನೆ ತ್ವಚೆಯ ಕಾಂತಿ ದುಪ್ಪಟ್ಟು ಅರಳುತ್ತೆ

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ವರಮಹಾಲಕ್ಷ್ಮಿ ಪೂಜೆ, ವರಮಹಾಲಕ್ಷ್ಮಿ ವ್ರತಕ್ಕೆ ಹೆಚ್ಚಿನ ಮಹತ್ವವಿದೆ. ವಿಶೇಷವಾಗಿ ಮದುವೆಯಾಗಿರುವ ಮಹಿಳೆಯರು ಈ ಪೂಜೆ ಮಾಡುತ್ತಾರೆ. ತಮ್ಮ ಕುಟುಂಬದ ಒಳಿತಿಗಾಗಿ ಮಹಿಳೆಯರು ದೇವಿಯಲ್ಲಿ ಬೇಡುತ್ತಾರೆ. ತನ್ನ ಭಕ್ತರ ಎಲ್ಲಾ ಆಸೆಗಳನ್ನು ಈಡೇರಿಸುವ ದೇವಿಯನ್ನು ಭಕ್ತಿಯಿಂದ ಪ್ರಾರ್ಥಿಸುತ್ತಾರೆ.

ವರಲಕ್ಷ್ಮಿ ವ್ರತ ಶುಭ ಮಹೂರ್ತ ಯಾವುದು? (varalakshmi pooja 2022 muhurtham)

ಆಗಸ್ಟ್‌ 5ರಂದು ಬೆಳಗ್ಗೆ 6:00 ರಿಂದ ಬೆಳಗ್ಗೆ 8.20 ರವರೆಗೆ, ಬೆಳಗ್ಗೆ 9.20 ರಿಂದ ಬೆಳಗ್ಗೆ 11.05 ರವರೆಗೆ, ಬೆಳಗ್ಗೆ 11.54 ರಿಂದ ಮಧ್ಯಾಹ್ನ 12.35 ರವರೆಗೆ ಮತ್ತು ಸಂಜೆ 6.40 ರಿಂದ ಸಂಜೆ 7.40 ರವರೆಗೆ (ಪ್ರದೋಷ ಕಾಲ ಪೂಜೆ ಸಮಯ) ಪೂಜೆ ಮಾಡಬಹುದು. ಈ ಅವಧಿಗಳಲ್ಲಿ ಬೆಳಗ್ಗೆ11:50 ರಿಂದ ಮಧ್ಯಾಹ್ನ 12:42 ರವರೆಗೆ ಅಭಿಜಿತ್‌ ಮಹೂರ್ತವಾಗಿದ್ದು, ಪೂಜೆಗೆ ಹೆಚ್ಚು ಶುಭ ಸಮಯವಾಗಿದೆ. ಹಾಗೆಯೇ, ಬೆಳಗ್ಗೆ 09:53 ರಿಂದ ಬೆಳಗ್ಗೆ 11:29 ರವರೆಗೆ ಅಮೃತಕಾಲವಿದ್ದು, ಪೂಜೆಗೆ ಶುಭ ಮಹೂರ್ತವಾಗಿದೆ.

ಅಷ್ಟಲಕ್ಷ್ಮಿಯರನ್ನು ಪೂಜಿಸೋಣ

ವರಮಹಾಲಕ್ಷ್ಮಿ ವ್ರತದಲ್ಲಿ ವಿಶೇಷವಾಗಿ ಅಷ್ಟಲಕ್ಷ್ಮಿಯರನ್ನು ಪೂಜಿಸಲಾಗುತ್ತದೆ. ಅಂದರೆ, ಆದಿ ಲಕ್ಷ್ಮಿ (ರಕ್ಷಕ), ಧನ ಲಕ್ಷ್ಮಿ (ಸಂಪತ್ತಿನ ದೇವತೆ), ಧೈರ್ಯ ಲಕ್ಷ್ಮಿ (ಧೈರ್ಯ ದೇವತೆ), ಸೌಭಾಗ್ಯ ಲಕ್ಷ್ಮಿ (ಸಮೃದ್ಧಿಯ ದೇವತೆ), ವಿಜಯ ಲಕ್ಷ್ಮಿ (ವಿಜಯದ ದೇವತೆ), ಧಾನ್ಯ ಲಕ್ಷ್ಮಿ (ಪೋಷಣೆಯ ದೇವತೆ), ಸಂತಾನ ಲಕ್ಷ್ಮಿ (ಸಂತಾನದ ದೇವತೆ) ಮತ್ತು ವಿದ್ಯಾ ಲಕ್ಷ್ಮಿ (ಬುದ್ಧಿವಂತಿಕೆಯ ದೇವತೆ)ಯನ್ನು ಪೂಜಿಸಲಾಗುತ್ತದೆ.

ವರಮಹಾಲಕ್ಷ್ಮಿ ವ್ರತ ಮಾಡುವುದೇಕೆ?

ಮಹಿಳೆಯರು ತಮ್ಮ ಕುಟುಂಬದ ಒಳಿತಿಗಾಗಿ, ಯೋಗಕ್ಷೇಮಕ್ಕಾಗಿ, ಸಮೃದ್ಧಿಗಾಗಿ ವರಮಹಾಲಕ್ಷ್ಮಿ ವ್ರತವನ್ನು ಕೈಗೊಳ್ಳುತ್ತಾರೆ. ವರಮಹಾಲಕ್ಷ್ಮಿ ವ್ರತದಂದು ಸೌಕರ್ಯ, ಸಮೃದ್ಧಿ, ಆರೋಗ್ಯ, ಸಂಪತ್ತನ್ನು ದೇವಿಯಲ್ಲಿ ಕೋರುತ್ತಾರೆ. ವರ+ಲಕ್ಷ್ಮಿ= ವರ ಲಕ್ಷ್ಮಿಯು ಖಂಡಿತಾ ತಮಗೆ ವರವನ್ನು ನೀಡಬಹುದು ಎಂಬ ಅಭಿಲಾಷೆಯಿಂದ ಭಕ್ತಿಯಿಂದ ಭಕ್ತರು ದೇವಿಯನ್ನು ಪೂಜಿಸುತ್ತಾರೆ.

ವರಮಹಾಲಕ್ಷ್ಮಿ ಪೂಜೆಗೆ ಏನೆಲ್ಲ ಬೇಕು?

ದೇವಿಯ ಮುಖವಾಡ, ಕಲಶ, ಸೀರೆ, ಆಭರಣಗಳು, ರೆಡಿಮೆಡ್‌ ಕೂದಲು ಮತ್ತು ಇತರೆ ಸಾಮಗ್ರಿಗಳು, ಕನ್ನಡಿ, ಸಿಪ್ಪೆ ಸಹಿತ ಮೂರು ತೆಂಗಿನಕಾಯಿ ಮತ್ತು ಹೂವುಗಳು ಇರಲಿ. ಇದರೊಂದಿಗೆ ಮಣಿಕಟ್ಟಿಗೆ ಕಟ್ಟಲು ಪವಿತ್ರ ಹಳದಿ ದಾರ, ಮರದ ಮಣೆ ಅಥವಾ ಪೀಠ, ತಾಜಾ ಹೂವುಗಳ ದಾರ, ವೀಳ್ಯದೆಲೆ, ಅಡಿಕೆ, ಹಣ್ಣುಗಳು, ಬಾಳೆಹಣ್ಣು, ಅರಿಶಿನ, ಚಂದನ, ಕುಂಕುಮ, ಅಕ್ಷತೆ, ರಂಗೋಲಿ ಪುಡಿ, ಅಕ್ಷತೆ ಮತ್ತು ಅಕ್ಕಿ ಇರಲಿ. ದೀಪ, ಎಣ್ಣೆ ಅಥವಾ ತುಪ್ಪ, ಧೂಪದ್ರವ್ಯದ ತುಂಡುಗಳು ಮತ್ತು ಕರ್ಪೂರ ಇರಲಿ.

ವರಮಹಾಲಕ್ಷ್ಮಿ ಪೂಜೆ ಮಾಡುವ ವಿಧಿವಿಧಾನ (Varalakshmi Vratam Puja Vidhi))

- ವರಮಹಾಲಕ್ಷ್ಮಿ ವ್ರತದ ಶುಕ್ರವಾರ ಮುಂಜಾನೆ ಬೇಗನೆ ಎದ್ದು ಸ್ನಾನ ಮಾಡಬೇಕು. ಕರ್ನಾಟಕದ ಬಹುತೇಕ ಪ್ರದೇಶಗಲ್ಲಿ, ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ವರಮಹಾಲಕ್ಷ್ಮಿ ದಿನದಂದು ಮಹಿಳೆಯರು ಬೇಗ ಎದ್ದು ಸ್ನಾನ ಮುಗಿಸಿ ರಂಗೋಲಿ ಹಾಕುವ ಸಂಭ್ರಮ ಇರುತ್ತದೆ.

- ವರಮಹಾಲಕ್ಷ್ಮಿ ವ್ರತದ ಉಪವಾಸ ಮುಂಜಾನೆಯಿಂದಲೇ ಆರಂಭವಾಗುತ್ತದೆ. ಶುಕ್ರವಾರ ಸೂರ್ಯಾಸ್ತದವರೆಗೆ ಅಥವಾ ಪೂಜೆ ಮುಗಿಯುವವರೆಗೆ ವ್ರತ ಮುಂದುವರೆಯುತ್ತದೆ.

- ಬೆಳಗ್ಗೆ ಸ್ನಾನ ಮುಗಿಸಿ, ಮನೆಯ ಹೊರಗಡೆ ರಂಗೋಲಿ ಹಾಕಿ.

- ಪೂಜಾ ಸ್ಥಳವನ್ನು ಸಿದ್ಧಪಡಿಸಿ. ಗಂಗಾಜಲ ಅಥವಾ ಶುದ್ಧ ನೀರಿನಿಂದ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಬೇಕು. ಮರದ ಪೀಠ ಅಥವಾ ಮಣೆಗೆ ಅರಿಶಿನ ಹಚ್ಚಿ, ಅಲ್ಲಿ ರಂಗೋಲಿಯನ್ನೂ ಸಿದ್ಧಪಡಿಸಿರಿ.

- ಪೀಠದ ಮಧ್ಯದಲ್ಲಿ ಕೊಂಚ ಅಕ್ಷತೆ ಹಾಕಿ, ಅದರ ಮೇಲೆ ಲೋಹದ ತಟ್ಟೆಯನ್ನು ಇಡಬೇಕು. ತಟ್ಟೆಯ ಮೇಲೆ ಹಸಿ ಅಕ್ಕಿಯನ್ನು ಹರಡಿ. ಅರಿಶಿನ ಮತ್ತು ಕುಂಕುಮವನ್ನು ಕಲಶದ ಮೇಲೆ ಹಚ್ಚಬೇಕು. ಕಳಶವನ್ನು ತಟ್ಟೆಯ ಮಧ್ಯಭಾಗದಲ್ಲಿ ಇಡಿ. ಕಲಶಕ್ಕೆ ಸ್ವಲ್ಪ ನೀರು ಹಾಕಿ. ಸ್ವಲ್ಪ ಅಕ್ಷತೆ ಹಾಕಿ. ಕಲಶದ ಮೇಲೆ ತೆಂಗಿನಕಾಯಿ ಇಡಿ.

- ಕಳಶದ ಮೇಲಿಟ್ಟ ತೆಂಗಿನಕಾಯಿಗೆ ಲಕ್ಷ್ಮಿ ದೇವಿಯ ಮುಖವಾಡವನ್ನು ಇರಿಸಿ. ದೇವಿಗೆ ಸೀರೆ ಉಡಿಸಿ. ಕೂದಲು, ಆಭರಣಗಳು, ಸೌಂದರ್ಯ ಸಾಮಾಗ್ರಿಗಳಿಂದ ದೇವಿಯನ್ನು ಅಲಂಕರಿಸಿ. ದೇವಿಯ ಕೂದಲಿಗೆ ಹೂವುಗಳನ್ನು ಇಡಿ. ಒಟ್ಟಾರೆ, ಸಾಕ್ಷಾತ್‌ ದೇವಿಯೇ ಮನೆಯಲ್ಲಿ ಇರುವಂತೆ ಅಲಂಕಾರ ಮಾಡಿ. ದೇವಿಯ ಹಿಂದೆ ಕನ್ನಡಿ ಇಡಿ.

-ದೀಪ ಬೆಳಗಿಸಿ. ದೇವಿಯ ಮುಂದೆ ವೀಳ್ಯದೆಲೆ, ಅಡಿಕೆ ಇಡಿ.

- ಯಾವುದೇ ಪೂಜೆ ಆರಂಭಿಸುವ ಮೊದಲು ಮೊದಲ ಪೂಜೆ ಸಲ್ಲಿಸಬೇಕಾದದ್ದು ಗಣೇಶನಿಗೆ. ಹೀಗಾಗಿ, ದೇವಿಯ ಅಲಂಕಾರ ಪೂರ್ಣಗೊಂಡ ಬಳಿಕ ಮೊದಲ ಪ್ರಾರ್ಥನೆಯನ್ನು ಗಣಪತಿಗೆ ಸಲ್ಲಿಸಿ. ನಂತರ ವರಮಹಾಲಕ್ಷ್ಮಿ ಮಂತ್ರಗಳನ್ನು, ಸಹಸ್ರನಾಮ ಸ್ತ್ರೋತ್ರಗಳನ್ನು ಪಠಿಸಿ. ಈ ಸಮಯದಲ್ಲಿ ದೇವಿಗೆ ಹೂವಿನ ಆರ್ಚನೆ ಮಾಡುತ್ತ ಇರಿ. ಬಳಿಕ ತಾಂಬೂಲವನ್ನು ಅರ್ಪಿಸಿ. ನೈವೇದ್ಯವನ್ನು ಅರ್ಪಿಸಿ.

-ಕೊನೆಗೆ ದೇವಿಗೆ ಆರತಿ ಮಾಡಿ. ಬಳಿಕ ನಿಮ್ಮ‌ ಬಲಕೈಯ ಮಣಿಕಟ್ಟಿಗೆ ದಾರವನ್ನು ಕಟ್ಟಿ ಪೂಜೆ ಮುಗಿಸಿ. ಪೂಜೆಯ ಮರುದಿನ ಸ್ನಾನಮಾಡಿ ಪೂಜೆಗೆ ಬಳಸಿದ ಕಲಶವನ್ನು ವಿಸರ್ಜಿಸಬೇಕು. ಅದಕ್ಕೂ ಮೊದಲು ಕಲಶದ ನೀರನ್ನು ಮನೆಯೊಳಗೆ ಚಿಮುಕಿಸಿ. ದೇವಿಗಿಟ್ಟ ಅಕ್ಕಿಯನ್ನು ಮನೆಯ ಅಡುಗೆಗೆ ಬಳಸುವ ಅಕ್ಕಿಯೊಂದಿಗೆ ಬೆರೆಸಲು ಮರೆಯಬೇಡಿ.

ವರಮಹಾಲಕ್ಷ್ಮಿ ಸ್ತೋತ್ರಗಳು

ಲಕ್ಷ್ಮಿ ಬೀಜ ಮಂತ್ರ (ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ ||), ಮಹಾಲಕ್ಷ್ಮಿ ಮಂತ್ರ (ಓಂ ಶ್ರೀಂ ಹ್ರೀಂ ಶ್ರೀಂ ಕಮಲೆ ಕಮಲಲಾಯೆ ಪ್ರಸೀದ ಪ್ರಸೀದ ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮಯೇ ನಮಃ ||), ಲಕ್ಷ್ಮಿ ಗಾಯತ್ರಿ ಮಂತ್ರ(ಓಂ ಶ್ರೀ ಮಹಾಲಕ್ಷ್ಮೈಚಾ ವಿದ್ಮಹೇ ವಿಷ್ಣು ಪತ್ನಯೇ ಚ ಧೀಮಹಿ, ತನ್ನೋ ಲಕ್ಷ್ಮಿ ಪ್ರಚೋದಯಾತ್‌ ಓಂ ||) ಪಠಿಸಬಹುದು.

ವರಮಹಾಲಕ್ಷ್ಮಿ ವ್ರತ ಮಂತ್ರ (ಶುಕ್ಲೇ ಶ್ರಾವಣಿಕೇ ಮಾಸೇ ಪೂರ್ಣಿಮೋ ಪಾಂತ್ಯ ಭಾಗವೇ |, ವರಲಕ್ಷ್ಮ್ಯಾ ವ್ರತಂ ಕಾರ್ಯಂ ಸರ್ವಸಿದ್ಧಿ ಪ್ರದಾಯಕಂ (ಸರ್ವ ಮಾಂಗಲ್ಯ ಸಿದ್ಧಯೇ) , ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |, ಶಂಖ ಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತು ತೇ || ಪಠಿಸಬಹುದು. ಇದರೊಂದಿಗೆ ವರಮಹಾಲಕ್ಷ್ಮಿ ಅಷ್ಟೋತ್ತರ ಮಂತ್ರವಾದ ಓಂ ಪ್ರಕ್ರತ್ಯೈ ನಮಃ

ಓಂ ವಿಕೃತ್ಯೈ ನಮಃ ಓಂ ವಿದ್ಯಾಯೈ ನಮಃ ಓಂ ಸುರಭ್ಯೈ ನಮಃ ಓಂ ಪರಮಾತ್ಮಿಕಾಯೈ ನಮಃ ಓಂ ವಾಚೇ ನಮಃ ಓಂ ಪದ್ಮಲಯಾಯೈ ನಮಃ ಓಂ ಪದ್ಮಾಯೈ ನಮಃ.... ಪಠಿಸಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು