logo
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ನಿಮ್ಮನ್ನು ಬಿಡದೇ ಕಾಡುತ್ತಿರುವ ದುಃಸ್ವಪ್ನ ಯಾವುದು ಎಂದು ತಿಳಿಯಬೇಕಾ, ಚಿತ್ರದಲ್ಲಿ ಮೊದಲು ಕಂಡಿದ್ದೇನು ಹೇಳಿ

Personality Test: ನಿಮ್ಮನ್ನು ಬಿಡದೇ ಕಾಡುತ್ತಿರುವ ದುಃಸ್ವಪ್ನ ಯಾವುದು ಎಂದು ತಿಳಿಯಬೇಕಾ, ಚಿತ್ರದಲ್ಲಿ ಮೊದಲು ಕಂಡಿದ್ದೇನು ಹೇಳಿ

Reshma HT Kannada

Oct 09, 2024 03:08 PM IST

google News

ಪರ್ಸನಾಲಿಟಿ ಟೆಸ್ಟ್

    • ಕೆಲವೊಮ್ಮೆ ನಮ್ಮ ಮನಸ್ಸಿನಾಳದಲ್ಲಿ ಯಾವುದೋ ಭಯ ಹುದುಗಿರುತ್ತದೆ. ಆದರೆ ಅದು ಏನು, ಅದಕ್ಕೆ ಕಾರಣವೇನು ಎಂಬುದು ಮಾತ್ರ ನಮಗೆ ಅರಿವಾಗುವುದಿಲ್ಲ. ಒಮ್ಮೊಮ್ಮೆ ಅದು ನಮ್ಮನ್ನು ಆಳವಾಗಿ ಭಯಪಡಿಸಬಹುದು. ಹಾಗಾದರೆ ನಿಮ್ಮನ್ನು ಬಿಡದೇ ಕಾಡುತ್ತಿರುವ ದುಃಸ್ವಪ್ನ ಯಾವುದು ಎಂದು ಕೊಂಡಕೊಳ್ಳಬೇಕಾ, ಈ ಆಪ್ಟಿಕಲ್ ಇಲ್ಯೂಷನ್‌ ಚಿತ್ರದಲ್ಲಿ ಮೊದಲು ಕಂಡಿದ್ದೇನು ಹೇಳಿ.
ಪರ್ಸನಾಲಿಟಿ ಟೆಸ್ಟ್
ಪರ್ಸನಾಲಿಟಿ ಟೆಸ್ಟ್

ನೋಡಲು ವಿಚಿತ್ರವಾಗಿ ಕಾಣುವ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ವ್ಯಕ್ತಿತ್ವ ಪರೀಕ್ಷೆ ಮಾಡುತ್ತವೆ ಎಂದರೆ ಕೆಲವರು ನಂಬುವುದಿಲ್ಲ. ಆದರೆ ಕಣ್ಣು ಹಾಗೂ ಮೆದುಳಿಗೆ ವಿಚಿತ್ರ ಎನ್ನಿಸುವ ಈ ಚಿತ್ರಗಳು ಪರ್ಸನಾಲಿಟಿ ಟೆಸ್ಟ್ ಮಾಡುವುದು ಸುಳ್ಳಲ್ಲ. ಆ ಕಾರಣಕ್ಕೆ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತವೆ.

ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್‌ಗಳು ಎಷ್ಟರ ಮಟ್ಟಿಗೆ ನಿಜ ಎಂಬುದು ಸಬೀತಾಗಿಲ್ಲವಾದರೂ ಇದರಲ್ಲಿ ಬಹುತೇಕ ನಿಜ ಇರುವುದು ನಿಮ್ಮ ಅನುಭವಕ್ಕೂ ಬಂದಿರಬಹುದು. ಮನೋಶಾಸ್ತ್ರದಲ್ಲೂ ವ್ಯಕ್ತಿತ್ವ ಪರೀಕ್ಷೆಗೆ ಇಂತಹ ಚಿತ್ರಗಳನ್ನು ಬಳಸಲಾಗುತ್ತದೆ. ನಮ್ಮ ಬಗ್ಗೆ ನಮಗೆ ತಿಳಿದಿರದ ವಿಚಾರಗಳನ್ನು ತಿಳಿಸುತ್ತವೆ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು.

ಇಂದಿನ ಆಪ್ಟಿಕಲ್ ಚಿತ್ರ ವ್ಯಕ್ತಿತ್ವ ಪರೀಕ್ಷೆ ಮಾಡುವುದಿಲ್ಲ, ಬದಲಾಗಿ ನಮ್ಮಲ್ಲಿ ಆಳವಾಗಿ ಅಡಗಿರುವ ಭಯ ಯಾವುದು ಎಂಬುದನ್ನು ತಿಳಿಸುತ್ತದೆ. ಮಹಿಳೆ, ಕುದುರೆ, ಸೈನಿಕರು ಹಾಗೂ ಯುದ್ಧದ ಹಿನ್ನೆಲೆ ಇದರಲ್ಲಿ ನಿಮ್ಮ ಕಣ್ಣಿಗೆ ಮೊದಲು ಕಂಡಿದ್ದೇನು ಹೇಳಿ.

ಮಹಿಳೆ

ಪ್ರೀತಿಯಲ್ಲಿ ಬೀಳುವ ನಿಮ್ಮ ರಹಸ್ಯ ದುಃಸ್ವಪ್ನವು ನಿದ್ರೆಯನ್ನು ಕಸಿದುಕೊಳ್ಳುತ್ತದೆ. ಯಾವಾಗಲೂ ಉತ್ತಮ ನಿದ್ದೆಯನ್ನು ಬಯಸುವ ನೀವು ಪ್ರಾಯೋಗಿಕ ವ್ಯಕ್ತಿ. ನೀವು ತುಂಬಾ ಆಳವಾಗಿ ಪ್ರೀತಿಯಲ್ಲಿ ಸಂತೋಷಪಡುತ್ತಿರುವಾಗ, ನಿದ್ದೆ ಹಾಗೂ ಪ್ರೀತಿ ಈ ಎರಡರ ನಡುವಿನ ಆಯ್ಕೆ ನಿಮಗೆ ಸವಾಲಾಗಬಹುದು. ಕೆಲವೊಮ್ಮೆ ನಿದ್ದೆಯ ಕಾರಣದಿಂದಲೇ ಪ್ರೀತಿ ಕಳೆದುಹೋಗಬಹುದು ಎಂದು ನೀವು ಭಯ ಪಡುತ್ತೀರಿ. ಹೌದು, ನಿದ್ರೆ ಮುಖ್ಯ, ಆದರೆ ಅದು ನಿಮ್ಮ ಸಂಬಂಧವನ್ನು ಹಾಳುಮಾಡಲು ಬಿಡಬೇಡಿ. ಆರೋಗ್ಯ ಹಾಗೂ ಪ್ರೀತಿ ಎರಡನ್ನೂ ಸಮತೋಲನ ಮಾಡಿ.

ಸೈನಿಕರು

ಪ್ರೀತಿ ಕೈತಪ್ಪಬಹುದು ಎಂದು ಭಯವು ನಿಮ್ಮ ಮನಸ್ಸಿದಾಳದಲ್ಲಿ ಸದಾ ನಿಮ್ಮನ್ನು ಕಾಡುತ್ತಿರುತ್ತದೆ, ನೀವು ಏನೇ ಮಾಡಿದ್ರೂ ಸಂಗಾತಿ ನಿಮ್ಮನ್ನು ಬಿಡುವುದಿಲ್ಲ ಎಂಬುದು ನಿಮಗೆ ನಿಖರವಾಗಿ ತಿಳಿದಿದ್ದರೂ ನಿಮಗೆ ಪದೇ ಪದೇ ವಿಚಾರ ದುಃಸ್ವಪ್ನವಾಗಿ ಕಾಡಬಹುದು. ಪ್ರೀತಿ ಉಳಿಯಬೇಕು ಎಂದರೆ ನಿಮ್ಮನ್ನು ನೀವು ಪ್ರೀತಿಸಬೇಕು, ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸವಿರಬೇಕು.

ಕುದುರೆ

ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಕುದುರೆ ಮೊದಲು ಕಂಡರೆ ನಿಮ್ಮ ಪ್ರೀತಿಯನ್ನು ನೀವು ಪ್ರೀತಿಸಿದವರು ನಿರಾಕರಿಸಬಹುದು ಎಂಬ ದುಃಸಪ್ನ ನಿಮ್ಮನ್ನ ಕಾಡಬಹುದು. ಪ್ರೀತಿಯಲ್ಲಿ ಶರಣಾಗ ಬಯಸುವ ನಿಮಗೆ ಪ್ರೀತಿಸಿದವನು ರಿಜೆಕ್ಟ್ ಮಾಡಿದರೆ ತಡೆದುಕೊಳ್ಳುವ ಸಾಮರ್ಥ್ಯವಿಲ್ಲ. ಈ ಹಿಂದೆ ನೀವು ಈ ರೀತಿಯ ಅನುಭವನ್ನು ಹೊಂದಿದವರಾಗಿರಬೇಕು. ಆ ಕಾರಣಕ್ಕೆ ಈ ಭಯ ಈಗಲೂ ನಿಮ್ಮನ್ನು ಕಾಡುತ್ತದೆ.

ಸೈನಿಕರ ಹಿನ್ನೆಲೆ

ಮೋಸಗಾರರ ಪ್ರೀತಿಯಲ್ಲಿ ಬೀಳುವ ಭಯವು ನಿಮ್ಮನ್ನು ಕಾಡುತ್ತಿರಬಹುದು. ನೀವು ಪ್ರೀತಿಯಲ್ಲಿ ಬಿದ್ದ ತಕ್ಷಣ ಪ್ರಪಂಚವನ್ನು ಮರೆಯುತ್ತೀರಿ. ಇದು ಬಹಳ ಅಪಾಯಕಾರಿ. ಪ್ರೀತಿಯೇ ನಿಮ್ಮ ದೌರ್ಬಲ್ಯ, ಆ ಕಾರಣದಿಂದ ಸುಲಭವಾಗಿ ಮೋಸ ಹೋಗುತ್ತೀರಿ. ಯಾವುದೇ ವ್ಯಕ್ತಿಯ ಜೊತೆ ಪ್ರೀತಿಯಲ್ಲಿ ಬೀಳುವ ಮುನ್ನ ನೀವು ಸಾಕಷ್ಟು ಯೋಚಿಸಬೇಕು, ಎಂದಿಗೂ ಯಾಮಾರದಿರಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ