logo
ಕನ್ನಡ ಸುದ್ದಿ  /  ಜೀವನಶೈಲಿ  /  Vastu Tips: ಮನೆ, ಮನದಲ್ಲಿ ಶಾಂತಿ ಇರಬೇಕಂದ್ರೆ ವಾಸ್ತು ಪ್ರಕಾರ ಬುದ್ಧನ ವಿಗ್ರಹವನ್ನು ಈ ರೀತಿ ಇಡಿ

Vastu Tips: ಮನೆ, ಮನದಲ್ಲಿ ಶಾಂತಿ ಇರಬೇಕಂದ್ರೆ ವಾಸ್ತು ಪ್ರಕಾರ ಬುದ್ಧನ ವಿಗ್ರಹವನ್ನು ಈ ರೀತಿ ಇಡಿ

HT Kannada Desk HT Kannada

Dec 27, 2023 09:30 AM IST

google News

ವಾಸ್ತುಪ್ರಕಾರ ಬುದ್ಧನ ವಿಗ್ರಹ ಇಡಲು ಸಲಹೆ ಸೂಚನೆಗಳು

  • ಬುದ್ಧನ ವಿಗ್ರಹವನ್ನು ವಾಸ್ತುಪ್ರಕಾರ ಇಟ್ಟರೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಆದರೆ ಬುದ್ಧನ ವಿಗ್ರಹವನ್ನು ಮನೆಯಲ್ಲಿ ಇಡಲು ಕೆಲವೊಂದು ನೀತಿನಿಯಮಗಳಿವೆ. ಅದರ ಅನುಸಾರ ಪ್ರತಿಷ್ಠಾಪಿಸಿದರೆ ಒಳ್ಳೆಯದು. 

ವಾಸ್ತುಪ್ರಕಾರ ಬುದ್ಧನ ವಿಗ್ರಹ ಇಡಲು ಸಲಹೆ ಸೂಚನೆಗಳು
ವಾಸ್ತುಪ್ರಕಾರ ಬುದ್ಧನ ವಿಗ್ರಹ ಇಡಲು ಸಲಹೆ ಸೂಚನೆಗಳು (PC: )

Vastu Tips: ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕು ಎಂಬ ಉದ್ದೇಶಕ್ಕಾಗಿ ಬಹಳಷ್ಟು ಜನರು ಬುದ್ಧನ ವಿಗ್ರಹವನ್ನು ಇರಿಸಿಕೊಂಡಿರುತ್ತಾರೆ. ಆದರೆ ಬುದ್ಧನ ವಿಗ್ರವನ್ನು ಹೇಗೆಂದರಲ್ಲಿ, ಎಲ್ಲೆಂದರಲ್ಲಿ ಇಟ್ಟರೆ ಮನೆಯಲ್ಲಿ ಶಾಂತಿ ಬದಲಿಗೆ ಅಶಾಂತಿ ಉಂಟಾಗುತ್ತದೆ. ನೆಮ್ಮದಿ ಇರಬೇಕಾದ ಸ್ಥಳದಲ್ಲಿ ಕಷ್ಟ ತುಂಬಿರುತ್ತದೆ.

ನೀವು ಬುದ್ಧನ ವಿಗ್ರಹವನ್ನು ಮನೆಯಲ್ಲಿ ವಾಸ್ತುಪ್ರಕಾರ ಇಟ್ಟರೆ, ಅದು ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಮನೆಯ ಋಣಾತ್ಮಕತೆಯನ್ನು ಹೋಗಲಾಡಿಸುತ್ತದೆ ಮತ್ತು ಜೀವನದಲ್ಲಿ ಬರುವ ಎಲ್ಲಾ ಅಡೆತಡೆಗಳು ದೂರವಾಗುತ್ತವೆ, ಆದರೆ ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಸೂಕ್ತ ರೀತಿ ಇಡದಿದ್ದರೆ ಜೀವನದಲ್ಲಿ ಸಮಸ್ಯೆಗಳಿಗೆ ಕಾರಣವಾಗಬಹುದು. ಮನೆಯಲ್ಲಿ ಬುದ್ದನ ವಿಗ್ರಹವನ್ನು ಯಾವ ರೀತಿ ಇಡುವುದು ಎಂದು ತಿಳಿದುಕೊಳ್ಳಿ.

ಬುದ್ಧನ ವಿಗ್ರಹವನ್ನು ಮನೆಯಲ್ಲಿ ಇಡುವುದು ಹೇಗೆ?

ಆಶೀರ್ವಾದ ಮಾಡುತ್ತಿರುವ ಭಂಗಿಯಲ್ಲಿರುವ ಬುದ್ಧನ ವಿಗ್ರಹವನ್ನು ಮುಖ್ಯ ದ್ವಾರದಲ್ಲಿ ಸ್ಥಾಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ಯಾವುದೇ ಕಾರಣಕ್ಕೂ ಅಪ್ಪಿತಪ್ಪಿಯೂ ಬುದ್ಧನ ವಿಗ್ರಹವನ್ನು ನೆಲದ ಮೇಲೆ ಇಡಬೇಡಿ. ಯಾವಾಗಲೂ ನೆಲದಿಂದ 3-4 ಅಡಿ ಎತ್ತರದಲ್ಲಿ ಇರಿಸಿ. ಇದರಿಂದ ಶತ್ರುಗಳಿಂದ ಮುಕ್ತಿ ದೊರೆಯುತ್ತದೆ ಮತ್ತು ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ. ಭಗವಾನ್ ಬುದ್ಧನ ಪ್ರತಿಮೆಯನ್ನು ಮನೆಯ ಪಶ್ಚಿಮ ದಿಕ್ಕಿನಲ್ಲಿ ಬಲಕ್ಕೆ ವಾಲುವಂತೆ ಇಡುವುದು ತುಂಬಾ ಪ್ರಯೋಜನಕಾರಿ ಎಂದು ವಾಸ್ತುತಜ್ಞರು ಹೇಳುತ್ತಾರೆ. ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಎಂದು ನಂಬಲಾಗಿದೆ.

ವಾಸ್ತು ಪ್ರಕಾರ ಬುದ್ಧನ ವಿಗ್ರಹವನ್ನು ಪೂರ್ವಾಭಿಮುಖವಾಗಿ ಮನೆಯ ದೇವರ ಕೋಣೆಯಲ್ಲಿ ಇರಿಸಿದರೂ ಇದರಿಂದ ಮನೆ ಮನದಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ಮನಸ್ಸಿಗೆ ಶಾಂತಿ ಸಿಗುತ್ತದೆ. ಮಕ್ಕಳ ಅಧ್ಯಯನ ಕೊಠಡಿಯಲ್ಲಿ ಭಗವಾನ್ ಬುದ್ಧನ ಪ್ರತಿಮೆಯನ್ನು ಪೂರ್ವಾಭಿಮುಖವಾಗಿ ಇರಿಸಬಹುದು. ಇದರಿಂದ ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ, ಮತ್ತು ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿ ಮೂಡುತ್ತದೆ ಎಂದು ನಂಬಲಾಗಿದೆ. ವಾಸ್ತು ಪ್ರಕಾರ, ಕೈಗಳನ್ನು ಮಡಚಿರುವ ಬುದ್ಧನ ವಿಗ್ರಹವನ್ನು ಊಟದ ಹಾಲ್ ಅಥವಾ ಲಿವಿಂಗ್ ರೂಂನಲ್ಲಿ ಇಡಬೇಕು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ