logo
ಕನ್ನಡ ಸುದ್ದಿ  /  ಜೀವನಶೈಲಿ  /  Winter Food: ಚಳಿಗಾಲದಲ್ಲಿ ಯಾವೆಲ್ಲಾ ಆಹಾರಗಳನ್ನು ಸೇವಿಸಬೇಕು? ಭಾನುವಾರದಿಂದ ಶನಿವಾರದವರೆಗೆ ಲಿಸ್ಟ್‌ ಹೀಗಿದೆ

Winter Food: ಚಳಿಗಾಲದಲ್ಲಿ ಯಾವೆಲ್ಲಾ ಆಹಾರಗಳನ್ನು ಸೇವಿಸಬೇಕು? ಭಾನುವಾರದಿಂದ ಶನಿವಾರದವರೆಗೆ ಲಿಸ್ಟ್‌ ಹೀಗಿದೆ

HT Kannada Desk HT Kannada

Dec 19, 2023 10:33 AM IST

google News

ಚಳಿಗಾಲದ ಆಹಾರ ಕ್ರಮ

  • Winter Food: ಆಯಾ ಸೀಸನ್‌ಗೆ ತಕ್ಕಂತೆ ನಾವು ಆಹಾರ ಕ್ರಮ ಅನುಸರಿಸಿದರೆ ಆ ಸಮಯದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು. ಚಳಿಗಾಲದಲ್ಲಿ ನಮ್ಮ ದೇಹವನ್ನು ಬೆಚ್ಚಗೆ ಇಡುವ ಆಹಾರಗಳನ್ನು ಪ್ರತಿದಿನ ಸೇವಿಸುವುದು ಬಹಳ ಮುಖ್ಯ. 

ಚಳಿಗಾಲದ ಆಹಾರ ಕ್ರಮ
ಚಳಿಗಾಲದ ಆಹಾರ ಕ್ರಮ

Winter Food: ಹವಾಮಾನ ಬದಲಾದಂತೆ, ನಮ್ಮ ದೇಹ ಬದಲಾವಣೆಗಳಿಗೆ ಒಗ್ಗಬೇಕಿರುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ನಾವು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತೇವೆ. ಆದ್ದರಿಂದ ಈ ಸಮಯದಲ್ಲಿ ನಾವು ಸೇವಿಸುವ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕಿದೆ. ನಮ್ಮ ದೇಹವನ್ನು ಬೆಚ್ಚಗೆ ಇಡುವ ಆಹಾರಗಳನ್ನು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಾಗೂ ಚಳಿಗಾಲದ ಆರೋಗ್ಯ ಸಮಸ್ಯೆಗಳಿಂದ ನಾವು ಸುಲಭವಾಗಿ ಪಾರಾಗಬಹುದು.

ಚಳಿಗಾಲದಲ್ಲಿ ಭಾನುವಾರದಿಂದ ಶನಿವಾರದವರೆಗೂ ನೀವು ಏನೆಲ್ಲಾ ಆಹಾರ ಸೇವಿಸಬಹುದು? ಇಲ್ಲಿ ಲಿಸ್ಟ್‌ ಇದೆ ನೋಡಿ.

ಭಾನುವಾರ

ಬ್ರೇಕ್‌ಫಾಸ್ಟ್‌: ಡ್ರೈ ಫ್ರೂಟ್ಸ್‌ ಹಾಗೂ ತುಪ್ಪದಿಂದ ತಯಾರಿಸಿದ ಸಿಹಿ ಪೊಂಗಲ್‌. ಇದರಲ್ಲಿ ವಿಟಮಿನ್‌ ಬಿ2, ವಿಟಮಿನ್‌ ಇ, ಮೆಗ್ನೀಷಿಯಂ ಅಂಶಗಳಿವೆ.

ಮಧ್ಯಾಹ್ನದ ಊಟ: ಜೋಳದ ರೊಟ್ಟಿ, ಸಾಸಿವೆ ಸೊಪ್ಪು-ಪಾಲಕ್‌ ಸೊಪ್ಪಿನ ಗೊಜ್ಜು

ರಾತ್ರಿ ಊಟ: ಕಾಳುಗಳಿಂದ ತಯಾರಿಸಿದ ಕರಿ, ಅನ್ನ

ಸೋಮವಾರ

ಬ್ರೇಕ್‌ಫಾಸ್ಟ್‌: ಫ್ರೆಶ್‌ ಹಣ್ಣುಗಳು, ಬಾದಾಮಿ ಸೇರಿಸಿ ತಯಾರಿಸದಲಾದ ಓಟ್ಸ್.‌ ಇದರಲ್ಲಿ ಹೆಚ್ಚಿನ ಫ್ರೋಟೀನ್‌, ನ್ಯೂಟ್ರಿಷಿಯನ್‌, ಫೈಬರ್‌ ಅಂಶಗಳಿದ್ದು ಸುಲಭವಾಗಿ ಜೀರ್ಣವಾಗುತ್ತದೆ.

ಮಧ್ಯಾಹ್ನದ ಊಟ: ಚಪಾತಿ, ಚಿಕನ್‌ ಕರಿ

ರಾತ್ರಿ ಊಟ: ಬಾಜ್ರಾ ರೊಟ್ಟಿ ಹಾಗೂ ದಾಲ್‌

ಮಂಗಳವಾರ

ಬ್ರೇಕ್‌ಫಾಸ್ಟ್‌: ಮನೆಯಲ್ಲೇ ತಯಾರಿಸಿದ ಮುಸೆಲಿ ಅಥವಾ ಪಾಲಕ್‌ ಪರಾಟ

ಮಧ್ಯಾಹ್ನದ ಊಟ : ತರಕಾರಿ ಸಾಂಬಾರ್‌ ಹಾಗೂ ಅನ್ನ. ನಿಮಗೇನಾದರೂ ಸಿಹಿ ತಿನ್ನಬೇಕು ಎನಿಸಿದರೆ ಕ್ಯಾರೆಟ್‌ ಹಲ್ವಾ ಸೇವಿಸಬಹುದು.

ರಾತ್ರಿ: ಹೆಸರು ಬೇಳೆ ಕಿಚಡಿ

ಬುಧವಾರ

ಬ್ರೇಕ್‌ಫಾಸ್ಟ್‌: ಗೋಧಿ ಗಂಜಿ ( Broken Wheat) ಇದಕ್ಕೆ ನೀವು ಬೆಲ್ಲ ಅಥವಾ ಉಪ್ಪು ಏನಾದರೂ ಸೇರಿಸಿ ತಿನ್ನಬಹುದು. ಇದರೊಂದಿಗೆ ನೀವು ವಿವಿಧ ಡ್ರೈ ಫ್ರೂಟ್ಸ್‌ ಸೇವಿಸಬಹುದು.

ಮಧ್ಯಾಹ್ನದ ಊಟ: ಅನ್ನ ಹಾಗೂ ಚಿಕನ್‌ ಕರಿ

ರಾತ್ರಿ ಊಟ: ತರಕಾರಿ ಸೂಪ್‌

ಗುರುವಾರ

ಬ್ರೇಕ್‌ಫಾಸ್ಟ್‌: ತರಕಾರಿ ಉಪ್ಪಿಟ್ಟು. ನೀವು ಯಾವುದೇ ರೀತಿಯ ತರಕಾರಿಯನ್ನು ಬಳಸಬಹುದು.

ಮಧ್ಯಾಹ್ನದ ಊಟ: ಅನ್ನ ಹಾಗೂ ಪನೀರ್‌ ಕರಿ. ಊಟದ ರುಚಿಯನ್ನು ಹೆಚ್ಚಿಸಲು ಒಂದು ಚಮಚ ತುಪ್ಪ ಅಥವಾ ಬೆಣ್ಣೆ ಸೇರಿಸಿ.

ರಾತ್ರಿ ಊಟ: ಆಲೂ ಪರಾಟ

ಶುಕ್ರವಾರ

ಬ್ರೇಕ್‌ಫಾಸ್ಟ್‌: ಮೆಂತ್ಯ ಪರಾಟ. ಇದನ್ನು ನೀವು ತುಪ್ಪ ಅಥವಾ ಬೆಣ್ಣೆ ಜೊತೆ ಸೇವಿಸಬಹುದು.

ಮಧ್ಯಾಹ್ನದ ಊಟ: ಗೋಧಿಯಿಂದ ತಯಾರಿಸಿದ ಯಾವುದೇ ಆಹಾರ. ಜೊತೆಗೆ ತರಕಾರಿ ಸಲಾಡ್‌

ರಾತ್ರಿ ಊಟ: ಕಡ್ಲೆಹಿಟ್ಟಿನ ದೋಸೆ ( ಚೀಲಾ) ಹಾಗೂ ತರಕಾರಿ ಗೊಜ್ಜು

ಶನಿವಾರ

ಬ್ರೇಕ್‌ಫಾಸ್ಟ್‌: ಹೆಸರುಕಾಳಿನ ದೋಸೆ (ಮೂಂಗ್‌ ದಾಲ್‌ ಚೀಲಾ) ಅಥವಾ ಅವಲಕ್ಕಿಯಿಂದ ತಯಾರಿಸಿದ ಆಹಾರ

ಮಧ್ಯಾಹ್ನ: ಕ್ರಿಸ್‌ಮಸ್‌ ಸ್ಪೆಷಲ್‌ ರಮ್‌ ಕೇಕ್‌ ಹಾಗೂ ಬಾದಾಮಿ

ರಾತ್ರಿ ಊಟ: ಅನ್ನ ಹಾಗೂ ಎಲ್ಲಾ ಕಾಳುಗಳನ್ನು ಬಳಸಿ ತಯಾರಿಸಲಾದ ದಾಲ್‌ ಕರಿ

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ