ಕನ್ನಡ ಸುದ್ದಿ  /  ಜೀವನಶೈಲಿ  /  Women Health: ಗರ್ಭಾವಸ್ಥೆಯಲ್ಲಿ ಹಠಾತ್ ಹೃದಯಾಘಾತಕ್ಕೆ ಕಾರಣ ಏನು; ಲಕ್ಷಣಗಳು, ಮತ್ತು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು?

Women Health: ಗರ್ಭಾವಸ್ಥೆಯಲ್ಲಿ ಹಠಾತ್ ಹೃದಯಾಘಾತಕ್ಕೆ ಕಾರಣ ಏನು; ಲಕ್ಷಣಗಳು, ಮತ್ತು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು?

HT Kannada Desk HT Kannada

Nov 05, 2023 07:30 AM IST

ಗರ್ಭಾವಸ್ಥೆಯಲ್ಲಿ ಹಠಾತ್ ಹೃದಯಾಘಾತಕ್ಕೆ ಕಾರಣ ಹಾಗೂ ಲಕ್ಷಣಗಳು

  • Heart Attack in Pregnancy: ಸಾಮಾನ್ಯವಾಗಿ, ಯಾವುದೇ ರೀತಿಯ ಹೃದಯ ರಕ್ತನಾಳದ ಸಂಬಂಧಿತ ತೊಂದರೆಗಳಿರುವ ಮಹಿಳೆಯರಲ್ಲಿ 3ನೇ ತ್ರೈಮಾಸಿಕದಲ್ಲಿ (ಥರ್ಡ್ ಟ್ರೈಮೆಸ್ಟರ್), ಪ್ರಾಣಾಪಾಯ ಅಥವಾ ಹಠಾತ್ ಹೃದಯಾಘಾತದಿಂದ ಸಂಭವಿಸುವ ಸಾವಿನ ಸಾಧ್ಯತೆಗಳು ಹೆಚ್ಚುತ್ತವೆ.

ಗರ್ಭಾವಸ್ಥೆಯಲ್ಲಿ ಹಠಾತ್ ಹೃದಯಾಘಾತಕ್ಕೆ ಕಾರಣ ಹಾಗೂ ಲಕ್ಷಣಗಳು
ಗರ್ಭಾವಸ್ಥೆಯಲ್ಲಿ ಹಠಾತ್ ಹೃದಯಾಘಾತಕ್ಕೆ ಕಾರಣ ಹಾಗೂ ಲಕ್ಷಣಗಳು (PC: Pixaby)

Heart Attack in Pregnancy: ಮಹಿಳೆಯರು ಗರ್ಭಾವಸ್ಥೆಯಲ್ಲಿ ಇರುವಾಗ ಅವರ ದೇಹದ ರಕ್ತ ಸಂಚಲನೆ 30-50 ಪ್ರತಿಶತ ಹೆಚ್ಚಾಗುತ್ತದೆ ಆದ್ದರಿಂದ ಹೃದಯದ ಹೊರ ಹರಿವು ಅಥವಾ ಹೃದಯದಿಂದ ರಕ್ತವನ್ನು ಪಂಪ್ ಮಾಡುವ ಪ್ರಕ್ರಿಯೆ (ಕಾರ್ಡಿಯಾಕ್ ಔಟ್‌ಪುಟ್) ಕೂಡಾ ಹೆಚ್ಚಾಗಬೇಕಾಗುತ್ತದೆ. ಈ ಅಧಿಕ ಕಾರ್ಡಿಯಾಕ್ ಔಟ್‌ಪುಟ್‌ ಬೇಡಿಕೆಯನ್ನು ಸರಿದೂಗಲು ಹೃದಯವು ಹೆಚ್ಚು ಕೆಲಸ ಮಾಡಬೇಕುತ್ತದೆ. ಪರಿಣಾಮವಾಗಿ, ಹೃದಯದ ಮೇಲೆ ಅಧಿಕ ಒತ್ತಡ, ಹೃದಯ ಬಡಿತದಲ್ಲಿ ಏರಿಕೆ, ರಕ್ತದೊತ್ತಡದ ಏರಿಳಿತ, ಹಾಗೂ ಅನ್ಯ ಹೃದಯರಕ್ತನಾಳದ ಸಮಸ್ಯೆಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಗರ್ಭಾವಸ್ಥೆಯಲ್ಲಿ ಮಧುಮೇಹ (ಜೆಸ್ಟೇಷನಲ್ ಡಯಾಬಿಟಿಸ್) ಅಪಾಯವು ಹೆಚ್ಚಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

Summer Tips: ಬೇಸಿಗೆಯಲ್ಲಿ ದಿನಕ್ಕೊಂದು ಮೊಟ್ಟೆ ತಿನ್ಬೇಕು ಅಂತಾರೆ ತಜ್ಞರು, ಇದಕ್ಕೆ ಕಾರಣಗಳು ಹೀಗಿವೆ

ಹೃದಯದ ಆರೋಗ್ಯಕ್ಕಾಗಿ ಮಾಡಿ ಸರಳ ಯೋಗ; ಪರಿಣಾಮಕಾರಿ 6 ಯೋಗಾಸನಗಳ ಮಾಹಿತಿ ಇಲ್ಲಿದೆ

ಹಸು, ಎಮ್ಮೆ ಹಾಲಿಗೆ ಪರ್ಯಾಯ ಡೈರಿ ಉತ್ಪನ್ನ ಮಾರುಕಟ್ಟೆಯಲ್ಲಿ ಲಭ್ಯ: ಸೂಕ್ತವಾದ ಹಾಲನ್ನು ಆರಿಸುವುದು ಹೇಗೆ?

ದಿನಾ ಎಳನೀರು ಕುಡಿದು ಬೇಸರವಾಗಿದ್ಯಾ; ಈ 5 ಭಿನ್ನ ವಿಧಾನಗಳಲ್ಲಿಯೂ ಎಳನೀರನ್ನು ದೇಹ ಸೇರಿಸಬಹುದು

ರಕ್ತದೊತ್ತಡ, ಮಧುಮೇಹ ಇರುವವರಿಗೆ ಹೃದಯಾಘಾತದ ಸಮಸ್ಯೆ ಹೆಚ್ಚು

ಗರ್ಭಧಾರಣೆಗೂ ಮುಂಚಿತವಾಗಿಯೇ ಹೃದಯ-ರಕ್ತನಾಳದ ಸಂಬಂಧಿತ ಕಾಯಿಲೆ (cardiovascular diseases), ಅಧಿಕ ರಕ್ತದೊತ್ತಡ, ಅಥವಾ ಮಧುಮೇಹ ಇರುವವರಲ್ಲಿ, ಗರ್ಭವಾಸ್ಥೆಯಲ್ಲಿ ಹೃದಯಾಘಾತ, ಇತರ ಗಂಭೀರ ಹೃದಯ ಸಂಬಂಧಿತ ಅಪಾಯಗಳ, ಅಥವಾ ಪ್ರಾಣಾಪಾಯದ ಸಂಭಾವ್ಯ ಹೆಚ್ಚುತ್ತದೆ. ಇದಲ್ಲದೆ ಮಹಾಪಧಮನಿಯ ಸ್ಟೆನೋಸಿಸ್ (ಐಓರ್ಟಿಕ್ ಸ್ಟೆನೋಸಿಸ್), ಮಿಟ್ರಲ್ ಸ್ಟೆನೋಸಿಸ್, ಅಓರ್ಟಿಕ್ ರೇಗರ್ಜಿಟೇಷನ್ (ಮಹಾಪಧಮನಿಯ ದೋಷಯುಕ್ತ ಮುಚ್ಚುವಿಕೆಯಿಂದ ಉಂಟಾಗುವ ಹಿಮ್ಮುಖ ರಕ್ತದ ಹರಿವು) ನಂತಹ ಕವಾಟದ ತೊಂದರೆ, ಹೃದಯದ ಮುಖ್ಯ ರಕ್ತನಾಳಗಳ ಕಿರಿದಾಗುವಿಕೆ (ಕೊ ಅರ್ಕಟೇಷನ್ ಒಫ್ ಐಓರ್ಟ) ಮತ್ತು ಇತರ ಹೃದಯ-ರಕ್ತನಾಳದ ಜನ್ಮಜಾತ ತೊಂದರೆಗಳು, ಶ್ವಾಸಕೋಶದ ಅಧಿಕ ರಕ್ತದೊತ್ತಡ (ಪಲ್ಮನರಿ ಹೈಪರ್ಟೆನ್ಶನ್), ಹೃದಯದ ಮಾಂಸಖಂಡಗಳ ದುರ್ಬಲಗೊಳ್ಳುವಿಕೆಯಂತಹ (ಡೈಲಾಟೆಡ್ ಕಾರ್ಡಿಯೊಮಯೋಪಥಿ) ಗಂಭೀರ ಸಮಸ್ಯೆ ಇರುವವರಲ್ಲಿಯೂ ಗರ್ಭಧಾರಣೆ ಪ್ರಾಣಾಪಾಯಕಾರಿ ಆಗಬಹುದು. ಆದ್ದರಿಂದ, ಇಂತಹ ತೊಂದರೆಗಳನ್ನು ಹೊಂದಿದ ಮಹಿಳೆಯರು ಕಡ್ಡಾಯವಾಗಿ ಗರ್ಭ ಧರಿಸಬಾರದು ಎಂದು ವೈದ್ಯಕೀಯವಾಗಿ ಹೇಳಲಾಗುತ್ತದೆ.

ಗರ್ಭಾವಸ್ಥೆಯ ಮೂರನೇ ತಿಂಗಳಲ್ಲಿ ಪ್ರಾಣಾಪಾಯ ಹೆಚ್ಚು

ಸಾಮಾನ್ಯವಾಗಿ, ಯಾವುದೇ ರೀತಿಯ ಹೃದಯ ರಕ್ತನಾಳದ ಸಂಬಂಧಿತ ತೊಂದರೆಗಳಿರುವ ಮಹಿಳೆಯರಲ್ಲಿ 3ನೇ ತ್ರೈಮಾಸಿಕದಲ್ಲಿ (ಥರ್ಡ್ ಟ್ರೈಮೆಸ್ಟರ್), ಪ್ರಾಣಾಪಾಯ ಅಥವಾ ಹಠಾತ್ ಹೃದಯಾಘಾತದಿಂದ ಸಂಭವಿಸುವ ಸಾವಿನ ಸಾಧ್ಯತೆಗಳು ಹೆಚ್ಚುತ್ತವೆ. ಹಾಗೆಯೇ, ಯಾವುದೇ ತೊಂದರೆ ಇಲ್ಲವಾದರೂ ಹಠಾತ್ ಹೃದಯಾಘಾತ ಸಂಭವಿಸಬಹುದು, ಇದನ್ನು ಅಕ್ಯೂಟ್ ಐಓರ್ಟಿಕ್ ಸಿಂಡ್ರೋಮ್ ಎನ್ನಲಾಗುತ್ತದೆ, ಇದು ಅಧಿಕೃತವಾಗಿ ಮಹಾಪಧಮನಿಯ ಹಠಾತ್ ಹಾನಿಯಿಂದ ಸಂಭವಿಸುತ್ತದೆ. ರಕ್ತನಾಳಗಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಶ್ವಾಸಕೋಶಕ್ಕೆ ರಕ್ತ ಸಂಚಲನೆ ಸ್ಥಗಿತವಾಗುವುದು (ಪಲ್ಮನರಿ ಎಂಬೋಲಿಸಂ) ನಂತಹ ತೊಂದರೆಗಳಲ್ಲಿಯೂ ಗರ್ಭಾವಸ್ಥೆಯಲ್ಲಿ ತ್ರೈಮಾಸಿಕದಲ್ಲಿ ಪ್ರಾಣಾಪಾಯ ಅಥವಾ ಸಾವಿನ ಸಂಭಾವ್ಯ ಹೆಚ್ಚುತ್ತದೆ.

10 ಸಾವಿರ ಮಹಿಳೆಯರಲ್ಲಿ ಒಬ್ಬರಿಗೆ ಸಂಭವಿಸುವ ಸಾಧ್ಯತೆ

ಈ ಮೇಲೆ ವಿಶ್ಲೇಷಿಸಿದ ಸಮಸ್ಯೆಗಳ ಹೊರತಾಗಿ, ಗರ್ಭ ಧರಿಸಿದಾಗ 30 ವರ್ಷಕ್ಕಿಂತ ಅಧಿಕ ವಯಸ್ಸು, ಅನಿಯಂತ್ರಿತ ಅಥವಾ ದೀರ್ಘಾವಧಿಯ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ, ಸ್ವಾಭಾವಿಕ ಪರಿಧಮನಿಯ ಛೇದನ (spontaneous coronary artery dissection), ಇರುವವರಿಗೂ ಗರ್ಭಾವಸ್ಥೆಯಲ್ಲಿ ಪ್ರಾಣಾಪಾಯ ಅಥವಾ ಹಠಾತ್ ಹೃದಯಾಘಾತ ಸಂಭವಿಸಿ ಸಾವಿನ ಸಾಧ್ಯತೆ ಹೆಚ್ಚುತ್ತವೆ. ಸ್ವಾಭಾವಿಕ ಪರಿಧಮನಿಯ ಛೇದನ (spontaneous coronary artery dissection), ಒಂದು ಸಾಮಾನ್ಯ ಸಮಸ್ಯೆ ಆಗಿದ್ದು 10 ಸಾವಿರ ಮಹಿಳೆಯರಲ್ಲಿ ಒಬ್ಬರಿಗೆ ಸಂಭವಿಸುವ ಸಾಧ್ಯತೆ ಹೊಂದಿದೆ. ಈ ಸಮಸ್ಯೆ ಇದ್ದವರಲ್ಲಿ ಹೃದಯದಲ್ಲಿ ನೋವು ಹಾಗೂ ಉಸಿರಾಟದ ತೊಂದರೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಲಕ್ಷಣಗಳಿಗಿಂತ ವಿಭಿನ್ನವಾಗಿರುತ್ತದೆ.

ರಕ್ತನಾಳದ ಸಂಬಂಧಿತ ಕಾಯಿಲೆಯ ಅನುವಂಶೀಯ ಇತಿಹಾಸ

ಗರ್ಭ ಧರಿಸಿದಾಗ 30 ಕ್ಕಿಂತ ಹೆಚ್ಚು ವಯಸ್ಸು, ಗರ್ಭಧಾರಣೆಗೂ ಮುಂಚಿತವಾಗಿಯೇ ಹೃದಯ-ರಕ್ತನಾಳದ ಸಂಭಂದಿತ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹ, ಅಥವಾ ಹೃದಯ-ರಕ್ತನಾಳದ ಸಂಬಂಧಿತ ಕಾಯಿಲೆಯ ಅನುವಂಶೀಯ ಇತಿಹಾಸ (family history) ಇರುವ ಮಹಿಳೆಯರು ಗರ್ಭಾವಸ್ಥೆಯಲ್ಲಿ ಎದೆ ನೋವು, ಉಸಿರಾಟದ ತೊಂದರೆ, ಬೆನ್ನುನೋವುಗಳಂತಹ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಶೀಘ್ರ ವೈದ್ಯಕೀಯ ಸಲಹೆಯನ್ನು ತಗೆದುಕೊಳ್ಳುವುದು ಬಹಳ ಅವಶ್ಯಕ. ಇದರಿಂದ ಹಠಾತ್ ಹೃದಯಾಘಾತದ ಸಂಭಾವ್ಯವನ್ನು ಮುಂಚಿತವಾಗಿಯೇ ಗ್ರಹಿಸಿ ಸೂಕ್ತ ಕ್ರಮಗಳನ್ನು ಅನುಸರಿಸಲು ಸಾಧ್ಯವಾಗುತ್ತದೆ.

  • ಡಾ ಪ್ರದೀಪ್‌ ಕುಮಾರ್‌

ಸೀನಿಯರ್‌ ಕನ್ಸಲ್ಟಂಟ್‌, ಕಾರ್ಡಿಯಾಲಜಿ

ಮಣಿಪಾಲ್‌ ಹಾಸ್ಪಿಟಲ್‌

ಏರ್‌ಪೋರ್ಟ್‌ ರೋಡ್‌, ಯಶವಂತಪುರ

    ಹಂಚಿಕೊಳ್ಳಲು ಲೇಖನಗಳು