Brain Teaser: ಶೇ 98ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗದ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ
Nov 19, 2024 01:14 PM IST
ಬ್ರೈನ್ ಟೀಸರ್
- ನಿಮ್ಮ ಮೆದುಳು ಸಖತ್ ಶಾರ್ಪ್, ನೀವು ತುಂಬಾನೇ ಬುದ್ಧಿವಂತರು ಅಂತಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಪ್ರಶ್ನೆ ಇದೆ. ಈ ಪ್ರಶ್ನೆಗೆ ಉತ್ತರ ಹೇಳಲು ಶೇ 98ರಷ್ಟು ಮಂದಿ ಸೋತಿದ್ದಾರೆ. ನಿಮಗೆ ಉತ್ತರಿಸಲು ಸಾಧ್ಯವೇ ನೋಡಿ. ಜಾನಿಯ ತಂದೆಯ 5ನೇ ಮಗನ ಹೆಸರೇನು? ಥಟ್ಟಂತ ಹೇಳಿ. ನಿಮಗಿದು ಸವಾಲ್.
ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಡುವ ಜೊತೆಗೆ ಮೋಜು ನೀಡುತ್ತವೆ. ಇದಕ್ಕೆ ಉತ್ತರ ಕಂಡುಕೊಳ್ಳುವ ಸಲುವಾಗಿ ನಾವು ಮೆದುಳಿಗೆ ಹುಳ ಬಿಟ್ಟುಕೊಳ್ಳಬೇಕು. ಇದಕ್ಕಾಗಿ ನಾವು ಸಾಕಷ್ಟು ಬುದ್ಧಿ ಉಪಯೋಗಿಸಬೇಕಾಗುತ್ತದೆ. ಆದರೂ ಕೆಲವೊಮ್ಮೆ ಉತ್ತರ ಕಂಡುಕೊಳ್ಳಲು ಆಗುವುದಿಲ್ಲ.
ಇಂದಿನ ಬ್ರೈನ್ ಟೀಸರ್‌ಗೆ ಉತ್ತರ ಹೇಳುವುದು ಖಂಡಿತ ಸುಲಭವಲ್ಲ. ಎಕ್ಸ್‌ನಲ್ಲಿ ವೈರಲ್ ಆಗಿರುವ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳುವಲ್ಲಿ ಶೇ 98ರಷ್ಟು ಮಂದಿ ಸೋತಿದ್ದಾರೆ. ಇಂದಿನ ಬ್ರೈನ್ ಟೀಸರ್‌ನಲ್ಲಿ ಇರುವುದು ಮೆದುಳಿಗೆ ಹುಳ ಬಿಡುವ ಪ್ರಶ್ನೆ ಆಗಿರುವುದು ಸುಳ್ಳಲ್ಲ.
@brain_teaser_1 ಎನ್ನುವ ಎಕ್ಸ್ ಪುಟ ನಿರ್ವಹಿಸುತ್ತಿರುವವರು ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಿದ್ದಾರೆ. ನಿಮ್ಮ ಐಕ್ಯೂ ಲೆವೆಲ್ ಹೈ ಇದ್ದರಷ್ಟೇ ಈ ಪ್ರಶ್ನೆಗೆ ನೀವು ಉತ್ತರ ಹೇಳಲು ಸಾಧ್ಯ. ಹಾಗಾದರೆ ಅಂತಹ ಪ್ರಶ್ನೆ ಏನು ಅಂತು ನೀವು ಕೇಳಬಹುದು. ಪ್ರಶ್ನೆ ಹೀಗಿದೆ ನೋಡಿ. ಜಾನಿಯ ಅಪ್ಪನಿಗೆ 5 ಜನ ಮಕ್ಕಳು. Zaze, Zeze, Zize and Zoze. ಹಾಗಾದರೆ ಜಾನಿಯ ಅಪ್ಪನ 5ನೇ ಮಗನ ಹೆಸರೇನು? ಇದಕ್ಕೆ ನೀವು ಉತ್ತರ ಹೇಳಬೇಕು.
ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳೋದು ಖಂಡಿತ ಸುಲಭವಲ್ಲ. ಹಾಗಂತ ಕಷ್ಟವೂ ಅಲ್ಲ. ಕೊಂಚ ಯೋಚನೆ ಮಾಡಿದ್ರೆ ನಿಮಗೆ ಜಾನಿಯ ಅಪ್ಪ 5ನೇ ಮಗ ಹೆಸರು ಏನು ಎಂಬುದು ಹೊಳೆಯುತ್ತದೆ. ನಿಮಗೆ ಈ ಪ್ರಶ್ನೆಗೆ ಉತ್ತರ ಗೊತ್ತಾದರೆ ನಿಮ್ಮ ಆತ್ಮೀಯರಿಗೂ ಕಳುಹಿಸಿ, ಅವರ ಉತ್ತರ ಏನು ಎಂಬುದನ್ನು ಕಂಡುಕೊಳ್ಳಿ, ಅವರ ಜಾಣತನವನ್ನೂ ಪರೀಕ್ಷೆ ಮಾಡಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ನೀವು ನಿಜಕ್ಕೂ ಬುದ್ಧಿವಂತರಾದ್ರೆ ಯಾವ ಗ್ಲಾಸ್ ಮೊದಲು ತುಂಬುತ್ತೆ ಹೇಳಿ, ನಿಮಗಿರೋದು 15 ಸೆಕೆಂಡ್ ಸಮಯ
ವಾರಪೂರ್ತಿ ವರ್ಕ್ ಫ್ರೆಶರ್ ಇದ್ದು ಮೆದುಳಿಗೆ ಕೊಂಚ ರಿಲ್ಯಾಕ್ಸ್ ಬೇಕು ಅನ್ನಿಸಿದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳುವ ಪ್ರಯತ್ನ ಮಾಡಿ. ಇಲ್ಲಿರುವ ಯಾವ ಗ್ಲಾಸ್ ಮೊದಲು ತುಂಬುತ್ತೆ ಎಂದು ನೀವು 15 ಸೆಕೆಂಡ್ ಒಳಗೆ ಹೇಳಬೇಕು. ನಿಮ್ಮ ಬುದ್ಧಿವಂತಿಕೆಗೊಂದು ಸವಾಲ್, ಸರಿಯಾದ ಉತ್ತರ ಹೇಳಲು ಪ್ರಯತ್ನ ಮಾಡಿ.
Brain Teaser: ಹದ್ದಿನ ಕಣ್ಣಿನಷ್ಟೇ ನಿಮ್ಮ ಕಣ್ಣು ಸೂಕ್ಷ್ಮವಾಗಿದ್ದರೆ ನಿಮಗೊಂದು ಚಾಲೆಂಜ್, ಚಿತ್ರದಲ್ಲಿ ಬೆಕ್ಕು ಎಲ್ಲಿದೆ ಹುಡುಕಿ
ಗಾರ್ಡನ್‌ನ ದೃಶ್ಯವಿರುವ ಈ ಬ್ರೈನ್ ಟೀಸರ್‌ನಲ್ಲಿ ನಿಮ್ಮ ಕಣ್ಣಿಗೊಂದು ಸವಾಲಿದೆ. ನೀಲಿ ಹೂ ಬಿಡುವ ಗಿಡದ ಮಧ್ಯೆ ಬೆಕ್ಕೊಂದು ಅಡಗಿ ಕೂತಿದೆ. ಆ ಬೆಕ್ಕು ಎಲ್ಲಿದೆ ಎಂದು ನೀವು ಕಂಡುಹಿಡಿಯಬೇಕು. ಹದ್ದಿನ ಕಣ್ಣಿನಷ್ಟೇ ನಿಮ್ಮ ಕಣ್ಣು ಶಾರ್ಪ್ ಆಗಿದ್ದರೆ ಮಾತ್ರ ಬೆಕ್ಕನ್ನು ಹುಡುಕಲು ಸಾಧ್ಯ.