Brain Teaser: 3 ಸೇಬುಹಣ್ಣಿನ ಬೆಲೆ 30ರೂ ಆದ್ರೆ, ತೆಂಗಿನಕಾಯಿ ಸೇಬುಹಣ್ಣು ಹಾಗೂ ಬಾಳೆಹಣ್ಣಿನ ಒಟ್ಟು ಮೊತ್ತ ಎಷ್ಟಾಗುತ್ತೆ, ಥಟ್ಟಂತ ಹೇಳಿ
Nov 27, 2024 11:50 AM IST
ಬ್ರೈನ್ ಟೀಸರ್
- ಹಣ್ಣುಗಳು ಹಾಗೂ ಗಣಿತದಿಂದ ಕೂಡಿದ ಬ್ರೈನ್ ಟೀಸರ್‌ವೊಂದು ವೈರಲ್ ಆಗಿದೆ. ಇದರಲ್ಲಿ ಸೇಬು, ತೆಂಗಿನಕಾಯಿ, ಬಾಳೆಹಣ್ಣಿದ್ದು ಇವುಗಳ ಒಟ್ಟು ಮೊತ್ತ ಎಷ್ಟು ಎಂದು ನೀವು ಹೇಳಬೇಕು. ಆದರೆ ಈ ಪ್ರಶ್ನೆ ನೋಡೋಕೆ ಸುಲಭ ಆದ್ರೂ ಉತ್ತರ ಹೇಳೋದು ಕಷ್ಟ ಎನ್ನಿಸಬಹುದು. ನೀವು ಗಣಿತಪ್ರೇಮಿಯಾದ್ರೆ ಉತ್ತರ ಕಂಡುಹಿಡಿಯಲು ಪ್ರಯತ್ನಿಸಿ.
ಶಾಲಾ ದಿನಗಳಲ್ಲಿ ಗಣಿತದ ಸೂತ್ರ ಬಿಡಿಸುವಲ್ಲಿ ನೀವು ಎಕ್ಸ್‌ಪರ್ಟ್ ಆಗಿದ್ರೆ, ಅಂದಿನ ದಿನಗಳನ್ನು ನೆನಪಿಸುವ ಬ್ರೈನ್ ಟೀಸರ್‌ವೊಂದನ್ನು ನಿಮಗಾಗಿ ನಾವು ತಂದಿದ್ದೇವೆ. ಈ ಬ್ರೈನ್ ಟೀಸರ್ ನಿಮ್ಮ ಮೆದುಳಿಗೆ ಹುಳ ಬಿಡೋದು ಮಾತ್ರವಲ್ಲ, ನಿಮಗೆ ಮೋಜು ಸಿಗುವಂತೆ ಮಾಡುತ್ತದೆ. ಗಣಿತದ ಟ್ವಿಸ್ಟ್ ಇಟ್ಟಿರುವ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮಗಿರೋದು 20 ಸೆಕೆಂಡ್ ಸಮಯ ಮಾತ್ರ.
2016ರಲ್ಲಿ ಫ್ರೂಟ್ ಆಲ್‌ಜಿಬ್ರಾ ಎಂದು ಕರೆಸಿಕೊಳ್ಳುವ ಇಂತಹ ಬ್ರೈನ್ ಟೀಸರ್ ಪ್ರಶ್ನೆಗಳು ವೈರಲ್ ಆಗಲು ಶುರು ಮಾಡಿದವು. ಈ ಚಿತ್ರ ನೋಡಿದಾಗ ನಿಮಗೆ ನಿಮ್ಮ ಬಾಲ್ಯದ ಶಾಲಾ ದಿನದ ಗಣಿತ ಪಠ್ಯದ ನೆನಪಾಗುವುದು ಸುಳ್ಳಲ್ಲ. ಇದರಲ್ಲಿ ಇರುವುದು ಕೇವಲ ಕೂಡಿಸುವ ಲೆಕ್ಕಾಚಾರ. ಇದಕ್ಕೆ ನೀವು ಸರಿಯಾದ ಉತ್ತರ ಏನು ಎಂದು ಕಂಡುಹಿಡಿಯಬೇಕು.
ಬ್ರೈನ್ ಟೀಸರ್‌ನಲ್ಲಿ ಏನಿದೆ?
ಈ ಬ್ರೈನ್ ಟೀಸರ್‌ನಲ್ಲಿ ಸೇಬುಹಣ್ಣು, ಬಾಳೆಹಣ್ಣು ಹಾಗೂ ಒಡೆದ ತೆಂಗಿನಕಾಯಿ ಇದೆ. 3 ಸೇಬುಹಣ್ಣಿನ ಬೆಲೆ 30 ರೂ ಆದರೆ, 1 ಸೇಬುಹಣ್ಣು, 4–4 ಹಣ್ಣಿರುವ ಎರಡು ಬಾಳೆಹಣ್ಣಿನ ಚಿಪ್ಪು ಸೇರಿದಂತೆ 18, 4 ಬಾಳೆಹಣ್ಣು ಒಡೆದ ತೆಂಗಿನಕಾಯಿ 2 ಚಿಪ್ಪು ಸೇರಿ 2 ಆದರೆ, ಅರ್ಧ ತೆಂಗಿನಕಾಯಿ, ಒಂದು ಸೇಬುಹಣ್ಣು ಹಾಗೂ 3 ಬಾಳೆಹಣ್ಣಿರುವ 1 ಚಿಪ್ಪು ಬಾಳೆಹಣ್ಣು ಸೇರಿ ಎಷ್ಟಾಗುತ್ತದೆ? ಇದಕ್ಕೆ ನೀವು ಉತ್ತರ ಹೇಳಬೇಕು.
@garyhgoodridges ಎನ್ನುವ ಎಕ್ಸ್ ಪುಟದಲ್ಲಿ ಪೋಸ್ಟ್ ಮಾಡಲಾದ ಫ್ರೂಟ್ ಆಲ್‌ಜೀಬ್ರಾ ಬ್ರೈನ್ ಟೀಸರ್ ಇದಾಗಿದೆ. ಈ ಬ್ರೈನ್ ಟೀಸರ್ ಅನ್ನು ಹಲವರು ನೋಡಿದ್ದು, ಕೆಲವರು ಕಾಮೆಂಟ್ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರವನ್ನು ತಿಳಿಸಿದ್ದಾರೆ.
ಬ್ರೈನ್ ಟೀಸರ್‌ಗೆ ಬಂದ ಕಾಮೆಂಟ್‌ಗಳು
‘ಒಂದು ಸೇಬು = 10 ಅಂಕಗಳು, ಒಂದು ಚಿಪ್ಪು ಬಾಳೆಹಣ್ಣು (ಒಟ್ಟು 4- ತಲಾ 1 ಅಂಕ) = 4 ಅಂಕಗಳು ತೆಂಗಿನಕಾಯಿಯ ಎರಡು ಭಾಗಗಳು (ತಲಾ 1 ಅಂಕ) = 2 ಅಂಕಗಳು ಸೇಬು ತುಂಡು + ಬಾಳೆಹಣ್ಣುಗಳ ಚಿಪ್ಪಿನ ಅಂತಿಮ ಉತ್ತರ (3 ತುಂಡುಗಳು) + ತೆಂಗಿನಕಾಯಿಯ ಅರ್ಧ = 10+3+1 = 14 ಅಂಕಗಳು‘ ಎಂದು ಎಕ್ಸ್ ಬಳಕೆದಾರರೊಬ್ಬರು ತಾವು ಕಂಡುಕೊಂಡ ಉತ್ತರವನ್ನು ವಿವರಣೆಯ ಮೂಲಕ ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.
ಹಾಗಾದರೆ ಇವರು ಹೇಳಿದ ಉತ್ತರ ಸರಿಯೇ, ನೀವು ಬೇರೆ ಉತ್ತರವನ್ನು ಕಂಡುಕೊಂಡಿದ್ದೀರಾ ಎಂಬುದನ್ನು ತಿಳಿಸಿ.
ಈ ಬ್ರೈನ್ ಟೀಸರ್ ಅನ್ನೂ ಓದಿ
Brain Teaser: 5=15, 7=21 ಆದ್ರೆ 10= ಎಷ್ಟು? ಗಣಿತದಲ್ಲಿ ಎಕ್ಸ್‌ಪರ್ಟ್ ಆದ್ರೆ 15 ಸೆಕೆಂಡ್ ಒಳಗೆ ಉತ್ತರ ಹೇಳಿ; ನಿಮ್ಮ ಸಮಯ ಈಗ ಶುರು
ಗಣಿತದಲ್ಲಿ ನೀವು ಎಕ್ಸ್‌ಪರ್ಟ್ ಅಂತಾದ್ರೆ, ಗಣಿತದ ಸೂತ್ರಗಳು ನಿಮಗೆ ತಿಳಿದಿವೆ ಅಂತಾದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳುವ ಪ್ರಯತ್ನ ಮಾಡಿ. ಇಲ್ಲಿರೋದು ಸಿಂಪಲ್ ಪ್ರಶ್ನೆ. 5=15, 7=21 ಆದ್ರೆ 10= ಎಷ್ಟು ಎಂದು ನೀವು ಹೇಳಬೇಕು. ನಿಮಗಿರೋದು ಕೇವಲ 15 ಸೆಕೆಂಡ್ ಸಮಯ. ಟ್ರೈ ಮಾಡಿ, ಬೇಗ ಉತ್ತರ ಹೇಳಿ.