logo
ಕನ್ನಡ ಸುದ್ದಿ  /  ಜೀವನಶೈಲಿ  /  Optical Illusion: ಮೋಡ, ಕೆಂಬಣ್ಣದ ತುಟಿ; ಚಿತ್ರ ಕಂಡಾಕ್ಷಣ ನಿಮ್ಮ ಕಣ್ಣಿಗೆ ಗೋಚರಿಸಿದ್ದೇನು; ವ್ಯಕ್ತಿತ್ವವನ್ನು ತಿಳಿಸಲಿದೆ ಈ ಚಿತ್ರ

Optical Illusion: ಮೋಡ, ಕೆಂಬಣ್ಣದ ತುಟಿ; ಚಿತ್ರ ಕಂಡಾಕ್ಷಣ ನಿಮ್ಮ ಕಣ್ಣಿಗೆ ಗೋಚರಿಸಿದ್ದೇನು; ವ್ಯಕ್ತಿತ್ವವನ್ನು ತಿಳಿಸಲಿದೆ ಈ ಚಿತ್ರ

Reshma HT Kannada

Oct 04, 2023 12:44 PM IST

google News

ಚಿತ್ರವನ್ನು ಕಂಡಾಕ್ಷಣ ನಿಮ್ಮ ಕಣ್ಣಿಗೆ ಗೋಚರಿಸಿದ್ದೇನು?

    • ಇಲ್ಲೊಂದು ಅಪರೂಪದ ಸೂರ್ಯಾಸ್ತದ ಚಿತ್ರವಿದೆ. ಈ ಚಿತ್ರವು ನಿಮ್ಮ ವ್ಯಕ್ತಿತ್ವನ್ನು ಹೇಳಲಿದೆ. ಇದು ಆಶಾವಾದಿಯೋ ಅಥವಾ ನಿರಾಶವಾದಿಯೋ ಎಂಬುದನ್ನು ನಿರ್ಧರಿಸುತ್ತದೆ. ಹಾಗಾದರೆ ಏನಿದು ಚಿತ್ರದ ಕಥೆ?
ಚಿತ್ರವನ್ನು ಕಂಡಾಕ್ಷಣ ನಿಮ್ಮ ಕಣ್ಣಿಗೆ ಗೋಚರಿಸಿದ್ದೇನು?
ಚಿತ್ರವನ್ನು ಕಂಡಾಕ್ಷಣ ನಿಮ್ಮ ಕಣ್ಣಿಗೆ ಗೋಚರಿಸಿದ್ದೇನು?

ಸೂರ್ಯಾಸ್ತದ ಛಾಯೆ ಹೊಂದಿರುವ ಆ ಆಸಕ್ತಿದಾಯಕ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವು ನಿಮ್ಮ ಜೀವನದಲ್ಲಿರುವ ವ್ಯಕ್ತಿಗಳು ಹಾಗೂ ನೀವು ಆಶಾವಾದಿಗಳೋ ಅಥವಾ ನಿರಾಶಾವಾದಿಗಳೋ ಎಂಬುದನ್ನು ತಿಳಿಸಲಿದೆ. ಆಪ್ಟಿಕಲ್‌ ಇಲ್ಯೂಷನ್‌ ತಜ್ಞ ಮಿಯಾ ಯಿಲಿನ್‌ ಟಿಕ್‌ಟಾಕ್‌ ವಿಡಿಯೊದಲ್ಲಿ ಈ ವಿಲಕ್ಷಣ ಆಪ್ಟಿಕಲ್‌ ಇಮೇಜ್‌ ಅನ್ನು ಹಂಚಿಕೊಂಡಿದ್ದಾರೆ. ಈ ಸಮುದ್ರ, ಸೂರ್ಯಾಸ್ತ, ರಂಗೇರಿರುವ ಬಾನು ಈ ನಡುವೆ ಒಂದು ತುಟಿಯಾಕಾರ ಚಿತ್ರದಲ್ಲಿ ಕಾಣಬಹುದು. ಈ ಚಿತ್ರವನ್ನು ತಕ್ಷಣಕ್ಕೆ ಕಂಡಾಗ ನಿಮಗೆ ಕೆಂಬಣ್ಣದ ತುಟಿ ಅಥವಾ ಮೋಡ.. ಮೊದಲು ಏನು ಕಾಣಿಸಿತು ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವವು ಅವಲಂಬಿತವಾಗಿದೆ.

ಈ ಚಿತ್ರದ ಆಧಾರ ಮೇಲೆ ನೀವು ನಂಬಿರುವ ಅಥವಾ ನಿಮ್ಮ ಆತ್ಮೀಯರ ವ್ಯಕ್ತಿಗಳ ಬಗ್ಗೆ ಕೂಡ ತಿಳಿದುಕೊಳ್ಳಬಹುದು.

ಮೋಡ ಕಾಣಿಸಿದರೆ

ಸೂರ್ಯಾಸ್ತದ ನಡುವೆ ಮೋಡ ಮೊದಲು ಕಾಣಿಸಿದರೆ ಅಂತಹ ವ್ಯಕ್ತಿಗಳು ಅಪರಿಚಿತರ ಬಗ್ಗೆ ಹೆಚ್ಚು ಜಾಗರೂಕರಾಗಿರುತ್ತಾರೆ. ಆದರೆ ತಮ್ಮ ಪ್ರೀತಿಪಾತ್ರರಿಗೆ ಜೀವವನ್ನೇ ಕೊಡಲು ಸಿದ್ಧರಿರುತ್ತಾರೆ. ಅಲ್ಲದೆ ಪ್ರೀತಿಪಾತ್ರರಿಗೆ ಯಾವಾಗಲೂ ಸಹಾಯ ಮಾಡಲು ಬಯಸುತ್ತಾರೆ. ಅಪರಿಚಿತರೊಂದಿಗೆ ಮಾತನಾಡುವಾಗಲೂ ಕೂಡ ಇವರು ಹೆಚ್ಚು ಎಚ್ಚರಿಕೆ ವಹಿಸುತ್ತಾರೆ. ನಿಮಗೆ ಮೋಡ ಮೊದಲು ಕಾಣಿಸಿದ್ದರೆ ನಿಮ್ಮಲ್ಲಿ ಸಾಮಾಜಿಕ ಸಾಮರ್ಥ್ಯ ಅತ್ಯುತ್ತಮವಾಗಿದೆ ಎಂದರ್ಥ. ನೀವು ಎಲ್ಲರೊಂದಿಗೂ ಬೆರೆತರೂ ಕೂಡ ನಿಮ್ಮ ಮನಸ್ಸಿನಲ್ಲಿ ಬೆರೆಯುವುದು ಇಷ್ಟವಾಗುವುದಿಲ್ಲ. ನೀವು ಜನರ ಮೇಲೆ ನಂಬಿಕೆ ಇಡುವುದು ಕಡಿಮೆ. ಹೊರಗಿನಿಂದ ಎಲ್ಲರೊಂದಿಗೆ ಚೆನ್ನಾಗಿದ್ದರೂ ಮನಸ್ಸಿನಲ್ಲಿ ಬೇರೆ ರೀತಿಯದ್ದೇ ಭಾವನೆ ಇರುತ್ತದೆ.

ನಿಮಗೆ ತುಟಿ ಮೊದಲು ಕಾಣಿಸಿದರೆ

ಕೆಂಪು ತುಟಿಯನ್ನು ಚಿತ್ರದಲ್ಲಿ ಮೊದಲು ಕಂಡರೆ ನಿಮ್ಮ ವ್ಯಕ್ತಿತ್ವ ಎಲ್ಲರೂ ಮೆಚ್ಚುವಂತದ್ದು. ನೀವು ಇತರರಿಗಾಗಿ ಎಂದಿಗೂ ಸಹಾಯಕ್ಕೆ ಮುಂದೆ ನಿಲ್ಲುತ್ತೀರಿ. ನಿಮ್ಮಲ್ಲಿನ ಸಹಾನುಭೂತಿಯ ಗುಣದಿಂದ ನೀವು ಇತರರ ಮೆಚ್ಚುಗೆ ಪಡೆಯುತ್ತೀರಿ. ಅಗತ್ಯ ಇರುವ ಅಪರಿಚಿತರಿಗೂ ಸಹಾಯ ಮಾಡಲು ಬಯಸುತ್ತೀರಿ.

ಯಾವಾಗಲೂ ಲವಲವಿಕೆಯ ಭಾವ ನಿಮ್ಮಲ್ಲಿರುತ್ತದೆ. ನೀವು ಭಾವುಕ ಸ್ವಭಾವದವರು. ಜಗತ್ತು ಕಠೋರವಾಗಿದೆ ಎಂಬುದನ್ನು ತಿಳಿದ ಮೇಲೂ ನೀವು ಜನರನ್ನು ಹಿಂದು ಮುಂದು ನೋಡದೇ ನಂಬುತ್ತೀರಿ. ಜೀವನದ ಬಗ್ಗೆ ಅವರ ಸಕಾರಾತ್ಮಕ ಮನೋಭಾವದಿಂದಾಗಿ, ತಮ್ಮ ಪ್ರೀತಿಪಾತ್ರರ ಜೊತೆ ಭಿನ್ನಾಭಿಪ್ರಾಯ ಉಂಟಾದಾಗ ಅವರು ಸಾಕಷ್ಟು ನೋಯಿಸಬಹುದು ಮತ್ತು ಸಂವೇದನಾಶೀಲರಾಗಬಹುದು. ನೀವು ಯಾರ ಮನಸ್ಸಿಗೂ ನೋವುಂಟು ಮಾಡಲು ಬಯಸುವುದಿಲ್ಲ.

ಇದನ್ನೂ ಓದಿ

Optical Illusion: ಬೆಕ್ಕು, ಇಲಿ ಚಿತ್ರದಲ್ಲಿ ಮೊದಲು ಕಾಣಿಸಿದ್ದೇನು; ಈ ಚಿತ್ರ ನೋಡಿ, ನಿಮ್ಮ ವ್ಯಕ್ತಿತ್ವ ತಿಳಿಯಿರಿ

ವ್ಯಕ್ತಿತ್ವ ಪರೀಕ್ಷೆ ಅಥವಾ ಪರ್ಸನಾಲಿಟಿ ಟೆಸ್ಟ್‌ ಎನ್ನುವುದು ನಮ್ಮ ವ್ಯಕ್ತಿತ್ವದ ಇಂಚಿಂಚನ್ನು ವಿವರಿಸುತ್ತದೆ. ಇದರಿಂದ ನಮ್ಮ ಬಗ್ಗೆ ನಾವು ಚೆನ್ನಾಗಿ ಅರಿಯಬಹುದು. ಇದು ಬೇರೆ ಬೇರೆ ಸಂದರ್ಭಗಳಲ್ಲಿ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಮತ್ತು ನಿಮ್ಮ ಯೋಚನೆಗಳು ಹೇಗಿರುತ್ತವೆ ಎಂಬುದನ್ನು ತಿಳಿಸುತ್ತದೆ. ಅದಕ್ಕಾಗಿ ಇತ್ತೀಚೆಗೆ ಆಪ್ಟಿಕಲ್‌ ಇಲ್ಯೂಷನ್‌ಗಳ ಮೂಲಕ ವ್ಯಕ್ತಿತ್ವ ಪರೀಕ್ಷೆ ಮಾಡಲಾಗುತ್ತಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ