logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 5=15, 7=21 ಆದ್ರೆ 10= ಎಷ್ಟು? ಗಣಿತದಲ್ಲಿ ಎಕ್ಸ್‌ಪರ್ಟ್‌ ಆದ್ರೆ 15 ಸೆಕೆಂಡ್ ಒಳಗೆ ಉತ್ತರ ಹೇಳಿ; ನಿಮ್ಮ ಸಮಯ ಈಗ ಶುರು

Brain Teaser: 5=15, 7=21 ಆದ್ರೆ 10= ಎಷ್ಟು? ಗಣಿತದಲ್ಲಿ ಎಕ್ಸ್‌ಪರ್ಟ್‌ ಆದ್ರೆ 15 ಸೆಕೆಂಡ್ ಒಳಗೆ ಉತ್ತರ ಹೇಳಿ; ನಿಮ್ಮ ಸಮಯ ಈಗ ಶುರು

Reshma HT Kannada

Nov 24, 2024 11:00 AM IST

google News

ಬ್ರೈನ್ ಟೀಸರ್

    • ಗಣಿತದಲ್ಲಿ ನೀವು ಎಕ್ಸ್‌ಪರ್ಟ್ ಅಂತಾದ್ರೆ, ಗಣಿತದ ಸೂತ್ರಗಳು ನಿಮಗೆ ತಿಳಿದಿವೆ ಅಂತಾದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳುವ ಪ್ರಯತ್ನ ಮಾಡಿ. ಇಲ್ಲಿರೋದು ಸಿಂಪಲ್ ಪ್ರಶ್ನೆ. 5=15, 7=21 ಆದ್ರೆ 10= ಎಷ್ಟು ಎಂದು ನೀವು ಹೇಳಬೇಕು. ನಿಮಗಿರೋದು ಕೇವಲ 15 ಸೆಕೆಂಡ್ ಸಮಯ. ಟ್ರೈ ಮಾಡಿ, ಬೇಗ ಉತ್ತರ ಹೇಳಿ. 
ಬ್ರೈನ್ ಟೀಸರ್
ಬ್ರೈನ್ ಟೀಸರ್

ಇತ್ತೀಚೆಗೆ ಬ್ರೈನ್ ಟೀಸರ್‌ ರೂಪದಲ್ಲಿ ಗಣಿತದ ಪಜಲ್‌ಗಳು ಸಾಕಷ್ಟು ವೈರಲ್ ಆಗುತ್ತಿವೆ. ಗಣಿತ ಪ್ರಿಯರಿಗೆ ಆ ಕಾರಣಕ್ಕೆ ಬ್ರೈನ್ ಟೀಸರ್‌ಗಳು ಹೆಚ್ಚು ಇಷ್ಟವಾಗಬಹುದು. ಈ ಪಜಲ್‌ಗಳು ನಿಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಯಾಕಂದ್ರೆ ಈ ಪ್ರಶ್ನೆಗಳು ಸುಲಭವಾಗಿದ್ರೂ ಉತ್ತರ ಕಂಡುಹಿಡಿಯುವುದು ಸುಲಭದ ಮಾತಾಗಿರಲ್ಲ.

ಇಂದಿನ ಬ್ರೈನ್ ಟೀಸರ್ ಒಂಥರಾ ಟ್ರಿಕ್ಕಿ ಆಗಿದೆ. ಇದರಲ್ಲಿ ಇರುವುದು ಗಣಿತದ ಪಜಲ್‌. ಆದರೆ ಈ ಸುಲಭದ ಪಜಲ್‌ಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗದೇ ಹಲವರು ತಲೆ ಕೆಡಿಸಿಕೊಂಡಿದ್ದಾರೆ. ಯಾಕಂದರೆ ಇಲ್ಲಿರುವುದು ಕೂಡಿಸಿ, ಗುಣಿಸುವ ಲೆಕ್ಕಾಚಾರವಲ್ಲ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ವೈರಲ್ ಆಗಿರುವುದು ಮಾತ್ರವಲ್ಲ, 130ಕ್ಕೂ ಹೆಚ್ಚು ಕಾಮೆಂಟ್‌ಗಳನ್ನೂ ಪಡೆದುಕೊಂಡಿದ್ದಾರೆ. ಹಲವರು ಯಾವ ಸೂತ್ರದ ಮೂಲಕ ಈ ಪಜಲ್‌ಗೆ ಉತ್ತರ ಕಂಡುಕೊಳ್ಳಬಹುದು ಎಂಬುದನ್ನು ಹೇಳಿದ್ದಾರೆ. ಕೆಲವರು ತಾವು ಗೆಸ್ ಮಾಡಿದ ಉತ್ತರವನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ.

ಈ ಬ್ರೈನ್ ಟೀಸರ್‌ನಲ್ಲಿ ಇರುವುದು ಒಂದು ಸಿಂಪಲ್ ಪ್ರಶ್ನೆ. ಒಂದು ವೇಳೆ 5=15, 7=21 ಆದ್ರೆ 10= ಎಷ್ಟು ಎಂದು ನೀವು ಕಂಡು ಹಿಡಿಯಬೇಕು. Brainy Bits Hub ಎನ್ನುವ ಎಕ್ಸ್‌ ಪುಟದಲ್ಲಿ ಶೇರ್ ಮಾಡ ಬ್ರೈನ್ ಟೀಸರ್ ಇದಾಗಿದೆ. ಈ ಬ್ರೈನ್ ಟೀಸರ್‌ ಕೊಂಚ ಟ್ರಿಕ್ಕಿಯಾಗಿದೆ. ಆದರೆ ಉತ್ತರ ಕಂಡುಹಿಡಿಯುವುದು ಖಂಡಿತ ಕಷ್ಟವಲ್ಲ. ಗಣಿತದ ಸೂತ್ರಗಳನ್ನ ಅರಿತವರಿಗೆ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಕೊಳ್ಳುವುದು ಖಂಡಿತ ಕಷ್ಟ ಎನ್ನಿಸುವುದಿಲ್ಲ.

ಈ ಬ್ರೈನ್ ಟೀಸರ್‌ಗೆ ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರ ಹೇಳಿದ್ದಾರೆ. ಒಬ್ಬರು 32 ಎಂದು ಉತ್ತರ ಹೇಳಿದ್ದರೆ, ಇನ್ನೊಬ್ಬರು 30 ಎಂದಿದ್ದಾರೆ. ಇನ್ನೊಬ್ಬರು 20 ಆಗಿರಬೇಕು ಎಂದು ಗೆಸ್ ಮಾಡಿದ್ದಾರೆ. ಅವರೆಲ್ಲರ ಉತ್ತರ ಬಿಡಿ. ಈ ಪ್ರಶ್ನೆಗೆ ನಿಮ್ಮ ಉತ್ತರವೇನು ಹೇಳಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ನೀವು ಬಹಳ ಬುದ್ಧಿವಂತರಾದ್ರೆ ಈ ಟೀ ಶರ್ಟ್‌ನಲ್ಲಿ ಎಷ್ಟು ತೂತುಗಳಿವೆ ಹೇಳಿ, ನಿಮಗಿರೋದು 15 ಸೆಕೆಂಡ್ ಸಮಯ

ಬ್ರೈನ್ ಟೀಸರ್‌ಗಳು ನಿಮ್ಮ ಬುದ್ಧಿವಂತಿಕೆ ಹಾಗೂ ಯೋಚನಾಶಕ್ತಿಗೆ ಸವಾಲು ಹಾಕುವುದು ಸುಳ್ಳಲ್ಲ. ಇಲ್ಲಿರುವ ಬ್ರೈನ್ ಟೀಸರ್‌ನಲ್ಲಿ ಒಂದು ಟೀ ಶರ್ಟ್‌ ಇದೆ. ಆ ಟೀ ಶರ್ಟ್‌ನಲ್ಲಿ ಎಷ್ಟು ತೂತುಗಳಿವೆ ಎಂದು ನೀವು ಕಂಡುಹಿಡಿಯಬೇಕು. ಅದು ನಿಮಗಿರುವ ಸವಾಲು. ಕೇವಲ 15 ಸೆಕೆಂಡ್ ಒಳಗೆ ಈ ಪ್ರಶ್ನೆಗೆ ಉತ್ತರ ಹೇಳಬೇಕು.

Brain Teaser: ನೀವು ನಿಜಕ್ಕೂ ಬುದ್ಧಿವಂತರಾದ್ರೆ ಯಾವ ಗ್ಲಾಸ್ ಮೊದಲು ತುಂಬುತ್ತೆ ಹೇಳಿ, ನಿಮಗಿರೋದು 15 ಸೆಕೆಂಡ್ ಸಮಯ

ವಾರಪೂರ್ತಿ ವರ್ಕ್ ಫ್ರೆಶರ್ ಇದ್ದು ಮೆದುಳಿಗೆ ಕೊಂಚ ರಿಲ್ಯಾಕ್ಸ್ ಬೇಕು ಅನ್ನಿಸಿದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳುವ ಪ್ರಯತ್ನ ಮಾಡಿ. ಇಲ್ಲಿರುವ ಯಾವ ಗ್ಲಾಸ್ ಮೊದಲು ತುಂಬುತ್ತೆ ಎಂದು ನೀವು 15 ಸೆಕೆಂಡ್ ಒಳಗೆ ಹೇಳಬೇಕು. ನಿಮ್ಮ ಬುದ್ಧಿವಂತಿಕೆಗೊಂದು ಸವಾಲ್‌, ಸರಿಯಾದ ಉತ್ತರ ಹೇಳಲು ಪ್ರಯತ್ನ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ