logo
ಕನ್ನಡ ಸುದ್ದಿ  /  ಜೀವನಶೈಲಿ  /  White Onion Health Benefits: ಬಿಳಿ ಈರುಳ್ಳಿ ತಿಂದರೆ ಇಲ್ಲ ಆರೋಗ್ಯ ತೊಂದರೆ, ಬಿಳಿ ಈರುಳ್ಳಿಯ ಅದ್ಭುತ ಪ್ರಯೋಜನಗಳನ್ನು ತಿಳಿಯೋಣ ಬನ್ನಿ

White Onion Health benefits: ಬಿಳಿ ಈರುಳ್ಳಿ ತಿಂದರೆ ಇಲ್ಲ ಆರೋಗ್ಯ ತೊಂದರೆ, ಬಿಳಿ ಈರುಳ್ಳಿಯ ಅದ್ಭುತ ಪ್ರಯೋಜನಗಳನ್ನು ತಿಳಿಯೋಣ ಬನ್ನಿ

Praveen Chandra B HT Kannada

Oct 24, 2022 10:36 AM IST

google News

White Onion Health benefits: ಬಿಳಿ ಈರುಳ್ಳಿ ತಿಂದರೆ ಇಲ್ಲ ಆರೋಗ್ಯ ತೊಂದರೆ, ಬಿಳಿ ಈರುಳ್ಳಿಯ ಅದ್ಭುತ ಪ್ರಯೋಜನಗಳನ್ನು ತಿಳಿಯೋಣ ಬನ್ನಿ

    • ಕತ್ತರಿಸುವಾಗ ಕಣ್ಣೀರು ತರಿಸಿದರೂ ಈರುಳ್ಳಿಯು ಸಾಕಷ್ಟು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಸಾಮಾನ್ಯ ಈರುಳ್ಳಿ ಮಾತ್ರವಲ್ಲದೆ ಬಿಳಿ ಈರುಳ್ಳಿಯೂ ದೊರಕುತ್ತದೆ. ಆದರೆ, ಎಲ್ಲಾ ಕಡೆ ಬಿಳಿ ಈರುಳ್ಳಿ ದೊರಕದು. ಬಿಳಿ ಈರುಳ್ಳಿಯ ಆರೋಗ್ಯ ಪ್ರಯೋಜನಗಳನ್ನು ತಿಳಿದರೆ ಮುಂದಿನ ಬಾರಿ ಮಾರುಕಟ್ಟೆಗೆ ಹೋದಾಗ ನೀವು ಖಂಡಿತವಾಗಿಯೂ ಖರೀದಿಸುವಿರಿ.
White Onion Health benefits: ಬಿಳಿ ಈರುಳ್ಳಿ ತಿಂದರೆ ಇಲ್ಲ ಆರೋಗ್ಯ ತೊಂದರೆ, ಬಿಳಿ ಈರುಳ್ಳಿಯ ಅದ್ಭುತ ಪ್ರಯೋಜನಗಳನ್ನು ತಿಳಿಯೋಣ ಬನ್ನಿ
White Onion Health benefits: ಬಿಳಿ ಈರುಳ್ಳಿ ತಿಂದರೆ ಇಲ್ಲ ಆರೋಗ್ಯ ತೊಂದರೆ, ಬಿಳಿ ಈರುಳ್ಳಿಯ ಅದ್ಭುತ ಪ್ರಯೋಜನಗಳನ್ನು ತಿಳಿಯೋಣ ಬನ್ನಿ

ಭಾರತೀಯರ ಅಡುಗೆಯಲ್ಲಿ ಈರುಳ್ಳಿ ಬಳಕೆ ಇದ್ದೀ ಇರುತ್ತದೆ. ಈರುಳ್ಳಿ ಇಲ್ಲದ ಅಡುಗೆ ಕೆಲವರಿಗೆ ಇಷ್ಟವಾದು. ಕತ್ತರಿಸುವಾಗ ಕಣ್ಣೀರು ತರಿಸಿದರೂ ಈರುಳ್ಳಿಯು ಸಾಕಷ್ಟು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಸಾಮಾನ್ಯ ಈರುಳ್ಳಿ ಮಾತ್ರವಲ್ಲದೆ ಬಿಳಿ ಈರುಳ್ಳಿಯೂ ದೊರಕುತ್ತದೆ. ಆದರೆ, ಎಲ್ಲಾ ಕಡೆ ಬಿಳಿ ಈರುಳ್ಳಿ ದೊರಕದು. ಬಿಳಿ ಈರುಳ್ಳಿಯ ಆರೋಗ್ಯ ಪ್ರಯೋಜನಗಳನ್ನು ತಿಳಿದರೆ ಮುಂದಿನ ಬಾರಿ ಮಾರುಕಟ್ಟೆಗೆ ಹೋದಾಗ ನೀವು ಖಂಡಿತವಾಗಿಯೂ ಖರೀದಿಸುವಿರಿ.

ಪೋಷಕಾಂಶಗಳ ಕಣಜ

ಬಿಳಿ ಈರುಳ್ಳಿಯನ್ನು ಪೋಷಕಾಂಶಗಳ ಗಣಿ ಎಂದರೂ ತಪ್ಪಾಗದು. ಇದು ಕಡಿಮೆ ಕ್ಯಾಲೋರಿ ಹೊಂದಿರುತ್ತದೆ. ಸಾಕಷ್ಟು ವಿಟಮಿನ್‌ ಮತ್ತು ಲವಣಾಂಶಗಳನ್ನು ಹೊಂದಿರುತ್ತದೆ. ಒಂದು ಸಾಮಾನ್ಯ ಗಾತ್ರದ ಈರುಳ್ಳಿಯಲ್ಲಿ ಕೇವಲ 44 ಕ್ಯಾಲೋರಿ ಇರುತ್ತದೆ. ಆದರೆ, ಅತ್ಯಧಿಕ ಪ್ರಮಾಣದಲ್ಲಿ ವಿಟಮಿನ್‌ಗಳು, ಮಿನರಲ್‌ಗಳು ಮತ್ತು ಫೈಬರ್‌ಗಳನ್ನು ಹೊಂದಿರುತ್ತದೆ.

ಬಿಳಿ ಈರುಳ್ಳಿಯಲ್ಲಿ ವಿಟಮಿನ್‌ ಸಿ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗಲು, ಟಿಶ್ಯೂ ರಿಪೇರಿಗೆ, ದೇಹದಲ್ಲಿ ಕಬ್ಭಿಣಾಂಶ ಹೆಚ್ಚಿಸಲು ನೆರವಾಗುತ್ತದೆ. ಇದೇ ರೀತಿ ಬಿಳಿ ಈರುಳ್ಳಿಯಲ್ಲಿ ವಿಟಮಿನ್‌ ಸಿ ಕೂಡ ಹೇರಳವಾಗಿರುತ್ತದೆ. ದೇಹದಲ್ಲಿ ಹಾನಿಗೀಡಾದ ಜೀವಕೋಶಗಳಿಗೆ ಮರುಜೀವ ನೀಡಲು ನೆರವಾಗುತ್ತದೆ.

ವಿಟಮಿನ್‌ ಬಿ ಕೂಡ ಬಿಳಿ ಈರುಳ್ಳಿಯಲ್ಲಿ ಹೇರಳವಾಗಿದೆ. ಇದು ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ನೆರವಾಗುತ್ತದೆ. ದೇಹದ ನರವ್ಯವಸ್ಥೆಯ ಆರೋಗ್ಯವನ್ನು ಉತ್ತಮಪಡಿಸಲು ನೆರವಾಗುತ್ತದೆ.

ಹೃದಯದ ಆರೋಗ್ಯಕ್ಕೂ ಉತ್ತಮ

ಈರುಳ್ಳಿಯಲ್ಲಿ ಆಂಟಿಆಕ್ಸಿಡೆಂಟ್‌ಗಳಿದ್ದು, ಹೃದಯದ ಆರೋಗ್ಯ ಹೆಚ್ಚಿಸಿಕೊಳ್ಳುತ್ತದೆ. ಅಂದರೆ, ಹೃದಯದಲ್ಲಿ ಶೇಖರಗೊಳ್ಳುವ ಕೊಬ್ಬು ಕಡಿಮೆಗೊಳಿಸುತ್ತದೆ. ಇದರಿಂದ ಹೃದಯಾಘಾತವಾಗುವ ಅಪಾಯ ಕಡಿಮೆ ಇರುತ್ತದೆ. ಈರುಳ್ಳಿಯಲ್ಲಿರುವ ಹಲವು ಅಂಶಗಳು ಅತ್ಯಧಿಕ ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ.

ಶುಗರ್‌ ತೊಂದರೆಗೆ ಪರಿಹಾರ

ಮಧುಮೇಹ ರೋಗಿಗಳಿಗೆ ಈರುಳ್ಳಿ ಪ್ರಮುಖ ಔಷಧಿ ಎನ್ನಬಹುದು. ಈರುಳ್ಳಿಯನ್ನು ನಿಯಮಿತವಾಗಿ ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ.

ಕ್ಯಾನ್ಸರ್‌ ತಡೆಗಟ್ಟಲು ಸಹಕಾರಿ

ಕ್ಯಾನ್ಸರ್‌ಗೆ ಸರಿಯಾದ ಚಿಕಿತ್ಸೆ ಇಲ್ಲದೆ ಇದ್ದರೂ ಕ್ಯಾನ್ಸರ್‌ ಬರೆದಂತೆ ತಡೆಯಲು ಬಿಳಿ ಈರುಳ್ಳಿ ಪ್ರಯೋಜನಕಾರಿ ಎನ್ನಲಾಗುತ್ತಿದೆ. ಬಿಳಿ ಈರುಳ್ಳಿಯಲ್ಲಿ ಕ್ಯಾನ್ಸರ್‌ ವಿರುದ್ಧ ಹೋರಾಡುವ ಫ್ಲೇವನಾಯ್ಡ್ ಆಂಟಿಆಕ್ಸಿಡೆಂಟ್‌ಗಳು ಇರುತ್ತವೆ.

ಜೀರ್ಣಕ್ರಿಯೆಗೂ ಸಹಕಾರಿಬಿಳಿ ಈರುಳ್ಳಿ ತಿನ್ನುವುದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ, ಅದಕ್ಕಾಗಿಯೇ ಇದನ್ನು ಸಲಾಡ್‌ಗಳಲ್ಲಿ ಸೇರಿಸಲಾಗುತ್ತದೆ. ಬಿಳಿ ಈರುಳ್ಳಿ ಫೈಬರ್ ಮತ್ತು ಪ್ರಿಬಯಾಟಿಕ್‌ಗಳಲ್ಲಿ ಸಮೃದ್ಧವಾಗಿದೆ, ಇದು ನಮ್ಮ ಹೊಟ್ಟೆಗೆ ಪ್ರಯೋಜನಕಾರಿಯಾಗಿದೆ, ಅವು ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಇಂತಹ ಹತ್ತು ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಈರುಳ್ಳಿ, ಬಿಳಿ ಈರುಳ್ಳಿಯನ್ನು ನಿತ್ಯ ತಿನ್ನಿರಿ. ಈರುಳ್ಳಿ ವಾಸನೆ ಎಂದು ದೂರ ಸರಿಯಬೇಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ