logo
ಕನ್ನಡ ಸುದ್ದಿ  /  ಜೀವನಶೈಲಿ  /  Winter Trip: ಹಿಮಪಾತ ನೋಡಲು ಭಾರತದ ಈ ಸ್ಥಳಗಳಿಗೆ ಭೇಟಿ ನೀಡಿ; ಆಂಧ್ರ ಪ್ರದೇಶದಲ್ಲೂ ಇದೆ ಇಂತಹ ಜಾಗ!

Winter Trip: ಹಿಮಪಾತ ನೋಡಲು ಭಾರತದ ಈ ಸ್ಥಳಗಳಿಗೆ ಭೇಟಿ ನೀಡಿ; ಆಂಧ್ರ ಪ್ರದೇಶದಲ್ಲೂ ಇದೆ ಇಂತಹ ಜಾಗ!

HT Kannada Desk HT Kannada

Dec 21, 2023 01:17 PM IST

google News

ಭಾರತದಲ್ಲಿ ಹಿಮಪಾತವಾಗುವ ಸ್ಥಳಗಳು

  • Winter Trip: ಹಿಮಾಚ್ಛಾದಿತ ಪ್ರದೇಶಗಳಿಗೆ ಹೋಗಿ ಎಂಜಾಯ್‌ ಮಾಡಬೇಕೆಂದು ನೀವು ಪ್ಲಾನ್‌ ಮಾಡಿದ್ದರೆ ಶಿಮ್ಲಾ, ಲಡಾಖ್‌ ಸೇರಿದಂತೆ ಭಾರತದ ಈ ಸ್ಥಳಗಳಿಗೆ ಭೇಟಿ ನೀಡಬಹುದು. ಆಂಧ್ರಪ್ರದೇಶದಲ್ಲೂ  ಈ ರೀತಿಯ ಸ್ಥಳವಿದೆ. 

ಭಾರತದಲ್ಲಿ ಹಿಮಪಾತವಾಗುವ ಸ್ಥಳಗಳು
ಭಾರತದಲ್ಲಿ ಹಿಮಪಾತವಾಗುವ ಸ್ಥಳಗಳು (PC: Pixabay)

Winter Trip: ದೈನಂದಿನ ಜೀವನದ ಜಂಜಾಟ, ಕೆಲಸದ ಹೊರೆ, ವೈಯಕ್ತಿಕ ಸಮಸ್ಯೆಗಳಿಂದ ಸ್ವಲ್ಪ ದಿನ ಎಲ್ಲಾದರೂ ಹೊರಗೆ ಹೋಗಿ ಬರೋಣ ಎನ್ನಿಸುತ್ತದೆ. ಬ್ಯುಸಿ ಕೆಲಸಗಳ ನಡುವೆ ಕನಿಷ್ಠ 1 ವಾರ ಟ್ರಿಪ್‌ ಹೋಗಿ ಬಂದರೆ ಮನಸ್ಸು, ದೇಹ ಎಷ್ಟು ರಿಲಾಕ್ಸ್‌ ಎನಿಸದೆ ಇರದು. ಈಗ ಚಳಿಗಾಲ ಎಲ್ಲಿ ಟ್ರಿಪ್‌ ಹೋಗೋದು ಅಂತ ನೀವು ಪ್ಲ್ಯಾನ್‌ ಮಾಡ್ತಿದ್ರೆ ಈ ಬರಹ ನಿಮಗೆ ನೆರವಾಗಬಹುದು.

ಕಿರುತೆರೆ, ಸಿನಿಮಾಗಳಲ್ಲಿ ಹಿಮದ ದೃಶ್ಯಗಳನ್ನು ತೋರಿಸುವಾಗ ಎಂದಾದರೂ ಒಮ್ಮೆ ಆ ಸ್ಥಳಕ್ಕೆ ಹೋಗಬೇಕು ಅನಿಸದೆ ಇರದು. ಹೇಗಿದ್ರೂ ಈಗ ಚಳಿಗಾಲ, ನಿಮ್ಮ ಪ್ರೀತಿಪಾತ್ರರೊಂದಿಗೆ ಹಿಮಾಚ್ಚಾದಿತ ಸುಂದರ ಪ್ರದೇಶಗಳಿಗೆ ಹೋಗಿ ಬನ್ನಿ. ಭಾರತದಲ್ಲೇ ನೀವು ಈ ಸ್ಥಳಗಳಿಗೆ ಭೇಟಿ ನೀಡಬಹುದು.

ಹಿಮಾಚಲ ಪ್ರದೇಶದ ಮನಾಲಿ

ಭಾರತದ ಪ್ರಮುಖ ಆಕರ್ಷಕ ಸ್ಥಳಗಳಲ್ಲಿ ಮನಾಲಿ ಕೂಡಾ ಒಂದು. ಸಾಮಾನ್ಯವಾಗಿ ನವೆಂಬರ್ ತಿಂಗಳ ಆರಂಭದಲ್ಲಿಯೇ ಮನಾಲಿಯಲ್ಲಿ ಹಿಮಪಾತವಾಗುತ್ತದೆ. ಜನವರಿವರೆಗೂ ನೀವು ಮನಾಲಿಯಲ್ಲಿ ಹಿಮಪಾತವನ್ನು ಆನಂದಿಸಬಹುದು. ಹಿಮದಲ್ಲಿ ನಿಮ್ಮವರೊಂದಿಗೆ ಆಟವಾಡಬಹುದು. ಅನೇಕ ಸಾಹಸಮಯ ಚಟವಟಿಕೆಗಳನ್ನು ಎಂಜಾಯ್‌ ಮಾಡಬಹುದು. ನಿಮ್ಮ ಹೋಟೆಲ್‌ ರೂಮ್‌ನಲ್ಲಿ ಕುಳಿತು ಬಿಸಿ ಕಾಫಿ ಹೀರುತ್ತಾ ಕಿಟಕಿಗಳ ಮೂಲಕ ಮನಾಲಿಯ ಸುಂದರ ತಾಣಗಳನ್ನು ವೀಕ್ಷಿಸಬಹುದು.

ಶಿಮ್ಲಾ

ಹಿಮಾಚಲ ಪ್ರದೇಶದ ಮತ್ತೊಂದು ಆಕರ್ಷಕ ಪ್ರವಾಸಿ ತಾಣಗಳಲ್ಲಿ ಶಿಮ್ಲಾ ಕೂಡಾ ಒಂದು. ಇಲ್ಲಿ ನೀವು ಹಿಮಾಚ್ಛಾದಿತ ಸುಂದರ ಪ್ರದೇಶವನ್ನು ಆಹ್ವಾದಿಸುವುದರ ಜೊತೆ ಶಿಮ್ಲಾ ಆಪಲ್‌ ತೋಟವನ್ನೂ ವೀಕ್ಷಿಸಬಹುದು.

ಉತ್ತರಾಖಂಡ್‌ನ ಮಸ್ಸೂರಿ

ಡೆಹರಾಡೂನ್‌ ಜಿಲ್ಲೆಯ ಮಸ್ಸೂರಿ ಭಾರತದ ಪ್ರಮುಖ ಹಿಲ್‌ ಸ್ಟೇಷನ್‌ಗಳಲ್ಲಿ ಒಂದು. ಇಲ್ಲಿ ನೀವು ಆಕರ್ಷಕ ಹಿಮಪಾತವನ್ನು ವೀಕ್ಷಿಸಲು ಡಿಸೆಂಬರ್ ಹಾಗೂ ಫೆಬ್ರವರಿ ನಡುವೆ ಭೇಟಿ ನೀಡುವುದು ಉತ್ತಮ. ಹಿಮಪಾತದ ಸಮಯದಲ್ಲಿ ಮಸ್ಸೂರಿಯ ಪ್ರಮುಖ ರಸ್ತೆಗಳಲ್ಲಿ ಓಡಾಡುವುದು ನಿಮಗೆ ಸುಂದರ ಅನುಭವ ನೀಡುತ್ತದೆ.

ಕಾಶ್ಮೀರದ ಗುಲ್ಮಾರ್ಗ್‌

ಕಾಶ್ಮೀರದ ಪ್ರಮುಖ ಹಿಲ್‌ ಸ್ಟೇಷನ್‌ಗಳಲ್ಲಿ ಗುಲ್‌ ಮಾರ್ಗ್‌ ಕೂಡಾ ಒಂದು. ಗುಲ್ಮಾರ್ಗ್, ಭಾರತದಲ್ಲಿ ಅತ್ಯುತ್ತಮ ಸ್ಕೀಯಿಂಗ್ ತಾಣವಾಗಿ ಮೆಚ್ಚುಗೆ ಪಡೆದಿದೆ, ಇದು ಅತ್ಯುತ್ತಮ ಇಳಿಜಾರುಗಳನ್ನು ಹೊಂದಿದೆ. ಅಲ್ಲದೆ ಭಾರತದ ಅತಿ ಎತ್ತರದ ಮತ್ತು ಉದ್ದವಾದ ಕೇಬಲ್ ಕಾರ್ ಯೋಜನೆಗಳಲ್ಲಿ ಒಂದಾದ ಗುಲ್ಮಾರ್ಗ್ ಗೊಂಡೋಲಾ ಇರುವುದು ಇಲ್ಲೇ. ಗುಲ್ಮಾರ್ಗ್‌ನಲ್ಲಿ ಸ್ಕೀಯಿಂಗ್ ಮಾಡಲು ಜನವರಿ ಮಧ್ಯದಿಂದ ಫೆಬ್ರವರಿ ಅಂತ್ಯದವರೆಗೆ ಉತ್ತಮ ಸಮಯ.

ಲಡಾಖ್‌

ಕಾಶ್ಮೀರ ಕಣಿವೆಯ ಸುಂದರ ತಾಣಗಳಲ್ಲಿ ಲಡಾಖ್‌ ಕೂಡಾ ಒಂದು. ಚಳಿಗಾಲದಲ್ಲಿ ನೀವು ಲಡಾಖ್‌ಗೆ ಭೇಟಿ ನೀಡಿದರೆ ಅದೊಂದು ಅದ್ಭುತ ಅನುಭವ ನೀಡುವುದರಲ್ಲಿ ಎರಡು ಮಾತಿಲ್ಲ. ಲಡಾಖ್‌ನಲ್ಲಿ ಇತರ ಸ್ಥಳಗಳಿಗಿಂತ ಹೆಚ್ಚು ಚಳಿ ಇರುತ್ತದೆ. ತಾಪಮಾನದ ಕುಸಿತದಿಂದಾಗಿ ಎಲ್ಲವೂ ಹೆಪ್ಪುಗಟ್ಟುತ್ತದೆ. ಆದರೂ ಒಮ್ಮೆ ನೀವು ಲಡಾಖ್‌ಗೆ ಭೇಟಿ ನೀಡಿದರೆ ಇಲ್ಲಿನ ಜನರ ದೈನಂದಿನ ಜೀವನ ಹೇಗಿರಲಿದೆ ಅನ್ನೋದನ್ನು ತಿಳಿದುಕೊಳ್ಳಬಹುದು. ಫೋಟೋಗ್ರಫಿಗೂ ಇದು ಹೇಳಿ ಮಾಡಿಸಿದಂಥ ಸ್ಥಳ.

ಆಂಧ್ರಪ್ರದೇಶದ ಲಮ್ಮಸಿಂಗಿ

ಉತ್ತರ ಭಾರತದಲ್ಲಿ ಸ್ನೋ ಫಾಲ್‌ ಆಗುವುದು ಸಹಜ. ಆದರೆ ದಕ್ಷಿಣ ಭಾರತದಲ್ಲೂ ಸ್ನೋ ಫಾಲ್‌ ಆಗುವುದು ಬಹಳ ಜನರಿಗೆ ತಿಳಿದಿಲ್ಲ. ಆಂಧ್ರ ಪ್ರದೇಶದ ವಿಶಾಖಪಟ್ಟಣದಿಂದ 100 ಕಿಮೀ ದೂರದಲ್ಲಿರುವ ಲಂಬಸಿಂಗಿ ಎಂಬಲ್ಲಿ ಕೂಡಾ ಹಿಮಪಾತವಾಗುತ್ತದೆ. ಇದನ್ನು ಸ್ಥಳೀಯ ಭಾಷೆಯಲ್ಲಿ ಎಂದರೆ ಕೊರ್ರ ಬಯಲು ಎನ್ನುತ್ತಾರೆ. ಯಾರಾದರೂ ಬಯಲಿನಲ್ಲಿ ಉಳಿದುಕೊಂಡರೆ ಅವರು ಕೋಲಿನಂತೆ ಹೆಪ್ಪುಗಟ್ಟುತ್ತಾರೆ ಎಂದು ಇದರ ಅರ್ಥ. ನವೆಂಬರ್‌ನಿಂದ ಜನವರಿ ವರೆಗೆ ಮುಂಜಾನೆ ಹಿಮಪಾತವಾಗುತ್ತದೆ. ಒಮ್ಮೆ ಇಲ್ಲಿಗೂ ಭೇಟಿ ನೀಡಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ