Brain Teaser: ಗಣಿತಪ್ರೇಮಿಗಳಿಗಾಗಿ ಇಲ್ಲಿದೆ ಚಾಲೆಂಜ್, ಈ ಬ್ರೈನ್ ಟೀಸರ್‌ಗೆ 15 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು, ನಿಮ್ಮ ಸಮಯ ಈಗ ಶುರು
Nov 01, 2024 10:40 AM IST
ಬ್ರೈನ್ ಟೀಸರ್
- ಪಜಲ್ ಪ್ರೇಮಿ ನೀವಾದ್ರೆ ಒಮ್ಮೆ ಇತ್ತ ಗಮನ ಹರಿಸಿ. ಮೆದುಳಿಗೆ ಹುಳ ಬಿಡುವ ಪ್ರಶ್ನೆಯೊಂದು ಇಲ್ಲಿದೆ. ಬ್ರೈನ್ ಟೀಸರ್‌ಗೆ ಉತ್ತರ ಹೇಳೋದ್ರಲ್ಲಿ ನೀವು ಎಕ್ಸ್‌ಪರ್ಟ್ ಆದ್ರೆ ಈ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯ, ನಿಮಗಿರೋದು ಕೇವಲ 15 ಸೆಕೆಂಡ್ ಸಮಯ. ಅಷ್ಟ್ರಲ್ಲಿ M+N*O= ಎಷ್ಟು ಎಂದು ನೀವು ಕಂಡುಹಿಡಿಯಬೇಕು.
ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಬ್ರೈನ್ ಟೀಸರ್‌ಗಳು ವೈರಲ್ ಆಗುತ್ತವೆ. ಇವು ಮೋಜು ನೀಡುವ ಜೊತೆಗೆ ಮೆದುಳಿಗೂ ಕೆಲಸ ಕೊಡುತ್ತವೆ. ಇವುಗಳಲ್ಲಿ ಇರುವ ಸವಾಲುಗಳು ನೋಡಲು ಸುಲಭದಂತೆ ಕಂಡರೂ ಉತ್ತರ ಹೇಳಲು ಕಷ್ಟವಾಗುತ್ತದೆ. ಆದರೆ ಇಂತಹ ಬ್ರೈನ್ ಟೀಸರ್‌ಗಳು ನಿಮ್ಮ ಗಮನಶಕ್ತಿ, ಸಮಸ್ಯೆ ಪರಿಹರಿಸುವ ಗುಣ, ಏಕಾಗ್ರತೆಯನ್ನು ಹೆಚ್ಚಿಸುತ್ತವೆ.
ಬ್ರೈನ್ ಟೀಸರ್‌ನಲ್ಲಿರುವ ಗಣಿತದ ಪಜಲ್‌ಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳುವಂತದ್ದಾಗಿರುತ್ತದೆ. ಈ ಬ್ರೈನ್ ಟೀಸರ್‌ಗಳು ಮೆದುಳಿಗೆ ಸಾಕಷ್ಟು ಕೆಲಸ ನೀಡಿ ನಮಗೆ ಟೈಮ್ ಪಾಸ್ ಆಗುವಂತೆ ಮಾಡುತ್ತವೆ. ಅಲ್ಲದೇ ಇದರಿಂದ ನಮ್ಮಲ್ಲಿ ಗಣಿತದ ಜ್ಞಾನವು ಹೆಚ್ಚುತ್ತದೆ. ಇಲ್ಲೊಂದು ಇಂಥದ್ದೇ ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಕೂಡಿಸಿ, ಗುಣಿಸುವ ಲೆಕ್ಕಾಚಾರವಿದೆ.
Brainy Bits Hub ಎಂಬ ಎಕ್ಸ್ ಪುಟದಲ್ಲಿ ವೈರಲ್ ಆದ ಈ ಬ್ರೈನ್ ಟೀಸರ್ ನೆಟ್ಟಿಗರ ಮೆದುಳಿಗೆ ಹುಳ ಬಿಟ್ಟಂತಾಗಿದೆ. ಇದರಲ್ಲಿ ನಾಲ್ಕು ಬೇಸಿಕ್ ಪ್ರಶ್ನೆಗಳಿವೆ. ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆಗಳು ಹೀಗಿವೆ: “M + M = 20,” “N + N = 10,” ಮತ್ತು “O + O = 8.” ಹಾಗಾದರೆ M + N × O = ಎಷ್ಟು ಎಂಬುದಕ್ಕೆ ನೀವು ಉತ್ತರ ಹೇಳಬೇಕು. ಅಕ್ಟೋಬರ್ 30 ರಂದು ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ಅನ್ನು ಈಗಾಗಲೇ 9,800ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 65ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. 300ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರವನ್ನು ತಿಳಿಸಿದ್ದಾರೆ.
ಕಾಮೆಂಟ್‌ಗಳು ಹೀಗಿವೆ
ಈ ಪ್ರಶ್ನೆಗೆ ಉತ್ತರ ಹೇಳುವುದು ಸುಲಭ ಎಂದು ನಾವು ಭಾವಿಸಿದ್ದೆ. ಆದರೆ ಖಂಡಿತ ಅಂದುಕೊಂಡಷ್ಟು ಸುಲಭವಲ್ಲ, ಇದು ಸಖತ್ ಟ್ರಿಕ್ಕಿಯಾಗಿದೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ಪಜಲ್ ಪ್ರೇಮಿ. ಈ ಪ್ರಶ್ನೆಗೆ ಉತ್ತರ ಹೇಳಲು ಪ್ರಯತ್ನ ಮಾಡಿ, ಕೊನೆಗೂ ಉತ್ತರ ಕಂಡುಕೊಂಡೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಎಲ್ಲರೂ ಇದೇ ರೀತಿ ಉತ್ತರ ಹೇಳಿದ್ದಾರೆ ಹೊರತು ಉತ್ತರ ಏನು ಎಂದು ಯಾರೂ ಹೇಳಿಲ್ಲ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಗೂಗಲ್ ಸಂದರ್ಶನದಲ್ಲಿ ಕೇಳಿದ ಈ ಬ್ರೈನ್ ಟೀಸರ್ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯವೇ? ನಿಮಗಿರೋದು 3 ಸೆಕೆಂಡ್ ಸಮಯ
ಗೂಗಲ್ ಕಂಪನಿಯು ಸಂದರ್ಶನವೊಂದರಲ್ಲಿ ಅಭ್ಯರ್ಥಿಗಳಿಗೆ ಕೇಳಿದ ಪ್ರಶ್ನೆಯು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪ್ರಶ್ನೆಗೆ ಉತ್ತರ ಕಂಡು ಹಿಡಿಯಲು ಮೆದುಳಿಗೆ ಹುಳ ಬಿಟ್ಟು ಕೊಂಡಿದ್ದಾರೆ ನೆಟ್ಟಿಗರು. ಪ್ರಶ್ನೆ ಸುಲಭ ಎನ್ನಿಸಿದರೂ ಉತ್ತರ ಕಂಡುಹಿಡಿಯುವುದು ನಿಜಕ್ಕೂ ಸುಲಭವಲ್ಲ. ಈ ಪ್ರಶ್ನೆಗೆ ನಿಮ್ಮಿಂದ ಉತ್ತರ ಕಂಡುಹಿಡಿಯಲು ಸಾಧ್ಯವೇ ಪ್ರಯತ್ನಿಸಿ.