logo
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಪ್ರೀತಿ–ಪ್ರೇಮದ ವಿಚಾರದಲ್ಲಿ ನಿಮಗಿರುವ ವೀಕ್‌ನೆಸ್ ಯಾವುದು, ಚಿತ್ರದಲ್ಲಿ ಮೊದಲು ಕಂಡಿದ್ದೇನು ಹೇಳಿ

Personality Test: ಪ್ರೀತಿ–ಪ್ರೇಮದ ವಿಚಾರದಲ್ಲಿ ನಿಮಗಿರುವ ವೀಕ್‌ನೆಸ್ ಯಾವುದು, ಚಿತ್ರದಲ್ಲಿ ಮೊದಲು ಕಂಡಿದ್ದೇನು ಹೇಳಿ

Reshma HT Kannada

Sep 30, 2024 10:26 AM IST

google News

ಪರ್ಸನಾಲಿಟಿ ಟೆಸ್ಟ್‌

    • ಪ್ರೀತಿ–ಪ್ರೇಮ ಅನ್ನೋದು ಸುಮಧುರ ಸಂಬಂಧ. ಅದೆಷ್ಟೇ ಅನ್ಯೋನ್ಯಭಾವ ಇದ್ರು ಕೆಲವೊಂದು ಕೊರತೆ ಎದುರಾಗಬಹುದು. ಇದಕ್ಕೆ ನಮ್ಮಲ್ಲಿರುವ ವೀಕ್‌ನೆೇಸ್‌ ಕೂಡ ಕಾರಣವಾಗತ್ತೆ. ಹಾಗಾದರೆ ಸಂಬಂಧದ ವಿಚಾರದಲ್ಲಿ ನಿಮಗಿರುವ ವೀಕ್‌ನೆಸ್ ಯಾವುದು, ತಿಳಿಯಬೇಕು ಅಂದ್ರೆ ಚಿತ್ರದಲ್ಲಿ ಮೊದಲು ಕಂಡಿದ್ದೇನು ಹೇಳಿ.
ಪರ್ಸನಾಲಿಟಿ ಟೆಸ್ಟ್‌
ಪರ್ಸನಾಲಿಟಿ ಟೆಸ್ಟ್‌

ಆಪ್ಟಿಕಲ್ ಇಲ್ಯೂಷನ್‌ ಚಿತ್ರಗಳು ದಿನದಿಂದ ದಿನಕ್ಕೆ ಖ್ಯಾತಿ ಗಳಿಸುತ್ತಿವೆ. ಇದೊಂಥರಾ ಮೋಜಿನ ಚಿತ್ರವಾದರೂ ಇದರ ಮೂಲಕ ವ್ಯಕ್ತಿತ್ವ ಪರೀಕ್ಷೆ ಮಾಡಬಹುದು ಎನ್ನುವ ಕಾರಣಕ್ಕೆ ಇದು ಹಲವರನ್ನು ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಪ್ಟಿಕಲ್ ಇಲ್ಯೂಷನ್‌ಗಳದ್ದೇ ಹವಾ. ಈ ಪರ್ಸನಾಲಿಟಿ ಟೆಸ್ಟ್ ವೈಜ್ಞಾನಿಕ ನಿಜ ಎಂಬುದು ಸಾಬೀತವಾಗಿಲ್ಲ ಎಂದರೂ ನಮ್ಮ ವ್ಯಕ್ತಿತ್ವದ ವಿಚಾರಕ್ಕೆ ಬಂದಾಗ ಇದರಲ್ಲಿರುವುದು ನಿಜ ಎನ್ನಿಸುವುದು ಸುಳ್ಳಲ್ಲ. 

ಚಿತ್ರದಲ್ಲಿ ಮೊದಲ ನೋಟದಲ್ಲಿ ನಮ್ಮ ಕಣ್ಣು, ಮನಸ್ಸು ಗ್ರಹಿಸಿದ್ದು ನಮ್ಮ ವ್ಯಕ್ತಿತ್ವ, ಗುಣ, ಸ್ವಭಾವವನ್ನು ತಿಳಿಸುತ್ತದೆ. ಮಾತ್ರವಲ್ಲ ಸಂಬಂಧದಲ್ಲಿ ನಮ್ಮ ವೀಕ್‌ನೆಸ್ ಯಾವುದು, ನಮ್ಮ ಪ್ಲಸ್ ಪಾಯಿಂಟ್ ಯಾವುದು ಎಂಬುದನ್ನು ತಿಳಿದುಕೊಳ್ಳಬಹುದು.

ಆಪ್ಟಿಕಲ್ ಇಲ್ಯೂಷನ್ ಎನ್ನುವುದು ಅಸ್ಪಷ್ಟ ಚಿತ್ರವಾಗಿದ್ದು ಇದರಲ್ಲಿ ಒಂದು ಅಂಶಗಳು ಅಡಕವಾಗಿರುತ್ತವೆ. ಈ ಅಂಶಗಳಲ್ಲಿ ನಮ್ಮ ಕಣ್ಣಿಗೆ ಮೊದಲು ಕಂಡಿದ್ದೇನು ಎಂಬುದು ನಮ್ಮನ್ನು ನಾವು ತಿಳಿದುಕೊಳ್ಳಲು ಅವಕಾಶ ಒದಗಿಸುವ ಮಾರ್ಗವಾಗಿದೆ.

ಇಂದಿನ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಮುಖವಾಡ ಧರಿಸಿದ ಮಹಿಳೆ, ಜೋಡಿ, ಖಾಲಿ ದೋಣಿ, ಬೋಟ್ ನಡೆಸುತ್ತಿರುವ ವ್ಯಕ್ತಿ ಇಷ್ಟು ಅಂಶಗಳಿವೆ. ಇದರಲ್ಲಿ ನಿಮ್ಮ ಕಣ್ಣು ಮೊದಲು ಏನನ್ನು ಗ್ರಹಿಸುತ್ತದೆ ಎನ್ನುವುದರ ಆಧಾರದ ಮೇಲೆ ಪ್ರೀತಿ ವಿಚಾರದಲ್ಲಿ ನಿಮ್ ವೀಕ್‌ನೆಸ್ ಏನು ಎಂಬುದನ್ನು ಕಂಡುಹಿಡಿಯಬಹುದು.

ಮುಖವಾಡ ಧರಿಸಿದ ಮಹಿಳೆ

ಚಿತ್ರದಲ್ಲಿ ನೀವು ಮೊದಲು ಮುಖವಾಡ ಧರಿಸಿದ ಮಹಿಳೆಯನ್ನು ಕಂಡರೆ ನಿಮ್ಮೊಂದಿಗೆ ಪ್ರೀತಿಯಲ್ಲಿ ಬೀಳುವುದು ಒಂಥರಾ ಥ್ರಿಲ್ಲಿಂಗ್ ಹಾದಿಯಲ್ಲಿ ಸಾಗಿದಂತೆ. ಹಾಗಂತ ನೀವು ಒಂದೇ ಪ್ರೀತಿಯನ್ನು ಮುಂದುವರೆಸುತ್ತೀರಿ ಎಂದಲ್ಲ. ಆದರೆ ಒಮ್ಮೆ ಕಮಿಟ್ ಆಗಿರುವ ಸಂಬಂಧದಲ್ಲಿ ನಿಷ್ಠೆ ತೋರುತ್ತೀರಿ. ಪ್ರೀತಿ ಬದುಕಿನ ಆರಂಭದಲ್ಲಿ ಪ್ರಣಯದ ಹಾದಿ ಹಿಡಿಯುವುದು ತಪ್ಪು. ಪ್ರೀತಿಯಲ್ಲಿ ಆಳವಾಗಿ ಸಾಗಿದ ನಂತರವಷ್ಟೇ ಮುಂದೆ ಸಾಗಬೇಕು. ಆದರೆ ಈ ವಿಚಾರದಲ್ಲಿ ನಿಮ್ಮ ವೀಕ್‌ನೆಸ್ ನಿಮ್ಮ ಬದುಕಿಗೆ ಮಾರಕವಾಗಬಹುದು. 

ಜೋಡಿ

ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಜೋಡಿ ಮೊದಲು ಕಂಡರೆ ಯಾರಾದರೂ ನಿಮ್ಮ ಜೊತೆ ಪ್ರೀತಿಯಲ್ಲಿ ಬೀಳುತ್ತಾರೆ ಎಂದರೆ ಅವರು ನಿಮ್ಮಲ್ಲಿ ಗುರುತಿಸುವುದು ಸುರಕ್ಷತೆ ಮತ್ತು ಭದ್ರತೆಯ ಭಾವ. ಕೆಲವೊಮ್ಮೆ ನಿಮಗೆ ಏಕಾಂಗಿಯಾಗಿರುವುದು ಇಷ್ಟವಾದರೂ ಕೆಲವೊಮ್ಮೆ ನಿಮಗೆ ಅರಿವಾಗದಂತೆ ಪ್ರೀತಿಯಲ್ಲಿ ಬೀಳುತ್ತೀರಿ. ಆರಂಭದಲ್ಲಿ ಏಕಾಂಗಿ ಭಾವ ಹುಟ್ಟಿಕೊಂಡರೂ ಬೆಳೆಯುತ್ತಾ ನಿಮ್ಮಲ್ಲಿ ಜಂಟಿಯಾಗುವ ಮನಸ್ಸು ಮೂಡುತ್ತದೆ. ಅದಕ್ಕೆ ತಕ್ಕಂತೆ ಭಾವನೆಗಳು ಹುಟ್ಟಿಕೊಳ್ಳುತ್ತವೆ. ಆದರೆ ಸಂಬಂಧದಲ್ಲಿ ಮುಂದುವರಿಯಲು ನಂಬಿಕೆ ಬಹಳ ಮುಖ್ಯ ನೆನಪಿರಲಿ. ನಂಬಿಕೆ ವಿಚಾರದಲ್ಲಿ ಎಡವುದು, ತಪ್ಪು ತಿಳುವಳಿಕೆ ನಿಮ್ಮ ವೀಕ್‌ನೆಸ್ ಆಗಿರಬಹುದು. 

ಖಾಲಿ ದೋಣಿ

ಪ್ರೀತಿಯಲ್ಲಿ ಬೀಳಲು ಅಜ್ಞಾತ ಮಾರ್ಗಗಳು ನಿಮಗೆ ಸಹಾಯ ಮಾಡುತ್ತವೆ. ಅಂದರೆ ಅಪರಿಚಿತ ವ್ಯಕ್ತಿಯೊಂದಿಗೆ ನೀವು ಪ್ರೀತಿಯಲ್ಲಿ ಬೀಳಬಹುದು. ಹೊಸ ವ್ಯಕ್ತಿಯ ಭೇಟಿಯು ನಿಮ್ಮಲ್ಲಿ ಹೊಸ ಉತ್ಸಾಹ ಮೂಡಿಸಬಹುದು. ಅಂಥವರ ಜೊತೆ ನೀವು ಸುಲಭವಾಗಿ ಪ್ರೀತಿಯಲ್ಲಿ ಬೀಳುತ್ತೀರಿ. ಆದರೆ ಯಾವುದೇ ವ್ಯಕ್ತಿಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಮುಂದೆ ಸಂಬಂಧ ಮುಂದುವರಿಸುವುದು ಖಂಡಿತ ಸರಿಯಲ್ಲ. ಇದು ನಿಮ್ಮ ವೀಕ್‌ನೆಸ್ ಎಂದರೆ ತಪ್ಪಲ್ಲ.

ಬೋಟ್‌ಮ್ಯಾನ್‌

ಚಿತ್ರದಲ್ಲಿ ಬೋಟ್ ಓಡಿಸುತ್ತಿರುವ ವ್ಯಕ್ತಿ ಮೊದಲು ನಿಮ್ಮ ಕಣ್ಣಿಗೆ ಕಂಡರೆ ನೀವು ಸುಲಭವಾಗಿ ಪ್ರೀತಿಯಲ್ಲಿ ಬೀಳುವುದಿಲ್ಲ. ಭಯ ಹಾಗೂ ಅಭದ್ರತೆ ನಿಮಗೆ ಕಾಡುತ್ತಿರುತ್ತದೆ. ಆ ಭಾವನೆಗಳೊಂದಿಗೆ ಮುಕ್ತರಾಗಲು ನಿಮಗೆ ಸಹಾಯ ಮಾಡುವವರನ್ನು ವ್ಯಕ್ತಿಯನ್ನ ಗುರುತಿಸಿ. ನಿಮ್ಮ ಜಗತ್ತಿಗೆ ಬರುವವರ ಮೇಲೆ ನಂಬಿಕೆ ಇಡಿ. ಪ್ರೀತಿಯು ವ್ಯಕ್ತಿಯನ್ನು ಸಂಪೂರ್ಣಗೊಳಿಸುವುದಿಲ್ಲ. ಜೀವನವು ಅಗಾಧವಾದಾಗ ಅದು ಬೆಂಬಲವನ್ನು ನೀಡುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ